ಮಲೆ ಮಹದೇಶ್ವರ ಬೆಟ್ಟದಲ್ಲಿ ಐದು ಹುಲಿಗಳ ಸಾವಿಗೆ ವಿಷಪ್ರಾಷಣ ಕಾರಣ ಎಂದು ಸಿಸಿಎಫ್ ಹೀರಾಲಾಲ್ ಖಚಿತಪಡಿಸಿದ್ದಾರೆ. ತಾಯಿ ಹುಲಿ ಮತ್ತು ನಾಲ್ಕು ಮರಿಗಳು ವಿಷಪೂರಿತ ಹಸುವಿನ ಮಾಂಸ ಸೇವಿಸಿ ಮೃತಪಟ್ಟಿವೆ.
ಚಾಮರಾಜನಗರ (ಜೂ.27): ಮಲೆ ಮಹದೇಶ್ವರ ಬೆಟ್ಟದಲ್ಲಿ 5 ಹುಲಿಗಳ ಸಾವು ಪ್ರಕರಣದ ರಹಸ್ಯ ಬಯಲಾಗಿದೆ. ಅಸಹಜ ಸಾವು ಎನ್ನುವುದು ಮೊದಲೇ ಗೊತ್ತಾಗಿತ್ತಾದರೂ, ಹೇಗೆ ಸಾವು ಕಂಡಿದೆ ಎನ್ನುವುದು ಗೊತ್ತಾಗಿರಲಿಲ್ಲ. ತಾಯಿ ಹುಲಿ ಹಾಗೂ 4 ಮರಿಗಳ ಮರಣೋತ್ತರ ಪರೀಕ್ಷೆಯ ಬಳಿಕ ಮಾತನಾಡಿರುವ ಸಿಸಿಎಫ್ ಹೀರಾಲಾಲ್, ವಿಷ ಇಟ್ಟಿದ್ದರಿಂದಲೇ ಈ ಹುಲಿಗಳು ಸಾವು ಕಂಡಿದೆ ಅನ್ನೋದನ್ನ ಖಚಿತಪಡಿಸಿದ್ದಾರೆ.
5 ಹುಲಿಗಳ ನಿಗೂಡ ಸಾವು ಪ್ರಕರಣದ ಬಗ್ಗೆ ಮಾತನಾಡಿರುವ ಸಿಸಿಎಫ್ ಹೀರಾಲಾಲ್, ವಿಷ ಪ್ರಾಷನದಿಂದಲೇ ಹುಲಿಗಳು ಮೃತ ಪಟ್ಟಿದೆ. ತಾಯಿ ಹುಲಿಗೆ 8 ವರ್ಷ. ಮರಿ ಹುಲಿಗಳು 10 ತಿಂಗಳು. ಹಸುವಿನಲ್ಲಿರುವ ವಿಷದ ಮಾಂಸ ತಿಂದು ಹುಲಿಗಳು ಮೃತ ಪಟ್ಟಿದೆ ಎಂದು ಮಾಹಿತಿ ನೀಡಿದ್ದಾರೆ.
ಯಾವ ಪ್ರಮಾಣದ ವಿಷ ಎಂಬುದು ಲ್ಯಾಬ್ ವರದಿ ಮೂಲಕ ಗೊತ್ತಾಗಲಿದೆ. ಹಸುವನ್ನ ಹುಲಿ ಬೇಟೆಯಾಡಿದ ಮೇಲೆ ಹಸುವಿಗೆ ವಿಷ ಹಾಕಲಾಗಿದ್ಯಾ? ಅಥವಾ ಮೊದಲೇ ಹಸುವಿಗೆ ವಿಶ ಪ್ರಾಷನ ಮಾಡಲಾಗಿತ್ತೇ ಎನ್ನುವುದು ಲ್ಯಾಬ್ ವರದಿ ಮೂಲಕ ಗೊತ್ತಾಗಬೇಕಿದೆ. ಹುಲಿ ಹಸುವಿನ ಹಿಂಬಂದಿಗೆ ದಾಳಿ ಮಾಡಿದೆ. ಹುಲಿ ಮತ್ತು ಹಸುವಿನ ಎಲ್ಲಾ ಅಂಗಾಂಗಳನ್ನ ಲ್ಯಾಬ್ ಕಳುಹಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಮೂರು ದಿನದ ಹಿಂದೆ ಈ ಸಾವು ಸಂಭವಿಸಿದೆ. ಇದಕ್ಕೆ ಯಾರು ಹೊಣೆಗಾರರು ಎನ್ನುವುದನ್ನು ಇಲಾಖಾ ಮಟ್ಟದಲ್ಲಿ ತನಿಖೆ ಮಾಡುತ್ತೇವೆ. ವಾಚರ್ ಗಳಿಗೆ ಸಂಬಳ ತಡವಾಗಿದೆ ಎಂಬುದಕ್ಕೆ ಗಸ್ತು ಮಾಡಿಲ್ಲ ಎಂಬ ಆರೋಪಗಳು ಇವೆ. ಎಲ್ಲದರ ಬಗ್ಗೆ ತನಿಖೆ ಮಾಡುತ್ತೇವೆ. ಹಸು ಯಾರದ್ದು ಎಂಬುದರ ಬಗ್ಗೆಯೂ ತನಿಖೆ ಮಾಡುತ್ತಿದ್ದೇವೆ. ಹಲವರು ಈ ಹಿಂದೆ ತಮಿಳುನಾಡಿನಿಂದ ಹಸುಗಳನ್ನ ಗೊಬ್ಬರವನ್ನ ಮಾರಾಟ ಮಾಡುತ್ತಾರೆ. ಈ ಬಗ್ಗೆ ಸಾಕಷ್ಟು ದೂರುಗಳು ಬಂದಿದೆ. ಈ ಹಸು ತಮಿಳುನಾಡಿನಿಂದ ಬಂದಿರುವುದಾ ಅಥವಾ ಸ್ಥಳೀಯರದ್ದೇ ಎನ್ನುವುದರ ಬಗ್ಗೆಯೂ ತನಿಖೆಯಾಗುತ್ತಿದೆ. ಸದ್ಯಕ್ಕೆ ಹುಲಿ ಅಂತ್ಯಸಂಸ್ಕಾರವನ್ನು ಸ್ಥಳದಲ್ಲೇ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
