ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೈವೆಗೆ ಬಾಲಗಂಗಾಧರ ಶ್ರೀ ಹೆಸರಿಡಿ

ಹಳೆಯ ಮೈಸೂರು ಭಾಗಕ್ಕೆ ಸ್ವಾಮೀಜಿಯವರು ಮಾಡಿರುವ ಸೇವೆ ಅನನ್ಯವಾದುದು. ಆದಿಚುಂಚನಗಿರಿ ಮಠವು ಸಮಾಜಕ್ಕೆ ಸಲ್ಲಿಸುತ್ತಿರುವ ಅಪರಿಮಿತ ಸೇವೆಯ ಹಿನ್ನೆಲೆಯಲ್ಲಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೈವೆಗೆ ಬಾಲಗಂಗಾಧರನಾಥ ಸ್ವಾಮೀಜಿಯವರ ಹೆಸರನ್ನು ನಾಮಕರಣ ಮಾಡಬೇಕು. 

Demand For Balagangadhar Shri Name to the Bengaluru-Mysuru Express Highway grg

ಬೆಂಗಳೂರು(ಫೆ.17):  ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೈವೆಗೆ ಬಾಲಗಂಗಾಧರನಾಥ ಸ್ವಾಮೀಜಿಯವರ ಹೆಸರನ್ನು ನಾಮಕರಣ ಮಾಡಬೇಕು ಎಂದು ಒಕ್ಕಲಿಗ ಯುವ ಬ್ರಿಗೇಡ್‌ ಹಾಗೂ ಒಕ್ಕಲಿಗ ಅನಿವಾಸಿ ಭಾರತೀಯ ಯುವಬ್ರಿಗೇಡ್‌ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದೆ.

ಬಸವರಾಜ ಬೊಮ್ಮಾಯಿ ಅವರನ್ನು ಗುರುವಾರ ಭೇಟಿ ಮಾಡಿದ ನಿಯೋಗ, ಹಳೆಯ ಮೈಸೂರು ಭಾಗಕ್ಕೆ ಸ್ವಾಮೀಜಿಯವರು ಮಾಡಿರುವ ಸೇವೆ ಅನನ್ಯವಾದುದು. ಆದಿಚುಂಚನಗಿರಿ ಮಠವು ಸಮಾಜಕ್ಕೆ ಸಲ್ಲಿಸುತ್ತಿರುವ ಅಪರಿಮಿತ ಸೇವೆಯ ಹಿನ್ನೆಲೆಯಲ್ಲಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೈವೆಗೆ ಬಾಲಗಂಗಾಧರನಾಥ ಸ್ವಾಮೀಜಿಯವರ ಹೆಸರನ್ನು ನಾಮಕರಣ ಮಾಡಬೇಕು ಎಂದು ಕೋರಿತು.

ಮೈಸೂರು - ಬೆಂಗಳೂರು ಹೈವೇ ಟೋಲ್ ನಿಗದಿ ವಿಚಾರ, 250 ರೂ. ಟೋಲ್ ನಿಗದಿ: ಸಂಸದ ಪ್ರತಾಪ್ ಸಿಂಹ ಹೇಳಿಕೆ

ಸೇವಾಕ್ಷೇತ್ರದಲ್ಲಿ ಬಾಲಗಂಗಾಧರನಾಥ ಸ್ವಾಮೀಜಿಯವರು ಮಾಡಿರುವ ಕಾರ್ಯ ಅಸಾಧಾರಣವಾದುದು. ಉಚಿತ ಗುಣಮಟ್ಟದ ಶಿಕ್ಷಣ, ಆರೋಗ್ಯ ವ್ಯವಸ್ಥೆಯಡಿ ಲಕ್ಷಾಂತರ ಜನರು ಪ್ರಯೋಜನ ಪಡೆದಿದ್ದು ಜಾತಿ, ಧರ್ಮಾತೀತವಾಗಿ ಸ್ವಾಮೀಜಿ ಕಾರ್ಯನಿರ್ವಹಿಸಿದ್ದಾರೆ. ಸಮಾಜಕ್ಕೆ ಸ್ವಾಮೀಜಿಯವರು ಸಲ್ಲಿಸಿರುವ ಪವಿತ್ರ ಕಾರ್ಯವನ್ನು ಪರಿಗಣಿಸಿ ಹಲವು ಪ್ರಶಸ್ತಿಗಳು ಸಂದಿವೆ. 2010ರಲ್ಲಿ ಕೇಂದ್ರ ಸರ್ಕಾರದಿಂದ ಪದ್ಮಭೂಷಣ ಪ್ರಶಸ್ತಿಗೂ ಸ್ವಾಮೀಜಿ ಭಾಜನರಾಗಿದ್ದರು ಎಂದು ನಿಯೋಗ ವಿವರಿಸಿತು.

ಆದ್ದರಿಂದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೈವೆಗೆ ಬಾಲಗಂಗಾಧರನಾಥ ಸ್ವಾಮೀಜಿಯವರ ಹೆಸರನ್ನು ನಾಮಕರಣ ಮಾಡಬೇಕು ಎಂದು ಯುವ ಬ್ರಿಗೇಡ್‌ನ ಸಂಸ್ಥಾಪಕ ನಂಜೇಗೌಡ ನಂಜುಂಡ ಅವರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.

Latest Videos
Follow Us:
Download App:
  • android
  • ios