ಕಬ್ಬನ್ ಪಾರ್ಕ್‌ನಲ್ಲಿ ಸಂಸ್ಕೃತ ಚರ್ಚೆಯ ಬಗ್ಗೆ ಮನ್ ಕೀ ಬಾತ್ ನಲ್ಲಿ ಮೋದಿ ಉಲ್ಲೇಖ

ಪ್ರತಿ ಭಾನುವಾರ ಕಬ್ಬನ್ ಪಾರ್ಕ್‌ನಲ್ಲಿ ಸೇರುವ ಜನರು ಸಂಸ್ಕೃತಿದಲ್ಲಿಯೇ ಮಾತನಾಡುತ್ತಾರೆ. ಹಿರಿಯರು ತಮ್ಮ ಮಕ್ಕಳು ಮತ್ತು ಮೊಮ್ಮಕ್ಕಳ ಬಗ್ಗೆ ಇಲ್ಲಿಗೆ ಬಂದು ಸಂಸ್ಕೃತ ಭಾಷೆಯಲ್ಲಿಯೇ ಚರ್ಚೆ ನಡೆಸುತ್ತಾರೆ.

PM Narendra Modi reference in Mann Ki Baat to the Sanskrit debate at Cubbon Park bengaluru mrq

ನವದೆಹಲಿ: ಇಂದು ಪ್ರಸಾರವಾದ 111ನೇ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರಿನ ಕಬ್ಬನ್ ಪಾರ್ಕ್‌ನಲ್ಲಿ ನಡೆಯುವ ವೀಕೆಂಡ್ ಸಂಸ್ಕೃತ ಕಾರ್ಯಕ್ರಮದ ಕುರಿತು ಮಾತನಾಡಿದರು. ಪ್ರತಿ ಭಾನುವಾರ ಕಬ್ಬನ್ ಪಾರ್ಕ್‌ನಲ್ಲಿ ಸೇರುವ ಜನರು ಸಂಸ್ಕೃತಿದಲ್ಲಿಯೇ ಮಾತನಾಡುತ್ತಾರೆ. ಹಿರಿಯರು ತಮ್ಮ ಮಕ್ಕಳು ಮತ್ತು ಮೊಮ್ಮಕ್ಕಳ ಬಗ್ಗೆ ಇಲ್ಲಿಗೆ ಬಂದು ಸಂಸ್ಕೃತ ಭಾಷೆಯಲ್ಲಿಯೇ ಚರ್ಚೆ ನಡೆಸುತ್ತಾರೆ. ನಮ್ಮ ಭಾಷೆ ಉಳಿಸುವ ನಿಟ್ಟಿನಲ್ಲಿ ಇದು ದೊಡ್ಡಮಟ್ಟದ ಕೆಲಸವಾಗಿದೆ. ಜನರು ಸ್ವಯಂ ಪ್ರೇರಿತವಾಗಿ ಇಲ್ಲಿಗೆ ಬಂದು ಸಂಸ್ಕೃತ ಭಾಷೆಯನ್ನು ಆನಂದಿಸುತ್ತಾರೆ ಎಂದು ಹೇಳಿದರು. ಈ ಹಿಂದೆ ಸಂಸ್ಕೃತ ಭಾಷೆ ಮಾತನಾಡುವ ಶಿವಮೊಗ್ಗ ಜಿಲ್ಲೆಯ ಮಥೂರ ಬಗ್ಗೆಯೂ ಹೆಮ್ಮೆಯಿಂದ ಪ್ರಧಾನಿಗಳು ಮಾತನಾಡಿದ್ದರು. 

ಜೂನ್ 30ರಂದು ಆಲ್ ಇಂಡಿಯಾ ರೇಡಿಯೋದ ಸಂಸ್ಕೃತ ಬುಲೆಟಿನ್ ತನ್ನ ಪ್ರಸಾರದ 50 ವರ್ಷಗಳನ್ನು ಪೂರೈಸುತ್ತಿದೆ. ಈ ಬುಲೆಟಿನ್ ಅನೇಕ ಜನರನ್ನು 50 ವರ್ಷಗಳಿಂದ ನಿರಂತರವಾಗಿ ಸಂಸ್ಕೃತದೊಂದಿಗೆ ಸಂಪರ್ಕಿಸಿದೆ. 50 ವರ್ಷ ಸಂಸ್ಕೃತ ಬುಲೆಟಿನ್ ನಲ್ಲಿ ಕೆಲಸ ಮಾಡಿದ ಸಿಬ್ಬಂದಿಯನ್ನು ಪ್ರಧಾನಿಗಳು ಅಭಿನಂದಿಸಿದರು. ಇದೇ ವೇಳೆ ಬೆಂಗಳೂರಿನ ಕಬ್ಬನ್ ಪಾರ್ಕ್‌ನಲ್ಲಿ ನಡೆಯುವ ಸಂಸ್ಕೃತ ವೀಕೆಂಡ್ ಕಾರ್ಯಕ್ರಮವನ್ನು ಉಲ್ಲೇಖಿಸಿದರು.

ದುರ್ಬಲ ಜನಾದೇಶ ಪಡೆದರೂ ಮೋದಿ ವರ್ತನೆ ಬದಲಾಗಿಲ್ಲ: ಸೋನಿಯಾ ಗಾಂಧಿ ಆಕ್ರೋಶ

ಈ ಕಾರ್ಯಕ್ರಮವನ್ನು ಸಮಷ್ಟಿ ಗುಬ್ಬಿ ಜಿಯವರು ವೆಬ್‌ಸೈಟ್ ಮೂಲಕ ಪ್ರಾರಂಭಿಸಿದ್ದಾರೆ. ಕೆಲವೇ ದಿನಗಳ ಹಿಂದೆ ಆರಂಭವಾದ ಈ ಪ್ರಯತ್ನ ಬೆಂಗಳೂರಿನ ಜನರಲ್ಲಿ ಬಹುಬೇಗ ಜನಪ್ರಿಯವಾಗಿದೆ. ನಾವೆಲ್ಲರೂ ಇಂತಹ ಪ್ರಯತ್ನಕ್ಕೆ ಕೈಜೋಡಿಸಿದರೆ, ಪ್ರಪಂಚದ ಇಂತಹ ಪ್ರಾಚೀನ ಮತ್ತು ವೈಜ್ಞಾನಿಕ ಭಾಷೆಯಿಂದ ನಾವು ಬಹಳಷ್ಟು ಕಲಿಯಬಹುದು ಎಂದು ಶ್ಲಾಘಿಸಿದ್ದಾರೆ. ಇಲ್ಲಿ ಸಂಸ್ಕೃತದಲ್ಲಿಯೇ ಹಲವು ಚರ್ಚಾ ಗೋಷ್ಠಿಗಳನ್ನು ಆಯೋಜಿಸಲಾಗುತ್ತದೆ.

3ನೇ ಅಕ್ಟೋಬರ್ 2014ರದು ಪ್ರಧಾನಿಗಳ ಮನ್‌ ಕಿ ಬಾತ್ ಮೊದಲ ಕಾರ್ಯಕ್ರಮ ಪ್ರಸಾರವಾಗಿತ್ತು. ಇದುವರೆಗೂ 110 ಸಂಚಿಕೆಗಳು ಪ್ರಸಾರಗೊಂಡಿದ್ದು, ಇಂದು 111ನೇ ಎಪಿಸೋಡ್ ಟೆಲಿಕಾಸ್ಟ್ ಆಗಿದೆ. ಪ್ರತಿ ಸಂಚಿಕೆಯಲ್ಲಿಯೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರನ್ನು ಪರಿಚಯ ಮಾಡಿಸುತ್ತಾರೆ. ಇದರ ಜೊತೆಯಲ್ಲಿ ದೇಶದಲ್ಲಿ ನಡೆಯುತ್ತಿರುವ ರಾಜಕೀಯೇತರ ವಿಷಯಗಳ ಕುರಿತು ಸುದೀರ್ಘವಾಗಿ ಮಾತನಾಡುತ್ತಾರೆ. ಕರ್ನಾಟಕ ರಾಜ್ಯದ ಮಂಡ್ಯದ ಜಲ ಭಗೀರಥ ಕಾಮೇಗೌಡರು, ಚಾಮರಾಜನಗರದಲ್ಲಿ ಅನುಪಯುಕ್ತ ಬಾಳೆ ದಿಂಡಿನಿಂದ ಕರಕುಶಲ  ಸಾಮಾಗ್ರಿಗಳನ್ನು ತಯಾರಿಸುವ ವರ್ಷಾ ಬಗ್ಗೆಯೂ ಮಾತನಾಡಿದ್ದರು. 

ಮೈಮೇಲೆ 5 ಕೆಜಿ ಚಿನ್ನ ತೊಟ್ಟು ಗೋಲ್ಡನ್ ಬೈಕ್‌ನಲ್ಲಿ ಓಡಾಡೋ ಬಿಹಾರದ ಗೋಲ್ಡ್‌ಮ್ಯಾನ್‌

Latest Videos
Follow Us:
Download App:
  • android
  • ios