ತಾವು ತೊಟ್ಟುಕೊಳ್ಳುವ ಮಣಭಾರದ ಬಂಗಾರದಿಂದಲೇ ಪ್ರಸಿದ್ಧರಾಗಿರುವ ಬಿಹಾರದ ಪ್ರೇಮ್ ಸಿಂಗ್ ಈಗ ತಮ್ಮ ಬೈಕಿಗೂ ಚಿನ್ನ ತೊಡಿಸಿ ಸುದ್ದಿಯಾಗಿದ್ದಾರೆ. ಇವರ ಬೈಕಿನ ಕೆಲ ಭಾಗಗಳು ಚಿನ್ನದ್ದಾಗಿವೆ. ಇದನ್ನು ಬೆಂಗಳೂರಿನಲ್ಲಿ ಮಾಡಿಸಲಾಗಿದೆ.

ಪಟನಾ: ತಾವು ತೊಟ್ಟುಕೊಳ್ಳುವ ಮಣಭಾರದ ಬಂಗಾರದಿಂದಲೇ ಪ್ರಸಿದ್ಧರಾಗಿರುವ ಬಿಹಾರದ ಪ್ರೇಮ್ ಸಿಂಗ್ ಈಗ ತಮ್ಮ ಬೈಕಿಗೂ ಚಿನ್ನ ತೊಡಿಸಿ ಸುದ್ದಿಯಾಗಿದ್ದಾರೆ. ಇವರ ಬೈಕಿನ ಕೆಲ ಭಾಗಗಳು ಚಿನ್ನದ್ದಾಗಿವೆ. ಇದನ್ನು ಬೆಂಗಳೂರಿನಲ್ಲಿ ಮಾಡಿಸಲಾಗಿದ್ದು, ಸುಮಾರು ಏಳರಿಂದ ಎಂಟು ತಿಂಗಳ ಅವಧಿಯಲ್ಲಿ ಈ ಬಂಗಾರದ ಬೈಕ್ ತಯಾರಾಗಿದೆ. ಇದರ ಬೆಲೆ ರು. 11ರಿಂದ 12 ಲಕ್ಷ ಎನ್ನಲಾಗಿದೆ.

ಸ್ವರ್ಣದ ಮೇಲಿನ ಮೋಹದಿಂದಾಗಿ ಪ್ರೇಮ್ ಸಿಂಗ್‌ ಬಿಹಾರದ ‘ಬಂಗಾರದ ಮನುಷ್ಯ’ ಎಂದೇ ಖ್ಯಾತರು. ಇವರು ತೊಡುವ ಸರ, ಬಳೆ, ಉಂಗುರಗಳು ಒಟ್ಟು ಐದು ಕೆಜಿ ತೂಗುತ್ತವೆ. ‘ನನ್ನನ್ನು ಜನ ಬಂಗಾರದ ಮನುಷ್ಯ ಎಂದು ಕರೆಯುತ್ತಾರೆ. ಬಿಹಾರದಲ್ಲಿ ಪ್ರಸ್ತುತ ಇರುವ ನಿತೀಶ್ ಕುಮಾರ್ ಸರ್ಕಾರ ಉತ್ತಮ ಆಡಳಿತ ನಡೆಸುತ್ತಿದೆ. ಆದ ಕಾರಣ ನನಗೆ ಯಾವುದೇ ಭಯವಿಲ್ಲ. ನನ್ನ ಬೈಕಿನಲ್ಲಿ 150 ರಿಂದ 200 ಗ್ರಾಂ ಚಿನ್ನವಿದೆ’ ಎಂದಿರುವ ಪ್ರೇಮ್ ಸಿಂಗ್ ಇದು ಬಿಹಾರ ಸರ್ಕಾರ ಹಾಗೂ ಬಿಹಾರ ಪೊಲೀಸರ ಪಾಲಿಗೆ ಗೌರವದ ಸಂಗತಿ ಎಂದಿದ್ದಾರೆ.

Scroll to load tweet…