ರಾಜ್ಯದಲ್ಲಿಂದು ಪ್ರಧಾನಿ ಮೋದಿ ಹವಾ: ಇಂದು ರಾಜ್ಯದ 3 ಜಿಲ್ಲೆಗಳಲ್ಲಿ ಕೇಸರಿ ರಣ ಕಹಳೆ..!

ರಾಜ್ಯದ 3 ಜಿಲ್ಲೆಗಳಲ್ಲಿ ಇಂದು ಪ್ರಧಾನಿ ಮೋದಿ ಮಿಂಚಿನ ಸಂಚಾರ ನಡೆಸಲಿದ್ದು, ಕೇಸರಿ ರಣಕಹಳೆಯನ್ನು ಮೊಳಗಿಸಲಿದ್ದಾರೆ. ಬೆಂಗಳೂರು, ಚಿಕ್ಕಬಳ್ಳಾಪುರ ಹಾಗೂ ದಾವಣಗೆರೆಗೆ ಮೋದಿ ಭೇಟಿ ನೀಡಲಿದ್ದು, ಈ ಎಲ್ಲ ಕಡೆ ರಸ್ತೆಯ ಇಕ್ಕೆಲಗಳಲ್ಲೂ ಕೇಸರಿ ಹವಾ ಜೋರಾಗಿದೆ.

pm narendra modi arrives in hal airport bengaluru cm basavaraj bommai welcomes ash

 ಬೆಂಗಳೂರು (ಮಾರ್ಚ್‌ 25, 2023) : ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಪ್ರಧಾನಿ ಮೋದಿ ರಾಜ್ಯದಲ್ಲಿ ಬಿಜೆಪಿಯನ್ನು ಮತ್ತಷ್ಟು ಬಲ ಪಡಿಸಲು ಕರ್ನಾಟಕಕ್ಕೆ ಆಗಮಿಸಿದ್ದಾರೆ. ಬೆಂಗಳೂರಿನ ಎಚ್‌ಎಎಲ್‌ ಏರ್‌ಪೋರ್ಟ್‌ನಲ್ಲಿ ಪ್ರಧಾನಿ ಮೋದಿ ವಿಮಾನ ಲ್ಯಾಂಡ್‌ ಆಗಿದ್ದು, ಬಳಿಕ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಸ್ವಾಗತಿಸಿದ್ದಾರೆ. 

ರಾಜ್ಯದ 3 ಜಿಲ್ಲೆಗಳಲ್ಲಿ ಇಂದು ಪ್ರಧಾನಿ ಮೋದಿ ಮಿಂಚಿನ ಸಂಚಾರ ನಡೆಸಲಿದ್ದು, ಕೇಸರಿ ರಣಕಹಳೆಯನ್ನು ಮೊಳಗಿಸಲಿದ್ದಾರೆ. ಬೆಂಗಳೂರು, ಚಿಕ್ಕಬಳ್ಳಾಪುರ ಹಾಗೂ ದಾವಣಗೆರೆಗೆ ಮೋದಿ ಭೇಟಿ ನೀಡಲಿದ್ದು, ಈ ಎಲ್ಲ ಕಡೆ ರಸ್ತೆಯ ಇಕ್ಕೆಲಗಳಲ್ಲೂ ಕೇಸರಿ ಹವಾ ಜೋರಾಗಿದೆ.

ಎಚ್‌ಎಎಲ್‌ ವಿಮಾನ ನಿಲ್ದಾಣದಿಂದ ಪ್ರಧಾನಿ ಮೋದಿ ಎಂಐ - 17 ಹೆಲಿಕಾಪ್ಟರ್‌ ಮೂಲಕ ಚಿಕ್ಕಬಳ್ಳಾಪುರ ಹೆಲಿಪ್ಯಾಡ್‌ಗೆ ಹೋಗಲಿದ್ದಾರೆ. ಅಲ್ಲಿಂದ ರಸ್ತೆ ಮಾರ್ಗದ ಮೂಲಕ ಚಿಕ್ಕಬಳ್ಳಾಪುರದಲ್ಲಿ ಮೆಡಿಕಲ್‌ ಕಾಲೇಜನ್ನು ಉದ್ಘಾಟನೆ ಮಾಡಲಿದ್ದಾರೆ. ಇಲ್ಲಿ ಶ್ರೀ ಮಧುಸೂಧನ್‌ ಸಾಯಿ ಇನ್ಸ್‌ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್‌ ಅಂಡ್‌ ರೀಸರ್ಚ್‌ ಕಾಲೇಜನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ. 

ಇದನ್ನು ಓದಿ: Chikkaballapur: ಶ್ರೀ ಮಧುಸೂದನ್‌ ಸಾಯಿ ಇನ್‌ಸ್ಟಿಟ್ಯೂಟ್ ಉಚಿತ ಆಸ್ಪತ್ರೆ ಇಂದು ಮೋದಿಯಿಂದ ಲೋಕಾರ್ಪಣೆ

ಬಳಿಕ ಪ್ರಧಾನಿ ಮೋದಿ ಮಧ್ಯಾಹ್ನ ವೈಟ್‌ಫೀಲ್ಡ್‌ನಿಂದ ಕೆ.ಆರ್‌. ಪುರ ನಡುವಿನ ನೂತನ ಮೆಟ್ರೋ ಮಾರ್ಗಕ್ಕೆ ಹಸಿರು ನಿಶಾನೆ ತೋರಲಿದ್ದಾರೆ. ಬೆಂಗಳೂರಿನಿಂದ ದಾವಣೆಗೆರೆಗೆ ಹೆಲಿಕಾಪ್ಟರ್‌ ಮೂಲಕ ತೆರಳಲಿದ್ದು, ಈ ವೇಳೆ, ಪ್ರಮುಖವಾಗಿ ದಾವಣಗೆರೆಯಲ್ಲಿ ನಡೆಯಲಿರುವ ವಿಜಯ ಸಂಕಲ್ಪ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಬಿಜೆಪಿಯನ್ನು ಗೆಲ್ಲಿಸಲು ಮತ್ತ್ಟು ಬಲ ತುಂಬಲಿದ್ದಾರೆ.

ದಾವಣಗೆರೆಯಲ್ಲಿ ಸಾರ್ವಜನಿಕ ಸಮಾರಂಭದಲ್ಲಿ ಭಾಗಿಯಾದ ಬಳಿಕ ಅಲ್ಲಿಂದ ಶಿವಮೊಗ್ಗಕ್ಕೆ ಹೋಗಿ, ನೂತನ ಶಿವಮೊಗ್ಗ ಏರ್‌ಪೋರ್ಟ್‌ ಮೂಲಕ ದೆಹಲಿಗೆ ವಾಪಸಾಗಲಿದ್ದಾರೆ. 

ಇದನ್ನೂ ಓದಿ: ಇಂದು ದಾವಣಗೆರೆಯಲ್ಲಿ ಮೋದಿ ಚುನಾವಣಾ ಪಾಂಚಜನ್ಯ: ಬಿಜೆಪಿ ಲ್ಯಾಂಡ್ ಮಾರ್ಕ್ ಆಗಲಿದೆಯಾ ಸಮಾವೇಶ?

ಮಹಾ ಸಂಗಮ ಕಾರ್ಯಕ್ರಮಕ್ಕೆಂದೇ ಪ್ರಧಾನಿ ನರೇಂದ್ರ ಮೋದಿ ಶನಿವಾರ ಮಧ್ಯಾಹ್ನ 2.45ರ ಹೊತ್ತಿಗೆ ಭಾರತೀಯ ವಾಯುಪಡೆಯ ವಿಶೇಷ ಹೆಲಿಕಾಪ್ಟರ್‌ನಲ್ಲಿ ಜಿಎಂಐಟಿ ಹೆಲಿಪ್ಯಾಡ್‌(GMIT Helipad)ಗೆ ಬಂದಿಳಿಯಲಿದ್ದಾರೆ. ಸಮಾವೇಶಕ್ಕಾಗಿ ಸಕಲ ಸಿದ್ಧತೆಗಳು ಮುಗಿದಿದ್ದು, ಇದೀಗ ಮೋದಿ ಆಗಮನ, ಪೆಂಡಾಲ್‌ನೊಳಗೆ ತೆರೆದ ಜೀಪ್‌ನಲ್ಲಿ ಪುಷ್ಟವೃಷ್ಟಿಯಲ್ಲಿ ಮೋದಿಗೆ ಸ್ವಾಗತ ಕೋರಲು ಜನರು ಕಾತುರರಾಗಿದ್ದಾರೆ.

ರಾಜ್ಯದಲ್ಲಿ 150ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಜಯ ಸಾಧಿಸುವ ಮೂಲಕ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವ ಸಂಕಲ್ಪದೊಂದಿಗೆ ಬಿಜೆಪಿ ನಾಲ್ಕು ದಿಕ್ಕಿನಿಂದ ವಿಜಯ ಸಂಕಲ್ಪ ಸಮಾವೇಶ ಮಾಡಿತ್ತು.

ಮಲೆಮಹದೇಶ್ವರ ಬೆಟ್ಟ
ನಂದಗಡ...ಬೆಳಗಾವಿ
ಬಸವಕಲ್ಯಾಣ ವಿಜಯಪುರ
ಕೆಂಪೇಗೌಡ ಪ್ರತಿಮೆ ಬೆಂಗಳೂರು


ಈ ನಾಲ್ಕು ದಿಕ್ಕಿನಿಂದ ಹೊರಟಿದ್ದ ಬಿಜೆಪಿ ವಿಜಯಸಂಕಲ್ಪ ರಥ 212 ವಿಧಾನಸಭೆ ಕ್ಷೇತ್ರ(Assembly constituency)ದಲ್ಲಿ ಸಂಚಾರ ಮಾಡಿದೆ. ಇನ್ನು 12 ವಿಧಾನಸಭೆ ಕ್ಷೇತ್ರದಲ್ಲಿ ರಥಯಾತ್ರೆ ಬಾಕಿ ಇದೆ. ಈ ರಥ ಯಾತ್ರೆಗೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಮೇಲುಸ್ತುವಾರಿ ನಿಭಾಯಿಸಿದ್ದಾರೆ. ನಾಲ್ಕು ತಂಡಕ್ಕೆ ನಾಲ್ಕು ಪ್ರಮುಖರ ಜವಾಬ್ದಾರಿ ನೀಡಲಾಗಿದೆ. ಕೆಎಸ್ ಈಶ್ವರಪ್ಪ, ಅಶೋಕ್, ಗೋವಿಂದ ಕಾರಜೋಳ, ಜಗದೀಶ್ ಶೆಟ್ಟರ್. ಈ ನಾಲ್ವರು ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ ವಿಜಯ ಸಂಕಲ್ಪಯಾತ್ರೆಗೆ ನೇತೃತ್ವವಹಿಸಿದ್ದರು. ಕೆಲವು ಕಡೆಗಳಲ್ಲಿ ಜೆಪಿ ನಡ್ಡಾ, ಕೇಂದ್ರ ಸಚಿವರು ಕೂಡ ಭಾಗಿ ಆಗಿದ್ದರು. ಆ ನಾಲ್ಕು ದಿಕ್ಕಿನ ರಥಯಾತ್ರೆ ದಾವಣಗೆರೆಯಲ್ಲಿ ಸಂಧಿಸಲಿದೆ. ಈ ಸಮಾವೇಶ ಉದ್ದೇಶಿಸಿ ಇಂದು ಮೋದಿ ಹತ್ತು ಲಕ್ಷ ಜನರ ಸಮ್ಮುಖದಲ್ಲಿ ಐತಿಹಾಸಿಕ ಭಾಷಣ ಮಾಡಲಿದ್ದಾರೆ.

ಸಮಾವೇಶಕ್ಕೆ ರಾಜ್ಯದ ಮೂಲೆಮೂಲೆಗಳಿಂದ ಬಿಜೆಪಿ ಕಾರ್ಯಕರ್ತರು ಆಗಮಿಸಲಿದ್ದಾರೆ. ಮಧ್ಯ ಕರ್ನಾಟಕ ಜಿಲ್ಲೆ ದಾವಣಗೆರೆಗೆ ಹತ್ತಿರವಾಗಿ ಹಾವೇರಿ, ಚಿತ್ರದುರ್ಗ, ತುಮಕೂರು, ಹಾಸನ, ಶಿವಮೊಗ್ಗ, ಬಳ್ಳಾರಿ, ವಿಜಯನಗರ, ಹುಬ್ಬಳ್ಳಿ, ಜಿಲ್ಲೆಗಳಿವೆ. ಈ ಪ್ರತಿ ಜಿಲ್ಲೆಗಳಿಂದ 70 ಸಾವಿರದಿಂದ ಒಂದು ಲಕ್ಷ ಜನರನ್ನು ಕರೆತರಲು ಸೂಚನೆ ನೀಡಲಾಗಿದೆ. ಇನ್ನುಳಿದಂತೆ ದೂರ ದೂರದ ಜಿಲ್ಲೆಗಳಾದ ಮಂಗಳೂರು, ಉತ್ತರಕನ್ನಡ, ಬೆಳಗಾವಿ, ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಿಂದ ಕನಿಷ್ಟ 8-10 ಸಾವಿರ ಜನರನ್ನು ಕರೆತರಲು ಪಕ್ಷ ಸೂಚನೆ ನೀಡಲಾಗಿದೆ.  ಅಲ್ಲಿಗೆ ಬರೋಬ್ಬರಿ ಹತ್ತು ಲಕ್ಷ ಜನರನ್ನು ಒಂದೆಡೆ ಸೇರಿಸಿ ಕಾರ್ಯಕ್ರಮ ಮಾಡುತ್ತಿದ್ದು, ಜನರ ಮಧ್ಯೆಯೇ ಮೋದಿ ತೆರೆದ ವಾಹನದಲ್ಲಿ ವೇದಿಕೆಗೆ ಬರಲಿದ್ದಾರೆ. 

Latest Videos
Follow Us:
Download App:
  • android
  • ios