ಕರ್ನಾಟಕದ 13 ರೈಲು ನಿಲ್ದಾಣ ಅಭಿವೃದ್ಧಿಗೆ ನಾಳೆ ಮೋದಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಅಮೃತ ಭಾರತ ಯೋಜನೆಯಡಿ ನಿಲ್ದಾಣ ಮರು ಅಭಿವೃದ್ಧಿಯಾಗುತ್ತಿದೆ.

ನವದೆಹಲಿ (ಆ.5): ಅಮೃತ್‌ ಭಾರತ್‌ ನಿಲ್ದಾಣ ಯೋಜನೆಯ ಮೊದಲ ಹಂತದ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಕರ್ನಾಟಕದ 13 ನಿಲ್ದಾಣಗಳು ಸೇರಿ ದೇಶದ 508 ರೈಲು ನಿಲ್ದಾಣಗಳ ಪುನರಾಭಿವೃದ್ಧಿಗೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ.

ಈ ಯೋಜನೆ ಒಟ್ಟು 24,470 ಕೋಟಿ ರು. ವೆಚ್ಚದಲ್ಲಿ ಪುನರಾಭಿವೃದ್ಧಿ ಮಾಡಲಾಗುತ್ತದೆ. ಈ 508 ನಿಲ್ದಾಣಗಳ ಪೈಕಿ ನೈಋುತ್ಯ ರೈಲ್ವೆ ವಲಯದ ಹುಬ್ಬಳ್ಳಿ ವಿಭಾಗದಲ್ಲಿ ಅಳ್ನಾವರ, ಘಟಪ್ರಭಾ, ಗೋಕಾಕ್‌ ರೋಡ್‌, ಗದಗ, ಕೊಪ್ಪಳ, ಬಳ್ಳಾರಿ ಮೈಸೂರು ವಿಭಾಗದಲ್ಲಿ ಅರಸೀಕೆರೆ ಹಾಗೂ ಹರಿಹರ ನಿಲ್ದಾಣಗಳು ಪುನರಾಭಿವೃದ್ಧಿಗೆ ಆಯ್ಕೆಯಾಗಿದೆ. ಇನ್ನು ದಕ್ಷಿಣ ರೈಲ್ವೆಯಲ್ಲಿ ಮಂಗಳೂರು ಜಂಕ್ಷನ್‌. ಬಂಟ್ವಾಳ ಹಾಗೂ ಬಂಟ್ವಾಳ ಕೂಡ ಆಯ್ಕೆ ಆಗಿವೆ.

ಕರ್ನಾಟಕ-ತಮಿಳುನಾಡು ಸಂಪರ್ಕಿಸುವ ದಕ್ಷಿಣದ ಮೊದಲ ಅಂತರಾಜ್ಯ ಮೆಟ್ರೋ ಯೋಜನೆಗೆ ಟೆಂಡರ್‌!

ಅಳ್ನಾವರ ರೈಲು ನಿಲ್ದಾಣಕ್ಕೆ 17 ಕೋಟಿ ರು., ಘಟಪ್ರಭಾಗೆ 18.2 ಕೋಟಿ ರು., ಗೋಕಾಕ ರೋಡ್‌ಗೆ 17 ಕೋಟಿ ರು., ಗದಗಕ್ಕೆ 23.2 ಕೋಟಿ ರು., ಕೊಪ್ಪಳಕ್ಕೆ 21.1, ಕೋಟಿ ರು., ಬಳ್ಳಾರಿಗೆ 16.7 ಕೋಟಿ ರು., ಅರಸೀಕೆರೆ 34.1 ಕೋಟಿ ರು. ಹಾಗೂ ಹರಿಹರ ರೈಲು ನಿಲ್ದಾಣ ಅಭಿವೃದ್ಧಿಗೆ 25.2 ಕೋಟಿ ರು., ಮಂಗಳೂರು ಜಂಕ್ಷನ್‌ಗೆ 19.3 ಕೋಟಿ ರು. ಅನುದಾನ ನೀಡಲಾಗಿದೆ.

ಈ 508 ನಿಲ್ದಾಣಗಳಲ್ಲಿ ಉತ್ತರ ಪ್ರದೇಶ ಮತ್ತು ರಾಜಸ್ಥಾನದಲ್ಲಿ ತಲಾ 55, ಬಿಹಾರದಲ್ಲಿ 49, ಮಹಾರಾಷ್ಟ್ರದಲ್ಲಿ 44, ಪಶ್ಚಿಮ ಬಂಗಾಳದಲ್ಲಿ 37, ಮಧ್ಯಪ್ರದೇಶದಲ್ಲಿ 34, ಅಸ್ಸಾಂನಲ್ಲಿ 32, ಒಡಿಶಾದಲ್ಲಿ 25, ಪಂಜಾಬ್‌ನಲ್ಲಿ 22 ಸೇರಿದಂತೆ 27 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಹರಡಿವೆ. ಗುಜರಾತ್ ಮತ್ತು ತೆಲಂಗಾಣದಲ್ಲಿ ತಲಾ 21, ಜಾರ್ಖಂಡ್‌ನಲ್ಲಿ 20, ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ತಲಾ 18, ಹರಿಯಾಣದಲ್ಲಿ 15 ಮತ್ತು ಕರ್ನಾಟಕದಲ್ಲಿ 13 ಆಗಿದೆ.

ವರ್ಷಾಂತ್ಯಕ್ಕೆ ಸಬ್‌ ಅರ್ಬನ್‌ ಸಂಪಿಗೆ ಮಾರ್ಗಕ್ಕೆ ಟೆಂಡರ್‌?

ಇವುಗಳಲ್ಲಿ ಈಶಾನ್ಯದಲ್ಲಿರುವ ಅಸ್ಸಾಮ್ಸ್ ಬೊಂಗೈಗಾಂವ್, ಕೊಕ್ರಜಾರ್, ಲುಮ್ಡಿಂಗ್, ಮೇಘಾಲಯದ ಮೆಂಡಿಪಥರ್ ಮುಂತಾದ ನಿಲ್ದಾಣಗಳು ಸೇರಿವೆ. ಬಿಹಾರದ ಮುಜಾಫರ್‌ಪುರ, ಬಾಪುಧಾಮ್ ಮೋತಿಹಾರಿ, ಕೇರಳದ ಶೋರ್ನೂರ್ ಮತ್ತು ಕಾಸರಗೋಡು ಕೂಡ ಪಟ್ಟಿಯಲ್ಲಿವೆ. 

24,470 ಕೋಟಿ ವೆಚ್ಚದ ಈ ಮರುಅಭಿವೃದ್ಧಿಯು ಆಧುನಿಕ ಪ್ರಯಾಣಿಕರ ಸೌಕರ್ಯಗಳನ್ನು ಒದಗಿಸುವುದರ ಜೊತೆಗೆ ಉತ್ತಮವಾಗಿ ವಿನ್ಯಾಸಗೊಳಿಸಲಾದ ಸಂಚಾರ ಸಂಚಾರ, ಇಂಟರ್-ಮೋಡಲ್ ಏಕೀಕರಣ ಮತ್ತು ಪ್ರಯಾಣಿಕರ ಮಾರ್ಗದರ್ಶನಕ್ಕಾಗಿ ಉತ್ತಮವಾಗಿ ವಿನ್ಯಾಸಗೊಳಿಸಲಾದ ಸೂಚನಾ ಫಲಕಗಳನ್ನು ಒದಗಿಸುತ್ತದೆ ಎಂದು ಪ್ರಧಾನ ಮಂತ್ರಿ ಕಚೇರಿ (PMO) ತಿಳಿಸಿದೆ. ನಿಲ್ದಾಣದ ಕಟ್ಟಡಗಳನ್ನು ಸ್ಥಳೀಯ ಸಂಸ್ಕೃತಿ, ಪರಂಪರೆ ಮತ್ತು ವಾಸ್ತುಶಿಲ್ಪದಿಂದ ಕೂಡಿರಲಿದೆ.