ಭಾರತದ ಎರಡನೇ ಅಂತರ-ರಾಜ್ಯ ಮೆಟ್ರೋ ಸಂಪರ್ಕ ಬೆಂಗಳೂರಿನಿಂದ ಹೊಸೂರು ಈಗ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. ಚೆನ್ನೈ ಮೆಟ್ರೋ ರೈಲು ಲಿಮಿಟೆಡ್ ಟೆಂಡರ್‌ ಆಹ್ವಾನಿಸಿದೆ.

ಬೆಂಗಳೂರು (ಜು.2): ಭಾರತದ ಎರಡನೇ ಅಂತರ-ರಾಜ್ಯ ಮೆಟ್ರೋ ಸಂಪರ್ಕ ಬೆಂಗಳೂರಿನಿಂದ ಹೊಸೂರು ಈಗ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. ಐಟಿ ಸಿಟಿ ಬೆಂಗಳೂರಿನಿಂದ ತಮಿಳುನಾಡಿನ ಕೈಗಾರಿಕಾ ಪಟ್ಟಣವಾದ ಹೊಸೂರಿನವರೆಗೆ ಈ 20.5 ಕಿಲೋಮೀಟರ್ ಮೆಟ್ರೋ ವಿಸ್ತರಣೆಯು ಅನೇಕ ಸಂಖ್ಯೆಯ ಜನರಿಗೆ ಪ್ರಯೋಜನವಾಗಲಿದೆ.

ಚೆನ್ನೈ ಮೆಟ್ರೋ ರೈಲು ಲಿಮಿಟೆಡ್ (CMRL) ತಮಿಳುನಾಡಿನ ಹೊಸೂರು ಮತ್ತು ಕರ್ನಾಟಕದ ಬೆಂಗಳೂರು ನಡುವಿನ ದಕ್ಷಿಣ ಭಾರತದ ಮೊದಲ ಅಂತರ-ರಾಜ್ಯ ಮೆಟ್ರೋ ರೈಲು ಸಂಪರ್ಕಕ್ಕೆ ಚಿಂತನೆ ನಡೆಸಿದ್ದು, ಈ ಸಂಬಂಧ ಅಧ್ಯಯನ ವರದಿಯನ್ನು ತಯಾರಿಸಲು ಟೆಂಡರ್ ಕರೆದಿದೆ. 20.5 ಕಿಮೀ ಮೆಟ್ರೋ ಮಾರ್ಗವು ಬೆಂಗಳೂರಿನ ಐಟಿ ಸಿಟಿ ಮತ್ತು ಹೊಸೂರಿನ ಬೊಮ್ಮಸಂದ್ರವನ್ನು ಸಂಪರ್ಕಿಸುತ್ತದೆ. 20.5 ಕಿಮೀ ವಿಸ್ತಾರದಲ್ಲಿ 11.7 ಕಿಮೀ ಕರ್ನಾಟಕದಲ್ಲಿ ಮತ್ತು 8.8 ಕಿಮೀ ತಮಿಳುನಾಡಿನಲ್ಲಿರುತ್ತದೆ.

ಕೆಎಂಎಫ್ ನಿಂದ ಡೈರಿ ಮಿಲ್ಕ್‌ಗೆ ಕಾಂಪಿಟೇಷನ್ ನಂದಿನಿ ಬ್ರಾಂಡ್ ಚಾಕಲೇಟ್, ಮಕ್ಕಳ ಪೌಷ್ಠಿಕ

ಹೊಸೂರಿನಿಂದ ಎಲೆಕ್ಟ್ರಾನಿಕ್ಸ್ ಸಿಟಿ ಬಳಿ ಬೊಮ್ಮಸಂದ್ರಕ್ಕೆ ಸಂಪರ್ಕ ಕಲ್ಪಿಸುವ ಸಾಮೂಹಿಕ ಕ್ಷಿಪ್ರ ಸಾರಿಗೆಯನ್ನು ಪರಿಚಯಿಸಲು ಕಾರ್ಯಸಾಧ್ಯತೆಯ ಅಧ್ಯಯನ ವರದಿಯನ್ನು ತಯಾರಿಸಲು ಸಲಹೆಗಾರರನ್ನು ಆಯ್ಕೆ ಮಾಡಲು CMRL ಟೆಂಡರ್ ಆಹ್ವಾನಿಸಿದೆ. ಟೆಂಡರ್ ಅನ್ನು ಸೆಪ್ಟೆಂಬರ್ 1, 2023 ರಂದು ತೆರೆಯುವ ಸಾಧ್ಯತೆಯಿದೆ. ಕರ್ನಾಟಕದಲ್ಲಿ ಬರುವ ಮಾರ್ಗವನನ್ನು ಬಿಎಂಆರ್‌ಸಿಎಲ್‌ ಮತ್ತು ತಮಿಳುನಾಡಿನ ಮಾರ್ಗವನ್ನು ಸಿಎಂಆರ್‌ಎಲ್‌ ನಿರ್ಮಿಸಲಿದೆ.

ಈ ವರ್ಷದ ಮಾರ್ಚ್‌ನಲ್ಲಿ, ಕೇಂದ್ರ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು (Ministry of Housing and Urban Affairs) ಅಂತರಾಜ್ಯ ಮೆಟ್ರೋ ಪ್ರಯಾಣದ ಕಾರ್ಯಸಾಧ್ಯತೆಯ ಬಗ್ಗೆ ಅಧ್ಯಯನವನ್ನು ಸಿದ್ಧಪಡಿಸಲು ಅನುಮೋದನೆ ನೀಡಿತ್ತು. ಜೊತೆಗೆ ಇದಕ್ಕಾಗಿ 75 ಲಕ್ಷ ರೂ ಮೀಸಲಿಟ್ಟಿತ್ತು. ಕರ್ನಾಟಕ ಸರ್ಕಾರವು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಅನ್ನು ವಿಸ್ತರಿಸಲು ಅನುಮೋದನೆ ನೀಡಿತ್ತು ಮತ್ತು ಕಳೆದ ವರ್ಷ ಕೇಂದ್ರ ಸರ್ಕಾರಕ್ಕೆ ಈ ಬಗ್ಗೆ ತಿಳಿಸಿತ್ತು. 

ಕಳೆದ ರಾಜ್ಯ ಬಜೆಟ್‌ನಲ್ಲಿ ತಮಿಳುನಾಡು ಸರ್ಕಾರವು ಕೊಯಮತ್ತೂರು, ಮಧುರೈ, ತಿರುಪುರ್ ಮತ್ತು ಹೊಸೂರಿನಲ್ಲಿ ಚೆನ್ನೈ ಮಹಾನಗರ ಅಭಿವೃದ್ಧಿ ಪ್ರಾಧಿಕಾರದಂತೆಯೇ ಹೊಸ ಮಹಾನಗರ ಅಭಿವೃದ್ಧಿ ಪ್ರಾಧಿಕಾರಗಳನ್ನು ಸ್ಥಾಪಿಸಲಾಗುವುದು ಎಂದು ಈ ನಗರಗಳ ಮೂಲಸೌಕರ್ಯ ಅಭಿವೃದ್ಧಿಗೆ ಗಮನಹರಿಸುತ್ತದೆ.

ಬೆಂಗ​ಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ ನಿಷೇಧದ ಮೊದಲ ದಿನವೇ 137 ಕೇಸ್‌

ಈಗಾಗಲೇ ತಮಿಳುನಾಡಿನ ಸಂಸದ ಚೆಲ್ಲಕುಮಾರ್ ಬೆಂಗಳೂರು ನಗರದಲ್ಲಿ ಸಂಚಾರ ಮಾಡುವ ಬಿಎಂಆರ್‌ಸಿಎಲ್‌ ಮೆಟ್ರೋ ರೈಲನ್ನು ಹೊಸೂರುವರೆಗೆ ವಿಸ್ತರಣೆ ಮಾಡುವಂತೆ ಸಂಸತ್‌ನಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ ನೀಲನಕ್ಷೆ ರಚಿಸಿ ಕಾರ್ಯಸಾಧ್ಯತೆಯ ಬಗ್ಗೆ ಅಧ್ಯಯನ ವರದಿ ಸಿದ್ಧಪಡಿಸಲು ಅನುಮತಿ ಕೇಳಿದ್ದರು. ಆದರೆ, ಇದಕ್ಕೆ ಕನ್ನಡಿಗರಿಂದ ಭಾರಿ ವಿರೋಧ ವ್ಯಕ್ತವಾಗಿತ್ತು.

ಬೆಂಗಳೂರು ಮೆಟ್ರೋದ ಹಳದಿ ಮಾರ್ಗವು ಬೊಮ್ಮಸಂದ್ರ ಮತ್ತು ದಕ್ಷಿಣ ಬೆಂಗಳೂರಿನ ಆರ್‌ವಿ ರಸ್ತೆಯನ್ನು ಸಂಪರ್ಕಿಸುತ್ತದೆ, ಇದು ಡಿಸೆಂಬರ್ 2023 ರ ವೇಳೆಗೆ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ.

ಹಲವು ಕಂಪನಿ ಉದ್ಯೋಗಿಗಳಿಗೆ ಸುವರ್ಣಾವಕಾಶ: ದೇಶದ ಐಟಿ ರಾಜಧಾನಿಯೊಂದಿಗೆ ಗಡಿ ಹಂಚಿಕೊಂಡಿರುವ ಕೈಗಾರಿಕಾ ಪಟ್ಟಣ ಹೊಸೂರಿನಲ್ಲಿ ಟಿವಿಎಸ್‌, ನಿಪ್ಪೋನ್‌, ಎಲೆಕ್ಟ್ರಿಕಲ್ಸ್‌, ಅಶೋಕ್‌ ಲೈಲ್ಯಾಂಡ್‌, ಟೈಟಾನ್‌ ಸೇರಿ ಹಲವು ಪ್ರತಿಷ್ಠಿತ ಕಂಪನಿಗಳಿವೆ. ಲೋಕಸಭೆಯಲ್ಲಿ ಮೆಟ್ರೊ ಸಂಪರ್ಕ ಕುರಿತು ಪ್ರಸ್ತಾಪಿಸಿದ ಕೃಷ್ಣಗಿರಿ ಸಂಸದ ಡಾ.ಎ.ಚೆಲ್ಲಕುಮಾರ್‌ 'ಹೊಸೂರಿನಿಂದ ಬೆಂಗಳೂರಿಗೆ ನಿತ್ಯ ಸಂಚರಿಸುವ ಸಾವಿರಾರು ಪ್ರಯಾಣಿಕರ ಪಾಲಿಗೆ ಇದೊಂದು ಕನಸಿನ ಯೋಜನೆಯಾಗಿದೆ. ಈ ಯೋಜನೆ ಜಾರಿಯಾದರೆ ಉಭಯ ರಾಜ್ಯಗಳ ಜನರಿಗೆ ಸಾಮಾಜಿಕ ಮತ್ತು ಆರ್ಥಿಕವಾಗಿ ಅನುಕೂಲವಾಗಲಿದೆ' ಎಂದು ಹೇಳಿದ್ದರು.