Asianet Suvarna News Asianet Suvarna News

ರಾಜಭವನ ರಸ್ತೆಯಿಂದ ಟ್ರಿನಿಟಿ ವರೆಗೆ ಮೋದಿ ರೋಡ್ ಶೋ, ನಾಳೆ ಬೆಂಗಳೂರಿನ ಈ ರಸ್ತೆಗಳು ಬಂದ್!

ಬೆಂಗಳೂರಿನಲ್ಲಿ ನಾಳೆ ಪ್ರಧಾನಿ ನರೇಂದ್ರ ಮೋದಿ ಎರಡನೇ ಹಂತದ ರೋಡ್ ಶೋ ನಡೆಸುತ್ತಿದ್ದಾರೆ. ಮೇ.07ರ ಬೆಳಗ್ಗೆ 8 ಗಂಟೆಯಿಂದ ರೋಡ್ ಶೋ ಆರಂಭಗೊಳ್ಳುತ್ತಿದೆ. ಮೋದಿ ರೋಡ್ ಶೋ ಸಾಗುವ ರಸ್ತೆಗಳಲ್ಲಿ ಸಾರ್ವಜನಿಕ ಸಂಚಾರ ಬಂದ್ ಆಗಲಿದೆ.ಹೀಗಾಗಿ ಪರ್ಯಾಯ ಮಾರ್ಗ ಬಳಸಲು ಬೆಂಗಳೂರು ಟ್ರಾಫಿಕ್ ಪೊಲೀಸರು ಮನವಿ ಮಾಡಿದ್ದಾರೆ. ಮೋದಿ ರೋಡ್ ಸಾಗುವ ಮಾರ್ಗದ ವಿವರ ಇಲ್ಲಿದೆ.

PM Modi road show in Bengaluru ahead of Karnataka Election police ask public to avoid these roads on may 7th ckm
Author
First Published May 6, 2023, 5:15 PM IST | Last Updated May 6, 2023, 5:15 PM IST

ಬೆಂಗಳೂರು(ಮೇ.06): ಕರ್ನಾಟಕ ವಿಧಾನಸಭಾ ಚುನಾವಣಾ ಅಖಾಡದಲ್ಲಿ ಬಿಜೆಪಿ ಅಬ್ಬರದ ಪ್ರಚಾರ ನಡೆಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ, ಸಿಎಂ ಯೋಗಿ ಆದಿತ್ಯನಾಥ್, ಹಿಮಂತ ಬಿಸ್ವ ಶರ್ಮಾ ಸೇರಿದಂತೆ ಘಟಾನುಘಟಿ ನಾಯಕರು ಕರ್ನಾಟಕದಲ್ಲಿದ್ದಾರೆ. ಈಗಾಗಲೇ ಪ್ರಧಾನಿ ಮೋದಿ ಬೆಂಗಳೂರಿನಲ್ಲಿ ಮೊದಲ ಹಂತದ ರೋಡ್ ಶೋ ನಡೆಸಿದ್ದಾರೆ. ನಾಳೆ(ಮೇ.07) ಬೆಳಗ್ಗೆ ಎರಡೇ ಹಾಗೂ ಕೊನೆಯ ಹಂತದ ರೋಡ್ ಶೋ ನಡೆಸಲಿದ್ದಾರೆ. ಹೀಗಾಗಿ ಮೋದಿ ಸಂಚರಿಸುವ ಮಾರ್ಗದಲ್ಲಿ ಸಾರ್ವಜನಿಕ ಸಂಚಾರ ನಿಷೇಧಿಸಲಾಗಿದೆ. ಸಾರ್ವಜನಿಕರು ಪರ್ಯಾಯ ಮಾರ್ಗ ಬಳಸಲು ಬೆಂಗಳೂರು ಸಂಚಾರಿ ಪೊಲೀಸರು ಮನವಿ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ನಾಳೆ ಬೆಳಗ್ಗೆ 8 ಗಂಟೆಗೆ ಆರಂಭಗೊಳ್ಳಲಿದೆ. ರಾಜಭನವ ರಸ್ತೆಯಿಂದ ಆರಂಭಗೊಂಡು, ಟ್ರಿನಿಟಿ ಜಂಕ್ಷನ್ ವರೆಗೆ ರೋಡ್ ಶೋ ನಡೆಯಲಿದೆ. ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 12 ಗಂಟೆ ವರೆಗೆ ರೋಡ್ ಶೋ ಆಯೋಜಿಸಲಾಗಿದೆ. ಈಗಾಗಲೇ ಈ ರಸ್ತೆಗಳಲ್ಲಿ ಭಾರಿ ಭದ್ರತೆ ಕೈಗೊಳ್ಳಳಾಗಿದೆ.

ಬರೋಬ್ಬರಿ 3 ಗಂಟೆ, 26 ಕಿ.ಮೀ ನಾನ್ ಸ್ಟಾಪ್ ರೋಡ್ ಶೋ, ಜನರ ಪ್ರತಿಕ್ರಿಯೆಗೆ ಮೋದಿ ಉತ್ಸಾಹ ಡಬಲ್!

ಮೋದಿ ರೋಡ್ ಶೋ ಸಂಚರಿಸುವ ಮಾರ್ಗ
ರಾಜಭವನ ರಸ್ತೆ, ಮೇಖ್ರಿ ವೃತ್ತ,
ರೇಸ್‌ಕೋರ್ಸ್ ವೃತ್ತ, ಟಿ ಚೌಡಯ್ಯ ರಸ್ತೆ,
ರಮಣಮಹರ್ಷಿ ರಸ್ತೆ,
ಹಳೇ ವಿಮಾನ ನಿಲ್ದಾಣ ರಸ್ತೆ,
ಸುರಂಜನ್ ದಾಸ್ ರಸ್ತೆ,
ಎಂಜಿ ರಸ್ತೆ, ಬ್ರಿಗೇಡ್ ರಸ್ತೆ,
ಜಗದೀಶನಗರ ಕ್ರಾಸ್, 
ಬಿಇಎಂಎಲ್ ಜಂಕ್ಷನ್,
ಜೀವನಭೀಮಾನಗರ ಮುಖ್ಯರಸ್ತೆ,
80 ಅಡಿ ರಸ್ತೆ ಇಂದಿರಾನಗರ,
ಹೊಸ ತಿಪ್ಪಸಂದ್ರ ರಸ್ತೆ,
12ನೇ ಮುಖ್ಯರಸ್ತೆ, 100 ಅಡಿ ರಸ್ತೆ ಇಂದಿರಾನಗರ,
ಸಿಎಂಹೆಚ್ ರಸ್ತೆ,
17ನೇ ಎಫ್ ಕ್ರಾಸ್, ಆದರ್ಶ ಕ್ರಾಸ್,
ಹಲಸೂರು ಮೆಟ್ರೋ ನಿಲ್ದಾಣ
ಟ್ರಿನಿಟಿ ಜಂಕ್ಷನ್

ಈ ರಸ್ತೆಗಳಲ್ಲಿ ಮೋದಿ ರೋಡ್ ಶೋ ಹಾದು ಹೋಗಲಿದೆ. ಹೀಗಾಗಿ ಸಾರ್ವಜನಿಕರು ಈ ರಸ್ತೆಗಳ ಸಂಚಾರ ಮಾರ್ಗ ಬದಲಿಸಿ ಪರ್ಯಾಯ ಮಾರ್ಗ ಬಳಸಬೇಕಾಗಿ ಬೆಂಗಳೂರು ಸಂಚಾರಿ ಪೊಲೀಸರು ಮನವಿ ಮಾಡಿದ್ದಾರೆ. ಈಗಾಗಲೇ ಮೋದಿ ಸಂಚರಿಸುವ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಲಾಗಿದೆ. ತಪಾಸಣೆ, ಭದ್ರತಾ ಕಾರ್ಯಗಳನ್ನ ಕೈಗೊಳ್ಳಲಾಗಿದೆ.

 

ಬೆಂಗಳೂರಿನಲ್ಲಿ ಮೋದಿ ಮೆಘಾ ರೋಡ್ ಶೋ , ಭಜರಂಗಿ ಮುಖವಾಡ ಧರಿಸಿದ ಅಭಿಮಾನಿಗಳಿಂದ ಸ್ವಾಗತ!

ಪ್ರಧಾನಿ ಮೋದಿ ಎರಡನೇ ಹಂತದ ಬೆಂಗಳೂರು ರೋಡ್‌ಶೋದಲ್ಲಿ 10 ಕಿಲೋಮೀಟರ್ ಸಂಚರಿಸಲಿದ್ದಾರೆ. ಇಂದು(ಮೇ.06) ಬೆಂಗಳೂರಲ್ಲಿ ಪ್ರಧಾನಿ ನರೇಂದ್ರ ಮೋದಿ ನಡೆಸಿದ ಮೋದಿ ರೋಡ್ ಶೋ 13 ಕ್ಷೇತ್ರಗಳಲ್ಲಿ ಹಾದು ಹೋಗಿತ್ತು. ಸತತ 3 ಗಂಟೆ ಕಾಲ 26 ಕಿಲೋಮೀಟರ್ ಮೋದಿ ರೋಡ್ ಶೋ ನಡೆಸಿದ್ದರು. ಪ್ರಧಾನಿ ಮೋದಿಗೆ ಭರ್ಜರಿ ಸ್ವಾಗತ ಸಿಕ್ಕಿತ್ತು. ಜನರು ಹೂಮಳೆ ಸ್ವಾಗತ ನೀಡಿದ್ದರು. 

Latest Videos
Follow Us:
Download App:
  • android
  • ios