ಬೆಂಗಳೂರಿನಲ್ಲಿ ಮೋದಿ ಮೆಘಾ ರೋಡ್ ಶೋ , ಭಜರಂಗಿ ಮುಖವಾಡ ಧರಿಸಿದ ಅಭಿಮಾನಿಗಳಿಂದ ಸ್ವಾಗತ!
ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನಲ್ಲಿ ಮೆಘಾ ರೋಡ್ ಶೋ ಆರಂಭಿಸಿದ್ದಾರೆ. ದಾರಿಯುದ್ದಕ್ಕೂ ಹೂಮಳೆಯ ಸ್ವಾಗತ ಕೋರಲಾಗಿದೆ.
ಬೆಂಗಳೂರು(ಮೇ.06): ಕರ್ನಾಟಕ ವಿಧಾನಸಭಾ ಚುನಾವಣೆ ಕಾವು ಜೋರಾಗಿದೆ. ಪ್ರಧಾನಿ ನರೇಂದ್ರ ಮೋದಿ ಬೆಂಗಳೂರು ರೋಡ್ ಶೋ ಆರಂಭಗೊಂಡಿದೆ. ಹೆಲಿಕಾಪ್ಟರ್ ಮೂಲಕ ಬನ್ನೇರುಘಟ್ಟ ರಸ್ತೆಯಲ್ಲಿರುವ ಲೊಯೋಲ ಶಾಲೆ ಹೆಲಿಪ್ಯಾಡ್‌ಗೆ ಆಗಮಿಸಿದ ಮೋದಿ, ನೇರವಾಗಿ ತೆರೆದ ವಾಹನ ಏರಿ ರೋಡ್ ಶೋ ಆರಂಭಿಸಿದರು. ಮೋದಿಗೆ ಮೈಸೂರು ಪೇಟ ತೊಡಿಸಿ ಸ್ವಾಗತ ಕೋರಲಾಯಿತು. ಮೋದಿ ಜೊತೆಗೆ ತೆರೆದ ವಾಹನದಲ್ಲಿ ಸಂಸದ ತೇಜಸ್ವಿ ಸೂರ್ಯ ಹಾಗೂ ಪಿಸಿ ಮೋಹನ್ ಸಾಥ್ ನೀಡಿದ್ದಾರೆ.
ಮೋದಿ ನೋಡಲು ಜನಸಾಗರವೇ ಹರಿದು ಬಂದಿದೆ. ರಸ್ತೆಯ ಎರಡೂ ಬದಿಗಳಲ್ಲಿ ದನರು ಹೂಮಳೆ ಸುರಿಸುತ್ತಿದ್ದಾರೆ. ಬೆಳಗ್ಗೆಯಿಂದಲೇ ಜನರು ಮೋದಿ ನೋಡಲು ಆಗಮಿಸಿದ್ದಾರೆ. ಇನ್ನು ಮೋದಿ ಸಾಗುವ ರಸ್ತೆಯಲ್ಲಿ ಸಂಚಾರ ನಿರ್ಬಂಧಿಸಲಾಗಿದೆ. ಶ್ರೀ ಸೋಮೇಶ್ವರ ಸಭಾ ಭವನ ಮೂಲಕ ಆರಂಭಗೊಂಡ ಮೋದಿ ರೋಡ್ ಶೋ , ಜೆಪಿನಗರ 5ನೇ ಹಂತದ ಮೂಲಕ ಸಾಗಿ, ಜಯನಗರ 5ನೇ ಬ್ಲಾಕ್‌ಗೆ ಆಗಮಿಸಲಿದೆ.
ಸೂಡಾನ್‌ನಿಂದ ಭಾರತೀಯರ ರಕ್ಷಣೆ ವೇಳೆಯೂ ಕಾಂಗ್ರೆಸ್ ರಾಜಕೀಯ: ಪ್ರಧಾನಿ ಮೋದಿ ವಾಗ್ದಾಳಿ
ಜಯನಗರ 4ನೇ ಬ್ಲಾಕ್ ತೆರಳಿ, ಸೌತ್ ಎಂಡ್ ವೃತ್ತ, ಮಾಧರಾವ್ ವೃತ್ತ, ರಾಮಕೃಷ್ಣಮ ಆಶ್ರಮ, ಉಮಾ ಥಿಯೇಟರ್ ಸಿಗ್ನಲ್, ಮೈಸೂರು ಸಿಗ್ನಲ್, ಟೋಲ್ ಗೇಟ್ ಸಿಗ್ನಲ್, ಗೋವಿಂದರಾಜನಗನರದ ಮೂಲಕ ಸಾಗಲಿದೆ. ಮಾಗಡಿ ರೋಡ್ ಜಂಕ್ಷನ್, ಶಂಕರಮಠ ವೃತ್ತದ ಮೂಲಕ ಸಾಗಿ ಮಲ್ಲೇಶ್ವರಂಗೆ ಆಗಮಿಸಲಿದೆ. ಬಳಿಕ ಮಲ್ಲೇಶ್ವರಂ 18ನೇ ರಸ್ತೆ ಜಂಕ್ಷನ್ ತಲುಪಲಿದೆ. ಕಾಡು ಮಲ್ಲೇಶ್ವರ ದೇವಸ್ಥಾನದ ಬಳಿ ಮೋದಿ ರೋಡ್ ಶೋ ಅಂತ್ಯಗೊಳ್ಳಲಿದೆ. ಮೋದಿ ಕಾಡು ಮಲ್ಲೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ.
ರಸ್ತೆಯ ಬದಿಗಳಲ್ಲಿ ಭಜರಂಗಿ ಮುಖವಾಡ ಧರಿಸಿದ ಅಭಿಮಾನಿಗಳು ಮೋದಿಗೆ ಸ್ವಾಗತ ನೀಡಿದ್ದಾರೆ. ಹಲೆವೆಡೆ ಭಜರಂಗಿ ಕಟೌಟ್‌ಗಳನ್ನು ಹಾಕಲಾಗಿದೆ. ಅಭಿಮಾನಿಯೋರ್ವ ತನ್ನ ಮನೆ ಮುಂದೆ 50 ಅಡಿ ಮೋದಿ ಕಟೌಟ್ ಹಾಕಿದ್ದಾನೆ. ರಸ್ತೆಯುದ್ದಕ್ಕೂ ಮೋದಿ ಮೋದಿ ಜೈಕಾರ ಮೊಳಗಿದೆ. ಜೈ ಭಜರಂಗಬಲಿ ಅನ್ನೋ ಘೋಷಣಾ ವಾಕ್ಯಗಳು ಎಲ್ಲೆಡೆ ಕೇಳಿಸುತ್ತಿದೆ.
ಕರ್ನಾಟಕ ನಂ.1 ಮಾಡಲು ಉಗ್ರರ ಹತ್ತಿಕ್ಕಬೇಕು: ಪ್ರಧಾನಿ ಮೋದಿ
ಮೋದಿ ಸಂಚರಿಸುವ ಎಲ್ಲಾ ಮಾರ್ಗದಲ್ಲಿ ಸಂಚಾರ ಬಂದ್ ಮಾಡಲಾಗಿದೆ. ನಗರದ 18 ಕ್ಷೇತ್ರಗಳಲ್ಲಿ ಒಟ್ಟು 36.6 ಕಿ.ಮೀ. ದೂರ ರೋಡ್ ಶೋ ನಡೆಸಲಿದ್ದಾರೆ. ಮೋದಿಯ ಬೆಂಗಳೂರು ರೋಡ್ ಶೋನಲ್ಲಿ ಒಟ್ಟು 10 ಲಕ್ಷಕ್ಕೂ ಅಧಿಕ ಜನ ಪಾಲ್ಗೊಳ್ಳುವ ನಿರೀಕ್ಷೆ ಇದ್ದಾರೆ. ಮೋದಿ ಕಣ್ತುಂಬಿಕೊಂಡ ಜನ, ಸಂತಸ ವ್ಯಕ್ತಪಡಿಸಿದ್ದಾರೆ. ದೇಶದ ಪ್ರಧಾನಿ ಬೆಂಗಳೂರಿಗೆ ಆಗಮಿಸಿದ್ದಾರೆ. ಇದು ನಮಗೆ ಖುಷಿ ನೀಡಿದೆ. ಮೋದಿಯನ್ನು ಹತ್ತಿರದಿಂದ ನೋಡಲು ಸಾಧ್ಯವಾಗಿರುವುದು ನಮ್ಮ ಭಾಗ್ಯ ಎಂದು ಅಭಿಮಾನಿಗಳು ಹೇಳಿದ್ದಾರೆ.