ಹುಬ್ಬಳ್ಳಿಯಲ್ಲಿ ನಮೋ ರಣಕಹಳೆ!ಕನ್ನಡದಲ್ಲೇ ಭಾಷಣ ಆರಂಭಿಸಿದ ಮೋದಿ! ಸಮವೇಶದಲ್ಲಿ ಸಿದ್ದಗಂಗಾ ಶ್ರೀ, ಅನಂತಕುಮಾರ್‌ ಸ್ಮರರಣೆ. 

ಹುಬ್ಬಳ್ಳಿ, [ಫೆ.10]: ಲೋಕಸಭೆ ಮಹಾ ಸಂಗ್ರಾಮಕ್ಕೆ ರಾಜ್ಯದಲ್ಲಿ ಬಿಜೆಪಿ ರಣಕಹಳೆ ಮೊಳಗಿಸಿದೆ. ಉತ್ತರ ಕರ್ನಾಟಕದಿಂದಲೇ ಲೋಕ ಸಮರಕ್ಕೆ ಪ್ರಧಾನಿ ಮೋದಿ ರಣವೀಳ್ಯ ಕೊಟ್ಟಿದ್ದು, ಹುಬ್ಬಳ್ಳಿಯ ಗಬ್ಬೂರ್ ಬಳಿಯ ಕೆಎಲ್ಇ ಮೈದಾನದಲ್ಲಿ ಮೋದಿ ತಮ್ಮ ಭಾಷಣದ ರಾಜ್ಯದಲ್ಲಿ ಚುನಾವಣೆ ಕಾವೇರಿಸಿದರು.

'ಕರ್ನಾಟಕದ ಮುಖ್ಯಮಂತ್ರಿ ಎಲ್ಲರ ಪಾಲಿಗೆ ಪಂಚಿಂಗ್ ಬ್ಯಾಗ್ ಆಗಿದ್ದಾರೆ'

ಹುಬ್ಬಳ್ಳಿಯಲ್ಲಿ ಆಯೋಜನೆಗೊಂಡಿದ್ದ ಬಿಜೆಪಿ ಸಮಾವೇಶದಲ್ಲಿ ಕನ್ನಡದಲ್ಲೇ ಭಾಷಣ ಆರಂಭಿಸಿದ ಮೋದಿ, ಇತ್ತೀಚೆಗೆ ಲಿಂಗೈಕ್ಯರಾದ ತುಮಕೂರು ಸಿದ್ಧಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿ ಹಾಗೂ ಕೇಂದ್ರದ ಮಾಜಿ ಸಚಿವ ಅನಂತಕುಮಾರ್​ ಅವರನ್ನು ಸ್ಮರಿಸಿದರು.

Scroll to load tweet…

ಹುಬ್ಬಳ್ಳಿ ಮತ್ತು ಧಾರವಾಡ ಗಂಡು ಮೆಟ್ಟಿನ ನೆಲ. ಇಲ್ಲಿ ಹಲವು ಸಿದ್ಧಾರೂಢರು, ಶೈಕ್ಷಣಿಕ ಕ್ರಾಂತಿ ಮಾಡಿದ ಮೂರು ಸಾವಿರ ಮಠದ ಶ್ರೀಗಳಂತ ಹಲವು ದೈವಾಂಶ ಸಂಭೂತರು, ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣರಂಥ ವೀರರು ಜನಿಸಿದ ನಾಡಿದು. 

ಧಾರವಾಡದಲ್ಲಿ IIT, ರಾಯಚೂರಿನಲ್ಲಿ IIIT ನಿರ್ಮಾಣ ಕಾಮಗಾರಿಗೆ ಮೋದಿ ಚಾಲನೆ

ಸಾಹಿತ್ಯ ಸಂಗೀತ ದಿಗ್ಗಜರಾದ ದ.ರಾ. ಬೇಂದ್ರೆ ಮತ್ತು ಗಂಗೂಬಾಯಿ ಹಾನಗಲ್​ ಸೇರಿ ಇನ್ನೂ ಹಲವರು ಬದುಕಿಬಾಳಿದ ಈ ನಾಡಿಗೆ ಬಂದದ್ದಕ್ಕೆ ರೋಮಾಂಚನವಾಗುತ್ತಿದೆ ಎಂದರು.