ಶಿಕ್ಷಣ ಕಾಶಿ ಧಾರವಾಡದಲ್ಲಿ ಐಐಟಿ, ರಾಯಚೂರಿನಲ್ಲಿ ಐಐಐಟಿ ಕಟ್ಟಡಗಳ ನಿರ್ಮಾಣ ಸೇರಿದಂತೆ ಹಲವು ಕಾಮಗಾರಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು.

ಹುಬ್ಬಳ್ಳಿ, [ಫೆ.10] : ಇಂದು [ಭಾನುವಾರ] ವಾಣಿಜ್ಯ ನಗರಿಗೆ ಹುಬ್ಬಳ್ಳಿಗೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಹಲವು ಸರ್ಕಾರಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. 

Scroll to load tweet…

ಶಿಕ್ಷಣ ಕಾಶಿ ಧಾರವಾಡದಲ್ಲಿ ಐಐಟಿ, ರಾಯಚೂರಿನಲ್ಲಿ ಐಐಐಟಿ ಕಟ್ಟಡಗಳ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ಜತೆಗೆ ಧಾರವಾಡ ಅನಿಲ ವಿತರಣಾ ಯೋಜನೆ, ಮಂಗಳೂರು ತುರ್ತು ಅವಶ್ಯಕತೆಯ ಪೆಟ್ರೋಲಿಯಂ ಸಂಗ್ರಹ ಸೌಲಭ್ಯ, ಪ್ರಧಾನಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ಧಾರವಾಡದಲ್ಲಿ ನಿರ್ಮಿಸಿರುವ ಮನೆಗಳನ್ನು ಫಲಾನುಭವಿಗಳಿಗೆ ವಿತರಣೆ.

ಇನ್ನು ದಾವಣಗೆರೆ, ಹಾವೇರಿ ಜಿಲ್ಲೆಗಳಲ್ಲಿ ನಗರಗಳ ಸಂಪರ್ಕ ಸಾಧಿಸಲು ಈ ಭಾಗದಲ್ಲಿ ಉದ್ಯೋಗ ಅವಕಾಶಕ್ಕೆ ಪುಷ್ಠಿ ನೀಡುವ ಚಿಕ್ಕಜಾಜೂರು - ಮಾಯಕೊಂಡ ವಿಭಾಗದ ನಡುವಿನ ಹಳಿಯ ಜೋಡಿ ಮಾರ್ಗ ರಾಷ್ಟ್ರಕ್ಕೆ ಸಮರ್ಪಣೆ ಮಾಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ದೇಶಪಾಂಡೆ, ಕೇಂದ್ರ ಸಚಿವ ಸದಾನಂದ ಗೌಡ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​ ಯಡಿಯೂರಪ್ಪ, ಸಂಸದ ಪ್ರಹ್ಲ್ಲಾದ್​ ಜೋಷಿ, ಇನ್ಫೋಸಿಸ್​ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.