ಹುಬ್ಬಳ್ಳಿ, [ಫೆ.10]: ಇಂದು [ಭಾನುವಾರ] ಪ್ರಧಾನಿ ಮೋದಿ ಅವರು ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯಿಂದ ಲೋಕಸಭಾ ಸಮರಕ್ಕೆ ರಣಕಹಳೆ ಮೊಳಗಿಸಿದರು.

ಹುಬ್ಬಳ್ಳಿಯ ಗಬ್ಬೂರ ಬಳಿಯಿರುವ ಕೆಎಲ್ಇ ಮೈದಾನದಲ್ಲಿ ಆಯೋಜಿಸಲಾಗಿದ್ದ ಬೃಹತ್ ಸಮಾವೇಶದಲ್ಲಿ ಸುಮಾರು 25 ನಿಮಿಷಗಳ ಭಾಷಣ ಮಾಡಿದರು.

ಶೌರ್ಯ, ಇತಿಹಾಸಕ್ಕೆ ಈ ಭೂಮಿ ಹೆಸರುವಾಸಿಯಾಗಿದೆ ಎಂದು ಕನ್ನಡದಲ್ಲಿ ಭಾಷಣ ಆರಂಭಿಸಿದ ಪ್ರಧಾನಿ ನರೇಂದ್ರ ಮೋದಿ, ಸಿದ್ಧಗಂಗಾ ಶಿವಕುಮಾರ ಸ್ವಾಮೀಜಿಗಳನ್ನು ನೆನಪಿಸಿಕೊಂಡು  ಶ್ರದ್ಧಾಂಜಲಿ ಸಲ್ಲಿಸಿದರು. ಬಳಿಕ ರಾಜ್ಯ ಕಾಂಗ್ರೆಸ್ ಹಾಗೂ ಜೆಡಿಎಸ್ ದೋಸ್ತಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಧಾರವಾಡದಲ್ಲಿ IIT, ರಾಯಚೂರಿನಲ್ಲಿ IIIT ನಿರ್ಮಾಣ ಕಾಮಗಾರಿಗೆ ಮೋದಿ ಚಾಲನೆ

ಕರ್ನಾಟಕದ ಮುಖ್ಯಮಂತ್ರಿ ಎಲ್ಲರ ಪಾಲಿಗೆ ಪಂಚಿಂಗ್ ಬ್ಯಾಗ್ ಆಗಿದ್ದಾರೆ. ಸಿಎಂಗೆ ಪ್ರತಿದಿನ ಧಮ್ಕಿಗಳು ಬರುತ್ತಿದ್ದು, ಅವರು ಪ್ರತಿದಿನ ಅಸಹಾಯಕತೆಯಿಂದ ಕಣ್ಣೀರು ಹಾಕುತ್ತಿದ್ದಾರೆ.

ಇಂತಹ ಅಸಹಾಯಕ ಮುಖ್ಯಮಂತ್ರಿಗೆ ಯಾರ್ ಯಾರೋ ಸವಾಲು ಹಾಕುತ್ತಿದ್ದು, ಕರ್ನಾಟಕದ್ದು ಅನಿವಾರ್ಯ ಮಾದರಿ. ಇದನ್ನೇ ದೇಶದ ಮೇಲೆ ಹೇರಲು ಹೊರಟಿದ್ದಾರೆ ಎಂದು ಮೈತ್ರಿ ಸರ್ಕಾರದ ಕಾರ್ಯವೈಖರಿ ಬಗ್ಗೆ ಮೋದಿ ಲೇವಡಿ ಮಾಡಿದರು.