ಜಮೀರ್ ಅಹ್ಮದ್ ಕೈ ಹಿಡಿದು ಕರೆತಂದ ಪಂಜುರ್ಲಿ, ತುಳುನಾಡಿನ ಸಂಸ್ಕೃತಿಗೆ ಅಗೌರವ: ಆಕ್ರೋಶ
ಕಾಂತಾರ ಸಿನಿಮಾದ ಹಾಡು ಬಳಸಿ ಜಮೀರ್ ಅಹ್ಮದ್ ಕೈ ಹಿಡಿದು ವೇಷಧಾರಿಗಳು ನರ್ತಿಸಿದ್ದಾರೆ. ಇದು ತುಳುನಾಡಿನ ಸಂಸ್ಕೃತಿಗೆ ಅಪಚಾರ ಮಾಡಿದಂತೆ. ತುಳುನಾಡಿನ ಸಾಂಸ್ಕೃತಿಕ ಪರಂಪರೆಯ ಅವಿಭಾಜ್ಯ ಅಂಗವಾದ ದೈವ ನಂಬಿಕೆಗಳಿಗೆ ಅಪಹಾಸ್ಯ ಮಾಡುವುದು ಸರಿಯಲ್ಲ. ದೈವರಾಧನೆ ತುಳುನಾಡಿನ ಸಾಂಸ್ಕೃತಿಕ ರಚನೆಯಲ್ಲಿ ಬೇರೂರಿರುವ ಪವಿತ್ರ ಸಂಪ್ರದಾಯ ಎಂದು ಕರಾವಳಿಗರು ಜಾಲತಾಣದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು(ಡಿ.03): ಚಾಮರಾಜಪೇಟೆಯಲ್ಲಿ ಈಚೆಗೆ ನಡೆದ ಕನ್ನಡ ರಾಜ್ಯೋತ್ಸವದಲ್ಲಿ ಪಂಜುರ್ಲಿ ದೈವದ ಪಾತ್ರ ರೂಪಿಸಿ ಸಚಿವ ಜಮೀರ್ ಅಹ್ಮದ್‌ರನ್ನು ವೇದಿಕೆಗೆ ಕರೆತರುವ ಕಾರ್ಯಕ್ರಮ ನಡೆಸಿರುವುದು ಟೀಕೆಗೆ ಗುರಿಯಾಗಿದೆ. ತುಳುನಾಡಿನ ಸಾಂಸ್ಕೃತಿಕ, ಭಕ್ತಿ ಪರಂಪರೆಯ ಅಣಕು ಪ್ರದರ್ಶನ ಮಾಡುವ ಮೂಲಕ ಅಗೌರವ ತೋರಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತವಾಗಿದೆ.
ಕಾಂತಾರ ಸಿನಿಮಾದ ಹಾಡು ಬಳಸಿ ಜಮೀರ್ ಅಹ್ಮದ್ ಕೈ ಹಿಡಿದು ವೇಷಧಾರಿಗಳು ನರ್ತಿಸಿದ್ದಾರೆ. ಇದು ತುಳುನಾಡಿನ ಸಂಸ್ಕೃತಿಗೆ ಅಪಚಾರ ಮಾಡಿದಂತೆ. ತುಳುನಾಡಿನ ಸಾಂಸ್ಕೃತಿಕ ಪರಂಪರೆಯ ಅವಿಭಾಜ್ಯ ಅಂಗವಾದ ದೈವ ನಂಬಿಕೆಗಳಿಗೆ ಅಪಹಾಸ್ಯ ಮಾಡುವುದು ಸರಿಯಲ್ಲ. ದೈವರಾಧನೆ ತುಳುನಾಡಿನ ಸಾಂಸ್ಕೃತಿಕ ರಚನೆಯಲ್ಲಿ ಬೇರೂರಿರುವ ಪವಿತ್ರ ಸಂಪ್ರದಾಯ ಎಂದು ಕರಾವಳಿಗರು ಜಾಲತಾಣದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷರಾಗಲು ಸತೀಶ ಜಾರಕಿಹೊಳಿ ಸಮರ್ಥರಿದ್ದಾರೆ: ಸಚಿವ ಜಮೀರ್ ಅಹ್ಮದ್
ಈ ಹಿಂದೆ ದೈವದ ವೇಷ ಧರಿಸಲು ಅವಕಾಶ ಕೊಡಬಾರದೆಂದು ಸರ್ಕಾರ, ಬೆಂಗಳೂರು ಪೊಲೀಸ್ ಕಮಿಷನರ್‌ಗೆ ತುಳು ಸಂಘಟನೆಗಳು ಕೋರಿದ್ದವು. ತುಳುನಾಡಿನ ಸಂಪ್ರದಾಯ ರಕ್ಷಿಸಲು ಸರ್ಕಾರವು ತುಳು ಬುಡಕಟ್ಟು ಸಾಂಸ್ಕೃತಿಕ ಮಂಡಳಿ (ಟಿಟಿಸಿಬಿ) ಸ್ಥಾಪನೆಗೆ ಒತ್ತಾಯವೂ ಇದೆ.
ಸಿನಿಮಾಗಳಲ್ಲಿ ಪಂಜುರ್ಲಿ ದೈವ ತೋರಿಸದಂತೆ ತಾಕೀತು: ಕಾಂತಾರ ಪ್ರೀಕ್ವೆಲ್‌ಗೆ ಜನವಿರೋಧ?
ಉಡುಪಿ: ಕನ್ನಡದ ಪ್ರಾದೇಶಿಕ ಸಿನಿಮಾವೊಂದು ಪ್ಯಾನ್ ಇಂಡಿಯಾ ಮಟ್ಟಿಗೆ ಭರ್ಜರಿ ಯಶಸ್ವಿ ಕಂಡ ಸಿನಿಮಾ ರಿಷಭ್ ಶೆಟ್ಟಿ ನಿರ್ದೇಶನದ ಕಾಂತಾರ. ಇದೀಗ ಕಾಂತಾರ ಸಿನಿಮಾ ಎಲ್ಲ ವಿಭಾಗದಲ್ಲಿ ಭರ್ಜರಿ ಕಮಾಲ್ ಮಾಡಿದ ಬೆನ್ನಲ್ಲಿಯೇ ಕಾಂತಾರ ಪ್ರೀಕ್ವೆಲ್ ಸಿನಿಮಾ ಶೂಟಿಂಗ್ ನಡೆಯುತ್ತಿದೆ. ಆದರೆ, ಇದಕ್ಕೆ ಸ್ಥಳೀಯ ಕರಾವಳಿ ಜನತೆಯಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಪಂಜುರ್ಲಿ ದೈವವನ್ನು ಸಿನಿಮಾಗಳಲ್ಲಿ ತೋರಿಸದಂತೆ ಸ್ಥಳೀಯರು ಸಿನಿಮಾ ನಿರ್ದೇಶಕರಿಗೆ ತಾಕೀತು ಮಾಡಿದ್ದರು.
ಹೌದು, ಕಾಂತಾರ ಪ್ರಿಕ್ವೆಲ್ಲಿಗೆ ಜನವಿರೋಧ ತೊಡಕ್ಕಾಗುತ್ತಿದೆ. ಸಿನಿಮಾಗಳಲ್ಲಿ ದೈವಗಳನ್ನು ತೋರಿಸುವುದಕ್ಕೆ ವಿರೋಧ ವ್ಯಕ್ತವಾಗುತ್ತಿದೆ. ಕಾಂತಾರದಲ್ಲಿ ಪಂಜುರ್ಲಿ ದೈವದ ಆರಾಧನೆ ತೋರಿಸಿದ ಪರಿಣಾಮ ಹಲವು ಸಿನಿಮಾಗಳ ನಿರ್ದೇಶಕರು ದೈವಾರಾಧನೆ ಬೆನ್ನು ಹತ್ತಿವೆ. ಮಂಗಳೂರು ಮೂಲದ ಕಲಾವಿದರಿಂದ ನಿರ್ಮಾಣಗೊಂಡಿರುವ ಕನ್ನಡ ಕಲ್ಜಿಗ ಸಿನಿಮಾದಲ್ಲಿ ಕೊರಗಜ್ಜನ ಕಾರಣಿಕವನ್ನು ತೋರಿಸಲಾಗಿದೆ. ಇದರಿಂದಾಗಿ ಕಾಂತಾರ ಸಿನಿಮಾ ಸೇರಿದಂತೆ ಯಾವುದೇ ಸಿನಿಮಾಗಳಲ್ಲಿ ದೈವಾರಾಧನೆಯನ್ನು ತೋರಿಸಬಾರದು ಎಂದು ಸ್ಥಳೀಯರು ಹಾಗೂ ತುಳುನಾಡು ದೈವಾರಾಧನೆ ಸಂರಕ್ಷಣಾ ವೇದಿಕೆಯಿಂದ ಭಾರಿ ವಿರೋಧ ವ್ಯಕ್ತವಾಗಿತ್ತು.
‘ಕರಿಯ’ ಹೇಳಿಕೆ ಸಮಸ್ಯೆ: ಸಚಿವ ಜಮೀರ್ ಅಹಮದ್ ಬಚಾವ್
ಇನ್ನು ಕಲ್ಜಿಗ ಸಿನಿಮಾದಲ್ಲಿ ಕೊರಗಜ್ಜನ ಕಾರಣಿಕ ತೋರಿಸಿದ್ದಕ್ಕೆ ವಿರೋಧ ವ್ಯಕ್ತವಾಗಿದೆ. ನಮ್ಮ ತುಳುನಾಡ ನಂಬಿಕೆ, ಆರಾಧನೆಗಳನ್ನು ಸಾಂಸ್ಕೃತಿಕ ಕಲೆ ಎಂದು ಬಿಂಬಿಸಲಾಗುತ್ತಿದೆ. ದೈವಗಳನ್ನು ಸಾಂಸ್ಕೃತಿಕ ಪ್ರದರ್ಶನ ಮಾಡುವುದನ್ನು ಕಾನೂನಾತ್ಮಕವಾಗಿ ನಿಷೇಧಿಸಬೇಕು. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಗಣೇಶೋತ್ಸವ ಕಾರ್ಯಕ್ರಮದ ವೇಳೆ ಪಂಜುರ್ಲಿ ದೈವದ ನರ್ತನ ಪ್ರದರ್ಶನ್ ಮಾಡಿರುವುದಕ್ಕೂ ಭಾರಿ ವಿರೋಧ ವ್ಯಕ್ತಪಡಿಸಲಾಗಿದೆ. ಇನ್ನು 2012ರಲ್ಲಿ ದೈವಗಳ ಆರಾಧನೆಯನ್ನು ಸಾಂಸ್ಕೃತಿಕ ಚಟುವಟಿಕೆಯಾಗಿ ತೋರಿಸುವುದಕ್ಕೆ ನಿಷೇಧಿಸಿ ಸುತ್ತೋಲೆ ಹೊರಡಿಸಿದ್ದರು. ಈ ಸುತ್ತೋಲೆ ಮರು ಪರಿಶೀಲಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದರು.
ಇನ್ನು ರಾಜ್ಯದ ಸಾಂಸ್ಕೃತಿಕತೆಯನ್ನು ಬಿಂಬಿಸುವ ಟ್ಯಾಬ್ಲೋ, ನಾಟಕ , ಸಿನಿಮಾ ಹಾಗೂ ಛದ್ಮವೇಷ ಗಳಲ್ಲಿ ದೈವಗಳ ಪ್ರದರ್ಶನ ಮತ್ತು ಯಕ್ಷಗಾನಗಳಲ್ಲಿ ದೈವಗಳ ವಿಡಂಬನೆಯನ್ನು ನಿಲ್ಲಿಸಬೇಕು. ಈಗ ಅಪರೂಪವಾಗಿ ಕಾಣಿಸುವ ದೈವನಿಂದನೆ ಪ್ರಕರಣಗಳು ಭವಿಷ್ಯದಲ್ಲಿ ಸಾಮಾನ್ಯವಾಗಿದೆ. ದೈವ ಸನ್ನಿಧಾನದ ಪವಿತ್ರತೆಗೆ ಇದರಿಂದ ಧಕ್ಕೆಯಾಗುತ್ತದೆ. ಕಲ್ಜಿಗ ಸಿನಿಮಾದವರು ಆಕ್ಷೇಪಾರ್ಹ ದೃಶ್ಯಗಳಿಗೆ ಕತ್ತರಿ ಹಾಕಿ ಪ್ರದರ್ಶಿಸಬೇಕು ಎಂದು ಸಂಘಟನೆಯ ಪ್ರಮುಖರಾದ ಸಹನಾ ಸೂಡ, ದಿಲ್ ರಾಜ್ ಆಳ್ವ ಸೇರಿದಂತೆ ಹಲವು ಸ್ಥಳೀಯ ಜನರು ಆಗ್ರಹ ಮಾಡಿದ್ದರು.