ಕೆಪಿಸಿಸಿ ಅಧ್ಯಕ್ಷರಾಗಲು ಸತೀಶ ಜಾರಕಿಹೊಳಿ ಸಮರ್ಥರಿದ್ದಾರೆ: ಸಚಿವ ಜಮೀರ್ ಅಹ್ಮದ್
ಶಿಗ್ಗಾಂವಿ ಉಪಚುನಾವಣೆ ಗೆಲುವಿಗೆ ಸತೀಶ್ ಜಾರಕಿಹೊಳಿ ಕಾರಣ. ಸತೀಶ್ ಜಾರಕಿಹೊಳಿ ಅವರಿಗೆ ಕೆಪಿಸಿಸಿ ಅಧ್ಯಕ್ಷ ಹುದ್ದೆ ಆಕಾಂಕ್ಷೆ ವಿಚಾರವಾಗಿ ಎಲ್ಲರಿಗೂ ಅಭಿಪ್ರಾಯ ಇರುತ್ತದೆ. ಆದರೆ, ತೀರ್ಮಾನ ಮಾಡುವವರು ಹೈಕಮಾಂಡ್: ಸಚಿವ ಜಮೀರ್ ಅಹ್ಮದ್ ಖಾನ್
ಹಾವೇರಿ(ನ.30): ಸಚಿವ ಸತೀಶ ಜಾರಕಿಹೊಳಿ ಅವರಿಗೆ ಕೆಪಿಸಿಸಿ ಅಧ್ಯಕ್ಷರಾಗುವ ಸಾಮರ್ಥ್ಯವಿದೆ. ಆದರೆ, ಅದನ್ನು ನಾವು ನೀವು ಮಾಡಲು ಆಗಲ್ಲ. ಹೈಕಮಾಂಡ್ ತೀರ್ಮಾನ ಮಾಡಬೇಕಾಗುತ್ತದೆ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದರು.
ಶಿಗ್ಗಾಂವಿ ತಾಲೂಕು ಹುಲಗೂರಿನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿಗ್ಗಾಂವಿ ಉಪಚುನಾವಣೆ ಗೆಲುವಿಗೆ ಸತೀಶ್ ಜಾರಕಿಹೊಳಿ ಕಾರಣ. ಸತೀಶ್ ಜಾರಕಿಹೊಳಿ ಅವರಿಗೆ ಕೆಪಿಸಿಸಿ ಅಧ್ಯಕ್ಷ ಹುದ್ದೆ ಆಕಾಂಕ್ಷೆ ವಿಚಾರವಾಗಿ ಎಲ್ಲರಿಗೂ ಅಭಿಪ್ರಾಯ ಇರುತ್ತದೆ. ಆದರೆ, ತೀರ್ಮಾನ ಮಾಡುವವರು ಹೈಕಮಾಂಡ್ ಎಂದರು.
‘ಕರಿಯ’ ಹೇಳಿಕೆ ಸಮಸ್ಯೆ: ಸಚಿವ ಜಮೀರ್ ಅಹಮದ್ ಬಚಾವ್
ಶಿಗ್ಗಾಂವಿಯ ಜನ ಬದಲಾವಣೆ ಬಯಸಿದ್ದರು. ಆದ್ದರಿಂದ ನಮಗೆ ಆಶೀರ್ವಾದ ಮಾಡಿದರು. ನಾವು ಯಾವ ಗಿಮಿಕ್ ಮಾಡಿಲ್ಲ. ಸಿಎಂ ಹಾಗೂ ಡಿಸಿಎಂ ಅವರು ಖಾದ್ರಿ ಅವರನ್ನು ಹೆಸ್ಕಾಂ ಚೇರ್ಮನ್ ಮಾಡಿದ್ದಾರೆ. ಬೊಮ್ಮಾಯಿ ಸಿಎಂ ಆಗಿ ಅವಕಾಶ ಸಿಕ್ಕರೂ ತಾಲೂಕು ಅಭಿವೃದ್ಧಿ ಮಾಡಿಲ್ಲ ಎಂದು ಜನ ಮಾತನಾಡುತ್ತಿದ್ದರು. ಪಠಾಣ್ ಗೆಲ್ಲಿಸಿದ್ದಾರೆ. ಜನ ನಾನು ಕೂಡಾ ಇಷ್ಟು ಅಂತರದಿಂದ ಗೆಲ್ಲುತ್ತೇವೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಮೂರೂ ಕ್ಷೇತ್ರದ ಚುನಾವಣೆಯಲ್ಲೂ ಗೆದ್ದೆವು. ಚನ್ನಪಟ್ಟಣದಲ್ಲಿಯೂ ಅಷ್ಟು ಅಂತರದಿಂದ ಗೆಲ್ತಿವಿ ಅಂತ ನಿರೀಕ್ಷೆ ಇಟ್ಟುಕೊಂಡಿರಲಿಲ್ಲ. ಜನರಿಗೆ ವಕ್ ವಿಚಾರದಲ್ಲಿ ಸತ್ಯ ಗೊತ್ತಿದೆ. ವಕ್ಸ್ ವಿಚಾರದಲ್ಲಿ ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ. ಯತ್ನಾಳ್ ಅವರು ವಿಜಯಪುರದಲ್ಲಿ ವಕ್‌ಗೆ 1200 ಎಕರೆ ಬರೆಸಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.
ಯಾರ ಆಸ್ತಿ ಯಾರೂ ಹೊಡೆಯೋಕೆ ಆಗಲ್ಲ ಎಂದರು. ನಮ್ಮದು ವಕ್ಫ್ ಪ್ರಾಪರ್ಟಿ 1 ಲಕ್ಷ 12 ಸಾವಿರ ಎಕರೆ ಇತ್ತು. ಈಗ 23000 ಎಕರೆ ಇದೆ. ಅಲ್ಪ ಸಂಖ್ಯಾತರೇ ಒತ್ತುವರಿ ಮಾಡಿದಾರೆ. ಅದನ್ನು ನಾವು ತೆರವು ಮಾಡ್ತಿದೀವಿ. ರೈತರು ನಮಗೆ ಅನ್ನ ಕೊಡೋ ಅನ್ನದಾತರು. ಅವರನ್ನು ಮುಟ್ಟೋಕೆ ಸಾಧ್ಯವಾ? ಬಿಜೆಪಿಯವರಿಗೆ ಯಾವ ಇಶ್ಯು ಇರಲಿಲ್ಲ. ಹೀಗಾಗಿ ಮಾಡ್ತಿದಾರೆ ಎಂದರು.
ರಾಜಕೀಯ ಹಾಸನ ಸಮಾವೇಶದ ಕುರಿತು ಪ್ರತಿಕ್ರಿಯಿಸಿದ ಅವರು, ಸಮಾವೇಶ ಮಾಡಬೇಕು ಅಂತ ಕೆಲ ಹಿರಿಯರು ಸಲಹೆ ನೀಡಿದಾರೆ. ಸಿದ್ದರಾಮಯ್ಯ ಶಕ್ತಿ ಸಮಾವೇಶ ಅಂತ ಅಲ್ಲ. ಸಮಾವೇಶ ಮಾಡುವ ಬಗ್ಗೆ ಚರ್ಚೆ ನಡೆದಿದೆ. ನನಗೆ ಇನ್ನೂ ಅಷ್ಟು ಮಾಹಿತಿ ಇಲ್ಲ ಎಂದು ಹೇಳಿದರು.
ಮುಸ್ಲಿಮರ ಓಟು ಬೇಡವೆಂದ ಮೇಲೆ ಯಾಕೆ ಕೇಳ್ತೀರಿ: ಎಚ್‌ಡಿಕೆಗೆ ಜಮೀರ್ ತಿರುಗೇಟು
ನನಗೂ ಮುಖ್ಯಮಂತ್ರಿ, ಕೆಪಿಸಿಸಿ ರಾಜ್ಯಾಧ್ಯಕ್ಷನಾಗುವ ಆಸೆ ಇದೆ: ಸಚಿವ ಸತೀಶ್ ಜಾರಕಿಹೊಳಿ
ಹಾವೇರಿ(ಶಿಗ್ಗಾಂವಿ): ನನಗೂ ಮುಖ್ಯಮಂತ್ರಿ, ಕೆಪಿಸಿಸಿ ರಾಜ್ಯಾಧ್ಯಕ್ಷ ಆಗಬೇಕೆಂಬ ಆಸೆ ಇದೆ. ಎಲ್ಲರಿಗೂ ಆಸೆ ಸಹಜ, ರಾಜ್ಯಾಧ್ಯಕ್ಷರ ಬದಲಾವಣೆ, ಮುಖ್ಯಮಂತ್ರಿಗಳ ಬದಲಾವಣೆ ಎಲ್ಲವನ್ನೂ ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ನಿನ್ನೆ(ಶುಕ್ರವಾರ) ಹಾವೇರಿ ಜಿಲ್ಲೆಯ ಶಿಗ್ಗಾಂವಿ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ ಅವರು, ಈಗ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಉತ್ತಮ ಆಡಳಿತ ನಡೆಸುತ್ತಿದೆ. ಸರಕಾರದ ಪೂರ್ಣಾವಧಿವರೆಗೆ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಆಗಿರುತ್ತಾರೆ. ಅವರ ಮಂತ್ರಿ ಮಂಡಲದಲ್ಲಿ ನಾವೆಲ್ಲರೂ ಕೆಲಸ ಮಾಡುತ್ತಿದ್ದೇವೆ. ಹಿಂದೆ ಸತೀಶ್ ಜಾರಕಿಹೊಳಿ ಸಿಎಂ ಆಗ್ತಾರೆ ಅಂತ ಸುದ್ದಿ ಹರಿದಾಡಿತ್ತು. ಈಗ ಕೆಪಿಸಿಸಿ ಅಧ್ಯಕ್ಷ ಆಗ್ತಾರೆ ಅಂತ ಸುದ್ದಿ ಹರಿದಾಡುತ್ತಿದೆ. ಈ ವಿಚಾರವಾಗಿ ನಾನು ಯಾವುದೇ ಲಾಬಿನೂ ಮಾಡಿಲ್ಲ. ಒತ್ತಡವನ್ನೂ ಹಾಕಿಲ್ಲ. ಉಪಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಿದ್ದೇವೆ. ಖುಷಿಯಿದೆ. ಮಂತ್ರಿಯಾಗಿದ್ದೇನೆ ತೃಪ್ತಿಯಿದೆ ಎಂದು ಹೇಳಿದರು.