ಬೆಂಗಳೂರು(ಮೇ.04): ಕೊರೋನಾ ವೈರಸ್ ಹರಡದಂತೆ ತಡೆಯಲು ಸಾರ್ವಜನಿಕರು ಹೊರ ಬಂದಾಗ ಮಾಸ್ಕ್ ಧರಿಸುವುದು ಖಡ್ಡಾಯವಾಗಿದೆ. ಈ ನಿಯಮ ಉಲ್ಲಂಘಿಸಿದವರಿಗೆ ಆರಂಭದಲ್ಲಿ ಎಚ್ಚರಿಕೆ ನೀಡಲಾಗುತ್ತಿತ್ತು. ಬಳಿಕ ದಂಡ ವಸೂಲಿ ಮೂಲಕ ಬಿಸಿ ಮುಟ್ಟಿಸಲಾಗಿದೆ. ಹೀಗೆ ಬಿಬಿಎಂಪಿಯ 8 ವಲಯದಿಂದ ಇಂದು ಸಂಗ್ರಹವಾದ ಮೊತ್ತ 89,455 ರೂಪಾಯಿ.

ನಗರ ವಾಸಿಗಳಿಗೆ ಬೆಂಗಳೂರು ಪೊಲೀಸ್ ಕಮಿಷನರ್ ಮಹತ್ವದ ಸೂಚನೆ; ದಯವಿಟ್ಟು ಪಾಲಿಸಿ

ಕೊರೋನಾ ವೈರಸ್ ತಡೆಗಟ್ಟುವಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ಮಾಸ್ಕ್ ಧರಿಸುವುದು ಪ್ರಮುಖವಾಗಿದೆ. ಮಾಸ್ಕ್ ಧರಿಸದೇ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡಿದದರೆ ಇತರರಿಗೂ ಕೊರೋನಾ ವೈರಸ್ ಹರಡುವು ಸಾಧ್ಯತೆ ಇದೆ. ಹೀಗಾಗಿ ಮಾಸ್ಕ್ ಧರಿಸವದರಿಗೆ ದಂಡ ವಿಧಿಸಲಾಗಿದೆ. ಇಂದು(ಮೇ.04) ಬಿಬಿಎಂಪಿಯ ಪೂರ್ವ, ಪಶ್ಚಿಮ, ದಕ್ಷಿಣ ವಲಯ, ಮಹದೇವಪುರ, ಆರ್ ಆರ್ ನಗರ, ಯಲಹಂಕ ಹಾಗೂ ಬೊಮ್ಮನಹಳ್ಳಿ ವಲಯದಲ್ಲಿ ದಂಡ ವಸೂಲಿ ಮಾಡಲಾಗಿದೆ. 

ಜಪ್ತಿಯಾದ ವಾಹನಗಳು ಇಂದಿನಿಂದ ವಾಪಸ್‌! ಯಾವ ವಾಹನಕ್ಕೆಷ್ಟು ದಂಡ..?

ಬಿಬಿಎಂಪಿ 8 ವಲಯದಲ್ಲಿನ ದಂಡ ವಸೂಲಿ ವಿವರ:
ಪೂರ್ವ ವಲಯದಲ್ಲಿ 55 ಪ್ರಕರಣ,  21,305 ರೂ ದಂಡ ವಸೂಲಿ
ಪಶ್ಚಿಮ ವಲಯ 32 ಮಂದಿಗೆ ದಂಡ,  14,800 ರೂ ವಸೂಲಿ
ದಕ್ಷಿಣ ವಲಯ 6 ಮಂದಿಗೆ ದಂಡ,  4,100 ರೂ ವಸೂಲಿ
ಮಹದೇವಪುರ ವಲಯ 18 ಮಂದಿಗೆ ದಂಡ, 15,000 ರೂ 
ಆರ್.ಆರ್ ನಗರ 8 ಮಂದಿ, 4,900 ರೂ ದಂಡ
ಯಲಹಂಕ ವಲಯ 14 ಮಂದಿ, 3150 ರೂ ದಂಡ
ದಾಸರಹಳ್ಳಿ‌ ವಲಯ 32 ಪ್ರಕರಣ 10,000 ರೂ ವಸೂಲಿ
ಬೊಮ್ಮನಹಳ್ಳಿ ವಲಯ 37 ಪ್ರಕರಣ 16,200 ದಂಡ