ಸಂಸತ್ತಿಗೆ ನುಗ್ಗಿದ ಆಗಂತುಕರನ್ನ ನಾನು, ಕಟೀಲ್ ಹಿಡಿದೆವು: ಸಂಸದ ಮುನಿಸ್ವಾಮಿ

 'ಇಬ್ಬರು ಆಗಂತುಕರು ಏಕಾಏಕಿ ಲೋಕಸಭೆ ಸಭಾಂಗಣಕ್ಕೆ ಜಿಗಿದು, ಸ್ಟೋಕ್ ಬಾಂಬ್ ಓಪನ್ ಮಾಡಿದಾಗ ಸಂಸದರಲ್ಲಿ ಬಹುತೇಕರು ಸಭಾಂಗಣದ ಬಾಗಿಲುಗಳನ್ನು ತೆರೆದು ಭಯಭೀತರಾಗಿ ಹೋದರು. ಆದರೆ ನಾನು ಮತ್ತು ಕಟೀಲ್ ಧೈರ್ಯದಿಂದ ಇದ್ದು ಇತರ ಸಂಸದರ ಜತೆ ಸೇರಿ ದಾಳಿಕೋರರನ್ನು ಹಿಡಿದೆವು.' ಇದು ಇಬ್ಬರು ಯುವಕರು ಬುಧವಾರ ಲೋಕಸಭೆ ಸಭಾಂಗಣಕ್ಕೆ ನುಗ್ಗಿ ನಡೆಸಿದ ದುಷ್ಕೃತ್ಯದ ಪ್ರತ್ಯಕ್ದರ್ಶಿಯಾದ ಕೋಲಾರ ಸಂಸದ ಎಸ್. ಮುನಿಸ್ವಾಮಿ ಅವರು ಘಟನೆಯನ್ನು ವಿವರಿಸಿದ ರೀತಿ.

Parliament security breach issue MP Muniswamy statement who were eyewitness to the incident rav

ಬೆಂಗಳೂರು (ಡಿ.14): 'ಇಬ್ಬರು ಆಗಂತುಕರು ಏಕಾಏಕಿ ಲೋಕಸಭೆ ಸಭಾಂಗಣಕ್ಕೆ ಜಿಗಿದು, ಸ್ಟೋಕ್ ಬಾಂಬ್ ಓಪನ್ ಮಾಡಿದಾಗ ಸಂಸದರಲ್ಲಿ ಬಹುತೇಕರು ಸಭಾಂಗಣದ ಬಾಗಿಲುಗಳನ್ನು ತೆರೆದು ಭಯಭೀತರಾಗಿ ಹೋದರು. ಆದರೆ ನಾನು ಮತ್ತು ಕಟೀಲ್ ಧೈರ್ಯದಿಂದ ಇದ್ದು ಇತರ ಸಂಸದರ ಜತೆ ಸೇರಿ ದಾಳಿಕೋರರನ್ನು ಹಿಡಿದೆವು.'

ಇದು ಇಬ್ಬರು ಯುವಕರು ಬುಧವಾರ ಲೋಕಸಭೆ ಸಭಾಂಗಣಕ್ಕೆ ನುಗ್ಗಿ ನಡೆಸಿದ ದುಷ್ಕೃತ್ಯದ ಪ್ರತ್ಯಕ್ದರ್ಶಿಯಾದ ಕೋಲಾರ ಸಂಸದ ಎಸ್. ಮುನಿಸ್ವಾಮಿ ಅವರು ಘಟನೆಯನ್ನು ವಿವರಿಸಿದ ರೀತಿ.

News Hour: ಸಂಸದೀಯ ಇತಿಹಾಸದಲ್ಲೇ ಅತಿದೊಡ್ಡ ಭದ್ರತಾ ಲೋಪ, ದಾಳಿಕೋರರಿಗೆ ಮೈಸೂರು ಲಿಂಕ್‌!

'ಲೋಕಸಭೆಯಲ್ಲಿ ಪ್ರಶೋತ್ತರ ಕಲಾಪ ನಡೆಯುತ್ತಿತ್ತು. ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ತಮ್ಮ ಖಾತೆ ಕುರಿತಾದ ಪ್ರಶ್ನೆಗಳಿಗೆ ಉತ್ತರ ನೀಡುತ್ತಿದ್ದರು. ಆಗ ಇದ್ದಕ್ಕಿದ್ದ ಹಾಗೆ ಪ್ರೇಕ್ಷಕರ ಗ್ಯಾಲರಿಯಿಂದ ಇಬ್ಬರು ಯುವಕರು ಲೋಕಸಭೆ ಸಭಾಂಗಣದೊಳಗೆ ಜಿಗಿದರು. ಮೊದಲಿಗೆ ಎಲ್ಲರೂ ಆತಂಕ ಮತ್ತು ಅಚ್ಚರಿಯಿಂ ದ ನೋಡುತ್ತಿದ್ದರು. ಆಗ ಸಂಸದ ನಳಿನ್‌ಕುಮಾರ್ ಕಟೀಲು ಸೇರಿದಂತೆ ಇನ್ನಿತರ ಐದಾರು ಸಂಸದರು ಸೇರಿ ಒಬ್ಬನನ್ನು ಹಿಡಿದರು. ಅದಾದ ನಂತರ ಮತ್ತೊಬ್ಬ ಮೇಲಿನಿಂದ ಸ್ಪೀಕರ್ ಕುರ್ಚಿ ಕಡೆಗೆ ಓಡಲು ಯತ್ನಿಸಿದ. ಈ ವೇಳೆ ಆತನನ್ನು ಹಿಡಿಯಲು ನಾನು ಸೇರಿದಂತೆ ಕೆಲ ಸಂಸದರು ಮುಂದಾದೆವು. ಆಗ ಯುವಕ ತನ್ನ ಶೂನಲ್ಲಿದ್ದ ಸ್ಮೋಕ್ ಬಾಂಬ್‌ನ್ನು ತೆಗೆದು ಓಪನ್ ಮಾಡಿದ. ಅದನ್ನು ಗಮನಿಸಿದ ಹಲವು ಸಂಸದರು ವಿಷಾನಿಲ ಎಂದು ಭಾವಿಸಿ ಸಭಾಂಗಣದ ಬಾಗಿಲು ತೆಗೆದು ಓಡಿದರು.

ತಪ್ಪು ಮಾಡಿದ್ದರೆ ಆತನನ್ನು ಗಲ್ಲಿಗೇರಿಸಿ, ಮನೋರಂಜನ್‌ ತಂದೆ ದೇವರಾಜೇಗೌಡ ಆಕ್ರೋಶ

ಸರ್ವಾಧಿಕಾರಿ ಎಂದು ಘೋಷಣೆ ಕೂಗಿದರು:

ಪ್ರೇಕ್ಷಕರ ಗ್ಯಾಲರಿಯಿಂದ ಲೋಕಸಭಾಂಗಣಕ್ಕೆ ಜಿಗಿದ ಯುವಕರು ನಿರಂತರವಾಗಿ ಘೋಷಣೆ ಕೂಗುತ್ತಲೇ ಇದ್ದರು. ಅವರು ಏನು ಕೂಗುತ್ತಿದ್ದಾರೆ ಎಂದು ತಿಳಿಯಲಿಲ್ಲ. ಕೊನೆ ಸರ್ವಾಧಿಕಾರಿ ಎಂಬ ಒಂದು ಪದ ಮಾತ್ರ ಕೇಳಿತು.

ಮುನಿಸ್ವಾಮಿ ಕೋಲಾರ ಬಿಜೆಪಿ ಸಂಸದ


ಶೂ ಎಸೆಯುತ್ತಾನೆ ಎಂದುಕೊಂಡಿದ್ದೆವು:

ಏಕಾಏಕಿ ಸಂಸತ್ತಿನೊಳಗೆ ಜಂಪ್ ಮಾಡಿದ್ದನ್ನು ನೋಡಿ ನನ್ನನ್ನು ಸೇರಿದಂತೆ ಎಲ್ಲರಿಗೂ ಬಿಗ್ ಶಾಕ್ ಆಯ್ತು. ಆತ ಶೂ ತೆಗೆದು ಎಸೆಯತ್ತಾನೆ ಎನ್ನುವಾಗಲೇ ಹೊಗೆ ಆವರಿಸಿತು. ಆಗಂತೂ ಎಲ್ಲರೂ ಸ್ತಬ್ಧಗೊಂಡೆವು. ಆದರೂ ಕೆಲವರು ಆತನನ್ನು ಧೈರ್ಯವಾಗಿ ಹಿಡಿದು, ಹೊಡೆದಿದ್ದಾರೆ.

ಸಂಗಣ್ಣ ಕರಡಿ ಕೊಪ್ಪಳ ಬಿಜೆಪಿ ಸಂಸದ

ಎರಡನೆಯವನನ್ನು ನಾವು ಹಿಡಿದೆವು

ಮೊದಲಿಗೆ ಒಬ್ಬನನ್ನು ನಾಲ್ವರು ಸಂಸದರು ಹಿಡಿದು ನಾಲ್ಕೇಟು ಬಿಗಿದರು. ಇನ್ನೊಬ್ಬ ಓಡಲು ಯತ್ನಿಸಿದಾಗ ನಾನು ಸೇರಿದಂತೆ ಕೋಲಾರ ಸಂಸದ ಮುನಿಸ್ವಾಮಿ ಹಾಗೂ ಕೊಪ್ಪಳ ಸಂಸದ ಸಂಗಣ್ಣ ಕರಡಿ ಸೇರಿ ಗಟ್ಟಿಯಾಗಿ ಹಿಡಿದುಕೊಂಡೆವು. ಆಗ ಇನ್ನಷ್ಟು ಸಂಸದರು ನಮ್ಮ ನೆರವಿಗೆ ಬಂದರು.

ನಳಿನ್ ಕುಮಾರ್ ಕಟೀಲ್ ದಕ್ಷಿಣ ಕನ್ನಡ ಬಿಜೆಪಿ ಸಂಸದ

Latest Videos
Follow Us:
Download App:
  • android
  • ios