Asianet Suvarna News Asianet Suvarna News

'ಪಲ್ಲಕ್ಕಿ ಉತ್ಸವ' ಬ್ರ್ಯಾಂಡ್‌: ಸಾರಿಗೆ ಇಲಾಖೆಯ ಹೊಸ 148 ಬಸ್‌ಗಳಿಗೆ ಸಿಎಂ ಸಿದ್ದರಾಮಯ್ಯ ಚಾಲನೆ

ಪ್ರಯಾಣಿಕರಿಗೆ ಮತ್ತಷ್ಟು ಉತ್ತಮ ಸೇವೆ ನೀಡುವ ಸಲುವಾಗಿ ಕೆಎಸ್‌ಆರ್‌ಟಿಸಿಗೆ 130 ಹೊಸ ಬಸ್‌ಗಳನ್ನು ಸೇರ್ಪಡೆ ಮಾಡಲಾಗುತ್ತಿದೆ. ಅದರಲ್ಲಿ 30 ಬಸ್‌ಗಳು ಹವಾನಿಯಂತ್ರಿತವಲ್ಲದ ಸ್ಲೀಪರ್‌ ಬಸ್‌ಗಳಾಗಿದ್ದು, ಉಳಿದವು ಕರ್ನಾಟಕ ಸಾರಿಗೆ ಸಾಮಾನ್ಯ ಬಸ್‌ಗಳಾಗಿವೆ.

Pallakki Utsav brand CM Siddaramaiah inaugurates new 148 buses of Transport Department gvd
Author
First Published Oct 7, 2023, 10:56 AM IST

ಬೆಂಗಳೂರು (ಅ.07): ಪ್ರಯಾಣಿಕರಿಗೆ ಮತ್ತಷ್ಟು ಉತ್ತಮ ಸೇವೆ ನೀಡುವ ಸಲುವಾಗಿ ಕೆಎಸ್‌ಆರ್‌ಟಿಸಿಗೆ 130 ಹೊಸ ಬಸ್‌ಗಳನ್ನು ಸೇರ್ಪಡೆ ಮಾಡಲಾಗುತ್ತಿದೆ. ಅದರಲ್ಲಿ 30 ಬಸ್‌ಗಳು ಹವಾನಿಯಂತ್ರಿತವಲ್ಲದ ಸ್ಲೀಪರ್‌ ಬಸ್‌ಗಳಾಗಿದ್ದು, ಉಳಿದವು ಕರ್ನಾಟಕ ಸಾರಿಗೆ ಸಾಮಾನ್ಯ ಬಸ್‌ಗಳಾಗಿವೆ. ಕೆಎಸ್ಸಾರ್ಟಿಸಿಯಲ್ಲಿ ಇದೇ ಮೊದಲ ಬಾರಿಗೆ ನಾನ್‌ ಎಸಿ ಬಸ್‌ಗೆ ಬ್ರ್ಯಾಂಡ್‌ ಹೆಸರನ್ನು ಇಟ್ಟು ಸೇವೆ ನೀಡಲಾಗುತ್ತಿದೆ. ಹೊಸದಾಗಿ ಸೇರ್ಪಡೆಯಾಗುತ್ತಿರುವ ನಾನ್‌ ಎಸಿ ಸ್ಲೀಪರ್‌ ಬಸ್‌ಗಳನ್ನು ‘ಪಲ್ಲಕ್ಕಿ ಉತ್ಸವ’ ಹೆಸರಿನಲ್ಲಿ ಸೇವೆಗೆ ನೀಡಲಾಗುತ್ತಿದೆ. 

ಈ ಬಸ್‌ಗಳು ರಾಜ್ಯದ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಲಿವೆ. 100 ನಾರ್ಮಲ್ ರೆಡ್  ಬಸ್, 40 - ನಾನ್ ಎಸಿ ಸ್ಲೀಪರ್ "ಪಲ್ಲಕಿ" ಬಸ್ , 8 ಎಸಿ ಸ್ಲೀಪರ್ ಬಸ್. 148 ಬಸ್ಸುಗಳ ಪೈಕಿ 100 ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದ್ದಿ, 40 ನಾನ್ ಎಸಿ ಸ್ಲೀಪರ್ ನೂರು ನಗರ ಸಾರಿಗೆ ಬಸ್ಸುಗಳು, ಅಶೋಕ ಲೇಲ್ಯಾಂಡ್ ಕಂಪನಿಗೆ ಸೇರಿವೆ. ನಾಲ್ಕು ನಾನ್ ಎಸಿ ಸ್ಲೀಪರ್, ನಾಲ್ಕು ಎಸಿ ಸ್ಲೀಪರ್ ಟಾಟಾ ಕಂಪನಿಯದ್ದು. 100 ನಾರ್ಮಲ್ ಬಸ್‌ಗಳಲ್ಲಿ ಮಾತ್ರ ಶಕ್ತಿ ಯೋಜನೆಯಡಿ‌ ಮಹಿಳೆಯರಿಗೆ ಉಚಿತವಾಗಿ ಪ್ರಯಾಣಿಸಬಹುದಾಗಿದೆ.  

ಭ್ರಷ್ಟಾಚಾರದಲ್ಲಿ ಚಲುವರಾಯಸ್ವಾಮಿ ಎರಡನೇ ರ‍್ಯಾಂಕ್‌: ಮಾಜಿ ಶಾಸಕ ಸುರೇಶ್‌ ಗೌಡ

ಸಾರಿಗೆ ಇಲಾಖೆಯ ಹೊಸ 148 ಬಸ್ ಗಳಿಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ದು, ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ಸ್ ಬಳಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಹೊಸ ಬಸ್‌ಗಳ ವೀಕ್ಷಣೆಯನ್ನು ಸಿಎಂ ಸಿದ್ದರಾಮಯ್ಯ ಮತ್ತು ಸಂಪುಟ ಸಚಿವರು ನಡೆಸಿದ್ದು, ಕಾರ್ಯಕ್ರಮದಲ್ಲಿ ಡಿಸಿಎಂ ಡಿಕೆಶಿ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಮುನಿಯಪ್ಪ, ದಿನೇಶ್ ಗುಂಡೂರಾವ್, ಈಶ್ವರ್ ಖಂಡ್ರೆ, ಸಾರಿಗೆ ಅಧಿಕಾರಿಗಳು ಭಾಗಿಯಾಗಿದ್ದರು.ಸಾರಿಗೆ ಇಲಾಖೆಯ ಹೊಸ 148 ಬಸ್ ಗಳಿಗೆ ಸಿಎಂ ಸಿದ್ದರಾಮಯ್ಯ ಚಾಲನೆ

ಪಲ್ಲಕ್ಕಿ ನಾನ್ ಎಸಿ ಬಸ್ ವಿಶೇಷತೆ
1. ನಾನ್‌ ಎಸಿ ಸ್ಲೀಪರ್‌ ಬಸ್‌ ಇದಾಗಿದೆ.​ ಅತ್ಯಂತ ಆಕರ್ಷಕ ಹೊರಾಂಗಣ ಮತ್ತು ಒಳಾಂಗಣ ವಿನ್ಯಾಸ ಹೊಂದಿದೆ
2.‌ ಪಲ್ಲಕ್ಕಿ  ಸ್ಲೀಪರ್‌ ಬಸ್ 28 ಸೀಟ್ ಸಾಮರ್ಥ್ಯ ಹೊಂದಿದೆ
3. ಅಶೋಕ್‌ ಲೇಲ್ಯಾಂಡ್‌ ಕಂಪನಿಯಿಂದ ನಿರ್ಮಾಣ, ಪ್ರತಿ ಬಸ್ ಬೆಲೆ 45 ಲಕ್ಷ ರೂಪಾಯಿ
40 ಬಸ್‌ಗಳ ಪೈಕಿ 30 ಬಸ್‌ಗಳನ್ನ ರಾಜ್ಯದೊಳಗೆ ಸಂಚರಿಸಲಿವೆ
5. ಉಳಿದ 10 ಬಸ್‌ಗಳು ಬೆಂಗಳೂರಿನಿಂದ‌ ಹೊರರಾಜ್ಯಗಳಿಗೆ ಸಂಚರಿಸಲಿವೆ
6. ಈ ಬಸ್‌ ಸೇವೆಯು‌ ಇಂದಿನಿಂದಲೇ ಆರಂಭವಾಗುತ್ತಿದೆ
7. ಕೆಎಸ್‌ಆರ್‌ಟಿಸಿಯಲ್ಲಿ ನಾನ್‌ ಎಸಿ ಸ್ಲೀಪರ್‌ ಬಸ್‌ಗಳು ಆರಂಭವಾಗಿ ಸಾಕಷ್ಟು ವರ್ಷಗಳಾಗಿವೆ
8. ನಾನ್ ಎಸಿ ಬಸ್‌ಗಳಿಗೆ ಯಾವುದೇ ಹೆಸರಿಟ್ಟು ಬ್ರ್ಯಾಂಡಿಂಗ್‌ ಮಾಡಿರಲಿಲ್ಲ
9. ಸದ್ಯ ಪಲ್ಲಕ್ಕಿ ಎಂಬ ಬ್ಯಾಂಡ್‌ ನೇಮ್‌ ಇಡಲಾಗಿದೆ
10. ಈ ಹೆಸರನ್ನ ಸ್ವತಃ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸೂಚಿಸಿದ್ದಾರೆ

ವಿದ್ಯಾರ್ಥಿನಿಯಿಂದ ಶೌಚಾಲಯ ಕ್ಲೀನ್ ಮಾಡಿಸಿರೋ ಶಿಕ್ಷಕರು: ಆಸಿಡ್, ಬ್ಲಿಚಿಂಗ್ ವಾಸನೆಗೆ ಅಸ್ವಸ್ಥಗೊಂಡ ಬಾಲಕಿ

ಪಲ್ಲಕ್ಕಿ ಬಸ್‌ನ ಮತ್ತಷ್ಟು ವಿಶೇಷತೆಗಳು
* 11.3 ಮೀಟರ್ ಉದ್ದದ ನಾನ್ ಎಸಿ ಬಸ್ 
* ಬಿಎಸ್-6 ತಂತ್ರಜ್ಞಾನದ ಮಾದರಿಯ ಹೆಚ್.ಪಿ. ಇಂಜಿನ್
* ಹೈಟೆಕ್ ವಿನ್ಯಾಸದ 28 ಸ್ಲೀಪರ್ ಬರ್ತ್ ಸೀಟ್ ಗಳು
* ಪ್ರತಿ ಸೀಟಿಗೆ ಮೊಬೈಲ್ ಹಾಗೂ ಲ್ಯಾಪ್ ಟಾಪ್ ಗಳ ಚಾರ್ಜಿಂಗ್ ಹಾಗೂ ಮೊಬೈಲ್ ಸ್ಟ್ಯಾಂಡ್ ವ್ಯವಸ್ಥೆ
* ಸೀಟ್ ನಂಬರ್ ಮೇಲೆ ಎಲ್ ಇಡಿ ಅಳವಡಿಕೆ
* ಓದಲು ಉತ್ತಮ ಬೆಳಕಿನ ಎಲ್.ಇ.ಡಿ ಲೈಟ್ ಅಳವಡಿಕೆ
* ಬಸ್ ನಲ್ಲಿ ಅಡಿಯೋ ಸ್ವೀಕರ್ ಗಳ ಮೂಲಕ ಜನರಿಗೆ ಮಾಹಿತಿ ನೀಡುವ ವ್ಯವಸ್ಥೆ
* ಡಿಜಿಟಲ್ ಗಡಿಯಾರ, ಹಾಗೆ ಎಲ್.ಇ.ಡಿ. ಫ್ಲೋರ್
* ಪ್ರತಿ ಪ್ರಯಾಣಿಕರಿಗೆ ಚಪ್ಪಳಿ‌ ಇಡಲು ಸ್ಥಳಾವಕಾಶದ ವ್ಯವಸ್ಥೆ
* ಪ್ರಯಾಣಿಕರಿಗೆ ತಲೆದಿಂಬಿನ ವ್ಯವಸ್ಥೆ
* ಚಾಲಕರಿಗೆ ಸಹಾಯವಾಗಲೂ ಬಸ್ ಹಿಂಭಾಗದಲ್ಲಿ ಹೈಟೆಕ್ -ಕ್ಯಾಮರಾ ಅಳವಡಿಕೆ

Follow Us:
Download App:
  • android
  • ios