Asianet Suvarna News Asianet Suvarna News

ಕನ್ನಡಪ್ರಭ ನನ್ನನ್ನು ಮೊದಲು ಗುರುತಿಸಿತು : ಪದ್ಮಶ್ರೀ ಪುರಸ್ಕೃತ ಹಾಜಬ್ಬ

  •  ‘ನನ್ನ ಕಡೆಯಿಂದ ಕನ್ನಡಪ್ರಭಕ್ಕೆ ಅಭಿನಂದನೆಗಳು. ಕನ್ನಡಪ್ರಭ ಪತ್ರಿಕೆ ನನ್ನನ್ನು ಮೊದಲು ಗುರುತಿಸಿತು. 
  • ಕನ್ನಡಪ್ರಭದವರು ಲೋಕಕ್ಕೆ ತೋರಿಸಿದರು. ನನ್ನನ್ನು ವರ್ಷದ ವ್ಯಕ್ತಿಯಾಗಿ ಮಾಡಿದರು. 
Padma Shri awardee hajabba Remembers kannadaprabha paper snr
Author
Bengaluru, First Published Nov 9, 2021, 8:03 AM IST

 ನವದೆಹಲಿ (ನ.09):  ‘ನನ್ನ ಕಡೆಯಿಂದ ಕನ್ನಡಪ್ರಭಕ್ಕೆ (Kannadaprabha) ಅಭಿನಂದನೆಗಳು. ಕನ್ನಡಪ್ರಭ ಪತ್ರಿಕೆ ನನ್ನನ್ನು ಮೊದಲು ಗುರುತಿಸಿತು. ಕನ್ನಡಪ್ರಭದವರು ಲೋಕಕ್ಕೆ ತೋರಿಸಿದರು. ನನ್ನನ್ನು ವರ್ಷದ ವ್ಯಕ್ತಿಯಾಗಿ ಮಾಡಿದರು. ನಾನು ಈಗಲೂ ಕೂಡ ಪತ್ರಿಕೆಗೆ ಋುಣಿ’

-ಇದು ಸೋಮವಾರ ರಾಷ್ಟ್ರಪತಿಯಿಂದ ಪ್ರತಿಷ್ಠಿತ ಪದ್ಮ ಪ್ರಶಸ್ತಿ (padma Shri) ಸ್ವೀಕರಿಸಿದ ಅಕ್ಷರ ಸಂತ ಹರೇಕಳ ಹಾಜಬ್ಬ (Harekala hajabba) ಅವರ ಮನದಾಳದ ಮಾತು.

ನನ್ನ ಜೀವಮಾನದಲ್ಲೇ ಇಂಥ ಕನಸು ಕಂಡವನಲ್ಲ. ಒಬ್ಬ ಸಾಮಾನ್ಯನಿಗೆ ದೇಶದ ಉನ್ನತ ಪ್ರಶಸ್ತಿ ಕೊಟ್ಟಿದ್ದು ಬಹಳ ಸಂತಸ ತಂದಿದೆ. ನನ್ನ ಈ ಪಯಣದಲ್ಲಿ ಹಲವರು ಬೆನ್ನಿಗೆ ನಿಂತಿದ್ದರು. ಅವರನ್ನು ನಾನು ಆಗ ನೆನಪು ಮಾಡಿಕೊಂಡೆ ಎಂದು ಹೇಳಿದರು.

ಚಹಾ ಕೂಟದಲ್ಲಿ ಈ ಸಾಮಾನ್ಯನ ಕೈ ತಾಕಿದರು: ಚಹಾ ಕೂಟದಲ್ಲಿ ಪ್ರಧಾನಿಗಳು (Prime Minister narendra modi) ಈ ಸಾಮಾನ್ಯ ಕೈತಾಕಿದರು. ಇದಕ್ಕಿಂತ ಇನ್ನೇನು ಬೇಕು. ರಾಷ್ಟ್ರಪತಿಗಳು (President) ಅಚ್ಚಾ.. ಅಂದರು. ಗೃಹ ಸಚಿವರು ಸಿಕ್ಕಿದರು. ಸಚಿವೆ ನಿರ್ಮಲಾ ಸೀತಾರಾಮನ್‌ (nirmala sitharaman) ಕನ್ನಡದಲ್ಲಿ ಮಾತನಾಡಿದರು. ಬಹಳ ಖುಷಿ ಆಯ್ತು. ಕನ್ನಡ ಶಾಲೆ (Kannada school) ಉಳಿಸಲು ನನಗೆ ಸಹಾಯ ಮಾಡಿ ಅಂದೆ. ನನ್ನ ಕನಸು ಒಂದೇ. ನಮ್ಮ ಕನ್ನಡ ಶಾಲೆ ಉಳಿಯಬೇಕು ಜೊತೆಗೆ ಅಲ್ಲಿ ಪದವಿ ಕಾಲೇಜು (College) ಆಗಬೇಕು ಅನ್ನುವುದು. ಈ ಬಗ್ಗೆ ಪ್ರಧಾನಿಗಳಿಗೂ ಮನವಿ ಮಾಡುತ್ತೇನೆ ಎಂದರು.

ಹಾಜಬ್ಬ ಬರಿಗಾಲಲ್ಲೇ ಪ್ರಶಸ್ತಿ  ಸ್ವೀಕರಿಸಿದ ವೀಡಿಯೋ ವೈರಲ್‌

ಮಂಗಳೂರು: ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಎಂದಿನಂತೆ ಅದೇ ಅಚ್ಚ ಬಿಳಿ ಅಂಗಿ, ಬಿಳಿ ಪಂಚೆಯುಟ್ಟು (white Dress) ಬರಿಗಾಲಿನಲ್ಲೇ ಪ್ರಶಸ್ತಿ (Award) ಸ್ವೀಕರಿಸಿದ ಹಾಜಬ್ಬ, ಈ ಮೂಲಕ ತನ್ನ ಅನನ್ಯ - ನಿಸ್ಪೃಹ ಸಾಧನೆಯ ಜತೆಗೆ ಸರಳತೆಯ ಮಾದರಿಯನ್ನೂ ಜಗತ್ತಿನ ಮುಂದಿರಿಸಿದರು. ಬರಿಗಾಲಿನಲ್ಲಿ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಹಾಜಬ್ಬರ ವಿಡಿಯೊ (Video) ಈಗ ಸೋಶಿಯಲ್‌ ಮೀಡಿಯಾದಲ್ಲಿ (Social Media) ವೈರಲ್‌ (Viral) ಆಗಿದೆ. ದೇಶ- ವಿದೇಶಗಳಿಂದ ಪ್ರಶಂಸೆಗಳ ಮಹಾಪೂರವೇ ಹರಿದುಬಂದಿದೆ.

ಮಂಗಳೂರಿನ ಸ್ಟೇಟ್‌ ಬ್ಯಾಂಕ್‌ ಬಸ್‌ ಸ್ಟ್ಯಾಂಡಿನಲ್ಲಿ ಕಿತ್ತಳೆ ಮಾರುತ್ತಾ ಜೀವನ ನಡೆಸುತ್ತಿದ್ದ ಹಾಜಬ್ಬ ತನ್ನೂರಾದ ಮಂಗಳೂರು ತಾಲೂಕಿನ ನ್ಯೂ ಪಡ್ಪು ಶಾಲೆಗಾಗಿ ನಡೆಸಿದ ತ್ಯಾಗ, ಹೋರಾಟಗಳನ್ನು ಗುರುತಿಸಿ ಮೊದಲ ಬಾರಿಗೆ ಕನ್ನಡ ಪ್ರಭ 2004ರಲ್ಲಿ ವರ್ಷದ ವ್ಯಕ್ತಿ ಪ್ರಶಸ್ತಿ ನೀಡಿ ಗೌರವಿಸಿತ್ತು. ಆ ಬಳಿಕವೇ ಹಾಜಬ್ಬ ರಾಜ್ಯ, ರಾಷ್ಟ್ರಗಳಲ್ಲಿ ಮನೆಮಾತಾಗಿದ್ದು. ಇದನ್ನು ಸದಾ ನೆನಪಿಸಿಕೊಳ್ಳುವ ಅವರು ಪದ್ಮಶ್ರೀ ಸ್ವೀಕರಿಸಿದ ಬಳಿಕವೂ ಉಸುರಿಸಿದರು.

ಬಿಳಿ ಅಂಗಿ, ಪಂಚೆ, ಚಪ್ಪಲಿ ಇಲ್ಲದ ನಡಿಗೆ, ಮುಗ್ಧ ಮಾತು, ಮನಸ್ಸಿನಲ್ಲಿ ಮಾತ್ರ ಕನ್ನಡ ಕಟ್ಟುವ ಸಂಕಲ್ಪವೊಂದನ್ನೇ ಉಸಿರಾಗಿಸಿಕೊಂಡಿರುವ ಈ ಅಕ್ಷರ ಸಂತನ ನಡೆಗೆ ರಾಷ್ಟ್ರಪತಿ ಭವನದಲ್ಲಿ ಚಪ್ಪಾಳೆ ಮೊಳಗಿದವು. ಸರ್ಕಾರಿ ಕನ್ನಡ ಶಾಲೆ ಕಟ್ಟಿಸಿದ ಹರೇಕಳ ಹಾಜಬ್ಬ ಅವರು ಬರಿಗಲಲ್ಲಿ ನಡೆಯುತ್ತಾ, ರಾಷ್ಟ್ರಪತಿಗಳ ರಾಮನಾಥ ಕೋವಿಂದ ಅವರ ಮುಂದೆ ಹೋಗಿ ಪದ್ಮ ಪುರಸ್ಕಾರ ಪಡೆದು ಹಿಂತಿರುಗುವ ತನಕ ಚಪ್ಪಾಳೆ ಸದ್ದು ನಿಲ್ಲಲೇ ಇಲ್ಲ.

ಪ್ರಶಸ್ತಿ ಸ್ವೀಕರಿಸಿದ ಬಳಿಕ ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್‌ನ ನವದೆಹಲಿ ಪ್ರತಿನಿಧಿ ಜೊತೆ ಮಾತನಾಡಿದ ಅವರು, ಈ ಬಗ್ಗೆ ನಾನು ಹೇಳುವಾಗ ನನಗೆ ಬಹಳ ಸಂತೋಷವಾಗುತ್ತದೆ.

Follow Us:
Download App:
  • android
  • ios