Asianet Suvarna News Asianet Suvarna News

LK Advani Birthday: ಹಿರಿಯನ ನಾಯಕನ ಮನೆಗೆ ಭೇಟಿ ನೀಡಿ ಶುಭ ಕೋರಿದ ಪ್ರಧಾನಿ ಮೋದಿ!

  • ಬಿಜಿಪಿ ಹಿರಿಯ ನಾಯಕ LK Advaniಗೆ ಹುಟ್ಟುಹಬ್ಬದ ಸಂಭ್ರಮ
  • 94ನೇ ವಸಂತಕ್ಕೆ ಕಾಲಿಟ್ಟ ಅಡ್ವಾಣಿ ಮನೆಗೆ ಮೋದಿ ಭೇಟಿ
  • ಕೇಕ್ ಕತ್ತರಿಸಿ ಹುಟ್ಟು ಹಬ್ಬ ಆಚರಣೆ, ಉಪ ರಾಷ್ಟ್ರಪತಿ ನಾಯ್ದು ಸಾಥ್
     
PM Modi senior BJP leaders celebrated veteran party leader LK Advani 94th birthday at Delhi residence ckm
Author
Bengaluru, First Published Nov 8, 2021, 4:06 PM IST

ನವದೆಹಲಿ(ನ.08):  ಬಿಜೆಪಿ ಹಿರಿಯ ನಾಯಕ, ಮಾಜಿ ಉಪ ಪ್ರಧಾನಿ ಎಲ್‌ಕೆ ಅಡ್ವಾಣಿಗೆ ಹುಟ್ಟು ಹಬ್ಬದ ಸಂಭ್ರಮ(Happy Birthday). 94ನೇ ವಸಂತಕ್ಕೆ ಕಾಲಿಟ್ಟ ಅಡ್ವಾಣಿ(LD Advani) ಮನೆಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಹುಟ್ಟು ಹಬ್ಬಕ್ಕೆ ಶುಭಕೋರಿದ್ದಾರೆ. ಮೋದಿ ಜೊತೆಗೆ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಶ್ ಸೇರಿದಂತೆ ಹಲವು ಪ್ರಮುಖರು ಅಡ್ವಾಣಿ ಮನೆಗೆ ತೆರಳಿ ಶುಭ ಕೋರಿದ್ದಾರೆ.

ಹೂಗುಚ್ಚ ನೀಡಿ ಅಡ್ವಾಣಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದ ಮೋದಿ(PM Narendra Modi) ಬಳಿಕ ಅಡ್ವಾಣಿ ಕೇಕ್ ಕತ್ತರಿಸಿ ಹುಟ್ಟು ಹಬ್ಬ ಆಚರಿಸಿದ್ದಾರೆ. ಅಡ್ವಾಣಿ ನಿವಾಸದಲ್ಲಿ ಕೇಕ್ ಕತ್ತರಿಸಿ ಬರ್ತ್‌ಡೇ ಆಚರಿಸಿದರು.  ಅಡ್ವಾಣಿ ಕೈ ಹಿಡಿದು ನಡೆಸಿಕೊಂಡು ಬಂದ ಮೋದಿ, ಹೊರಾಂಗಣದಲ್ಲಿ ಆಯೋಜಿಸಿದ ಹುಟ್ಟು ಹಬ್ಬ ಸಂಭ್ರಮದಲ್ಲಿ ಪಾಲ್ಗೊಂಡರು. ಬಳಿಕ ವೆಂಕಯ್ಯ ನಾಯ್ಡು ನೆರವಿನಿಂದ ಅಡ್ವಾಣಿ ಕೇಕ್ ಕತ್ತರಿಸಿದರು.

ಇನ್ನು ಟ್ವೀಟ್ ಮೂಲಕ ಮೋದಿ, ದೇಶದ ಜನತೆಯನ್ನು ಸಬಲೀಕರಣಗೊಳಿಸಲು ಹಾಗೂ ಭಾರತದ ಸಾಂಸ್ಕೃತಿಕ ಹಿರಿತನ ಎತ್ತಿ ಹಿಡಿದ ಅಡ್ವಾಣಿಗೆ ದೇಶ ಚಿರಋಣಿಯಾಗಿದೆ. ಜನ್ಮದಿನದ ಶುಭಾಶಯಗಳು, ಉತ್ತಮ ಹಾಗೂ ದೀರ್ಘ ಆರೋಗ್ಯಕ್ಕೆ ಪ್ರಾರ್ಥಿಸುತ್ತೇನೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

 

ಬಿಜೆಪಿ ಭೀಷ್ಮ ಎಂದೇ ಗುರುತಿಸಿಕೊಂಡಿರುವ ಲಾಲ್ ಕೃಷ್ಣ ಅಡ್ವಾಣಿ, ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಉಪ ಪ್ರಧಾನಿಯಾಗಿ ಜವಾಬ್ದಾರಿ ನಿರ್ವಹಿಸಿದ್ದಾರೆ. ಒಂದೇ ಮಾತಿನಲ್ಲಿ ಅಡ್ವಾಣಿ ವಿವರಿಸಬೇಕೆಂದರೆ ಭಾರತೀಯ ಜನತಾ ಪಕ್ಷದ ಸಹ ಸಂಸ್ಥಾಪಕ ಎಲ್‌ಕೆ ಅಡ್ವಾಣಿ. 2009ರ ಲೋಕಸಭಾ ಚುನಾವಣೆಯಲ್ಲಿ(Election) ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿದ್ದ ಅಡ್ವಾಣಿ,  ವಿರೋಧ ಪಕ್ಷದ ನಾಯಕರಾಗಿ ಸೇವೆ ಸಲ್ಲಿಸಿದ್ದಾರೆ.

ಬಾಬ್ರಿ ಮಸೀದಿ ಧ್ವಂಸ ಪ್ರಕರಣ: ಜೀವಮಾನದ ಅಗ್ನಿಪರೀಕ್ಷೆ ಗೆದ್ದ ಬಿಜೆಪಿ ಭೀಷ್ಮ

ಎಲ್‌ಕೆ ಅಡ್ವಾಣಿ ಹುಟ್ಟಿದ್ದು ನವೆಂಬರ್ 8, 1927ರಂದು.  ಈಗಿನ ಪಾಕಿಸ್ತಾನದ ಕರಾಚಿಯಲ್ಲಿ ಹುಟ್ಟಿದ ಅಡ್ವಾಣಿ, ಪ್ರಾಥಮಿಕ ಶಿಕ್ಷಣವನ್ನು ಕರಾಚಿಯಲ್ಲೇ ಮುಗಿಸಿದ್ದಾರೆ. ಸಿಂಧಿ ಹಿಂದೂ ಕುಟುಂಬದಲ್ಲಿ ಜನನಿಸಿದ ಅಡ್ವಾಣಿ ಕುಟುಂಬ ಭಾರತ ಹಾಗೂ ಪಾಕಿಸ್ತಾನ ವಿಭಜನೆ ಸಂದರ್ಭದಲ್ಲಿ ಭಾರತಕ್ಕೆ ಆಗಮಿಸಿ ಬಾಂಬೆಯಲ್ಲಿ ನೆಲೆಯೂರಿತು. 

1941ರಲ್ಲಿ ಅಡ್ವಾಣಿ ಅಂದರೆ,  14ನೇ ವಯಸ್ಸಿನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ(RSS)ಸೇರಿದರು. ಆರಂಭದಲ್ಲಿ ಕರಾಚಿಯ ಪ್ರಚಾರಕ್ ಆಗಿ RSSನಲ್ಲಿ ತೊಡಗಿಕೊಂಡ ಅಡ್ವಾಣಿ, ಭಾರತ ವಿಭಜನೆ ಬಳಿಕ ರಾಜಸ್ಥಾನದಲ್ಲಿ RSS ಪ್ರಚಾರಕ್ ಆಗಿ ಸೇವೆ ಸಲ್ಲಿಸಿದ್ದಾರೆ. 

ಭಾರತೀಯ ಜನ ಸಂಘ ಪಕ್ಷದ ಸದಸ್ಯರಾಗಿದ್ದ ಅಡ್ವಾಣಿ, 1966 ರಿಂದ 1967ರ ಅವಧಿಯಲ್ಲಿ ಜನಸಂಘದ ನಾಯಕರಾಗಿ ಸೇವೆ ಸಲ್ಲಿಸಿದ್ದಾರೆ. 1975ರಲ್ಲಿ ಪ್ರಧಾನಿ ಇಂಧಿರಾ ಗಾಂಧಿ ಹೇರಿದ ತುರ್ತು ಪರಿಸ್ಥಿತಿ ವಿರೋಧಿಸಿ ಜೈಲು ಸೇರಿದ್ದ ಅಡ್ವಾಣಿ, 1977ರಲ್ಲಿ ಭಾರತೀಯ ಜನ ಸಂಘವನ್ನು ಭಾರತೀಯ ಜನತಾ ಪಕ್ಷ(BJP) ಎಂದು ನಾಮಕರಣ ಮಾಡಿ ಹೊಸ ರಾಜಕೀಯ ಪಕ್ಷ ಕಟ್ಟಿದ ಕೀರ್ತಿ ಅಡ್ವಾಣಿಗಿದೆ. ಇದೇ  BJP ಇದೀಗ ಸತತ ಎರಡನೇ ಭಾರಿ ಕೇಂದ್ರದಲ್ಲಿ ಅಧಿಕಾರದಲ್ಲಿದೆ. ಕರ್ನಾಟಕ ಸೇರಿದಂತೆ ಹಲವು  ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿದೆ.

ಇತ್ತೀಚಿನ ದಿನಗಳಲ್ಲಿ ಕೇಳಿದ ಸಂತೋಷದ ವಿಚಾರವಿದು, ಜೈ ಶೀರಾಮ್ ಎಂದು ಭಾವುಕರಾದ ಅಡ್ವಾಣಿ

1980ರ ದಶತದಲ್ಲಿ ಅಡ್ವಾಣಿ ಹಾಗೂ ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ರಾಮಜನ್ಮಭೂಮಿ(Ramjanmabhoomi) ಆಂದೋಲನಕ್ಕೆ ಹೊಸ ಆಯಾಮ ನೀಡಿದರು. ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಎಲ್ ಕೆ ಅಡ್ವಾಣಿ, ಬಿಜೆಪಿ ನಾಯಕ ಮುರಳಿ ಮನೋಹರ್ ಜೋಶಿ ಸೇರಿದಂತೆ ಹಲವು ಆರೋಪಿಗಳಲ್ಲೊಬ್ಬರಾಗಿದ್ದಾರೆ. 


 

Follow Us:
Download App:
  • android
  • ios