ರಾಜ್ಯ ಹೈಕೋರ್ಟ್‌ನ ಮೂರು ಪೀಠಗಳಲ್ಲಿ ಸ್ಥಗಿತಗೊಂಡಿರುವ ವಿಡಿಯೊ ಕಾನ್ಫರೆನ್ಸ್ ಸೇವೆ ಸೋಮವಾರದಿಂದ ಪುನಾರಂಭವಾಗಲಿದೆ. ಸೋಮವಾರದಿಂದ ಪ್ರಾಯೋಗಿಕ (ಪೈಲಟ್) ಆಧಾರದಲ್ಲಿ ಮತ್ತೆ ವಿಡಿಯೋ ಕಾನ್ಫರೆನ್ಸ್ ಆರಂಭಿಸಲಾಗುತ್ತದೆ. ಈ ಸಂಬಂಧ ಮಾರ್ಗಸೂಚಿಯನ್ನೂ ಹೊರಡಿಸಲಾಗಿದೆ.
- ಬೆಂಗಳೂರು (ಡಿ.9) : ರಾಜ್ಯ ಹೈಕೋರ್ಟ್‌ನ ಮೂರು ಪೀಠಗಳಲ್ಲಿ ಸ್ಥಗಿತಗೊಂಡಿರುವ ವಿಡಿಯೊ ಕಾನ್ಫರೆನ್ಸ್ ಸೇವೆ ಸೋಮವಾರದಿಂದ ಪುನಾರಂಭವಾಗಲಿದೆ. ಸೋಮವಾರದಿಂದ ಪ್ರಾಯೋಗಿಕ (ಪೈಲಟ್) ಆಧಾರದಲ್ಲಿ ಮತ್ತೆ ವಿಡಿಯೋ ಕಾನ್ಫರೆನ್ಸ್ ಆರಂಭಿಸಲಾಗುತ್ತದೆ. ಈ ಸಂಬಂಧ ಮಾರ್ಗಸೂಚಿಯನ್ನೂ ಹೊರಡಿಸಲಾಗಿದೆ.
ಎಲ್ಲಾ ವಕೀಲರು, ಪಾರ್ಟಿ ಇನ್ ಪರ್ಸನ್ಸ್, ಕಕ್ಷಿದಾರರು (ದಾವೆದಾರರು) ಕಡ್ಡಾಯವಾಗಿ ಜೂಮ್ ವೇದಿಕೆಯಲ್ಲಿ ನೋಂದಾಯಿಸಿಕೊಳ್ಳಬೇಕು. ನೋಂದಾಯಿತ ಬಳಕೆದಾರರನ್ನು ಮಾತ್ರ ನ್ಯಾಯಾಲಯದ ಕಲಾಪಕ್ಕೆ ಅನುಮತಿಸಲಾಗುವುದು ಎಂದು ಹೈಕೋರ್ಟ್ ಕಂಪ್ಯೂಟರ್ ವಿಭಾಗದ ರಿಜಿಸ್ಟ್ರಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಾಸಕಿ ಕನೀಝ್ ಫಾತಿಮಾ ಆಯ್ಕೆ ಅಸಿಂಧು ಕೋರಿ ಹೈಕೋರ್ಟ್‌ಗೆ ಅರ್ಜಿ
ಜೂಮ್ ವೇದಿಕೆ ಮೂಲಕ ಕಲಾಪಕ್ಕೆ (ವಿಡಿಯೋ ಕಾನ್ಫರೆನ್ಸ್) ಹಾಜರಾಗುವ ವಕೀಲರು, ಪಾರ್ಟಿ ಇನ್ ಪರ್ಸನ್ಸ್, ದಾವೆದಾರರು ಪ್ರಕರಣಗಳ ವಿಚಾರಣಾ ಪಟ್ಟಿ, ಪ್ರಕರಣದ ಸಂಖ್ಯೆ ಮತ್ತು ಹೆಸರನ್ನು ಉಲ್ಲೇಖಿಸಬೇಕು. ಎಲ್ಲಾ ಕೋರ್ಟ್ ಹಾಲ್‌ಗಳಲ್ಲಿ ಕಾಯ್ದಿರಿಸುವ ಕೊಠಡಿ ಇರಲಿದೆ. ಸರಿಯಾದ ಪ್ರಕರಣದ ಸಂಖ್ಯೆ ಉಲ್ಲೇಖಿಸಿರುವವರನ್ನು ಮಾತ್ರ ಕಲಾಪಕ್ಕೆ ಅನುಮತಿಸಲಾಗುತ್ತದೆ. ಭಾರತದ ಹೊರಗಿನಿಂದ ವಿಚಾರಣೆಯಲ್ಲಿ ಭಾಗವಹಿಸುವವರು ನ್ಯಾಯಾಂಗ ರಿಜಿಸ್ಟ್ರಾರ್ ಅವರಿಗೆ ಇ-ಮೇಲ್ (regjudicial
ಹೈಕೋರ್ಟ್ ವಿಡಿಯೋ ಕಾನ್ಫರೆನ್ಸ್ ಆ್ಯಪ್ ಹ್ಯಾಕ್: ಅಶ್ಲೀಲ ವಿಡಿಯೋ ಅಪ್ಲೋಡ್ ಮಾಡಿದ ಸೈಬರ್ ಕಳ್ಳರು
ಇದೇ ಡಿ.4ರಂದು ಹೈಕೋರ್ಟ್‌ನ ಕೆಲ ಕೋರ್ಟ್ ಹಾಲ್‌ಗಳಲ್ಲಿ ವಿಡಿಯೊ ಕಾನ್ಫರೆನ್ಸ್ ವೇಳೆ ಅನುಚಿತ ಘಟನೆ ವರದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಬೆಂಗಳೂರು, ಧಾರವಾಡ ಮತ್ತು ಕಲಬುರಗಿ ಪೀಠಗಳಲ್ಲಿ ಡಿ.5ರಿಂದ ಲೈವ್ ಸ್ಟ್ರೀಮಿಂಗ್ ಮತ್ತು ವಿಡಿಯೊ ಕಾನ್ಫರೆನ್ಸ್ ಅನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.
