Asianet Suvarna News Asianet Suvarna News

ದೇಶದಲ್ಲಿ ಮೂರನೇ ಒಂದು ಭಾಗ ಆಹಾರ ವ್ಯರ್ಥವಾಗುತ್ತಿದೆ: ಸಚಿವ ಕೆ.ಎಚ್.ಮುನಿಯಪ್ಪ

ಊಟ ಮಾಡಿ ಆದರೆ ಯಾವುದೇ ಕಾರಣಕ್ಕೂ ವ್ಯರ್ಥ ಮಾಡಬೇಡಿ ಇದಕ್ಕೆ ಹೆಚ್ಚು ಗಮನ ನೀಡಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ಅವರು ಸಾರ್ವಜನಿಕರಿಗೆ ಕರೆ ನೀಡಿದರು. 

One third of food is wasted in the country Says Minister KH Muniyappa gvd
Author
First Published Oct 16, 2023, 2:20 AM IST

ಎಲ್.ಎಸ್. ಶ್ರೀಕಾಂತ್

ಮೈಸೂರು (ಅ.16): ರಾಷ್ಟ್ರ ಮತ್ತು ರಾಜ್ಯದಲ್ಲಿ ಮೂರನೇ ಒಂದು ಭಾಗದಷ್ಟು ತಯಾರಾದ ಆಹಾರ ವ್ಯರ್ಥವಾಗುತ್ತಿದ್ದು, ತಿನ್ನುವ ಹಕ್ಕು ನಮಗಿದೆ ಆದರೆ ಬಿಸಾಡುವ ಹಕ್ಕು ನಮಗಿಲ್ಲ. ಊಟ ಮಾಡಿ ಆದರೆ ಯಾವುದೇ ಕಾರಣಕ್ಕೂ ವ್ಯರ್ಥ ಮಾಡಬೇಡಿ ಇದಕ್ಕೆ ಹೆಚ್ಚು ಗಮನ ನೀಡಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ಅವರು ಸಾರ್ವಜನಿಕರಿಗೆ ಕರೆ ನೀಡಿದರು. ನಾಡಹಬ್ಬ ಮೈಸೂರು ದಸರಾ ಅಂಗವಾಗಿ ನಗರದ ಸ್ಕೌಟ್ ಅಂಡ್ ಗೈಡ್ಸ್ ಮೈದಾನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ದಸರಾ ಆಹಾರ ಮೇಳ ಕಾರ್ಯಕ್ರಮವನ್ನು ಸೌದೆ ಒಲೆಯ ಮೇಲೆ ಮಡಿಕೆಯಲ್ಲಿ ಹಾಲು ಉಕ್ಕಿಸುವ ಮೂಲಕ ದಸರಾ ಆಹಾರ ಮೇಳಕ್ಕೆ ಚಾಲನೆ ನೀಡಿ ನಂತರ ಅವರು ಮಾತನಾಡಿದರು.

ಆಹಾರ ಮೇಳದಲ್ಲಿ 150 ಮಳಿಗೆಗಳನ್ನು ಉತ್ತಮವಾದ ರೀತಿಯಲ್ಲಿ ತೆರೆಯಲಾಗಿದ್ದು. ಎಲ್ಲರೂ ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು, 9 ದಿನಗಳ ಕಾಲ ಈ ಆಹಾರ ಮೇಳ ನಡೆಯಲಿದ್ದು, ಎಲ್ಲರೂ ಉತ್ತಮ ಸಹಕಾರ ನೀಡಬೇಕೆಂದು ಅವರು ಕೋರಿದರು. ರಾಷ್ಟ್ರದ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳ ವಿಶೇಷ ತಿಂಡಿ, ತಿನಿಸುಗಳ ಮಾರಾಟಕ್ಕೆ ಇಲ್ಲಿ ಅವಕಾಶ ಕಲ್ಪಿಸಿದೆ. ಆಹಾರವನ್ನು ಯಾರು ಕೂಡ ವ್ಯರ್ಥ ಮಾಡಬಾರದು. ಉಪಯುಕ್ತರು ಆಹಾರವನ್ನು ಬಳಸಿಕೊಳ್ಳಿ, ಹೆಚ್ಚಿನ ರೀತಿ ಆಹಾರ ಪೋಲಾಗುವುದನ್ನು ತಪ್ಪಿಸಿ ಎಂದರು.

BBK 10 Breaking: ಬಿಗ್ ಬಾಸ್ ಮನೆಯಿಂದ ಹೊರಬಿದ್ದ ಮೊದಲ ಸ್ಪರ್ಧಿ ಸ್ನೇಕ್ ಶ್ಯಾಮ್!

ದೇಶದಲ್ಲಿ ಮೂರನೇ ಒಂದು ಭಾಗದಷ್ಟು ತಯಾರಾದ ಆಹಾರ ವ್ಯರ್ಥವಾಗುತ್ತಿದೆ. ಊಟ ಮಾಡಿ ಆದರೆ ವ್ಯರ್ಥ ಮಾಡಬೇಡಿ, ಹೋಟೆಲ್ಮಾಲೀಕರ ಸಂಘದ ಅಧ್ಯಕ್ಷರಿಗೆ ಹೇಳುತ್ತೇನೆ, ಹಾಗೂ ಮುಂದಿನ ದಿನಗಳಲ್ಲಿ ಎಲ್ಲ ಇದನ್ನು ಜನರಿಗೆ ಮನವರಿಕೆ ಮಾಡುವಂತೆ ಕೆಲಸ ಸರ್ಕಾರದಿಂದ ಅರಿವು ಮೂಡಿಸುವ ಕೆಲಸ ಮಾಡುತ್ತೇವೆ. ಇನ್ನೂ ಈ ದೇಶದಲ್ಲಿ ಹಾಗೂ ಜಗತ್ತಿನಲ್ಲಿ ಊಟ ಇಲ್ಲದೆ ಮೃತ ಪಡುತ್ತಿರುವ ಜನ ಇದ್ದಾರೆ. ಆದ್ದರಿಂದ ಸರ್ಕಾರದ ವತಿಯಿಂದ ಈ ವಿಚಾರದ ಕುರಿತು ಕ್ರಮವನ್ನು ಕೈಗೊಳ್ಳಲಾಗುವುದು. ಕಲ್ಯಾಣ ಮಂಟಪಗಳು ಮತ್ತು ಹೋಟೆಲ್ಗಳಲ್ಲಿ ಆಹಾರ ವ್ಯರ್ಥವಾಗುತ್ತಿದೆ, ಈ ರೀತಿ ಆಹಾರವನ್ನು ವ್ಯರ್ಥ ಮಾಡಬಾರದು ಎಂದು ಅವರು ಹೇಳಿದರು.

ಮುಂದಿನ ದಿನಗಳಲ್ಲಿ ಆಹಾರ ವ್ಯರ್ಥವಾಗದಂತೆ ಸರ್ಕಾರದಿಂದ ನಿಯಮಾವಳಿಗಳನ್ನು ರೂಪಿಸಿ, ಪತ್ರಿಕೆ ಮುಖಾಂತರ, ಪೋಸ್ಟರ್ಮುಖಾಂತರ ಆಹಾರ ವ್ಯಕ್ತವಾಗದಂತೆ ಕ್ರಮ ಕೈಗೊಂಡು ಜನರಿಗೆ ಅರಿವು ಮೂಡಿಸುವಂತಹ ಕೆಲಸ ಮಾಡಲಾಗುವುದು ಎಂದು ಅವರು ತಿಳಿಸಿದರು. ಆಹಾರ ಸಂರಕ್ಷಣ ಜನಜಾಗೃತಿ ರಾಜ್ಯ ಸಮಿತಿಯಿಂದ ಆಹಾರ ಮೇಳದಲ್ಲಿ ಪೋಸ್ಟರ್ಗಳನ್ನು ಹಿಡಿದು ಮೇಳಕ್ಕೆ ಬರುವ ಸಾರ್ವಜನಿಕರಿಗೆ ಆಹಾರವನ್ನು ವ್ಯರ್ಥ ಮಾಡದಂತೆ ಜಾಗೃತಿ ಮೂಡಿಸುತ್ತಿದ್ದಾರೆ. ಈ ಸಮಿತಿ ಸಹಕಾರದೊಂದಿಗೆ ಮುಂದಿನ ದಿನಗಳಲ್ಲಿ ಸಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಬಿಜೆಪಿಯೇ ಮುಳುಗುತ್ತಿರುವ ಹಡಗು: ಎಂ.ಪಿ.ರೇಣುಕಾಚಾರ್ಯ

ಸಚಿವರಿಗೆ ಅದ್ದೂರಿ ಸ್ವಾಗತ: ಆಹಾರ ಮೇಳ ಉದ್ಘಾಟನೆ ಆಗಮಿಸಿದ ಸಚಿವ ಕೆ.ಎಚ್. ಮುನಿಯಪ್ಪ ಅವರಿಗೆ ಮುಖ್ಯದ್ವಾರದ ಬಳಿ ಜಾನಪದ ಕಲಾ ತಂಡಗಳು, ವಾದ್ಯ ವೃಂದ ಅದ್ದೂರಿಯಾಗಿ ಸ್ವಾಗತಿಸಿದರು. ನಂತರ ಅವರು ನಂದಿಕಂಬಕ್ಕೆ ಪೂಜೆ ಮಾಡಿ, ಹಳ್ಳಿ ಸೊಗಡಿನಲ್ಲಿ ನಿರ್ಮಿಸಲಾಗಿದ್ದು ಗುಡಿಸಲು, ಎತ್ತುಗಳನ್ನು ಹಿಡಿದು ಬರುತ್ತಿರುವ ರೈತ, ಇದರ ಮುಂದೆ ಇಡಲಾಗಿದ್ದ ಸೌದೆಯ ಒಲೆಯ ಮೇಲೆ ಮಡಿಕೆ ಇಟ್ಟು ಹಾಲನ್ನು ಉಕ್ಕಿಸಿದ್ದು ನೋಡುಗರನ್ನು ಆಕರ್ಷಿಸಿತು. ಕಾರ್ಯಕ್ರಮದಲ್ಲಿ ವಿಧಾನಸಭಾ ಪರಿಷತ್ ಸದಸ್ಯರಾದ ಡಿ. ತಿಮ್ಮಯ್ಯ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಕಾರ್ಯದರ್ಶಿ ಪ್ರಕಾಶ್, ಜಂಟಿ ನಿರ್ದೇಶಕಿ ಕುಮುದಾ, ಇತರೆ ಅಧಿಕಾರಿಗಳು, ಮೈಸೂರು ನಗರ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ದಿನೇಶ್ ಭಾಗವಹಿಸಿದ್ದರು.

Follow Us:
Download App:
  • android
  • ios