ಶಿವಮೊಗ್ಗದಲ್ಲಿ ವರುಣನ ಅಬ್ಬರಕ್ಕೆ ವ್ಯಕ್ತಿ ನೀರು ಪಾಲು: ಇಂದೂ ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆ
ಭಾರೀ ಮಳೆಯಿಂದಾಗಿ ಘಾಟಿ ರಸ್ತೆಯಲ್ಲಿ ಹಲವೆಡೆ ಹಳ್ಳದಂತೆ ನೀರು ರಭಸವಾಗಿ ಹರಿದು ಆತಂಕ ಸೃಷ್ಟಿಸಿತ್ತು. ಈ ಮಧ್ಯೆ, ಶಿವಮೊಗ್ಗ ನಗರದ ಹಳೆ ಸೇತುವೆ ಪಕ್ಕದಲ್ಲಿರುವ ಬಂಡೆ ಮೇಲೆ ಸಿಲುಕಿದ್ದ ಗೋಪಾಲ್ ಎಂಬ ವ್ಯಕ್ತಿಯನ್ನು ಅಗ್ನಿಶಾಮಕದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿದ್ದಾರೆ.
ಬೆಂಗಳೂರು(ಅ.10): ಮಲೆನಾಡು ಹಾಗೂ ಉತ್ತರ ಕರ್ನಾಟಕದ ಕೆಲವೆಡೆ ಉತ್ತಮ ಮಳೆಯಾಗಿದೆ. ಶಿವಮೊಗ್ಗ ತಾಲೂಕು ಮುದುವಾಲದಲ್ಲಿ ಮಂಗಳವಾರ ರಾತ್ರಿ ಬೈಕ್‌ನಲ್ಲಿ ಕೊಂಡಜ್ಜಿ ಹಳ್ಳ ದಾಟುವಾಗ ಚಿನ್ನಿಕಟ್ಟೆಯ ಇನ್ಸಾಲ್ ಎಂಬುವರು ಕೊಚ್ಚಿಕೊಂಡು ಹೋಗಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಘಾಟಿ ಪ್ರದೇಶದಲ್ಲಿ ಉತ್ತಮ ಮಳೆಯಾಗಿದ್ದು, ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಭಾರೀ ಮಳೆಗೆ ಹಲವೆಡೆ ಧರೆ ಕುಸಿತ ಉಂಟಾಗಿ ಕಿಲೋಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್ ಆಗಿತ್ತು. ಭಾರೀ ಮಳೆಯಿಂದಾಗಿ ಘಾಟಿ ರಸ್ತೆಯಲ್ಲಿ ಹಲವೆಡೆ ಹಳ್ಳದಂತೆ ನೀರು ರಭಸವಾಗಿ ಹರಿದು ಆತಂಕ ಸೃಷ್ಟಿಸಿತ್ತು. ಈ ಮಧ್ಯೆ, ಶಿವಮೊಗ್ಗ ನಗರದ ಹಳೆ ಸೇತುವೆ ಪಕ್ಕದಲ್ಲಿರುವ ಬಂಡೆ ಮೇಲೆ ಸಿಲುಕಿದ್ದ ಗೋಪಾಲ್ (35) ಎಂಬ ವ್ಯಕ್ತಿಯನ್ನು ಅಗ್ನಿಶಾಮಕದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿದ್ದಾರೆ.
Mangaluru: ಭಾರೀ ಮಳೆಗೆ ನೆರಿಯ ಸೇತುವೆ ಮತ್ತೆ ಮುಳುಗಡೆ: ಆತಂಕದಲ್ಲಿ ಜನರು
ಗೋಪಾಲ್ ಕಳೆದ ರಾತ್ರಿ ತುಂಗಾ ನದಿ ನಡುವೆ ಇರುವ ಬಂಡೆ ಮೇಲೆ ಹೋಗಿ ಮಲಗಿದ್ದ. ಬೆಳಗ್ಗೆ ಎಚ್ಚರವಾದಾಗ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳವಾಗಿ ದಡಕ್ಕೆ ಬರಲಾಗದೆ ಆತಂಕಕ್ಕೀಡಾಗಿದ್ದ. ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೋಟ್ ಮೂಲಕ ಆತನನ್ನು ರಕ್ಷಿಸಿದ್ದಾರೆ. ಮುಂದಿನ 24 ಗಂಟೆಯಲ್ಲಿ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.