Covid 19 Variant: ಪೋಷಕರೇ ಹುಷಾರ್‌: 'ಮಕ್ಕಳ ಮೇಲೆಯೇ Omicron ಹೆಚ್ಚು ಪರಿಣಾಮ'

*  ಲಸಿಕೆ ಹಾಕಿಸಿಕೊಂಡವರಿಗೆ ಪ್ರಾಣಾಪಾಯದ ಆತಂಕ ಇಲ್ಲ  
*  ಡೆಲ್ಟಾ 8 ಬಾರಿ, ಇದು 32 ಬಾರಿ ರೂಪಾಂತರಗೊಂಡ ವೈರಸ್  
*  ಮಕ್ಕಳು, ವೃದ್ಧರು, ಲಸಿಕೆ ಪಡೆಯದವರಿಗೇ ಹೆಚ್ಚು ಅಪಾಯ
 

Omicron More Effect on Children Says Dr Amit Bhate grg

ಜಗದೀಶ ವಿರಕ್ತಮಠ 

ಬೆಳಗಾವಿ(ಡಿ.02):  ರಾಜ್ಯದಲ್ಲಿ ಎರಡನೇ ಅಲೆ ಸೃಷ್ಟಿಸಿದ್ದ ಡೆಲ್ಟಾ ವೈರಸ್‌ಗಿಂತಲೂ(Delta Virus) ಇದೀಗ ಇಡೀ ವಿಶ್ವವನ್ನು(World) ಆತಂಕಕ್ಕೆ ತಳ್ಳಿರುವ ಒಮಿಕ್ರೋನ್‌(Omicron) ವೈರಸ್ ಹೆಚ್ಚು ಅಪಾಯಕಾರಿ. ಸ್ವಲ್ಪ ಮೈಮರೆತರೂ ಇದು ಮಕ್ಕಳನ್ನು, ಲಸಿಕೆ ಹಾಕಿಸಿಕೊಳ್ಳದವರನ್ನು ಹೆಚ್ಚು ಕಾಡುವ ಅಪಾಯವಿದೆ ಎಂದು ಬೆಳಗಾವಿಯ ಜೀವನ ರೇಖಾ ಆಸ್ಪತ್ರೆಯ ಡಾ.ಅಮಿತ್ ಭಾತೆ(Dr Amit Bhate) ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕ(Karnataka) ಸೇರಿ ಇಡೀ ದೇಶದಲ್ಲಿ ಭಾರೀ ಸಾವು, ನೋವಿಗೆ ಕಾರಣವಾದ ಡೆಲ್ಟಾ ವೈರಸ್‌ನಲ್ಲಿ ಕೇವಲ 8 ಮ್ಯುಟೆಂಟ್ (ರೂಪಾಂತರಿ) ಆಗಿದೆ. ಆದರೆ, ಇದೀಗ ಸದ್ದು ಮಾಡುತ್ತಿರುವ ಒಮಿಕ್ರೋನ್‌ ವೈರಸ್ ಡೆಲ್ಟಾಗಿಂತ ನಾಲ್ಕು ಪಟ್ಟು ಅಂದರೆ ಬರೋಬ್ಬರಿ 32 ಬಾರಿ ರೂಪಾಂತರಿ ಆದ ತಳಿ. ಒಮಿಕ್ರೋನ್‌ ವೈರಸ್ ನಿಂದ ಮಕ್ಕಳಿಗೆ(Children) ಹಾಗೂ ಲಸಿಕೆ(Vaccine) ಹಾಕಿಸಿಕೊಳ್ಳದವರಿಗೆ ತೀವ್ರ ಸಮಸ್ಯೆ ಆಗಲಿದೆ. ಅದರಲ್ಲೂ 2-3 ವರ್ಷದ ಮಕ್ಕಳ ಮೇಲೆ ಹೆಚ್ಚಿನ ದುಷ್ಪರಿಣಾಮ ಬೀರಲಿದೆ. ಈ ಹಿಂದೆ ಕೋವಿಡ್ ಲಕ್ಷಣಗಳು(Covid Symptoms) ಕಂಡು ಬರಲು ಏಳು ದಿನಗಳಾಗುತ್ತಿತ್ತು. ಅದು 5 ದಿನಗಳಲ್ಲಿ ಸೋಂಕು ಲಂಗ್ಸ್‌ಗೆ(Lungs) ಹರಡುತ್ತಿತ್ತು. ಆದರೆ ಒಮಿಕ್ರೋನ್‌ ಶರವೇಗದಿಂದ ಹರಡುತ್ತದೆ. ಈ ವೈರಸ್ ತಗುಲಿದರೆ ಕೇವಲ 5 ದಿನಗಳಲ್ಲಿ ರೋಗ ಲಕ್ಷಣಗಳು ಕಾಣಿಸುತ್ತವೆ. ಮೂರ್ನಾಲ್ಕು ದಿನಗಳಲ್ಲೇ ಲಂಗ್ಸ್‌ಗೆ ಹರಡುತ್ತದೆ ಎಂದು ಡಾ.ಭಾತೆ ತಿಳಿಸಿದ್ದಾರೆ.

Omicron: ವಿದ್ಯಾರ್ಥಿಗೆ ಕೊರೋನಾ ದೃಢ: ಶಾಲೆಗೆ ರಜೆ

ಒಮ್ಮೆ ಈ ಮಹಾಮಾರಿ ಒಮಿಕ್ರೋನ್‌ ವೈರಸ್ ನಿಯಂತ್ರಣ ಕೈತಪ್ಪಿದರೆ ಭಾರೀ ಅನಾಹುತ ಸೃಷ್ಟಿಸುವ ಸಾಧ್ಯತೆ ಇದೆ. ಅದರಲ್ಲೂ ಮಕ್ಕಳನ್ನು ಹೆಚ್ಚಾಗಿ ಈ ಸೋಂಕು ಕಾಡಲಿದೆ. ಕೆಮ್ಮು, ಜ್ವರ ಹಾಗೂ ನ್ಯೂಮೋನಿಯಾದಂತಹ(Pneumonia) ಲಕ್ಷಣಗಳು ಮಕ್ಕಳನ್ನೂ ಕಾಡಬಹುದು. ಇದು ತೀವ್ರ ಅಪಾಯಕಾರಿಯೂ ಆಗಬಹುದು. ಹೀಗಾಗಿ ಮಕ್ಕಳು ಮತ್ತು ಅನಾರೋಗ್ಯದಿಂದ ಬಳಲುತ್ತಿರುವ ವಯೋವೃದ್ಧರನ್ನು ಎಚ್ಚರಿಕೆಯಿಂದ ನೋಡಿಕೊಳ್ಳಬೇಕಿದೆ. ಕೋವಿಡ್ ಸೋಂಕು ಇವರಿಗೆ ತಗುಲದಂತೆ ಮುನ್ನೆಚ್ಚರಿಕೆ ವಹಿಸಬೇಕಿದೆ ಎಂದು ಅವರು ಸಲಹೆ ನೀಡಿದ್ದಾರೆ.

ಒಮಿಕ್ರೋನ್‌ ವೈರಸ್ ತಗುಲಿದರೆ ಎರಡೂ ಡೋಸ್ ಅಥವಾ ಬೂಸ್ಟರ್ ಡೋಸ್(Booster Dose) ಲಸಿಕೆ ಪಡೆದವರಲ್ಲಿ ರೋಗ ಲಕ್ಷಣಗಳು ಕಂಡುಬಂದರೂ ಜೀವಹಾನಿ ಆಗಲಾರದು. ಆದರೆ, ಒಂದೇ ಡೋಸ್ ಲಸಿಕೆ ಪಡೆದ ಹಾಗೂ ಲಸಿಕೆ ಪಡೆಯದ ವ್ಯಕ್ತಿಗಳ ಜೀವಕ್ಕೆ ಅಪಾಯವಿದೆ. ಸರ್ಕಾರ ಉಚಿತವಾಗಿ ಕೋವಿಡ್ ಲಸಿಕೆ ನೀಡುತ್ತಿದ್ದರೂ ಅನೇಕರು ಈವರೆಗೂ ಲಸಿಕೆ ಹಾಕಿಸಿಕೊಳ್ಳಲು ಆಸಕ್ತಿ ತೋರಿಲ್ಲ. ಅಂಥವರು ಲಸಿಕೆ ಪಡೆಯಲು ಮುಂದಾಗಬೇಕು ಎಂದು ಡಾ.ಅಮಿತ್ ಭಾತೆ ತಿಳಿಸಿದ್ದಾರೆ. ಕೊರೋನಾ(Coronavirus) ದೇಶಕ್ಕೆ ಕಾಲಿಟ್ಟ ಆರಂಭದ ದಿನಗಳಲ್ಲಿ ಬೆಳಗಾವಿಯ(Belagavi) ಜೀವನ ರೇಖಾ ಆಸ್ಪತ್ರೆ ಸೇರಿ ದೇಶದ ಕೆಲವು ಆಸ್ಪತ್ರೆಗಳಲ್ಲಿ ಕೋವಿಡ್ ಲಸಿಕೆಯ(Vaccine) ಪ್ರಯೋಗ ನಡೆದಿತ್ತು.

Covid Vaccine ಪಡೆಯದಿದ್ರೆ ಪಾರ್ಕ್‌, ಮಾಲ್‌ಗೆ ನೋ ಎಂಟ್ರಿ..?

ಅಪಾಯಕಾರಿ ದೇಶಗಳಿಂದ ಬಂದ 10 ಜನರಿಗೆ ಕೋವಿಡ್‌ ಸೋಂಕು!

ಕೋವಿಡ್‌ನ ಒಮಿಕ್ರೋನ್‌ ರೂಪಾಂತರಿ (Covid19 New Variant Omicron) ತಳಿ ಪತ್ತೆಯಾಗಿರುವ ಅಥವಾ ಒಮಿಕ್ರೋನ್‌ ವಿಷಯದಲ್ಲಿ ಅಪಾಯಕಾರಿ ಎಂದು ಪರಿಗಣಿಸಲಾದ ‘ಅಟ್‌ ರಿಸ್ಕ್‌’ ದೇಶಗಳಿಂದ ಮಹಾರಾಷ್ಟ್ರಕ್ಕೆ (Maharashtra) ಆಗಮಿಸಿದ ಆರು ಮಂದಿ ಮತ್ತು ದೆಹಲಿಗೆ (Delhi) ಆಗಮಿಸಿದ ನಾಲ್ವರಲ್ಲಿ ಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಅವರ ಮಾದರಿಗಳನ್ನು ಜಿನೋಮ್‌ ಸೀಕ್ವೆನ್ಸ್‌ ಪರೀಕ್ಷೆಗೆ ಕಳಿಸಲಾಗಿದೆ.

‘ಕೋವಿಡ್‌ ಪಾಸಿಟಿವ್‌ (Covid19 Positive) ಬಂದ ಆರೂ ಮಂದಿ ರೋಗಲಕ್ಷಣ ಇಲ್ಲದವರು ಅಥವಾ ಅಲ್ಪ ಪ್ರಮಾಣದ ರೋಗಲಕ್ಷಣ ಇರುವವರಾಗಿದ್ದಾರೆ. ಅವರ ಸಂಪರ್ಕಗಳನ್ನು ಪತ್ತೆಹಚ್ಚಲಾಗುತ್ತಿದೆ. ಆರರಲ್ಲಿ ಮೂರು ಮಂದಿ ಮುಂಬೈನವರಾಗಿದ್ದು, ಇನ್ನಿಬ್ಬರು ಪಿಂಪ್ರಿ-ಚಿಂಚ್ವಾಡ ಮತ್ತು ಒಬ್ಬರು ಪುಣೆಯವರಾಗಿದ್ದಾರೆ’ ಎಂದು ಮಹಾರಾಷ್ಟ್ರ ಆರೋಗ್ಯ ಇಲಾಖೆ ತಿಳಿಸಿದೆ.
 

Latest Videos
Follow Us:
Download App:
  • android
  • ios