Bengaluru: ಕ್ರಿಕೆಟಿಗ ಧೋನಿ ಶಾಲೆ ಸೇರಿ 500+ ಶಾಲೆಗಳಿಗೆ ಶಿಕ್ಷಣ ಇಲಾಖೆಯಿಂದ ನೋಟಿಸ್
ರಾಜ್ಯ ಪಠ್ಯಕ್ರಮಕ್ಕೆ ಅನುಮತಿ ಪಡೆದು ಸಿಬಿಎಸ್‌ಇ/ಐಸಿಎಸ್‌ಇ ಪಠ್ಯಕ್ರಮ ಬೋಧನೆ ಸೇರಿದಂತೆ ನಿಯಮಗಳನ್ನು ಉಲ್ಲಂಘಿಸಿರುವ ಬೆಂಗಳೂರಿನ 500ಕ್ಕೂ ಹೆಚ್ಚು ಶಾಲೆಗಳಿಗೆ ಶಿಕ್ಷಣ ಇಲಾಖೆ ಇತ್ತೀಚೆಗೆ ನೋಟಿಸ್ ನೀಡಿದೆ.
ಬೆಂಗಳೂರು (ಫೆ.05): ರಾಜ್ಯ ಪಠ್ಯಕ್ರಮಕ್ಕೆ ಅನುಮತಿ ಪಡೆದು ಸಿಬಿಎಸ್‌ಇ/ಐಸಿಎಸ್‌ಇ ಪಠ್ಯಕ್ರಮ ಬೋಧನೆ ಸೇರಿದಂತೆ ನಿಯಮಗಳನ್ನು ಉಲ್ಲಂಘಿಸಿರುವ ಬೆಂಗಳೂರಿನ 500ಕ್ಕೂ ಹೆಚ್ಚು ಶಾಲೆಗಳಿಗೆ ಶಿಕ್ಷಣ ಇಲಾಖೆ ಇತ್ತೀಚೆಗೆ ನೋಟಿಸ್ ನೀಡಿದೆ. ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಕ್ರಿಕೆಟಿಗ ಎಂ.ಎಸ್.ಧೋನಿ ಹೆಸರಿನ ಖಾಸಗಿ ಶಾಲೆಯೂ ಸೇರಿ ದಕ್ಷಿಣ ಶೈಕ್ಷಣಿಕ ಜಿಲ್ಲೆಯ 303 ಶಾಲೆಗಳು, ಬೆಂಗಳೂರು ಉತ್ತರ-1 ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ವ್ಯಾಪ್ತಿಯಲ್ಲಿ 147 ಶಾಲೆ, ಬೆಂಗಳೂರು ಉತ್ತರ-2ರಲ್ಲಿ 32 ಶಾಲೆ ಸೇರಿದಂತೆ ಒಟ್ಟಾರೆ 500ಕ್ಕೂ ಅಧಿಕ ಶಾಲೆಗಳಿಗೆ ನೋಟಿಸ್ ನೀಡಲಾಗಿದೆ ಎಂದು ತಿಳಿದು ಬಂದಿದೆ.
ರಾಜ್ಯ ಪಠ್ಯಕ್ರಮಕ್ಕೆ ಅನುಮತಿ ಪಡೆದು ಇದನ್ನು ಪೋಷಕರಿಂದ ಮುಚ್ಚಿಟ್ಟು ಕೇಂದ್ರ ಪಠ್ಯಕ್ರಮಕ್ಕೆ ಅನುಮತಿ ಪಡೆದಿದ್ದೇವೆ ಎಂಬುದು ಸೇರಿ ಹಲವು ತಪ್ಪು ಮಾಹಿತಿ ನೀಡಿದ್ದ ಶಾಲೆಗಳ ವಿರುದ್ಧ ವ್ಯಾಪಕ ದೂರುಗಳು ಬಂದ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಪರಿಶೀಲನೆಗೆಂದು ತಂಡಗಳನ್ನು ರಚಿಸಿತ್ತು. ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಪರಿಶೀಲನೆ ನಡೆಸಿದಾಗ 303 ಶಾಲೆಗಳು ನಿಯಮ ಉಲ್ಲಂಘಿಸಿರುವುದು ಬೆಳಕಿಗೆ ಬಂದಿದೆ.
BMTCಯಲ್ಲಿನ ಮತ್ತೊಂದು ಬ್ರಹ್ಮಾಂಡ ಭ್ರಷ್ಟಾಚಾರ ಬಯಲು: ಗುಜರಿ ವಸ್ತುಗಳ ಮಾರಾಟದಲ್ಲಿ ಅಕ್ರಮ
ನಿರಪೇಕ್ಷಣಾ ಪತ್ರ(ಎನ್‌ಒಸಿ), ಅನುಮತಿ ಪಡೆಯದೇ ಶಾಲೆ ಪ್ರಾರಂಭ, ರಾಜ್ಯ ಪಠ್ಯಕ್ರಮಕ್ಕೆ ಅನುಮತಿ ಪಡೆದು ಕೇಂದ್ರ ಪಠ್ಯಕ್ರಮ ಬೋಧನೆ ಸೇರಿದಂತೆ ಖಾಸಗಿ ಶಾಲೆಗಳು ಹಲವು ನಿಯಮಗಳನ್ನು ಉಲ್ಲಂಘಿಸಿದ್ದರಿಂದ ಇಲಾಖೆಯು ಇತ್ತೀಚೆಗೆ ಅಂತಹ ಶಾಲೆಗಳಿಗೆ ನೋಟಿಸ್ ನೀಡಿತ್ತು. ನೋಟಿಸ್ ನೀಡಿದ ಬಳಿಕ ಕೆಲ ಶಾಲೆಗಳು ತಪ್ಪನ್ನು ಸರಿಪಡಿಸಿಕೊಂಡಿವೆ. ಇನ್ನೂ ಬಹಳಷ್ಟುಶಾಲೆಗಳು ಯಥಾಸ್ಥಿತಿ ಮುಂದುವರೆಸಿವೆ. ಇದರಿಂ¨ದಿಲಾಖೆಯು ಅಂತಹ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದೆ. ಕ್ರಿಕೆಟಿಗ ಎಂ.ಎಸ್.ಧೋನಿ ಹೆಸರಿನ ಖಾಸಗಿ ಶಾಲೆಗೂ ನೋಟಿಸ್ ನೀಡಿರುವುದನ್ನು ಶಿಕ್ಷಣ ಇಲಾಖೆ ಖಚಿತ ಪಡಿಸಿದೆ.
‘ವಿದ್ಯಾರ್ಥಿಗಳ ಸಾಮರ್ಥ್ಯ ಹೆಚ್ಚಳಕ್ಕೆ ಕೇಂದ್ರ ಪಠ್ಯ’: ಆನೇಕಲ್ ತಾಲೂಕಿನಲ್ಲಿ 46ಕ್ಕೂ ಅಧಿಕ ಶಾಲೆಗಳು ನಿಯಮ ಉಲ್ಲಂಘಿಸಿದ್ದರಿಂದ ನವೆಂಬರ್‌ನಲ್ಲಿ ನೋಟಿಸ್ ನೀಡಲಾಗಿತ್ತು. ರಾಜ್ಯ ಪಠ್ಯಕ್ರಮಕ್ಕೆ ಅನುಮತಿ ಪಡೆದು ಕೇಂದ್ರ ಪಠ್ಯಕ್ರಮ ಬೋಧಿಸುತ್ತಿದ್ದ ಬಹಳಷ್ಟು ಪ್ರಕರಣ ಪತ್ತೆಯಾಗಿದ್ದವು. ಇನ್ನು ಕೆಲ ಶಾಲೆಗಳು 1ರಿಂದ 4ನೇ ತರಗತಿವರೆಗೂ ಕೇಂದ್ರ ಪಠ್ಯಕ್ರಮ ಹಾಗೂ 7 ಮತ್ತು 8ನೇ ತರಗತಿಗೆ ರಾಜ್ಯ ಪಠ್ಯಕ್ರಮ ಬೋಧಿಸುತ್ತಿದ್ದವು.
ವಿದ್ಯಾರ್ಥಿಗಳ ಸಾಮರ್ಥ್ಯ ಹೆಚ್ಚಿಸಲು ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಹೀಗೆ ಮಾಡಲಾಗುತ್ತಿದೆ ಎಂದೂ ಕೆಲ ಶಾಲೆಗಳು ಸಮರ್ಥಿಸಿಕೊಂಡಿದ್ದವು. ನಿಯಮ ಉಲ್ಲಂಘಿಸುತ್ತಿರುವ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳುವ ಪ್ರಕ್ರಿಯೆ ಮುಂದುವರೆದಿದೆ ಎಂದು ಇಲಾಖೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ರಾಜ್ಯ ಪಠ್ಯಕ್ರಮದ ಶಾಲೆಗಳ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಸರ್ಕಾರ ಮೌಲ್ಯಾಂಕನ ಪರೀಕ್ಷೆ ನಡೆಸಲು ಮುಂದಾಗಿದ್ದರಿಂದ ಪೋಷಕರು ಶಾಲೆಗಳ ಬಗ್ಗೆ ವಿವರ ಸಂಗ್ರಹಿಸಿದ್ದು, ಜೊತೆಗೆ ಇತ್ತೀಚೆಗೆ ಮಹಾಲಕ್ಷ್ಮಿ ಲೇಔಟ್‌ನ ಆರ್ಕಿಡ್ಸ್ ಸ್ಕೂಲ್‌ನಲ್ಲಿ ಕೇಂದ್ರ ಪಠ್ಯಕ್ರಮಕ್ಕೆ ಅನುಮತಿ ಪಡೆಯದೇ ಶಾಲೆ ನಡೆಸುತ್ತಿರುವ ಬಗ್ಗೆ ಆರೋಪ ವ್ಯಕ್ತವಾದ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯು ಖಾಸಗಿ ಶಾಲೆಗಳ ದಾಖಲೆಗಳನ್ನು ಸಮಗ್ರವಾಗಿ ಪರಿಶೀಲಿಸಲು ಮುಂದಾಗಿದ್ದು, ಕ್ರಮ ಕೈಗೊಳ್ಳುತ್ತಿದೆ.
ವಿವಿಧ ಭೇಡಿಕೆಗಳನ್ನ ಈಡೇರಿಸುವಂತೆ ಫೆ.6ರಂದು ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಪ್ರತಿಭಟನೆ
ಪೋಷಕರಿಗೆ ಮಾಹಿತಿಯೇ ಇಲ್ಲ: ಖಾಸಗಿ ಶಾಲೆಗಳು ರಾಜ್ಯ ಪಠ್ಯಕ್ರಮಕ್ಕೆ ಅನುಮತಿ ಪಡೆದು ಕೇಂದ್ರ ಪಠ್ಯಕ್ರಮ ಬೋಧಿಸುವುದಾಗಿ ಲಕ್ಷಾಂತರ ರು. ಶುಲ್ಕ ವಸೂಲಿ ಮಾಡುತ್ತವೆ. ಪೋಷಕರು ಕೇಳಿದರೆ ಸರಿಯಾದ ಮಾಹಿತಿಯನ್ನೇ ನೀಡುವುದಿಲ್ಲ ಎಂದು ಮಹಾಲಕ್ಷ್ಮಿ ಲೇಔಟ್‌ನ ಪ್ರತಿಷ್ಠಿತ ಶಾಲೆಯೊಂದರ ಪೋಷಕ ಪ್ರಕಾಶ್ ಪ್ರತಿಕ್ರಿಯಿಸಿದ್ದಾರೆ.