BMTCಯಲ್ಲಿನ ಮತ್ತೊಂದು ಬ್ರಹ್ಮಾಂಡ ಭ್ರಷ್ಟಾಚಾರ ಬಯಲು: ಗುಜರಿ ವಸ್ತುಗಳ ಮಾರಾಟದಲ್ಲಿ ಅಕ್ರಮ
ಬೃಹತ್ ಬೆಂಗಳೂರು ಮಹಾನಗರ ಸಾರಿಗೆ (BMTC)ಯಲ್ಲಿನ ಮತ್ತೊಂದು ಬ್ರಹ್ಮಾಂಡ ಭ್ರಷ್ಟಾಚಾರ ಬಯಲಿಗೆ ಬಂದಿದ್ದು, ಸಾರಿಗೆ ಸಚಿವರೇ, ಬಿಎಂಟಿಸಿ ಎಂ.ಡಿ ಸತ್ಯವತಿ ಅವರೇ ಈ ಸುದ್ದಿಯನ್ನೊಮ್ಮೆ ಓದಿ.
ಬೆಂಗಳೂರು (ಫೆ.05): ಬೃಹತ್ ಬೆಂಗಳೂರು ಮಹಾನಗರ ಸಾರಿಗೆ (BMTC)ಯಲ್ಲಿನ ಮತ್ತೊಂದು ಬ್ರಹ್ಮಾಂಡ ಭ್ರಷ್ಟಾಚಾರ ಬಯಲಿಗೆ ಬಂದಿದ್ದು, ಸಾರಿಗೆ ಸಚಿವರೇ, ಬಿಎಂಟಿಸಿ ಎಂ.ಡಿ ಸತ್ಯವತಿ ಅವರೇ ಈ ಸುದ್ದಿಯನ್ನೊಮ್ಮೆ ಓದಿ. ಬೇಲಿಯೇ ಎದ್ದು ಹೊಲಮೇಯ್ದ ಕತೆ ಇಲ್ಲಿದೆ ನೋಡಿ. ಕಂಡಕ್ಟರ್ ಡ್ರೈವರ್ ತಪ್ಪು ಮಾಡಿದ್ರೆ ಸಸ್ಪೆಂಡ್, ಅಧಿಕಾರಿಗಳು ತಪ್ಪು ಮಾಡಿದ್ರೆ ಕೇವಲ ನೋಟಿಸ್ ನೀಡ್ತಾರೆ.
ನಿಗಮದ ಗುಜರಿ ವಸ್ತುಗಳ ಮಾರಾಟದ ವೇಳೆ ಭಾರೀ ಅಕ್ರಮ ಆರೋಪ ಕೇಳಿಬಂದಿದ್ದು, ಕಿಲಾಡಿ ಖದೀಮರು ನಿಗಮದ ಗುಜರಿ ವಸ್ತುಗಳನ್ನೆ ಕದ್ದಿದ್ದಾರೆ. ನಿಗಮದ ರೂಲ್ಸ್ ಕೇವಲ ಕಂಡಕ್ಟರ್ ಹಾಗೂ ಡ್ರೈವರ್‌ಗೆ ಮಾತ್ರ ಇರುವುದಾ? ನಿಗಮದಲ್ಲಿ ಗುಜರಿ ವಸ್ತುಗಳ ಮಾರಾಟದ ವೇಳೆ ವೀಡಿಯೋ ಚಿತ್ರೀಕರಣ ಮಾಡುವುದು ಕಡ್ಡಾಯ. ಆದರೆ ಗುಜರಿ ವಸ್ತುಗಳ ತೂಕದ ವೇಳೆ ಅಧಿಕಾರಿಗಳು ಸಿ.ಸಿ.ಕ್ಯಾಮರಾಗಳನ್ನು ಆಫ್ ಮಾಡಿ ಅರ್ಧ ವೀಡಿಯೋ ಚಿತ್ರೀಕರಣ ಮಾಡಿದ್ದಾರೆ.
ವಿವಿಧ ಭೇಡಿಕೆಗಳನ್ನ ಈಡೇರಿಸುವಂತೆ ಫೆ.6ರಂದು ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಪ್ರತಿಭಟನೆ
ಈ ಮೂಲಕ ತೂಕದಲ್ಲಿ ಭದ್ರತಾ ಜಾಗೃತ ದಳ ವಿಭಾಗದ ಭೂತರಾಜು, ಉಪಮುಖ್ಯ ಭದ್ರತಾ ಮತ್ತು ಜಾಗೃತಾಧಿಕಾರಿ ಪಾಪಣ್ಣ ಗೋಲ್ಮಾಲ್ ಮಾಡಿದ್ದಾರೆ. ಅರ್ಧ ವಿಡಿಯೋ ಚಿತ್ರೀಕರಣ ಮಾಡಿದಾಗ ಅಧಿಕಾರಿಗಳು ನಿಗಮಕ್ಕೆ 32,89,052 ರೂ. ಆದಾಯ ತೋರಿಸಿದ್ದರು. ಚಿತ್ರೀಕರಣ ಆಫ್ ಮಾಡಿದಾಗ ಬಿಎಂಟಿಸಿಗೆ 13,89,785 ರೂ. ಆದಾಯ ನೀಡಿದ್ದಾರೆ. ಈ ಪ್ರಕರಣದ ಬಗ್ಗೆ ಸಾಕ್ಷಿ ಸಮೇತ ಅಧಿಕಾರಿಗಳ ಮೇಲೆ ದೂರು ಇದೆ.
ಹಾಗಿದ್ರೆ ಬಿಎಂಟಿಸಿ ಸಂಸ್ಥೆಗೆ ಸುಲಭವಾಗಿ ಯಮಾರಿಸಿ ಕೋಟ್ಯಾಂತರ ರೂಪಾಯಿ ಲಪಟಾಯಿಸಿದ್ರಾ. ಈ ಬಗ್ಗೆ ಅಧಿಕಾರಿಗಳಿಗೆ ಬಿಎಂಟಿಸಿ ಕೇವಲ ನೋಟೀಸ್ ನೀಡಿ ಸುಮ್ಮನಾಗಿದೆ.ಇನ್ನು ಗುಜರಿಯಲ್ಲೇ ಐಟಮ್ಸ್‌ನಲ್ಲೇ ಅಧಿಕಾರಿಗಳು ಕೋಟಿ ಕೋಟಿ ಹಣವನ್ನು ಕೊಳ್ಳೆ ಹೊಡೆದಿದ್ದಲ್ಲದೇ ಹೊರಗುತ್ತಿಗೆ ನೌಕರರ ವಿಚಾರದಲ್ಲೂ ಗೋಲ್ಮಾಲ್ ಮಾಡಿದ್ದಾರೆ. ಹೊರಗುತ್ತಿಗೆಗೆ ಬಂದ ಸಿಬ್ಬಂದಿ ಸಂಖ್ಯೆ ನಮೂದು ಮಾಡೋದ್ರಲ್ಲೂ ಅಕ್ರಮ ನಡೆದಿದೆ.
'ವೇಸ್ಟ್ ಫೆಲ್ಲೊ, ನಾನ್ ಸೆನ್ಸ್' ಎಂದು ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಸಿಡಿಮಿಡಿಗೊಂಡ ಸಿದ್ದರಾಮಯ್ಯ
ಕರ್ತವ್ಯಕ್ಕೆ ಹಾಜರಾದ ಸಿಬ್ಬಂದಿ ಲೆಕ್ಕ ತಪ್ಪು ತೋರಿಸಿ ಅಧಿಕಾರಿಗಳು ಲಕ್ಷ ಲಕ್ಷ ಹಣ ಪೀಕಿದ್ದಾರೆ. ಸಾಮಾನ್ಯ ಅಧಿಕಾರಿಗಳಿಂದಲೇ ಲಕ್ಷಾಂತರ ರೂಪಾಯಿ ಗೋಲ್ಮಾಲ್ ಆಗಿದ್ದು, ಈ ಬಗ್ಗೆ ಬಿಎಂಟಿಸಿಯು ಸಿಬ್ಬಂದಿಗಳಾದ ಭೂತರಾಜು, ಪಾಪಣ್ಣ, ಬಸವರಾಜಪ್ಪ, ಸೌಮ್ಯಾ, ಉಮಾ, ಮಂಜುನಾಥ್ ಹಾಗೂ ಕಿಶೋರ್ ಕುಮಾರ್‌ಗೆ ನೋಟಿಸ್ ಜಾರಿ ಮಾಡಿದ್ದು, ಈ ಅಕ್ರಮದ ಬಗ್ಗೆ ವಿವರಣೆ ಕೊಡಲು ಬಿಎಂಟಿಸಿ ಸೂಚನೆ ನೀಡಿದೆ.