ಸರ್ಕಾರಿ ಬಸ್‌ನಲ್ಲಿ ಸೀಟ್ ಹಿಡಿಯೋ ಟೆಕ್ನಿಕ್ ಹೇಳಿಕೊಟ್ಟ ಶಿವಪುತ್ರ; ಇದು ಎಲ್ಲರಿಂದಲೂ ಸಾಧ್ಯವಿಲ್ಲವೆಂದ ನೆಟ್ಟಿಗರು
ಉತ್ತರ ಕರ್ನಾಟಕದ ಹಾಸ್ಯ ಕಲಾವಿದ ಶಿವಪುತ್ರ, ಸರ್ಕಾರಿ ಬಸ್‌ನಲ್ಲಿ ಮಹಿಳೆಯರ ಮಧ್ಯೆ ಸೀಟ್ ಪಡೆಯುವ ಹೊಸ ಟೆಕ್ನಿಕ್ ಹೇಳಿಕೊಟ್ಟಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಇದು ಎಲ್ಲರಿಂದಲೂ ಸಾಧ್ಯವಿಲ್ಲ ಎಂದು ಕಮೆಂಟ್ ಮಾಡಿದ್ದಾರೆ.
ಬೆಂಗಳೂರು: ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರ ಮಹಿಳಾ ಪ್ರಯಾಕರಿಗೆ ಉಚಿತವಾಗಿ ಪ್ರಯಾಣಿಸುವ ಅವಕಾಶವನ್ನು ಕಲ್ಪಿಸಿದೆ. ಉಚಿತ ಪ್ರಯಾಣ ಆರಂಭವಾದ ದಿನದಿಂದಲೂ ಮಹಿಳಾ ಪ್ರಯಾಣಿಕರ ಸಂಖ್ಯೆ ಏರಿಕೆಯಾಗಿದೆ. ಹಾಗಾಗಿ ಬಸ್‌ನಲ್ಲಿ ಪುರುಷರು ಪ್ರಯಾಣಿಸೋದು ಕಷ್ಟಕರವಾಗಿದೆ. ಹಣ ನೀಡಿ ಟಿಕೆಟ್ ಪಡೆದುಕೊಂಡರೂ ನಮಗೆ ಬಸ್‌ನಲ್ಲಿ ಸೀಟ್ ಸಿಗಲ್ಲ ಎಂದು ಪುರುಷ ಪ್ರಯಾಣಿಕರು ಹೇಳುತ್ತಾರೆ. ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮತ್ತು ಫೋಟೋಗಳು ವೈರಲ್ ಆಗುತ್ತಿರುತ್ತವೆ. ಈ ನಡುವೆ ಭಾನುವಾರದಿಂದ ರಾಜ್ಯ ಸರ್ಕಾರ ಪ್ರಯಾಣ ದರವನ್ನು ಶೇ.15ರಷ್ಟು ಹೆಚ್ಚಳ ಮಾಡಿದೆ. ಬೆಲೆ ಏರಿಕೆಗೆ ಪುರುಷ ಪ್ರಯಾಣಿಕರು ಆಕ್ರೋಶ ಹೊರ ಹಾಕುತ್ತಿದ್ದಾರೆ.
ಉತ್ತರ ಕರ್ನಾಟಕದ ಹಾಸ್ಯ ಕಲಾವಿದರಾಗಿರುವ ಶಿವಪುತ್ರ ಬಸ್‌ನಲ್ಲಿ ಮಹಿಳೆಯರ ಮಧ್ಯೆ ಹೇಗೆ ಸೀಟ್ ಹಿಡಿಯಬೇಕು ಎಂಬ ಟೆಕ್ನಿಕ್ ಹೇಳಿಕೊಟ್ಟಿದ್ದಾರೆ. ಈ ಟೆಕ್ನಿಕ್ ಕಂಡು ಪುರುಷರು, ಇದು ಎಲ್ಲರಿಂದಲೂ ಸಾಧ್ಯವಿಲ್ಲ ಎಂದು ಕಮೆಂಟ್ ಮಾಡಿದ್ದಾರೆ. ಹಾಗೆ ಈ ಟೆಕ್ನಿಕ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಹಾಗಾದ್ರೆ ಉತ್ತರ ಕರ್ನಾಟಕದ ಹಾಸ್ಯ ಕಲಾವಿದ ಹೇಳಿಕೊಟ್ಟ ಟೆಕ್ನಿಕ್ ವಿಡಿಯೋದಲ್ಲಿ ಏನಿದೆ ಎಂಬುದನ್ನು ನೋಡೋಣ ಬನ್ನಿ.
ಈ ವಿಡಿಯೋವನ್ನು ಶಿವಪುತ್ರ ಕಾಮಿಡಿ ಶೋ ಎಂಬ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋ ಅಪ್ಲೋಡ್ ಆದ ಕೆಲವೇ ಗಂಟೆಗಳಲ್ಲಿಯೇ 1 ಲಕ್ಷಕ್ಕೂ ಅಧಿಕ ವ್ಯೂವ್ ಪಡೆದುಕೊಂಡಿದೆ. ಇದುವರೆಗೂ ಈ ವಿಡಿಯೋ 3.47 ಲಕ್ಷ ಬಾರಿ ವೀಕ್ಷಣೆಯಾಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು, ಪರ್ವಾಗಿಲ್ಲ ಅವರು ಹೇಳುವ ಮಾತಲ್ಲಿ ಅರ್ಥಪೂರ್ಣ ಸಂದೇಶ ಇದೆ. ಮೊದಲು ಅದನ್ನ ಅರ್ಥೈಸಿಕೊಳ್ಳಿ. ಇದ್ದಿದ್ದನ್ನು ಇದ್ದಹಾಗೆ ಹೇಳಿದರೆ ಎದ್ದು ಬಂದು ಎದೆಗೆ ಒದ್ರಂತೆ ಹಾಗೆ ಇದೆ ಕೆಲವರ ಕಾಮೆಂಟ್ಸ್ ಅಂತ ಕಮೆಂಟ್ ಮಾಡಿದ್ದಾರೆ.
ವೈರಲ್ ವಿಡಿಯೋದಲ್ಲಿ ಏನಿದೆ?
ಶಿವಪುತ್ರ ಹೆಗಲಿಗೆ ಬ್ಯಾಗ್ ಹಾಕೊಂಡು, ಕೈಯಲ್ಲಿ ಕುರ್ಚಿಯೊಂದು (ಸ್ಟೂಲ್) ಹಿಡಿದುಕೊಂಡು ಬಸ್ ಹತ್ತಲು ಪ್ರಯತ್ನಿಸುತ್ತಿರೋದನ್ನು ಮೊದಲು ಗಮನಿಸಬಹುದು. ನಂತರ ಬಸ್‌ನಲ್ಲಿದ್ದ ಪ್ರಯಾಣಿಕರು ಇಷ್ಟು ಗದ್ದಲದಲ್ಲಿ ಇದನ್ಯಾಕೆ ತಂದಿದ್ದೀಯಾ ಎಂದು ಕೇಳುತ್ತಾರೆ. ಇದಕ್ಕೆ ಬಸ್‌ನಲ್ಲಿ ಗಂಡ್ಮಕ್ಕಳಿಗೆ ಸೀಟ್ ಸಿಗ್ತಿಲ್ಲ. ಅದಕ್ಕಾಗಿ ಮನೆಯಿಂದಲೇ ನಾನು ಸೀಟ್ ತಂದಿದ್ದೇನೆ ಎಂದು ಶಿವಪುತ್ರ ಹೇಳುತ್ತಾರೆ. ಈ ವಿಡಿಯೋ ನೋಡಿದ ಪುರುಷರು ಬಸ್‌ನಲ್ಲಿ ಸೀಟ್ ಬೇಕಾದ್ರೆ ಮನೆಯಿಂದಲೇ ತೆಗೆದುಕೊಂಡು ಹೋಗಿ ಎಂದು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ಬಡವನ ಬೆನ್ನ ಮೇಲೆ ಸರ್ಕಾರದ ಅಂಬಾರಿ, ರಾಜ್ಯದಲ್ಲಿ ಖಾಸಗಿ ಬಸ್‌ಗಿಂತ ಕೆಎಸ್‌ಆರ್‌ಟಿಸಿಯೇ ದುಬಾರಿ!
ಎಷ್ಟು ರೂಪಾಯಿ ಏರಿಕೆ?
ಈ ಮೊದಲು ಒಂದು ಸ್ಟೇಜ್ ಗೆ 5 ರೂಪಾಯಿಯನ್ನು ಬಿಎಂಟಿಸಿ ಚಾರ್ಜ್ ಮಾಡುತ್ತಿತ್ತು. ಇದನ್ನೀಗ 6 ರೂಪಾಯಿಗೆ ಏರಿಕೆ ಮಾಡಲಾಗಿದೆ. 2 ಸ್ಟೇಜ್ ಟಿಕೆಟ್ ದರವನ್ನ 10 ರೂಪಾಯಿಯಿಂದ 12 ರೂಪಾಯಿಗೆ ಏರಿಕೆ ಮಾಡಲಾಗಿದೆ. ಏರ್ಪೋಟ್ ಬಿಎಂಟಿಸಿ ಬಸ್ ಟಿಕೆಟ್ ರೇಟ್ ಲಿಸ್ಟ್ ಕೂಡ ಬಿಡುಗಡೆಯಾಗಿದೆ. ಏರ್ಪೋಟ್ ಗೆ ವಾಯುವಜ್ರ ಎಸಿ ಬಿಎಂಟಿಸಿ ಬಸ್‌ಗಳು ಸಂಚಾರ ಮಾಡುತ್ತವೆ. ಹೀಗಾಗಿ 15% ದರ ಏರಿಕೆಗೆ ಜಿಎಸ್‌ಟಿ ಕೂಡ ಹಾಕಲಾಗಿದೆ.
ಇದನ್ನೂ ಓದಿ: ಹೊಸ ಬಸ್ ಬಂದಾಗ ಉತ್ತರ ಕರ್ನಾಟಕ ಲೆಕ್ಕಕ್ಕಿಲ್ಲ, ಟಿಕೆಟ್ ದರ ಏರಿಕೆ ವೇಳೆ ಇವರು ಮಿಸ್ಸೇ ಇಲ್ಲ!