ಹೊಸ ಬಸ್‌ ಬಂದಾಗ ಉತ್ತರ ಕರ್ನಾಟಕ ಲೆಕ್ಕಕ್ಕಿಲ್ಲ, ಟಿಕೆಟ್‌ ದರ ಏರಿಕೆ ವೇಳೆ ಇವರು ಮಿಸ್ಸೇ ಇಲ್ಲ!

ಕೆಎಸ್‌ಆರ್‌ಟಿಸಿ ಹೊಸ ಬಸ್‌ಗಳನ್ನು ದಕ್ಷಿಣ ಕರ್ನಾಟಕಕ್ಕೆ ನೀಡಿದ್ದು, ಉತ್ತರ ಕರ್ನಾಟಕಕ್ಕೆ ಒಂದನ್ನೂ ನೀಡಿಲ್ಲ. ಟಿಕೆಟ್ ದರ ಶೇ.15 ರಷ್ಟು ಏರಿಕೆಯಾಗಿದ್ದು, ಬೀದರ್ ಮತ್ತು ಕಲಬುರಗಿ ಜನರಿಗೆ ಹೆಚ್ಚಿನ ಹೊರೆಯಾಗಿದೆ.

KSRTC revised fare list released after uproar against Ticket Price Hike san

ಬೆಂಗಳೂರು (ಜ.4): ಇತ್ತೀಚೆಗೆ ಕೆಎಸ್‌ಆರ್‌ಟಿಸಿ ಆಯೋಜನೆ ಮಾಡಿದ ಕಾರ್ಯಕ್ರಮವೊಂದರಲ್ಲಿ 20 ನೂತನ ಅಂಬಾರಿ ಉತ್ಸವ ವೋಲ್ವೋ ಬಸ್‌ಗಳನ್ನು ಸರ್ಕಾರ ಅನಾವರಣ ಮಾಡಿತ್ತು. ಕೇರಳ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಿಗೆ ಸಂಪರ್ಕಿಸುವ ರೂಟ್‌ನೊಂದಿಗೆ ಕುಂದಾಪುರ, ಮಂಗಳೂರಿಗೂ ಹೊಸ ಬಸ್‌ ಓಡಾಡಲಿದೆ ಎಂದು ತಿಳಿಸಿತ್ತು. ಆದರೆ, ಇದರಲ್ಲಿ ಒಂದೇ ಒಂದು ಬಸ್‌ಅನ್ನು ಉತ್ತರ ಕರ್ನಾಟಕದ ಭಾಗಕ್ಕೆ ಕೆಎಸ್‌ಆರ್‌ಟಿಸಿ ನೀಡಿರಲಿಲ್ಲ. ಹೊಸ ಬಸ್‌ ಬಂದಾಗ ಉತ್ತರ ಕರ್ನಾಟಕ ಮಂದಿ ಲೆಕ್ಕಕ್ಕೆ ಇರೋದಿಲ್ಲ ಎನ್ನುವುದು ಅಲ್ಲಿನ ಸ್ಥಳೀಯ ಸರ್ವಪಕ್ಷದ ಶಾಸಕರುಗಳೂ ಮಾತನಾಡಿಕೊಳ್ಳುತ್ತಾರೆ. ಅಚ್ಚರಿ ಏನೆಂದರೆ, ಹೊಸ ಬಸ್‌ ಬಂದಾಗ ಉತ್ತರ ಕರ್ನಾಟಕ ಲೆಕ್ಕಕ್ಕೇ ಇರದೇ ಇದ್ದರೂ, ಟಿಕೆಟ್‌ ದರ ಏರಿಕೆ ವೇಳೆ ಇವರು ಮಿಸ್ಸೇ ಆಗೋದಿಲ್ಲ. 

ಸಾರ್ವಜನಿಕರ ಭಾರೀ ವಿರೋಧದ ನಡುವೆಯೂ ರಾಜ್ಯ ಸರ್ಕಾರ ಸಾರಿಗೆ ನಿಗಮಗಳ ಟಿಕೆಟ್‌ ದರದಲ್ಲಿ ಶೇ. 15ರಷ್ಟು ಏರಿಕೆ ಮಾಡಿದ್ದು, ನಾಳೆಯಿಂದ ಅದು ಜಾರಿ ಕೂಡ ಆಗಲಿದೆ. ಇದರ ನಡುವೆ ಕೆಎಸ್‌ಆರ್‌ಟಿಸಿ ಬೆಂಗಳೂರಿನಿಂದ ಜಿಲ್ಲಾ ಕೇಂದ್ರಗಳಿಗೆ ವೇಗದೂತ ಸಾರಿಗೆ ಪ್ರಯಾಣ ದರಗಳ ಪರಿಷ್ಕೃತ ಪಟ್ಟಿಯನ್ನು ಪ್ರಕಟ ಮಾಡಿದೆ. ಇದರ ಪ್ರಕಾರ ಕೊಪ್ಪಳ ಹಾಗೂ ಬೀದರ್‌ ಜಿಲ್ಲೆಗೆ ಮಾತ್ರ ಶೇ. 14ರಷ್ಟು ಏರಿಕೆ ಮಾಡಿದ್ದರೆ, ಉಳಿದೆಲ್ಲಾ ಜಿಲ್ಲೆಗಳ ದರದಲ್ಲಿ ಶೇ. 15ರಷ್ಟು ದರ ಏರಿಕೆ ಮಾಡಿದೆ. ಸರ್ಕಾರದ ಆದೇಶದಂತೆ ಟಿಕೆಟ್ ದರ ಏರಿಸಿ ಪಟ್ಟಿ ಬಿಡುಗಡೆ ಮಾಡಲಾಗಿದೆ ಇಂದು‌ ಮಧ್ಯರಾತ್ರಿ 12 ಗಂಟೆಯಿಂದಲೇ ನೂತರ ದರ ಜಾರಿಯಾಗಲಿದೆ.

ಇದರ ಅನ್ವಯ ನೋಡೋದಾದರೆ, ಇಡೀ ರಾಜ್ಯದಲ್ಲಿ ಇದರ ಹೊರೆ ಹೆಚ್ಚಾಗಿ ಬೀಳೋದು ಬೀದರ್‌ ಜಿಲ್ಲೆಗೆ. ಇಲ್ಲಿಯ ಜನರು ಇನ್ನು ಬೆಂಗಳೂರಿಗೆ ಬರಬೇಕಾದಲ್ಲಿ 115 ರೂಪಾಯಿ ಹೆಚ್ಚಿಗೆ ನೀಡಬೇಕು. ನಂತರದ ಸ್ಥಾನದಲ್ಲಿರುವುದು ಕಲಬುರಗಿ. ಈ ಜಿಲ್ಲೆಯ ಜನರು 99 ರೂಪಾಯಿ ಹೆಚ್ಚಿನ ಹಣ ನೀಡಬೇಕಿದೆ. ಇನ್ನು ರಾಮನಗರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಜನರು ಅತ್ಯಂತ ಕನಿಷ್ಠ ಎಂದರೆ 7 ಹಾಗೂ 9 ರೂಪಾಯಿ ಹೆಚ್ಚಿನ ಹಣ ನೀಡಬೇಕಾಗುತ್ತದೆ. ಒಟ್ಟಾರೆ ನೋಡೋದರೆ, ಬೆಂಗಳೂರಿನಿಂದ ಅತೀದೂರದಲ್ಲಿರುವ ಉತ್ತರ ಕರ್ನಾಟಕದ ಮಂದಿ ರಾಜಧಾನಿಗೆ ಬರಲು ಹೆಚ್ಚಿನ ಪ್ರಮಾಣದ ಹಣ ಖರ್ಚು ಮಾಡಬೇಕಿದ್ದರೆ, ದಕ್ಷಿಣ ಕರ್ನಾಟಕದ ಮಂದಿಗೆ ಬೆಲೆ ಏರಿಕೆ ಅಷ್ಟಾಗಿ ಬಾಧಿಸೋದಿಲ್ಲ


ಕೆಎಸ್ಆರ್ಟಿಸಿಯಿಂದ ಹಳೆಯ ದರ ಮತ್ತು ಪರಿಷ್ಕೃತ ದರದ ಪಟ್ಟಿ ಬಿಡುಗಡೆ

ಸಾರಿಗೆ ಬಸ್ಸುಗಳ ದರ ಪಟ್ಟಿ ಬಿಡುಗಡೆ

1.ಬೆಂಗಳೂರು ಟು ಬೀದರ್‌ ಸದ್ಯದ ದರ- 775 ನಂತರದ ದರ-936 (115 ರೂಪಾಯಿ ಏರಿಕೆ)

2.ಬೆಂಗಳೂರು ಟು ಕಲಬುರಗಿ ಸದ್ಯದ ದರ- 706 ನಂತರದ ದರ - 805 ( 99 ರೂಪಾಯಿ ಏರಿಕೆ)

3.ಬೆಂಗಳೂರು ಟು ಹಾವೇರಿ ಸದ್ಯ- 360 ನಂತರ - 474 (54 ರೂಪಾಯಿ ಏರಿಕೆ  )

4.ಬೆಂಗಳೂರು ಟು ಶಿವಮೊಗ್ಗ ಸದ್ಯದ ದರ- 288 ಏರಿಕೆಯ ನಂತರ 356 (44 ರೂಪಾಯಿ ಏರಿಕೆ )

5.ಬೆಂಗಳೂರು ಟು ಮಂಗಳೂರು ಸದ್ಯದ ದರ - 367 ಏರಿಕೆಯ ನಂತರ - 454 ( 56 ರೂಪಾಯಿ ಏರಿಕೆ  )

6.ಬೆಂಗಳೂರು ಟು ಉಡುಪಿ ಸದ್ಯದ ದರ- 426 ಏರಿಕೆಯ ನಂತರ 516 ( 64 ರೂಪಾಯಿ ಏರಿಕೆ )

7.ಬೆಂಗಳೂರು ಟು ಬೆಳಗಾವಿ ಸದ್ಯದ ದರ - 530 ಹೆಚ್ಚಳದ ನಂತರ - 697 ( 80 ರೂಪಾಯಿ ಏರಿಕೆ )

8.ಬೆಂಗಳೂರು ಟು ಹುಬ್ಬಳ್ಳಿ ಸದ್ಯದ- 426 ರುಪಾಯಿ ಏರಿಕೆಯ ನಂತರ 563 (64 ರೂಪಾಯಿ ಏರಿಕೆ )

9.ಬೆಂಗಳೂರು ಟು ರಾಯಚೂರು ಸದ್ಯದ ದರ- 515 ರುಪಾಯಿ ನಂತರ- 638 ( 78 ರೂಪಾಯಿ ಏರಿಕೆ  )

10.ಬೆಂಗಳೂರು ಟು ಬಳ್ಳಾರಿ ಸದ್ಯದ ದರ 328 ರುಪಾಯಿ ‌ಹೆಚ್ಚಳದ ನಂತರ 424 ( 50 ರೂಪಾಯಿ ಏರಿಕೆ  )

11.ಬೆಂಗಳೂರು ಟು ಯಾದಗಿರಿ ಸದ್ಯದ ದರ- 616 ಹೆಚ್ಚಳದ ನಂತರ- 755 ( 93 ರೂಪಾಯಿ ಏರಿಕೆ  )

ಬಡವನ ಬೆನ್ನ ಮೇಲೆ ಸರ್ಕಾರದ ಅಂಬಾರಿ, ರಾಜ್ಯದಲ್ಲಿ ಖಾಸಗಿ ಬಸ್‌ಗಿಂತ ಕೆಎಸ್‌ಆರ್‌ಟಿಸಿಯೇ ದುಬಾರಿ!

ಜ.5ರಿಂದ ಹೊಸ ದರ ಅನ್ವಯ; ಮೈಸೂರು, ಬಳ್ಳಾರಿ, ಶಿವಮೊಗ್ಗಕ್ಕೆ ಪರಿಷ್ಕೃತ ದರ ಇಲ್ಲಿದೆ ನೋಡಿ!

ಬೆಂಗಳೂರಿನಿಂದ ಯಾವ ಜಿಲ್ಲೆಗೆ ಎಷ್ಟು ದರ.. ಇಲ್ಲಿದೆ ಫುಲ್‌ ಡೀಟೇಲ್‌...

KSRTC revised fare list released after uproar against Ticket Price Hike san


 

Latest Videos
Follow Us:
Download App:
  • android
  • ios