ಬೆಂಗಳೂರು(ಮೇ.31): ಜನರ ಹಿತದೃಷ್ಟಿಯಿಂದ ಇಂದು(ಭಾನುವಾರ) ಭಾನುವಾರದ ಕರ್ಫ್ಯೂವನ್ನ ರಾಜ್ಯ ಸರಕಾರ ರದ್ದು ಪಡಿಸಿದೆ. ಎಂದಿನಂತೆ ಇಂದೂ ಕೂಡ ದೈನಂದಿನ ಚಟುವಟಿಕೆ ಆರಂಭವಾಗಿದೆ. ಕಳೆದ ಭಾನುವಾರ ಕರ್ಫ್ಯೂವನ್ನು ಬಹಳ ಕಟ್ಟುನಿಟ್ಟಾಗಿ ಪಾಲನೆ ಮಾಡಲಾಗಿತ್ತು. ಶನಿವಾರ ಸಂಜೆ 7 ಗಂಟೆಯಿಂದ ಸೋಮವಾರ ಬೆಳಿಗ್ಗೆ 7 ರವರೆಗೆ ಕರರ್ಫ್ಯೂ ಜಾರಿಯಲ್ಲಿತ್ತು. ಸತತ 36 ಗಂಟೆ ಲಾಕ್‌ಡೌನ್‌ ಜಾರಿಯಲ್ಲಿತ್ತು. 

"

'ತೆಗಳುವವರೆಲ್ಲಾ ಮೋದಿಗೆ ರಾಜಮಾರ್ಗ ನಿರ್ಮಿಸಿ ಕೊಟ್ಟಿದ್ರು'..! ಪ್ರಧಾನಿ ಬಗ್ಗೆ ವಾಗ್ಮಿ ಸೂಲಿಬೆಲೆ ಮಾತು

ಆದರೆ, ಇಂದು ರಾಜ್ಯಾದ್ಯಂತ ಜನ ಸಂಚಾರ ಎಂದಿನಂತೆ ಇದೆ. ಮದ್ಯ, ಮಾಂಸ, ಪಾರ್ಕ್‌ ಓಪನ್‌ ಸೇರಿದಂತೆ ವ್ಯಾಪಾರ ವಹಿವಾಟು ಆರಂಭವಾಗಲಿದೆ. ಅಂತರ್ ಜಿಲ್ಲೆಗಳ ವಾಹನ ಸಂಚಾರ, ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್‌ ಸಂಚಾರ ಕೂಡ ಇರಲಿದೆ. ಹೀಗಾಗಿ ಜನರು ಸಾಮಾಜಿಕ ಅಂತರ ಕಾಯ್ದುಕೊಂಡು ತಮ್ಮ ಕೆಲಸ ಕಾರ್ಯಗಳನ್ನ ಮಾಡಬಹುದಾಗಿದೆ. 

ಪ್ರಯಾಣಿಕರಿಲ್ಲದೆ ಬಿಕೋ ಎನ್ನುತ್ತಿದೆ ಮೆಜೆಸ್ಟಿಕ್‌ 

"

ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಿಎಂಟಿಸಿ ಬಸ್‌ಗಳಲ್ಲ ಕಾರ್ಯಾಚರಣೆಗೆ ಇಳಿಸಲಾಗಿದೆ. ಅದರೆ, ಬಸ್‌ನಲ್ಲಿ ಪ್ರಯಾಣ ಮಾಡಲು ಜನರು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಮೆಜೆಸ್ಟಿಕ್‌ ಪ್ರಯಾಣಿಕರಿಲ್ಲದೆ ಬಿಕೋ ಎನ್ನುತ್ತಿದೆ. ಬಸ್‌ ಸಂಚಾರವಿದ್ದರೂ ಜನರು ಮಾತ್ರ ಮನೆ ಬಿಟ್ಟು ಹೊರಗಡೆ ಬರಲು ಮುಂದಾಗುತ್ತಿಲ್ಲ. ಹೀಗಾಗಿ ಬಸ್‌ ನಿಲ್ದಾಣದಲ್ಲಿ ಬೆರಳಿಣಿಕೆಯಷ್ಟು ಪ್ರಯಾಣಿಕರಿದ್ದಾರೆ. 

ವಿಜಯಪುರದಲ್ಲಿ ಎಂದಿನಂತೆ ಜನಜೀವನ 

"

ನಗರದಲ್ಲಿ ಇಂದು ಬೆಳಿಗ್ಗೆಯಿಂದ ಎಂದಿನಂತೆ ಜನ ಜೀವನ ನಡೆಯುತ್ತಿದೆ. ಬೇಕರಿ, ಟೀ ಸ್ಟಾಲ್‌ಗಳು ಓಪನ್‌ ಆಗಿವೆ. ಬಸ್‌ ಸಂಚಾರ, ಆಟೋ ಸೇರಿದಂತೆ ವಾಹನಗಳು ಸಂಚರಿಸುತ್ತಿವೆ. ಆದರೆ, ಬಸ್‌ ನಿಲ್ದಾಣ ಮಾತ್ರ ಪ್ರಯಾಣಿಕರಿಲ್ಲದೆ ಬಿಕೋ ಎನ್ನುತ್ತಿದೆ. ಅಂಗಡಿ ಮುಂಗಟ್ಟುಗಳು ಅರಂಭವಾಗಿವೆ.

ದಾವಣೆಗೆರೆ ಜಿಲ್ಲೆಯಲ್ಲಿ ಎಂದಿನಂತೆ ಜನ ಸಂಚಾರ 

"

ಕೊರೋನಾ ಲಸಿಕೆ, ಬಯೋಕಾನ್‌ ಮುಖ್ಯಸ್ಥೆ ಕಿರಣ್‌ ಶಾ ಮಹತ್ವದ ಹೇಳಿಕೆ!

ಕಳೆದ ಭಾನುವಾರದ ಕರ್ಫ್ಯೂಗೆ ದಾವಣೆಗೆರೆ ಜಿಲ್ಲೆಯ ಜನರಿಂದ ಭಾರೀ ಬೆಂಬಲ ವ್ಯಕ್ತವಾಗಿತ್ತು. ಆದರೆ, ಇಂದು ಸಂಡೆ ಕರ್ಫ್ಯೂ ಅನ್ನು ರಾಜ್ಯ ಸರಕಾರ ರದ್ದು ಪಡಿಸಿದೆ. ಹೀಗಾಗಿ ಜಿಲ್ಲೆಯಲ್ಲಿ ಜನಜೀವನ  ಸಾಮಾನ್ಯವಾಗಿದೆ. ಎಲ್ಲ ತರಹದ ಅಂಗಡಿ ಮುಂಗಟ್ಟುಗಳು ಓಪನ್‌ ಆಗಿವೆ. 

ತುಮಕೂರಲ್ಲಿ ವ್ಯಾಪಾರ ವಹಿವಾಟು ಅರಂಭ 

"

ಇಂದು ಬೆಳಿಗ್ಗೆಯಿಂದ ನಗರದ ಹಾಗೂ ಜಿಲ್ಲಾದ್ಯಂತ ವ್ಯಾಪಾರ ವಹಿವಾಟು ಆರಂಭವಾಗಿದೆ. ಭಾನುವಾರ ಆಗಿದ್ದರಿಂದ ಜನರು ಮಾರ್ಕೆಟ್‌ನತ್ತ ಮುಖಮಾಡಿದ್ದಾರೆ. ಎಲ್ಲರೂ ಮಾಸ್ಕ್‌ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯಾಪರ ಮಾಡುವುದರಲ್ಲಿ ಮಗ್ನರಾಗಿದ್ದಾರೆ. ವಾಹನಗಳ ಸಂಚಾರ ಕೂಡ ಎಂದಿನಂತೆ ಇದೆ. 

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಬಸ್‌ ಸಂಚಾರ ಆರಂಭ 

"

ಹುಬ್ಬಳ್ಳಿಯಲ್ಲಿಯೂ ಕೂಡ ಜನ ಜೀವನ ಎಂದಿನಂತೆ ನಡೆಯುತ್ತಿದೆ. ಬೆಳಿಗ್ಗೆಯಿಂದ ಎಲ್ಲರ ತರಹದ ಅಂಗಡಿ ಮುಂಗಟ್ಟುಗಳು ತೆರೆದಿವೆ. ಹೀಗಾಗಿ ಜನರು ಮಾರುಕಟ್ಟೆಯತ್ತ ಮುಖಮಾಡುತ್ತಿದ್ದಾರೆ. ಇನ್ನು ಬಸ್‌ ಸಂಚಾರ ಕೂಡ ಆರಂಭವಾಗಿದೆ.ಆದರೆ, ಬಸ್‌ ನಿಲ್ದಾಣದ ಪ್ರಯಾಣಿಕರಿಲ್ಲದೆ ಬಿಕೋ ಎನ್ನುತ್ತಿದೆ. 

ಹಾವೇರಿಯಲ್ಲಿ ಬಸ್‌ ಸಂಚಾರ ಆರಂಭ 

"

ಬೆಳಿಗ್ಗೆಯಿಂದ ಎಂದಿನಂತೆ ಇಂದೂ ಕೂಡ ಬಸ್‌ ಸಂಚಾರ ಆರಂಭವಾಗಿದೆ. ಪ್ರಯಾಣಿಕರು ಮಾತ್ರ ಬಸ್‌ ನಿಲ್ದಾಣದತ್ತ ಅಗಮಿಸುತ್ತಿಲ್ಲ.ಜನರು ತಮ್ಮ ದೈನಂದಿನ ಕೆಲಸಗಳಲ್ಲಿ ನಿರರತಾಗಿದ್ದಾರೆ. ಜಿಲ್ಲಾದ್ಯಂತ ವಾಹನ ಸಂಚಾರ ಸೇರಿದಂತೆ ಎಲ್ಲರ ತರಹದ ಚಟುವಟಿಕೆಗೆಳು ಆರಂಭವಾಗಿವೆ.

ಚಾಲುಕ್ಯ ಸರ್ಕಲ್‌ನಲ್ಲಿ ವಾಹನ ಸಂಚಾರ ವಿರಳ

" 

ಬೆಂಗಳೂರಿನ ಚಾಲುಕ್ಯ ಸರ್ಕಲ್‌ನಲ್ಲಿ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ವಾಹನ ಸಂಚಾರ ವಿರಳವಾಗಿದೆ. ಕಳೆದ ವಾರ ನಗರದ ಕಂಪ್ಲೀಟ್‌ ಬಂದ್ ಆಗಿತ್ತು. ಅದರೆ, ಇಂದು ಕರ್ಫ್ಯೂ ಇಲ್ಲದಿದ್ದರೂ ಕೂಡ ಜನರು ಮನೆ ಬಿಟ್ಟು ಹೊರಗಡೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಇಂದು ನಗರದಲ್ಲಿ ಟ್ರಾಫಿಕ್‌ ಸಮಸ್ಯೆ ಇಲ್ಲದಂತಾಗಿದೆ. 

ಮಾಮೂಲಿ ಸ್ಥಿತಿಯಲ್ಲಿ ಪ್ಯಾಲೇಸ್‌ ಗುಟ್ಟಳ್ಳಿ

"

ಇಂದು ಬೆಳಿಗ್ಗೆಯಿಂದ ಪ್ಯಾಲೇಸ್‌ ಗುಟ್ಟಳ್ಳಿ ಪ್ರದೇಶದಲ್ಲಿ ಜನರು ಅಗತ್ಯ ವಸ್ತುಗಳನ್ನ ಖರೀದಿಸುತ್ತಿದ್ದಾರೆ. ಇದರ ಮಧ್ಯೆ ಕೆಲವರು ಕೆಲಸವಿಲ್ಲದಿದ್ರೂ ಹೊರಗಡೆ ಓಡಾಡುತ್ತಿದ್ದಾರೆ. ಕೆಲವರಂತೂ ಮಾಸ್ಕ್‌ ಧರಿಸದೆ ಓಡಾಡುತ್ತಿದ್ದಾರೆ. ಇದು ಕೆಲವರಿಗೆ ಭಯವನ್ನುಂಟುಮಾಡುತ್ತಿದೆ. ಸಾಮಾಜಿಕ ಅಂತರಕ್ಕೂ ಕೂಡ ಜನರು ಕ್ಯಾರೆ ಎನ್ನುತ್ತಿಲ್ಲ.