Asianet Suvarna News Asianet Suvarna News

ಪಿಎಸ್‌ಐ ಹಗರಣ: ಆರ್‌ಡಿ ಪಾಟೀಲ್‌ ಖಾತೆಯಲ್ಲಿ 76 ಲಕ್ಷ ರು. ವಹಿವಾಟೇ ಆಗಿಲ್ಲ..!

ಹಗರಣದಿಂದ ತಮ್ಮನ್ನು ಬಚಾವ್‌ ಮಾಡಲು ಸಿಐಡಿ ಅಧಿಕಾರಿ ಶಂಕರಗೌಡರಿಗೆ 76 ಲಕ್ಷ ರು.ಗಳನ್ನು ತನ್ನ ಅಳಿಯ ಶ್ರೀಕಾಂತನ ಮೂಲಕ ನೀಡಿದ್ದೇನೆ. ಬ್ಯಾಂಕ್‌ ಆಫ್‌ ಬರೋಡಾ ಮೂಲಕ ಈ ಹಣ ಡ್ರಾ ಮಾಡಲಾಗಿದೆ ಎಂದು ಆರ್‌ಡಿ ಪಾಟೀಲ್‌ ಆಡಿಯೋದಲ್ಲಿ ಹೇಳಿಕೆ ನೀಡಿ ಅದನ್ನು ಸೋಷಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡಿದ್ದ.

No Transaction of 76 Lakhs in the Account of the Accused of PSI Recruitment Scam RD Patil grg
Author
First Published Jan 28, 2023, 12:08 PM IST

ಕಲಬುರಗಿ(ಜ.28):  ಪಿಎಸ್‌ಐ ಹಗರಣದ ಕಿಂಗ್‌ಪಿನ್‌ ಆರ್‌ಡಿ ಪಾಟೀಲ್‌, ಆತನ ಅಳಿಯ ಶೀಕಾಂತ ಊಡಗಿಯವರ ಬ್ಯಾಂಕ್‌ ಖಾತೆಗಳಲ್ಲಿ 2022ರ ಜು.1 ರಿಂದ ಡಿಸೆಂಬರ್‌ 31ರ ವರೆಗಿನ 6 ತಿಂಗಳ ಅವಧಿಯಲ್ಲಿ ಯಾವುದೇ ಹಣದ ವಹಿವಾಟು ನಡೆದಿಲ್ಲ ಎಂದು ಕಲಬುರಗಿ ಸೂಪರ್‌ ಮಾರ್ಕೆಟ್‌ ಮುಖ್ಯರಸ್ತೆಯಲ್ಲಿರುವ ಬ್ಯಾಂಕ್‌ ಆಫ್‌ ಬರೋಡಾ ಮುಖ್ಯಶಾಖೆಯ ಮ್ಯಾನೇಜರ್‌, ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.

ಹಗರಣದಿಂದ ತಮ್ಮನ್ನು ಬಚಾವ್‌ ಮಾಡಲು ಸಿಐಡಿ ಅಧಿಕಾರಿ ಶಂಕರಗೌಡರಿಗೆ 76 ಲಕ್ಷ ರು.ಗಳನ್ನು ತನ್ನ ಅಳಿಯ ಶ್ರೀಕಾಂತನ ಮೂಲಕ ನೀಡಿದ್ದೇನೆ. ಬ್ಯಾಂಕ್‌ ಆಫ್‌ ಬರೋಡಾ ಮೂಲಕ ಈ ಹಣ ಡ್ರಾ ಮಾಡಲಾಗಿದೆ ಎಂದು ಆರ್‌ಡಿ ಪಾಟೀಲ್‌ ಆಡಿಯೋದಲ್ಲಿ ಹೇಳಿಕೆ ನೀಡಿ ಅದನ್ನು ಸೋಷಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡಿದ್ದ.

PSI Recruitment Scam: ಎಸ್‌ಐ ಕೇಸ್‌ ವಿಚಾರಣೆಯಿಂದ ಸಿಜೆ ಪೀಠ ಹಿಂದಕ್ಕೆ

ಈ ಹಿನ್ನೆಲೆಯಲ್ಲಿ ಸಿಐಡಿ ಡಿವೈಎಸ್ಪಿ ಶಂಕರಗೌಡ ಪಾಟೀಲರು, ಬ್ಯಾಂಕ್‌ ಆಫ್‌ ಬರೋಡಾಕ್ಕೆ ಪತ್ರ ಬರೆದು, ಆರ್‌ಡಿಪಿ ಹಾಗೂ ಆತನ ಅಳಿಯ ಶ್ರೀಕಾಂತನ ಖಾತೆಗಳ ಹಣಕಾಸು ವಹಿವಾಟಿನ ಮಾಹಿತಿ ಕೋರಿದ್ದರು. ಈ ಕೋರಿಕೆ ಹಿನ್ನೆಲೆಯಲ್ಲಿ ಬ್ಯಾಂಕ್‌ ಆಫ್‌ ಬರೋಡಾದ ಮ್ಯಾನೇಜರ್‌, ಸಿಐಡಿ ಕಚೇರಿಗೆ ಪತ್ರ ಬರೆದಿದ್ದು, ಬ್ಯಾಂಕ್‌ ಆಫ್‌ ಬರೋಡಾದಲ್ಲಿ ರುದ್ರಗೌಡ ಪಾಟೀಲ್‌ ಹೆಸರಲ್ಲಿ 2 ಹಾಗೂ ಅವರ ಅಳಿಯ ಶ್ರೀಕಾಂತ ಸಿದ್ದರಾಮ ಊಡಗಿ ಹೆಸರಲ್ಲಿ ಎರಡು...ಹೀಗೆ ನಾಲ್ಕು ಬ್ಯಾಂಕ್‌ ಖಾತೆಗಳಿವೆ. 2022ರ ಮೇ ತಿಂಗಳ 19 ರಿಂದಲೇ ಸಿಐಡಿ ಕೋರಿಕೆ ಮೇರೆಗೆ ಈ ಖಾತೆಗಳು ಫ್ರೀಜ್‌ ಆಗಿವೆ. ಹೀಗಾಗಿ ಈ ಖಾತೆಗಳಿಂದ ಹಣಕಾಸಿನ ವಹಿವಾಟು ನಡೆದಿಲ್ಲ ಎಂದು ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.

Follow Us:
Download App:
  • android
  • ios