*  ಫೆ.20ರ ಬಳಿಕ ರಾಜ್ಯದಲ್ಲಿ ಬೇಸಿಗೆ ಕಾಲ ಶುರು*  ವಾಡಿಕೆಯ ತಾಪಮಾನ. ಅತಿರೇಕದ ಉಷ್ಣತೆ ಇಲ್ಲ: ತಜ್ಞರು*  ರಾಜ್ಯಾದ್ಯಂತ ಒಣ ಹವೆ ಮುಂದುವರಿಕೆ 

ಬೆಂಗಳೂರು(ಜ.30): ರಾಜ್ಯದೆಲ್ಲೆಡೆ(Karnataka) ಸದ್ಯ ಚಳಿಯ(Cold) ವಾತಾವರಣವಿದ್ದರೂ ನಿಧಾನವಾಗಿ ಉಷ್ಣತೆ ಏರುತ್ತಿದೆ. ಫೆ. 20ರ ಬಳಿಕ ಬೇಸಿಗೆ ಕಾಲ(Summer Season) ಆರಂಭವಾಗಲಿದೆ. ಈ ಬಾರಿ ಬೇಸಿಗೆಯಲ್ಲಿ ವಾಡಿಕೆಯ ತಾಪಮಾನ(Temperature) ಇರಲಿದೆ. ಆದರೆ, ತೀರಾ ಉಷ್ಣಾಂಶ ಹೆಚ್ಚಾಗುವಂತಹ ಅತಿರೇಕದ ವಾತಾವರಣ ಉಷ್ಣತೆ ದಾಖಲಾಗುವ ಮುನ್ಸೂಚನೆ ಇಲ್ಲ ಎಂದು ಹವಾಮಾನ ಇಲಾಖೆಯ(Department of Meteorology) ಅಧಿಕಾರಿಗಳು ಹೇಳುತ್ತಾರೆ.

ಉತ್ತರ ಒಳನಾಡಿನಲ್ಲಿ ಈಗಲೂ ಬೆಳಗ್ಗಿನ ಜಾವ ತೀಕ್ಷ್ಣ ಚಳಿಯಿದ್ದರೂ ದಿನದ ಉಷ್ಣತೆಯಲ್ಲಿ ಏರಿಕೆ ಕಂಡು ಬಂದಿದೆ. ಕರಾವಳಿಯಲ್ಲಿಯೂ ಬೆಳಗ್ಗಿನ ಜಾವ ಚಳಿಯಿದ್ದು ದಿನದ ಉಷ್ಣತೆ ಸಾಧಾರಣ ಮಟ್ಟದಲ್ಲಿದೆ. ಇತ್ತ ದಕ್ಷಿಣ ಒಳನಾಡಿನಲ್ಲಿ ತುಸು ಬೆಚ್ಚಗಿನ ವಾತಾವರಣ ಇದ್ದು ಮೋಡ ಕವಿದ ವಾತಾವರಣವಿದೆ.

Jammu Kashmirದಲ್ಲಿ ಹಿಂದೆಂದೂ ಇಲ್ಲದಷ್ಟು ಚಳಿ ಚಳಿ.. ತಾಪಮಾನ ಎಷ್ಟು ಗೊತ್ತಾ?

ಹವಾಮಾನ ಇಲಾಖೆಯ ಮಾಹಿತಿಯ ಪ್ರಕಾರ ಜನವರಿ 20 ರಿಂದ ಜ. 26ರ ಅವಧಿಯಲ್ಲಿ ಉತ್ತರ ಕನ್ನಡ(Uttara Kannada) ಜಿಲ್ಲೆಯನ್ನು ಹೊರತು ಪಡಿಸಿ ಉಳಿದೆಡೆ ಮಳೆ(Rain) ಆಗಿಲ್ಲ. ಈ ಅವಧಿಯಲ್ಲಿ ರಾಜ್ಯದ ಹವಾಮಾನದ ಮೇಲೆ ಪ್ರಭಾವ ಬೀರುವ ಪರಿಸರದಲ್ಲಿ ಟ್ರಫ್‌, ಮೇಲ್ಮೈ ಸುಳಿಗಾಳಿಗಳು ಸೃಷ್ಟಿಯಾದರೂ ಮಳೆ ಸುರಿದಿಲ್ಲ. ತನ್ಮೂಲಕ ರಾಜ್ಯಾದ್ಯಂತ ಒಣ ಹವೆ ಮುಂದುವರಿದಿದೆ.

ಬೆಳಗಾವಿಯಲ್ಲಿ(Belagavi) ಜ.25ಕ್ಕೆ ಉಷ್ಣತೆ 9.1 ಡಿಗ್ರಿಗೆ ಕುಸಿದಿತ್ತು. ಆದರೆ ಜ.26ಕ್ಕೆ ರಾಜ್ಯದ ಕನಿಷ್ಠ ಉಷ್ಣಾಂಶ 14.2 ಡಿಗ್ರಿ ಸೆಲ್ಸಿಯಸ್‌ ಬೀದರ್‌ನಲ್ಲಿ(Bidar) ದಾಖಲಾಗಿದೆ. ಒಟ್ಟಾರೆಯಾಗಿ ರಾಜ್ಯದ ಕನಿಷ್ಠ ಮತ್ತು ಗರಿಷ್ಠ ತಾಪಮಾನ ಏರುತ್ತಿದೆ. ವಾರದ ಹಿಂದೆ ಕಡಿಮೆ ಉಷ್ಣತೆ ದಾಖಲಾಗುತ್ತಿದ್ದ ಜಿಲ್ಲೆಗಳಲ್ಲಿ ಈಗ ಉಷ್ಣತೆ 30 ಡಿಗ್ರಿ ಸೆಲ್ಸಿಯಸ್‌ ದಾಟುತ್ತಿದೆ. ರಾಜ್ಯದ ಶೇ. 96 ಭೂ-ಭಾಗದಲ್ಲಿ ದಿನದ ಗರಿಷ್ಠ ಉಷ್ಣತೆ 28 ಡಿಗ್ರಿಯಿಂದ 32 ಡಿಗ್ರಿ ಸೆಲ್ಸಿಯಸ್‌ ತನಕ ದಾಖಲಾಗಿದೆ. ಹಾಸನ, ಬಳ್ಳಾರಿ, ದಾವಣಗೆರೆ, ಮೈಸೂರು, ಕಲಬುರಗಿ, ಉತ್ತರ ಕನ್ನಡ, ಚಿಕ್ಕಮಗಳೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 32 ಡಿಗ್ರಿಯಿಂದ 34 ಡಿಗ್ರಿ ಸೆಲ್ಸಿಯಸ್‌ ಮಧ್ಯೆ ದಾಖಲಾಗಿದೆ.

Climate Change Karnataka: ರಾಜ್ಯದಲ್ಲಿ ಇನ್ನು 30 ವರ್ಷ ನೆರೆ, ಸೆಖೆಯ ಅಬ್ಬರ: ಕಾದಿದೆ ಅಪಾಯ!

ರಾಜ್ಯದ ಮೇಲೆ ಚಳಿಗಾಲದ(Winter) ಅವಧಿಯಲ್ಲಿ ಉತ್ತರ ಭಾರತದ(North India) ಕಡೆಯಿಂದ ಬೀಸುವ ಶೀತ ಮಾರುತದ ಪ್ರಭಾವ ಹೆಚ್ಚಿರುತ್ತದೆ. ಆದರೆ ಈ ಬಾರಿ ಪೂರ್ವ ಮತ್ತು ಆಗ್ನೇಯ ಭಾಗದಿಂದ ಬೆಚ್ಚನೆಯ ಪ್ರಬಲ ಗಾಳಿ ಬೀಸುತ್ತಿರುವುದು ಬೆಚ್ಚನೆಯ ವಾತಾವರಣಕ್ಕೆ ಕಾರಣವಾಗಿದೆ. ಇದರೊಂದಿಗೆ ದಕ್ಷಿಣ ಒಳನಾಡಿನಲ್ಲಿ ಟ್ರಫ್‌ ಸೃಷ್ಟಿಯಾಗಿದ್ದು, ಕೆಲ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣಕ್ಕೆ ಕಾರಣವಾಗಿದೆ. ಟ್ರಫ್‌ ಕಾರಣದಿಂದ ಕೋಲಾರ ಮತ್ತು ಚಿಕ್ಕಬಳ್ಳಾಪುರದ ಕೆಲ ಭಾಗದಲ್ಲಿ ಮಳೆ ಆಗಿದೆ. ಉಳಿದ ಭಾಗದಲ್ಲಿ ಮೋಡ ಕವಿದ ವಾತಾವರಣ ಇದೆ. ಇದರಿಂದ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಹಗಲು, ರಾತ್ರಿ ಧಗೆ ಇದ್ದರೆ ಬೆಳಗ್ಗಿನ ಹೊತ್ತು ಚಳಿಯ ವಾತಾವರಣ ಕಂಡು ಬರುತ್ತಿದೆ.

ಕರಾವಳಿಯಲ್ಲಿ ಫೆಬ್ರವರಿಯಲ್ಲಿ ಗರಿಷ್ಠ ಉಷ್ಣಾಂಶ 32 ಡಿಗ್ರಿ ಸೆಲ್ಸಿಯಸ್‌ ಇರುವುದು ಏಪ್ರಿಲ್‌ ನಲ್ಲಿ 35 ಡಿಗ್ರಿ ತನಕ ಸೆಲ್ಸಿಯಸ್‌ ತನಕ ಏರುತ್ತದೆ. ಉತ್ತರ ಒಳನಾಡಿನಲ್ಲಿ ಏಪ್ರಿಲ್‌-ಮೇ ಹೊತ್ತಿಗೆ ಗರಿಷ್ಠ ಉಷ್ಣಾಂಶ 35 ರಿಂದ 40 ಡಿಗ್ರಿ ತನಕ ಮತ್ತು ದಕ್ಷಿಣ ಒಳನಾಡಿನಲ್ಲಿ ಗರಿಷ್ಠ ಉಷ್ಣಾಂಶ 35 ರಿಂದ 37 ಡಿಗ್ರಿ ಸೆಲ್ಸಿಯಸ್‌ ತನಕ ಏರುವ ಸಾಧ್ಯತೆ ಇದೆ. ಆದರೆ ಉಷ್ಣತೆಯಲ್ಲಿ ಅತಿ ಹೆಚ್ಚು ಏರಿಕೆ ಆಗುವ ಸಾಧ್ಯತೆಗಳ ಬಗ್ಗೆ ಯಾವುದೇ ಮುನ್ಸೂಚನೆ ಇಲ್ಲ ಎಂದು ಭಾರತೀಯ ಹವಾಮಾನ ಇಲಾಖೆಯ ತಜ್ಞ ಸದಾನಂದ ಅಡಿಗ ಹೇಳಿದ್ದಾರೆ.