ಮಂಗಳೂರು[ಜ.21]: ಬಾಂಬ್‌ ಇಟ್ಟಪ್ರಕರಣದ ಹಿಂದೆ ಸ್ಫೋಟದ ಉದ್ದೇಶವಿತ್ತೇ ಅಥವಾ ಭಯದ ವಾತಾವರಣ ಸೃಷ್ಟಿಸುವ ಗುರಿ ಇತ್ತೆ ಎಂಬುದು ಇನ್ನೂ ನಿಗೂಢವಾಗಿದೆ.

ಭದ್ರತಾ ಸಿಬ್ಬಂದಿ ಮೂಲಗಳ ಪ್ರಕಾರ ಟೈಮರ್‌ಗೂ, ಬಾಂಬ್‌ಗೂ ಸಂಪರ್ಕ ಕಲ್ಪಿಸಲಾಗಿರಲಿಲ್ಲ. ಟೈಮರ್‌ ಆಫ್‌ ಆಗಿತ್ತು. ಟೈಮರ್‌ಗೆ ಬಾಂಬ್‌ ಕನೆಕ್ಷನ್‌ ನೀಡಿದ್ದಿದ್ದರೆ ಅದನ್ನು ಆತ ತನಗೆ ಬೇಕಾದ ಸಮಯದಲ್ಲಿ ಸ್ಫೋಟಿಸಲು ಅವಕಾಶವಿತ್ತು. ವಿಮಾನ ನಿಲ್ದಾಣದಿಂದ ಭದ್ರತಾ ಸಿಬ್ಬಂದಿ ಕಣ್ತಪ್ಪಿಸಿ ಪರಾರಿಯಾದ ಬಳಿಕ ಸ್ಫೋಟ ಮಾಡಲು ಆತ ಸ್ವತಂತ್ರನಾಗಿದ್ದ. ಆದರೆ, ಸ್ಫೋಟ ಸಂಭವಿಸದೆ ಇದ್ದುದರ ಹಿಂದೆ ಕೇವಲ ಭಯದ ವಾತಾವರಣ ಮೂಡಿಸುವ ಉದ್ದೇಶ ಮಾತ್ರವೇ ಇತ್ತೇ ಎಂಬ ಶಂಕೆಯೂ ವ್ಯಕ್ತವಾಗಿದೆ.

ಅಪಾಯ ಲೆಕ್ಕಿಸದೆ ಏಕಾಂಗಿಯಾಗಿ ಬಾಂಬ್‌ ನಾಶಗೊಳಿಸಿದ ಗಂಗಯ್ಯ!

ಇನ್ನೊಂದೆಡೆ, ಆ ದುಷ್ಕರ್ಮಿ ಬಾಂಬ್‌ ಮತ್ತು ಟೈಮರ್‌ ನಡುವೆ ಸಂಪರ್ಕ ಕಲ್ಪಿಸಲು ಮರೆತುಹೋಗಿರಬಹುದು ಅಥವಾ ಕಲ್ಪಿಸಿದ ಸಂಪರ್ಕ ಆತನ ಪ್ರಯಾಣ ಅವಧಿಯಲ್ಲಿ ಕಡಿತಗೊಂಡಿರಬಹುದು ಎಂದೂ ವಿಶ್ಲೇಷಿಸಲಾಗುತ್ತಿದೆ. ದುಷ್ಕರ್ಮಿ ಬಸ್ಸಿನಲ್ಲಿ ಬಂದಿದ್ದ. ಬಜ್ಪೆ ಕಡೆ ತೆರಳುವ ಬಸ್ಸು ಸದಾ ತುಂಬಿರುತ್ತದೆ. ಈ ನಡುವೆ ತಿಕ್ಕಾಟದಲ್ಲಿ ಬ್ಯಾಗ್‌ನಲ್ಲಿಟ್ಟಬಾಂಬ್‌ನ ಸಂಪರ್ಕ ವ್ಯವಸ್ಥೆ ಕಡಿತಗೊಂಡಿರಬಹುದು ಎಂದೂ ಹೇಳಲಾಗಿದೆ.

ಉಗ್ರರ ಬಾಂಬ್ ಫ್ಯಾಕ್ಟರಿ ಆಗಿತ್ತು ಮಂಗಳೂರು!