ಅಪಾಯ ಲೆಕ್ಕಿಸದೆ ಏಕಾಂಗಿಯಾಗಿ ಬಾಂಬ್ ನಾಶಗೊಳಿಸಿದ ಗಂಗಯ್ಯ!
ಬಾಂಬ್ ಬ್ಯಾಗ್ ನಾಶಗೊಳಿಸುವ ಅತ್ಯಂತ ಅಪಾಯಕಾರಿ ಮತ್ತು ಸವಾಲಿನ ಕೆಲಸ| ಏಕಾಂಗಿಯಾಗಿ ಬಾಂಬ್ ನಾಶಗೊಳಿಸಿದ ಗಂಗಯ್ಯ|
ಮಂಗಳೂರು[ಜ.21]: ಬಾಂಬ್ ಬ್ಯಾಗ್ ನಾಶಗೊಳಿಸುವ ಅತ್ಯಂತ ಅಪಾಯಕಾರಿ ಮತ್ತು ಸವಾಲಿನ ಕೆಲಸ ನೆರವೇರಿಸಿದವರು ಸಿಐಎಸ್‌ಎಫ್‌ನ ಯೋಧ ಗಂಗಯ್ಯ. ಅವರು ಕಾರ್ಯಾಚರಣೆ ವೇಳೆ ಬಾಂಬ್ ನಿರೋಧಕ ಧಿರಿಸು ತೊಟ್ಟಿದ್ದರೂ ಯಾವುದೇ ಕ್ಷಣದಲ್ಲಿ ಬಾಂಬ್ ಸ್ಫೋಟಿಸಿದ್ದರೆ ಅಪಾಯವಾಗುವ ಸಾಧ್ಯತೆ ಇತ್ತು.
ಆಟೋದಲ್ಲಿ ಬಂದಿದ್ದ ಟೋಪಿ ಬಾಂಬರ್ ಯಾರು?
ಈ ಎಲ್ಲ ಸವಾಲುಗಳನ್ನು ಮೆಟ್ಟಿನಿಂತು ಬಾಂಬ್ ಅನ್ನು ಥ್ರೆಟ್ ಕಂಟೈನ್‌ಮೆಂಟ್ ವಾಹನದಿಂದ 50 ಮೀ. ದೂರದ ನಾಶಗೊಳಿಸುವ ಪ್ರದೇಶದವರೆಗೆ ಒಬ್ಬಂಟಿಯಾಗಿ ಕೊಂಡೊಯ್ದು ಯಶಸ್ವಿಯಾಗಿ ಕೆಲಸ ಮುಗಿಸಿದರು. ಬಾಂಬ್ ಇಟ್ಟು ವಾಪಸಾದ ಬಳಿಕವೂ ಎರಡೆರಡು ಬಾರಿ ಆ ಜಾಗಕ್ಕೆ ತೆರಳಿ ಸ್ಫೋಟಗೊಳಿಸುವ ತಾಂತ್ರಿಕ ಕಾರ್ಯ ನೆರವೇರಿಸಿದರು. ಅವರು ದೆಹಲಿಯ ಎನ್‌ಎಸ್‌ಜಿಯಲ್ಲಿ ತರಬೇತಿ ಪಡೆದಿದ್ದು, ಬಾಂಬ್ ಪತ್ತೆ ಮತ್ತು ನಿಷ್ಕಿ್ರಯ ಪತ್ತೆ ದಳದಲ್ಲಿ ಎಎಸ್‌ಐ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಬಾಂಬ್ ನಾಶಕ್ಕೆ ಕೆಂಜಾರು ಮೈದಾನವೇ ಏಕೆ?
ಬಾಂಬ್ ಅನ್ನು ನಾಶಪಡಿಸಿರುವ ಕೆಂಜಾರು ಮೈದಾನ ಮಳೆಗಾಲದಲ್ಲಿ ನೀರು ನಿಲ್ಲುವ ನೂರಿನ್ನೂರು ಎಕರೆ ವಿಸ್ತಾರವಾದ ಪ್ರದೇಶ. ಇದೀಗ ಬೇಸಗೆಯಾದ್ದರಿಂದ ಹಸಿ ಹುಲ್ಲು ಇಡೀ ಮೈದಾನ ಆವರಿಸಿತ್ತು. ಈ ಮೈದಾನ ವಿಮಾನ ನಿಲ್ದಾಣಕ್ಕೆ ಬಲು ಸಮೀಪದಲ್ಲೇ ಇದ್ದುದು ಕಾರ್ಯಾಚರಣೆ ಕ್ಷಿಪ್ರವಾಗಿ ನೆರವೇರಲು ಸಹಾಯವಾಗಿತ್ತು. ಏಕೆಂದರೆ ‘ಥ್ರೆಟ್ ಕಂಟೈನ್‌ಮೆಂಟ್’ ವಾಹನ ಸಂಚರಿಸುವುದು ನಡಿಗೆಯ ವೇಗಕ್ಕಿಂತಲೂ ನಿಧಾನವಾಗಿ. ಒಂದು ಕಿ.ಮೀ. ಸಂಚರಿಸಲು ಒಂದು ಗಂಟೆಯೇ ಹಿಡಿದಿತ್ತು.
ಟೈಮರ್‌ಗೂ, ಬಾಂಬ್‌ಗೂ ಕನೆಕ್ಷನ್ ಕೊಟ್ಟಿರಲೇ ಇಲ್ಲ!
ಈ ಮೈದಾನದ ಸುತ್ತಮುತ್ತ ಅತಿ ವಿರಳ ಜನಸಂಖ್ಯೆ ಹಾಗೂ ಅತಿ ವಿರಳ ಮನೆಗಳು ಇದ್ದುದರಿಂದ ಈ ಮೈದಾನವನ್ನು ಸ್ಫೋಟಕ್ಕೆ ಆಯ್ಕೆ ಮಾಡಲಾಯಿತು. ಹೊರ ಪ್ರದೇಶವಾಗಿದ್ದರೆ ಜನರನ್ನು ಕಂಟ್ರೋಲ್ ಮಾಡುವುದು ಅತಿ ಕಷ್ಟವಾಗುತ್ತಿತ್ತು. ಕೆಂಜಾರಿನಲ್ಲಿ ಅತಿ ವಿರಳ ಜನಸಂಖ್ಯೆ (ನೂರಿನ್ನೂರು ಮಂದಿ) ಸೇರಿದ್ದರಿಂದ ಬಾಂಬ್ ನಾಶಕ್ಕೆ ಅನುಕೂಲಕರ ವಾತಾವರಣವಿತ್ತು.