Asianet Suvarna News Asianet Suvarna News

Bengaluru: ಹೊಸ ವರ್ಷಕ್ಕೆ ಡ್ರಗ್ಸ್ ಸೇಲ್‌ ಮಾಡಲು ಬಂದ ವಿದೇಶ ಪ್ರಜೆ: ಸೋಪು, ಚಾಕೋಲೇಟ್ ಬಾಕ್ಸ್‌ನಲ್ಲಿ ಸಾಗಣೆ

ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ 2024ಕ್ಕೆ ಯುವಜನರಿಗೆ ಮತ್ತೇರಿಸಲು ಡ್ರಗ್ಸ್ ಮಾರಾಟ ಮಾಡಲು ನೈಜೀರಿಯಾದಿಂದ ಆಗಮಿಸಿದ ಪ್ರಜೆಯನ್ನು ಪೊಲೀಸರು ಬಂಧಿಸಿದ್ದಾರೆ. ಆತನಿಂದ 21 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ.

Nigerian business man came to Bengaluru New Year 2024 to sell drugs sat
Author
First Published Dec 12, 2023, 1:18 PM IST

ಬೆಂಗಳೂರು (ಡಿ.12): ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆದು ನಿಂತಿರುವ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 2024ರ ಹೊಸ ವರ್ಷಾಚರಣೆಗೆ ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಆದರೆ, ಬೆಂಗಳೂರಿನ ಯುವಜನರಿಗೆ ಡ್ರಗ್ಸ್‌ ನಶೆಯಲ್ಲಿ ತೇಲಿಸುವ ಉದ್ದೇಶದಿಂದಲೇ ಡ್ರಗ್ಸ್‌ ಮಾರಾಟಕ್ಕೆ ವಿದೇಶಿ ಪ್ರಜೆಗಳು ಕೂಡ ಆಗಿಮಿಸಿದ್ದಾರೆ. ಇನ್ನು ಪೋಷಕರು ತಮ್ಮ ಮಕ್ಕಳು ಹೊಸ ವರ್ಷದ ಪಾರ್ಟಿ ನೆಪದಲ್ಲಿ ಡ್ರಗ್ಸ್‌ ಜಾಲಕ್ಕೆ ಸಿಲುಕದಂತೆ ಎಚ್ಚರವಹಿಸುವುದು ಅಗತ್ಯವಾಗಿದೆ.

ಹೊಸ ವರ್ಷದ ರೇವ್ ಪಾರ್ಟಿಗಳಿಗೆ ಡ್ರಗ್ ಸೇಲ್ ಮಾಡಲು ಶೇಖರಣೆ ಮಾಡಿಟ್ಟಿದ್ದ ಕೋಟ್ಯಾಂತರ ರೂ. ಮೌಲ್ಯದ ಡ್ರಗ್ಸ್ ಅನ್ನು ಬೆಂಗಳೂರು ನಗರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ವೇಳೆ ಡ್ರಗ್ಸ್ ನಶೆಯನ್ನೇರಿಸಲು ವಿದೇಶದಿಂದ ಡ್ರಗ್‌ ಪೆಡ್ಲರ್‌ಗಳು ಆಗಮಿಸಿದ್ದಾರೆ. ಬ್ಯುಸಿನೆಸ್ ವೀಸಾದಡಿ ನೈಜಿರಿಯಾದಿಂದ ಆಗಮಿಸಿದ ಡ್ರಗ್ ಪೆಡ್ಲರ್ ಬೆಂಗಳೂಗೆ ಬಂದು ವಿವಿಧ ರಾಜ್ಯಗಳಿಂದ ಡ್ರಗ್ಸ್‌ಗಳನ್ನು ಕೊರಿಯರ್ ಮೂಲಕ ತರಿಸಿಕೊಳ್ಳುತ್ತಿದ್ದನು. ಈಗ ಸದ್ಯಕ್ಕೆ ವಿದೇಶಿ ಪ್ರಜೆಯನ್ನು ಪೊಲೀಸರು ಅರೆಸ್ಟ್ ಮಾಡಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ಹೇಳಿದ್ದಾರೆ.

ಬೆಂಗಳೂರು ಆಕ್ಸೆಂಚರ್ ಐಟಿ ಕಂಪನಿ ಕಟ್ಟಡದಲ್ಲಿ ಕಾಣಿಸಿಕೊಂಡ ಬೆಂಕಿ: ಉದ್ಯೋಗಿಗಳಲ್ಲಿ ಆತಂಕ

ಹೊಸ ವರ್ಷಕ್ಕೆ ಮತ್ತೇರಸಲು ತಂದಿದ್ದ 21 ಕೋಟಿ ರೂ. ಬೆಲೆ ಬಾಳುವ 16 ಕೆಜಿ ಎಂಡಿಎಂಎ, 500 ಗ್ರಾಂ ಕೊಕೆನ್ ಮಾದಕ ವಸ್ತು ವಶಕ್ಕೆ ಪಡೆದಿದ್ದಾರೆ. ಬಿಸಿನೆಸ್ ವೀಸಾದಡಿ ಬಂದು ರಾಮಮೂರ್ತಿನಗರದಲ್ಲಿ ವಾಸವಾಗಿದ್ದ ನೈಜಿರಿಯಾ ಮೂಲದ ಪ್ರಜೆ ಆರೋಪಿ ಲಿಯಾನಾರ್ಡ್ ವಕೂಡಿಲಿ ಬಂಧನವಾಗಿದೆ. ಆತ ತಾನಿರುವ ಕೋಣೆಯಲ್ಲಿ ಬೆಡ್ ಶೀಟ್ ಕವರ್, ಸೋಪ್ ಬಾಕ್ಸ್, ಚಾಕಲೇಟ್ ಬಾಕ್ಸ್‌ಗಳಲ್ಲಿ ಡ್ರಗ್ಸ್ ಇಟ್ಟುಕೊಂಡಿದ್ದನು. ಈ ಕುರಿತಂತೆ ರಾಮಮೂರ್ತಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಡ್ರಗ್ ಪೆಡ್ಲರ್ ಸಿಸಿಬಿ ವಿಚಾರಣೆ ವೇಳೆ ಕೆಲವು ಮಾಹಿತಿ ಬಿಚ್ಚಿಟ್ಟಿದ್ದಾನೆ. ದೆಹಲಿ, ಬಾಂಬೆ, ಅಸ್ಸಾಂ ಯಿಂದ ಡ್ರಗ್ಸ್ ಕೊಕೆನ್ ತರಿಸಿಕೊಳ್ಳುತ್ತಿದ್ದನು. ಈತ ದೆಹಲಿಯಲ್ಲಿರುವ ಸ್ನೇಹಿತರಿಗೆ ಪೋನ್ ಮಾಡುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

ಒಂದು ಕಾಲ್ ಮಾಡಿದ್ರೆ ಸಾಕು ದೆಹಲಿಯಿಂದ ಡ್ರಗ್ಸ್ ಬರುತ್ತದೆ:
ಕಾಲ್ ಮಾಡಿದ್ರೆ ದೆಹಲಿಯಲ್ಲಿರೋ ನೈಜಿರಿಯನ್ ಪ್ರಜೆಗಳಿಂದ ಬೆಂಗಳೂರಿಗೆ ಸಪ್ಲೈ ಮಾಡಲಾಗುತ್ತದೆ. ಬೇಡಿಕೆಗೆ ತಕ್ಕಂತೆ ಕೊಕೆನ್, ಎಂಡಿಎಂಎ ರವಾನೆ ಮಾಡಲಾಗುತ್ತದೆ. ಚೂಡಿದಾರ್, ಬಟ್ಟೆ ,ಸೋಪ್ ಬಾಕ್ಸ್ , ಚಾಕಲೇಟ್ ಬಾಕ್ಸ್ ಮೂಲಕ ಡ್ರಗ್ಸ್ ರವಾನೆ ಮಾಡಲಾಗುತ್ತದೆ. ದೆಹಲಿಯಿಂದ ಬಸ್, ಟ್ರೈನ್ ಮೂಲಕ ಆರೋಪಿಗಳು ಬಂದು ಪಾರ್ಸೆಲ್ ಕೊಟ್ಟು ಹೋಗುತ್ತಿದ್ದರು. ಒಂದೊ ,ಎರಡು, ಬಾಕ್ಸ್ ಗಳಲ್ಲಿ ಡ್ರಗ್ಸ್ ಇಟ್ಟು ತೆಗೆದುಕೊಂಡು ಬರುತ್ತಿದ್ದರು. 50 ಚೂಡಿದಾರ್ ಗಳ ಬಾಕ್ಸ್ ಇದ್ದರೆ, ಅದರ ಒಳಗೆ ಒಂದು ಎರಡು ಡ್ರಗ್ಸ್ ಮಾತ್ರ ಇಟ್ಟುಕೊಳ್ಳುತ್ತಿದ್ದರು. ವಿಶೇಷ ಅಂದ್ರೆ ಬಸ್ ನಿಲ್ಧಾಣ, ರೈಲ್ವೇ ಸ್ಟೇಷನ್ ಗಳಲ್ಲಿ ಸ್ಕ್ಯಾನ್ ಮಾಡೋ ವಿಷನ್ ಇಲ್ಲ. ಹೀಗಾಗಿ ಸಲೀಸಾಗಿ ಬಟ್ಟೆಯೊಳಗೆ ಕಟ್ಟಿಕೊಂಡು ಡ್ರಗ್ಸ್ ಕೊಕೆನ್, ಎಂಡಿಎಂಎ ರವಾನೆ ಮಾಡುತ್ತಿದ್ದರು. 

BBK10: ನಾಮಿನೇಟ್ ಮಾಡುವ ಅಧಿಕಾರ ಕಳೆದುಕೊಂಡ ವಿನಯ್, ತನಿಷಾ ಅವಿ ಮತ್ತು ಪವಿ: ಇಲ್ಲಿದೆ ಅಸಲಿ ಕಾರಣ..

ನಟ-ನಟಿಯರಿಗೆ ಡ್ರಗ್ಸ್ ಸಾಗಣೆಗೆ ಸಂಚು: ಕೊಕೆನ್ ಒಂದು ಗ್ರಾಂಗೆ ಒಂದು ಲಕ್ಷ ಬೆಲೆ ಇದೆ.ಕೊಕೆನ್ ಹಾಗೂ ಎಂಡಿಎಂಎ ಡ್ರಗ್ಸ್ ಅನ್ನ ನಟ, ನಟಿಯರು ಹಾಗೂ ಹೆಚ್ಚಾಗಿ ಸೆಲೆಬ್ರಿಟಿಗಳು  ಉಪಯೋಗಿಸುತ್ತಾರೆ. ಡ್ರಗ್ಸ್ ಬೆಂಗಳೂರಿಗರ ಸರಬರಾಜು ಆಗುತ್ತಿರುವುದರ ಬಗ್ಗೆ ಮಾಹಿತಿ ಪಡೆದ ರಾಮಮೂರ್ತಿನಗರ ಪೊಲೀಸರು ವಿಶ್ವೇಶ್ವರಯ್ಯ ಲೇಔಟ್ ನ ಮನೆ ಮೇಲೆ ಸಿಸಿಬಿ ಇನ್ಸ್ ಪೆಕ್ಟರ್ ಭರತ್ ಗೌಡ ತಂಡ ದಾಳಿ ಮಾಡಿದೆ. ಈ ವೇಳೆನ್ಯೂ ಇಯರ್ ಗಾಗಿ ಮಾರಾಟ ಮಾಡಲು ತಂದಿದ್ದ ಡ್ರಗ್ಸ್  ವಶಕ್ಕೆ ಪಡೆದುಕೊಳ್ಳಲಾಗಿದೆ.

Follow Us:
Download App:
  • android
  • ios