ಬೆಂಗಳೂರು ಆಕ್ಸೆಂಚರ್ ಐಟಿ ಕಂಪನಿ ಕಟ್ಟಡದಲ್ಲಿ ಕಾಣಿಸಿಕೊಂಡ ಬೆಂಕಿ: ಉದ್ಯೋಗಿಗಳಲ್ಲಿ ಆತಂಕ
ಬೆಂಗಳೂರಿನ ಆಕ್ಸೆಂಚರ್ ಐಟಿ ಕಂಪನಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೆಲವು ಕೋಣೆಗಳಲ್ಲಿ ಭಾರಿ ಅನಾಹುತ ಸಂಭವಿಸಿರುವ ಸಾಧ್ಯತೆಯಿದೆ.
ಬೆಂಗಳೂರು (ಡಿ.12): ಬೆಂಗಳೂರಿನ ಆಕ್ಸೆಂಚರ್ ಐಟಿ ಕಂಪನಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೆಲವು ಕೋಣೆಗಳಲ್ಲಿ ಭಾರಿ ಅನಾಹುತ ಸಂಭವಿಸಿರುವ ಸಾಧ್ಯತೆಯಿದೆ. ಕಂಪನಿಯ ಕಟ್ಟಡದಿಂದ ಬೆಂಕಿ ಹತ್ತಿಕೊಂಡು ಉರಿಯುತ್ತಿರುವ ಹಾಗೂ ದೊಡ್ಡಮಟ್ಟದಲ್ಲಿ ಹೊಗೆ ಬರುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬೆಳ್ಳಂದೂರಿನ ಪ್ರಿಟೆಕ್ ಪಾರ್ಕ್‌ನಲ್ಲಿರುವ ಅಕ್ಸೆಂಚರ್‌ನಲ್ಲಿ ಬೆಂಕಿ ಸಂಭವಿಸಿದೆ ಅಕ್ಸೆಂಚರ್ ಕಂಪನಿಯಲ್ಲಿ ಮಂಗಳವಾರ ಬೆಂಕಿ ಕಾಣಿಸಿಕೊಂಡಿದೆ. ಇನ್ನು ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಅವಘಡ ಸಂಭವಿಸಿದೆ ಎಂದು ಹೇಳಲಾಗುಇತ್ತಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಯ ಸಂಭವಿಸಿಲ್ಲ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಬೆಂಕಿ ಕಾಣಿಸಿಕೊಂಡ ಮಹಡಿಯಲ್ಲಿದ್ದ ಕೆಲವು ಸಾಮಗ್ರಿಗಳು ಬೆಂಕಿಗೆ ಆಹುತಿಯಾಗಿವೆ. ಇನ್ನು ಬೆಂಕಿ ಕಾಣಿಸಿಕೊಂಡಾಗ ಹೊತ್ತಿ ಉರಿಯಲು ಯಾವುದೇ ಸಾಮಗ್ರಿಗಳು ಇರದ ಹಿನ್ನೆಲೆಯಲ್ಲಿ ಬೆಂಕಿ ಜ್ವಾಲಿ ವ್ಯಾಪಿಸಿಕೊಂಡಿಲ್ಲ ಎಂದು ತಿಳಿದುಬಂದಿದೆ.
BBK10: ನಾಮಿನೇಟ್ ಮಾಡುವ ಅಧಿಕಾರ ಕಳೆದುಕೊಂಡ ವಿನಯ್, ತನಿಷಾ ಅವಿ ಮತ್ತು ಪವಿ: ಇಲ್ಲಿದೆ ಅಸಲಿ ಕಾರಣ..
ಇನ್ನು ಬೆಂಕಿ ಸಣ್ಣ ಮಟ್ಟದಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆಯೇ ಉದ್ಯೋಗಿಗಳನ್ನು ಹೊರಗೆ ಕಳುಹಿಸಲಾಗಿದೆ ಎಂದು ಕೇಳಿಬಂದಿದೆ. ಇನ್ನು ದಿಢೀರನೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ತೆರಳಿದೆ. ಆಗ್ನಿ ಅವಘಡದಿಂದ ಎಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ ಎಂಬುದು ಇನ್ನಷ್ಟೇ ಬರಬೇಕಿದೆ.
70 ಗಂಟೆ ಕೆಲಸ ಮಾಡಿ ಎಂದ ಇನ್ಫೋಸಿಸ್ ನಾರಾಯಣಮೂರ್ತಿಗೆ ಬಿಗ್ ಶಾಕ್:
ಭಾರತದ ಎರಡನೇ ಅತಿ ದೊಡ್ಡ ಐಟಿ ಕಂಪೆನಿಯಲ್ಲಿ ಒಂದಾದ ಇನ್ಫೋಸಿಸ್‌ನಿಂದ ಇತ್ತೀಚಿಗೆ ಉನ್ನತ ಮಟ್ಟದ ಅಧಿಕಾರಿಗಳು ನಿರ್ಗಮಿಸುತ್ತಿದ್ದಾರೆ. ಬರೋಬ್ಬರಿ 6,17,700 ಕೋಟಿ ರೂ. ಬೃಹತ್ ಕಂಪೆನಿಯಲ್ಲಿ ನಿಲಂಜನ್ ರಾಯ್, ಮುಖ್ಯ ಹಣಕಾಸು ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದು, ಈ ಹುದ್ದೆಗೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. 1981ರಲ್ಲಿ ಟೆಕ್ ಬಿಲಿಯನೇರ್‌ಗಳಾದ ಎನ್.ಆರ್. ನಾರಾಯಣ ಮೂರ್ತಿ ಮತ್ತು ನಂದನ್ ನಿಲೇಕಣಿ ಅವರು ಇನ್ಫೋಸಿಸ್‌ನ್ನು ಆರಂಭಿಸಿದರು.
ಕಾವ್ ಕಾವ್ ಕರಿತೈತಿ ಗೋವಾ.., ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು ಮತ್ತೊಂದು ಹಾಡು!
ಇತ್ತೀಚಿನ ದಿನಗಳಲ್ಲಿ ಮಾಜಿ ಅಧ್ಯಕ್ಷರಾದ ರವಿಕುಮಾರ್ ಎಸ್ ಮತ್ತು ಮೋಹಿತ್ ಜೋಶಿ ಅವರು ಕಂಪೆನಿಗೆ ರಾಜೀನಾಮೆ ನೀಡಿದ್ದಾರೆ. ಈಗ ದೊಡ್ಡ ಹುದ್ದೆಯಲ್ಲಿರುವ ನಿಲಂಜನ್ ರಾಯ್ ಕೂಡಾ ಸಂಸ್ಥೆಯನ್ನು ತೊರೆಯಲು ಸನ್ನದ್ಧರಾಗಿದ್ದು, ವರದಿಯ ಪ್ರಕಾರ ಅವರ ನಂತರ ಜಯೇಶ್ ಸಂಘರಾಜ್ಕ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ. ಸಂಘರಾಜ್ಕಾ ಅವರು ಸಿಎಫ್‌ಒ ಆಗಿ ಏಪ್ರಿಲ್ 1, 2024ರಿಂದ ಈ ಹುದ್ದೆಗೆ ನೇಮಕ (Appoint)ವಾಗಲಿದ್ದಾರೆ. ಒಟ್ಟಿನಲ್ಲಿ ಕಾಕತಾಳೀಯವಾಗಿ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರು ಯುವಕರಿಗೆ ವಾರದ 70 ಗಂಟೆಗಳ ಕೆಲಸ ಮಾಡುವ ಸಲಹೆಯ ನಂತರ ಈ ಬೃಹತ್ ಕಂಪೆನಿಯಲ್ಲಿ ಕೆಲಸ ಮಾಡ್ತಿರೋ ಹಲವು ಅಧಿಕಾರಿಗಳು ಸಾಲು ಸಾಲಾಗಿ ರಾಜೀನಾಮೆ ನೀಡುತ್ತಿದ್ದಾರೆ.