ಬೆಂಗ್ಳೂರಲ್ಲಿ ಅನಿರುದ್ಧ ರಂಜನ್‌ ಬಂಧನ: ಶಂಕಿತ ನಕ್ಸಲ್‌ ವಿರುದ್ಧ ಎನ್‌ಐಎಯಿಂದ ತನಿಖೆ

ಸೆ.6 ರಂದು ಬೆಂಗಳೂರಿನಲ್ಲಿ ತನ್ನ ಸ್ನೇಹಿತೆಯ ಭೇಟಿಗೆ ಬಂದಿದ್ದಾಗ ನಿಷೇಧಿತ ಮಾವೋವಾದಿ ನಕ್ಸಲ್ ಸಂಘಟನೆಯ ಉತ್ತರ ಭಾರತ ವಲಯದ ಪ್ರಮುಖ ನಾಯಕ ಅನಿರುದ್ಧನನ್ನು ಸಿಸಿಬಿ ಬಂಧಿಸಿತ್ತು. ಈತನ ಮೇಲೆ ಸಿಸಿಬಿ ಇನ್‌ಪೆಕ್ಟರ್ ದೂರು ಆಧರಿಸಿ ಉಪ್ಪಾರಪೇಟೆ ಠಾಣೆಯಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ನಿಗ್ರಹ ಕಾಯ್ದೆ (ಯುಎಪಿಎ) ಪ್ರಕರಣ ದಾಖಲಾಗಿತ್ತು. 

NIA Investigation against suspected Naxal Aniruddh Ranjan grg

ಬೆಂಗಳೂರು(ಅ.25):  ಕೆಲ ದಿನಗಳ ಹಿಂದೆ ನಗರದಲ್ಲಿ ಬಂಧಿತನಾಗಿದ್ದ ನಿಷೇಧಿತ ಮಾವೋವಾದಿ ನಕ್ಸಲ್ ಸಂಘ ಟನೆಯ ಶಂಕಿತ ನಾಯಕ ಅನಿರುದ್ಧ ರಾಜನ್ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ತನಿಖೆಗೆ ಕೇಂದ್ರ ಗೃಹ ಸಚಿವಾಲಯ ಆದೇಶಿಸಿದೆ. 

ಈ ಆದೇಶದ ಹಿನ್ನೆಲೆಯಲ್ಲಿ ಎನ್ ಐಎಗೆ ಪ್ರಕರಣ ಸಂಬಂಧ ದಾಖಲೆಗಳ ಹಸ್ತಾಂತರ ಪ್ರಕ್ರಿಯೆಯನ್ನು ಸಿಸಿಬಿ ಆರಂಭಿಸಿದ್ದು, ಕೆಲವೇ ದಿನಗಳಲ್ಲಿ ಶಂಕಿತ ನಕ್ಸಲ್ ಮುಖಂಡನ ಬಂಧನ ಪ್ರಕರಣದ ತನಿಖೆಯನ್ನು ಎನ್‌ಐಎ ಆರಂಭಿಸಲಿದೆ. 
ಸೆ.6 ರಂದು ಬೆಂಗಳೂರಿನಲ್ಲಿ ತನ್ನ ಸ್ನೇಹಿತೆಯ ಭೇಟಿಗೆ ಬಂದಿದ್ದಾಗ ನಿಷೇಧಿತ ಮಾವೋವಾದಿ ನಕ್ಸಲ್ ಸಂಘಟನೆಯ ಉತ್ತರ ಭಾರತ ವಲಯದ ಪ್ರಮುಖ ನಾಯಕ ಅನಿರುದ್ಧನನ್ನು ಸಿಸಿಬಿ ಬಂಧಿಸಿತ್ತು. ಈತನ ಮೇಲೆ ಸಿಸಿಬಿ ಇನ್‌ಪೆಕ್ಟರ್ ದೂರು ಆಧರಿಸಿ ಉಪ್ಪಾರಪೇಟೆ ಠಾಣೆಯಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ನಿಗ್ರಹ ಕಾಯ್ದೆ (ಯುಎಪಿಎ) ಪ್ರಕರಣ ದಾಖಲಾಗಿತ್ತು. 

ಸ್ನೇಹಿತೆಯ ಭೇಟಿಗೆ ಬೆಂಗ್ಳೂರಿಗೆ ಬಂದಿದ್ದ ನಕ್ಸಲ್‌ ಬಂಧನ..!

ಈ ಪ್ರಕರಣದ ತನಿಖೆಯನ್ನು ಸಿಸಿಬಿ ಮುಖ್ಯಸ್ಥ ಚಂದ್ರಗುಪ್ತ ಮೇಲು ಸ್ತುವಾರಿಯಲ್ಲಿ ನಡೆಸಲಾಗುತ್ತಿತ್ತು. ಅನಿರುದ್ಧನ ಬಂಧನ ವಿಚಾರ ತಿಳಿದು ಎನ್‌ಐಎ, ಕೇಂದ್ರ ಗುಪ್ತದಳ ಹಾಗೂ ಆಂಧ್ರಪ್ರದೇಶ, ತೆಲಂಗಾಣ, ಛತ್ತೀಸ್ ಗಢ, ಜಾರ್ಖಂಡ್ ಹಾಗೂ ಪಶ್ಚಿಮ ಬಂಗಾಳ ಸೇರಿದಂತೆ ನಕಲ್ ಪೀಡಿತ ರಾಜ್ಯಗಳ ಪೊಲೀಸರು, ಬೆಂಗಳೂರಿಗೆ ಬಂದು ಆತನನ್ನು ವಿಚಾರಣೆಗೊಳಪಡಿಸಿ ದ್ದರು. ಈಗ ಕೇಂದ್ರ ಗೃಹ ಇಲಾಖೆ ಕೇಸ್ ತನಿಖೆಯನ್ನು ಎನ್‌ಐಎಗೆ ವಹಿಸಿದೆ.

Latest Videos
Follow Us:
Download App:
  • android
  • ios