ಹೊಸವರ್ಷದ ಮೊದಲ ದಿನ ಈ ಬಾರಿ ವಾರಾಂತ್ಯದಲ್ಲಿಯೇ ಬಂದಿದ್ದು, ಯುವಜನತೆ ಭಾನುವಾರವಿಡೀ ಮೋಜು ಮಸ್ತಿಯೊಂದಿಗೆ ಸಂಭ್ರಮಿಸಿದರು. ಮಾಲ್‌ಗಳು, ಸಿನಿಮಾ ಮಂದಿರ, ಮಾರುಕಟ್ಟೆಗಳು, ವಾಣಿಜ್ಯ ಸಂಕೀರ್ಣ, ದೇವಸ್ಥಾನ, ಪ್ರವಾಸಿ ತಾಣಗಳಲ್ಲಿ ಜನದಟ್ಟಣೆ ಹೆಚ್ಚಿತ್ತು. ಹೋಂ ಸ್ಟೇ, ರೇಸಾರ್ಚ್‌, ಲಾಡ್ಜ್‌ಗಳು ಭರ್ತಿಯಾಗಿತ್ತು. ಕೋವಿಡ್‌ ಭೀತಿ ಇದ್ದರೂ ಮಾಸ್‌್ಕ, ಸಾಮಾಜಿಕ ಅಂತರ ಎಲ್ಲೂ ಕಾಣಲಿಲ್ಲ.

ಬೆಂಗಳೂರು (ಜ.2) : ಹೊಸವರ್ಷದ ಮೊದಲ ದಿನ ಈ ಬಾರಿ ವಾರಾಂತ್ಯದಲ್ಲಿಯೇ ಬಂದಿದ್ದು, ಯುವಜನತೆ ಭಾನುವಾರವಿಡೀ ಮೋಜು ಮಸ್ತಿಯೊಂದಿಗೆ ಸಂಭ್ರಮಿಸಿದರು. ಮಾಲ್‌ಗಳು, ಸಿನಿಮಾ ಮಂದಿರ, ಮಾರುಕಟ್ಟೆಗಳು, ವಾಣಿಜ್ಯ ಸಂಕೀರ್ಣ, ದೇವಸ್ಥಾನ, ಪ್ರವಾಸಿ ತಾಣಗಳಲ್ಲಿ ಜನದಟ್ಟಣೆ ಹೆಚ್ಚಿತ್ತು. ಹೋಂ ಸ್ಟೇ, ರೇಸಾರ್ಚ್‌, ಲಾಡ್ಜ್‌ಗಳು ಭರ್ತಿಯಾಗಿತ್ತು. ಕೋವಿಡ್‌ ಭೀತಿ ಇದ್ದರೂ ಮಾಸ್‌್ಕ, ಸಾಮಾಜಿಕ ಅಂತರ ಎಲ್ಲೂ ಕಾಣಲಿಲ್ಲ.

ಚಿಕ್ಕಬಳ್ಳಾಪುರ(Chikkaballapur)ದ ನಂದಿ ಬೆಟ್ಟ(Nandibetta)ದಲ್ಲಿ ಜನಸಾಗರವೇ ಹರಿದು ಬಂದಿದ್ದು, ಭಾನುವಾರ ಬೆಳಗ್ಗೆ 6 ಕಿ.ಮೀ.ಗಳಷ್ಟುದೂರದವರೆಗೆ ವಾಹನಗಳು ಸಾಲುಗಟ್ಟಿನಿಂತಿದ್ದವು. ತಡರಾತ್ರಿಯಿಂದಲೇ ಪ್ರವಾಸಿಗರು ಕಾದು ಕುಳಿತಿದ್ದರು. ಶನಿವಾರ ರಾತ್ರಿಯ ಸಂಭ್ರಮಾಚರಣೆಗೆ ನಿಷೇಧ ಹೇರಲಾಗಿದ್ದು, ಭಾನುವಾರ ಬೆಳಗ್ಗೆ 6 ಗಂಟೆಗೆ ಪ್ರವೇಶ ನೀಡಲಾಯಿತು. ಮಂಗಳೂರಿನ ಪಿಲಿಕುಳ(Pilikula mangaluru ) ನಿಸರ್ಗಧಾಮ, ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ(Mullayyanagiri), ವಿಶ್ವವಿಖ್ಯಾತ ಹಂಪಿ(Hampi), ಕಮಲಾಪುರದ ವಾಜಪೇಯಿ ಝೂಯಾಲಾಜಿಕಲ್‌ ಪಾರ್ಕ್, ತುಂಗಭದ್ರಾ ಜಲಾಶಯ ಹಾಗು ಹಿನ್ನೀರುಪ್ರದೇಶದ ಉದ್ಯಾನಗಳಿಗೂ ಪ್ರವಾಸಿಗರು ಲಗ್ಗೆ ಇಡುತ್ತಿದ್ದಾರೆ.

ಪ್ರವಾಸಿ ತಾಣಗಳು ಮಾತ್ರವಲ್ಲ, ಚಿಕ್ಕಮಗಳೂರಿನ ಧಾರ್ಮಿಕ ಕ್ಷೇತ್ರಗಳಿಗೂ ಪ್ರವಾಸಿಗರ ದಂಡು

ಕೊಡಗಿನ ಪ್ರಸಿದ್ಧ ಪ್ರವಾಸಿ ತಾಣ ದುಬಾರೆಯಲ್ಲಿ ಸಾಕಾನೆ ಶಿಬಿರ ವೀಕ್ಷಣೆಗೆ ಜನಸಾಗರವೇ ಹರಿದು ಬರುತ್ತಿದೆ. ಇದೇ ವೇಳೆ, ಪ್ರವಾಸಿಗರು ಕಾವೇರಿ ನದಿಯಲ್ಲಿ ಈಜಿ ಸಂಭ್ರಮಿಸುತ್ತಿದ್ದಾರೆ. ಚಾಮರಾಜನಗರದ ಶಿವನಸಮುದ್ರದ ಬಳಿಯ ಕಾವೇರಿ ನದಿಯಲ್ಲಿ ಪ್ರವಾಸಿಗರ ಮೋಜು, ಮಸ್ತಿ ಜೋರಾಗಿದೆ. ಗಗನಚುಕ್ಕಿ, ಭರಚುಕ್ಕಿಯಲ್ಲಿ ಪ್ರವಾಸಿಗರು ಸೆಲ್ಫಿಗಾಗಿ ಮುಗಿಬೀಳುತ್ತಿದ್ದಾರೆ. ಬಂಡೀಪುರದಲ್ಲಿ ಭಾನುವಾರ ಸಫಾರಿಯಿಂದ 3.94 ಲಕ್ಷ ರು.ಆದಾಯ ಬಂದಿದೆ. ಚಿತ್ರದುರ್ಗದ ಐತಿಹಾಸಿಕ ಕೋಟೆಗೆ ಭಾನುವಾರ 25 ಸಾವಿರಕ್ಕೂ ಅಧಿಕ ಮಂದಿ ಆಗಮಿಸಿದ್ದು, ಟಿಕೆಟ್‌ ಪಡೆಯಲು ನೂಕು ನುಗ್ಗಲು ಕಂಡು ಬಂತು. ಕೋಟೆಯ ಒಳಾವರಣದಲ್ಲಿ ಕೇಕ್‌ ಕತ್ತರಿಸಿ, ಸಂತಸ ವಿನಿಮಯ ಮಾಡಿಕೊಳ್ಳುವ ದೃಶ್ಯ ಸಾಮಾನ್ಯವಾಗಿತ್ತು. ಗೋಡೆ ಏರುವ ಸಾಹಸದಲ್ಲಿ ನಿಷ್ಣಾತರಾಗಿರುವ ಜ್ಯೋತಿರಾಜ್‌, ಭಾನುವಾರ ಕೋಟೆಯ ಗೋಡೆ ಏರಿ ಪ್ರವಾಸಿಗರನ್ನು ರೋಮಾಂಚನಗೊಳಿಸಿದರು. ಇದೇ ವೇಳೆ, ಮೈಸೂರು ಅರಮನೆ ಅಂಗಳದಲ್ಲಿ ಪೊಲೀಸ್‌ ಬ್ಯಾಂಡ್‌, ಬಾಣ ಬಿರುಸು ಪ್ರದರ್ಶನದೊಂದಿಗೆ ಭಾನುವಾರ ಒಂದು ವಾರದ ಮಾಗಿ ಉತ್ಸವಕ್ಕೆ ತೆರೆ ಬಿತ್ತು. ಕೊಳ್ಳೇಗಾಲದಲ್ಲಿ ಮಾನಸ ಉತ್ಸವಕ್ಕೂ ತೆರೆ ಬಿತ್ತು.

ದೇವಾಲಯಗಳಲ್ಲಿ ಭಕ್ತರ ದಂಡು:

ರಾಜ್ಯದ ಶಕ್ತಿಕೇಂದ್ರಗಳಾದ ಮಲೆ ಮಹದೇಶ್ವರ ಬೆಟ್ಟ, ಮೇಲುಕೋಟೆ ಚೆಲುವರಾಯಸ್ವಾಮಿ, ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ, ಕಟೀಲು, ಕೊಲ್ಲೂರು, ಉಡುಪಿ, ಗೋಕರ್ಣ, ಕೊಪ್ಪಳದ ಗವಿಮಠ, ಆಂಜನಾದ್ರಿ, ಶೃಂಗೇರಿ ಶಾರದಾಂಬಾ ಸನ್ನಿಧಿಗಳಿಗೆ ಭಕ್ತರ ದಂಡೆ ಹರಿದು ಬರುತ್ತಿದೆ. ಧರ್ಮಸ್ಥಳದಲ್ಲಿ ಮಂಜುನಾಥನ ದೇವಸ್ಥಾನವನ್ನು ಪುಷ್ಪಾಲಂಕಾರದಿಂದ ಶೃಂಗರಿಸಿ, ವಿಶೇಷ ಪೂಜೆ ನೆರವೇರಿಸಲಾಯಿತು. ಶೃಂಗೇರಿಯಲ್ಲಿ 800ಕ್ಕೂ ಹೆಚ್ಚು ಹೋಂ ಸ್ಟೇ, 40ಕ್ಕೂ ಅಧಿಕ ರೆಸಾರ್ಚ್‌ಗಳು ಫುಲ್‌ ಆಗಿವೆ. ಮಲೆ ಮಹದೇಶ್ವರನಿಗೆ ತೈಲಾಭಿಷೇಕ, ಪಂಚಾಮೃತ ಅಭಿಷೇಕ, ಬಿಲ್ವಾರ್ಚನೆ ನೆರವೇರಿಸಲಾಗಿದ್ದು, ಭಕ್ತರಿಗೆ 1 ಲಕ್ಷಕ್ಕೂ ಅಧಿಕ ಲಡ್ಡುಗಳನ್ನು ವಿತರಿಸಲಾಗಿದೆ. ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಭಕ್ತರ ದಂಡೇ ಹರಿದು ಬರುತ್ತಿದ್ದು, ಜನರನ್ನು ನಿಯಂತ್ರಿಸಲು ದೇವಸ್ಥಾನದ ಆಡಳಿತ ಮಂಡಳಿ 30 ರು.100 ರು. ಹಾಗೂ 300 ರು.ಗಳ ಟಿಕೆಟ್‌ಗಳಿಗಾಗಿ ಪ್ರತ್ಯೇಕ ಕೌಂಟರ್‌ ತೆರೆದಿದೆ. ಮೈಸೂರಿನ ಯೋಗಾನರಸಿಂಹಸ್ವಾಮಿ ದೇವಸ್ಥಾನದಲ್ಲಿ ಹೊಸ ವರ್ಷದ ಅಂಗವಾಗಿ ಭಕ್ತರಿಗೆ ತಿರುಪತಿ ಮಾದರಿಯ 2 ಲಕ್ಷ ಲಾಡುಗಳನ್ನು ಉಚಿತವಾಗಿ ವಿತರಿಸಲಾಯಿತು. ನ್ಯೂ ಇಯರ್ ಸೆಲೆಬ್ರೇಷನ್‌ ಗೆ ಚಿತ್ರದುರ್ಗದಲ್ಲಿ ಲಕ್ಷಾಂತರ ಮಂದಿ ಭಾಗಿ