ನ್ಯೂ ಇಯರ್ ಸೆಲೆಬ್ರೇಷನ್‌ ಗೆ ಚಿತ್ರದುರ್ಗದಲ್ಲಿ ಲಕ್ಷಾಂತರ ಮಂದಿ ಭಾಗಿ

ಹೊಸ ವರ್ಷಾಚರಣೆಗೆ ಜನರು ವಿವಿಧ ಪ್ರವಾಸಿ ತಾಣಗಳಿಗೆ ತೆರಳೋದು ವಾಡಿಕೆ. ಆದ್ರೆ ಕೊರೋನದಿಂದಾಗಿ  ಬಹುತೇಕ ಪ್ರವಾಸಿ ತಾಣಗಳು ಬಂದ್ ಆಗಿವೆ. ಹೀಗಾಗಿ ಯಾವುದೇ ಹೊಸ ನಿರ್ಭಂಧವಿಲ್ಲದೇ ಓಪನ್ ಇರುವ  ಚಿತ್ರದುರ್ಗ‌ದ ಕಲ್ಲಿನ ಕೋಟೆಯಲ್ಲಿಂದು ಪ್ರವಾಸಿಗರು ಸಡಗರ ಸಂಭ್ರಮದಿಂದ ಕೇಕ್ ಕತ್ತರಿಸಿ ಹೊಸವರ್ಷವನ್ನು ಸ್ವಾಗತಿಸಿದರು.

Millions of people participated in the New Year celebration at Chitradurga gow

ವರದಿ:‌ ಕಿರಣ್ಎಲ್ ‌ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ (ಜ.1): ಹೊಸ ವರ್ಷಾಚರಣೆಗೆ ಜನರು ವಿವಿಧ ಪ್ರವಾಸಿ ತಾಣಗಳಿಗೆ ತೆರಳೋದು ವಾಡಿಕೆ. ಆದ್ರೆ ಕೊರೋನದಿಂದಾಗಿ  ಬಹುತೇಕ ಪ್ರವಾಸಿತಾಣಗಳು ಬಂದ್ ಆಗಿವೆ. ಹೀಗಾಗಿ ಯಾವುದೇ ಹೊಸ ನಿರ್ಭಂಧವಿಲ್ಲದೇ  ಓಪನ್ ಇರುವ  ಚಿತ್ರದುರ್ಗ‌ದ ಕಲ್ಲಿನ ಕೋಟೆಯಲ್ಲಿಂದು ಪ್ರವಾಸಿಗರು ಸಡಗರ ಸಂಭ್ರಮದಿಂದ ಕೇಕ್ ಕತ್ತರಿಸಿ ಹೊಸವರ್ಷವನ್ನು ಸ್ವಾಗತಿಸಿದ್ರು. ಚಿತ್ರದುರ್ಗ ಎಂದಾಕ್ಷಣ ತಟ್ಟನೆ ನೆನಪಾಗೋದು  ಏಳು ಸುತ್ತಿನ ಕೋಟೆ. ಆ ಕಲ್ಲಿನ ಕೋಟೆಗಿಂದು ಪ್ರವಾಸಿರ ದಂಡೇ ಹರಿದು ಬಂದಿತ್ತು. ಸಕುಟುಂಬ ಸಮೇತರಾಗಿ ಚಿಕ್ಕ ಚಿಕ್ಕ ಮಕ್ಕಳು, ಸ್ನೇಹಿತರು ಹಾಗು ಸಂಬಂಧಿಗಳೊಂದಿಗೆ ಆಗಮಿಸಿದ್ದ ಪ್ರವಾಸಿಗರು, ಕೋಟೆಯಲ್ಲಿ ಅಪಾರ‌ ಜನಸ್ಥೋಮದ ನಡುವೇ ಕೇಕ್ ಕತ್ತರಿಸಿ ಸಡಗರ, ಸಂಭ್ರಮದಿಂದ  2022ಕ್ಕೆ ಗುಡ್ ಬೈ ಹೇಳಿ 2023 ನ್ನು ಸ್ವಾಗತಿಸಿದ್ರು. ಅಲ್ದೇ ಹೊರರಾಜ್ಯ, ಹೊರಜಿಲ್ಲೆ ಸೇರಿದಂತೆ ವಿವಿದೆಡೆಗಳಿಂದಲೂ ಗುಂಪು ಗುಂಪಾಗಿ ಬಂದಿದ್ದ ಪ್ರವಾಸಿಗರು ಸಡಗರ ಸಂಭ್ರಮದಿಂದ ಹೊಸವರ್ಷಾಚರಣೆ ಮಾಡಿದ್ರು.

New Year 2023: ಸಂಖ್ಯಾಶಾಸ್ತ್ರದ ಪ್ರಕಾರ ಈ ವರ್ಷ ನಿಮ್ಮ ಭವಿಷ್ಯ ಹೇಗಿದೆ ?

ಇನ್ನು ನೂತನ ವರ್ಷಾಚರಣೆಗೆ ಎಲ್ಲರೂ ಹೈಟೆಕ್ ಸಿಟಿಗಳತ್ತ ಮುಖಮಾಡ್ತಾರೆ. ಆದ್ರೆ ಇಲ್ಲಿನ ಸ್ಥಳಿಯರು,ಏಳುಸುತ್ತಿನ ಕೋಟೆಯಲ್ಲಿ ಹೊಸ ವರ್ಷ ಆಚರಣೆ ಮಾಡುವ ಮೂಲಕ ಸ್ವಲ್ಪ ಡಿಫರೆಂಟ್ ಆಗಿ ನೂತನ ವರ್ಷವನ್ನು ಬರಮಾಡಿಕೊಂಡ್ರು. ಅಲ್ದೇ ಆಕರ್ಷಕ ಕಲ್ಲಿನ ಮದ್ಯೆ ನಿಂತು ಸೆಲ್ಫಿನ ಕ್ಲಿಕ್ಕಿಸಿಕೊಂಡ  ಪ್ರವಾಸಿಗರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಹಾಗೆಯೇ ಕಲ್ಲಿನ ಕೋಟೆಯನ್ನು ಸರಾಗವಾಗಿ ಏರುತಿದ್ದ ಸ್ಪೈಡರ್ ಮ್ಯಾನ್ ಖ್ಯಾತಿಯವ ಕೋತಿರಾಜ್ ಸಾಹಸ ನೋಡಿ ಪುಳಕಿತರಾದ್ರು.

2023ರ ಮುನ್ನೋಟ: ಈ ವರ್ಷದ 16 ಪ್ರಮುಖ ಘಟನೆಗಳನ್ನ ಮಿಸ್ ಮಾಡಲೇ ಬೇಡಿ

ಒಟ್ಟಾರೆ ಕಲ್ಲಿನ ಕೋಟೆಯಲ್ಲಿ ಅಪಾರ ಜನಸ್ಥೋಮದ ಮದ್ಯೆ ಕೇಕ್ ಕತ್ತರಿಸಿದ ಪ್ರವಾಸಿಗರು 2022ಕ್ಕೆ ಗುಡ್ ಬೈ ಹೇಳಿ,  2023 ಕ್ಕೆ ಹಾಯ್ ಹೇಳುವ ಮೂಲಕ ಹೊಸ ವರ್ಷವನ್ನು ಸ್ವಾಗತಿಸಿದರು. ಈ ವೇಳೆ ಅವರ ಆಚರಣೆಯ ಆಕರ್ಷಕ ದೃಶ್ಯಗಳು ಎಲ್ಲರ ಕಣ್ಮನ ಸೆಳೆದವು.

Latest Videos
Follow Us:
Download App:
  • android
  • ios