Asianet Suvarna News Asianet Suvarna News

ಪ್ರವಾಸಿ ತಾಣಗಳು ಮಾತ್ರವಲ್ಲ, ಚಿಕ್ಕಮಗಳೂರಿನ ಧಾರ್ಮಿಕ ಕ್ಷೇತ್ರಗಳಿಗೂ ಪ್ರವಾಸಿಗರ ದಂಡು

 ಹೊಸ ವರ್ಷದಲ್ಲಿ ಕೇವಲ ಪ್ರವಾಸಿ ತಾಣಗಳು ಮಾತ್ರ ಫುಲ್ ಆಗದೆ ಧಾರ್ಮಿಕ ಕ್ಷೇತ್ರಗಳಿಗೂ ಪ್ರವಾಸಿಗರ ದಂಡು ಹರಿದು ಬಂದಿದೆ.  ನಾಡಿನ ಸುಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಾದ ಶೃಂಗೇರಿ ಶಾರದಾಂಭೆ, ಹೊರನಾಡು ಅನ್ನಪೂರ್ಣೇಶ್ವರಿ ಹಾಗೂ ದಕ್ಷಿಣ ಕಾಶಿ ಎಂದೇ ಕರೆಸಿಕೊಳ್ಳೋ ಕಳಸದ ಕಳಸೇಶ್ವರ ಸ್ವಾಮಿ ದೇಗುಲಕ್ಕೂ ಪ್ರವಾಸಿಗರ ದಂಡು ಹರಿದು ಬಂದಿದೆ. 

Religious places of Chikkamagaluru rushed tourists for New Year 2023 gow
Author
First Published Jan 1, 2023, 9:27 PM IST

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಚಿಕ್ಕಮಗಳೂರು(ಜ.1): ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಹೊಸ ವರ್ಷದಲ್ಲಿ ಕೇವಲ ಪ್ರವಾಸಿ ತಾಣಗಳು ಮಾತ್ರ ಫುಲ್ ಆಗದೆ ಧಾರ್ಮಿಕ ಕ್ಷೇತ್ರಗಳಿಗೂ ಪ್ರವಾಸಿಗರ ದಂಡು ಹರಿದು ಬಂದಿದೆ. ನಾಡಿನ ಸುಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಾದ ಶೃಂಗೇರಿ ಶಾರದಾಂಭೆ, ಹೊರನಾಡು ಅನ್ನಪೂರ್ಣೇಶ್ವರಿ ಹಾಗೂ ದಕ್ಷಿಣ ಕಾಶಿ ಎಂದೇ ಕರೆಸಿಕೊಳ್ಳೋ ಕಳಸದ ಕಳಸೇಶ್ವರ ಸ್ವಾಮಿ ದೇಗುಲಕ್ಕೂ ಪ್ರವಾಸಿಗರ ದಂಡು ಹರಿದು ಬಂದಿದೆ. 

ದೇವರ ದರ್ಶನ ಪಡೆಯುವ ಮೂಲಕ ಹೊಸ ವರ್ಷದ ಸಂಭ್ರಮ: 
ಶೃಂಗೇರಿ, ಕಳಸ, ಕೊಪ್ಪ, ಎನ್.ಆರ್.ಪುರ ತಾಲೂಕಿನ ಹೋಂಸ್ಟೇ, ರೆಸಾರ್ಟ್ಗಳಲ್ಲಿ ವಾಸ್ತವ್ಯ ಹೂಡಿದ್ದ ಪ್ರವಾಸಿಗರು ಇಂದು ಶೃಂಗೇರಿ, ಹೊರನಾಡು, ಕಳಸಕ್ಕೆ ಭೇಟಿ ನೀಡಿ ದೇವಸ್ಥಾನದಲ್ಲಿ ದೇವರ ದರ್ಶನ ಪಡೆಯುವ ಮೂಲಕ ಹೊಸ ವರ್ಷದ ಸಂಭ್ರಮವನ್ನ ಆಚರಿಸಿದ್ದಾರೆ. ಅದರಲ್ಲೂ ಪ್ರಮುಖವಾಗಿ ನಾಡಿನ ಅದಿದೇವತೆಗಳಾದ ಹೊರನಾಡು ಅನ್ನಪೂರ್ಣೇಶ್ವರಿ ಹಾಗೂ ಶೃಂಗೇರಿ ಶಾರದಾಂಬೆ ದೇಗುಲದಲ್ಲಿ ಭಾರೀ ಪ್ರವಾಸಿಗರು ಹಾಗೂ ಭಕ್ತರು ಭೇಟಿ ನೀಡಿದ್ದರು. 

ಬೆಂಗಳೂರು, ಮೈಸೂರು ಭಾಗದ ಪ್ರವಾಸಿಗರು ಬೆಳ್ಳಂಬೆಳಗ್ಗೆಯೇ ದೇವರ ದರ್ಶನ ಮಾಡಿಕೊಂಡು ತಮ್ಮ ಊರಿಗೆ ಹಿಂದಿರುಗುವ ವೇಳೆ ಮುಳ್ಳಯ್ಯನಗಿರಿಗೆ ಭೇಟಿ ನೀಡಿ ವಾಪಸ್ ಹೋಗಲು ಮುಂದಾದರು. ಈ ವೇಳೆ, ಮುಳ್ಳಯ್ಯನಗಿರಿ ಮಾರ್ಗದಲ್ಲಿ ಕಿರಿದಾದ ರಸ್ತೆ ಇರೋದ್ರಿಂದ ಕೆಲ ಕಾಲ ಟ್ರಾಫಿಕ್ ಜಾಮ್ ಕೂಡ ಉಂಟಾಗಿತ್ತು. ಕೈಮರಾ ಚೆಕ್ಪೋಸ್ಟ್ಗಳಲ್ಲಿ ಗಾಡಿಗಳ ಸಂಖ್ಯೆ ಹೆಚ್ಚಾದ ಕಾರಣ ಕಂಟ್ರೋಲ್ ಮಾಡಲಾಗದೆ ಬಂದ ಗಾಡಿಗಳನ್ನ ಯಾವುದೇ ಶುಲ್ಕ ವಿಧಿಸದೆ ಟ್ರಾಫಿಕ್ ಕ್ಲಿಯರ್ ಮಾಡಿದೇ ಹಾಗೇ ಬಿಟ್ಟಿದ್ದಾರೆ.

ಕೊಟ್ಟಿಗೆಹಾರದಲ್ಲಿ ಟ್ರಾಫಿಕ್ ಜಾಮ್:
ಇಯರ್ ಎಂಡ್ ಸೆಲೆಬ್ರೇಷನ್ ಮುಗಿಸಿ ತಮ್ಮ ತಮ್ಮ ಊರಿಗಳಿಗೆ ಪ್ರವಾಸಿಗರು ವಾಪಸ್ ಹೊರಟ ಪರಿಣಾಮ ಜಿಲ್ಲೆಯ ಚಾರ್ಮಾಡಿ ಘಾಟ್ ಸಮೀಪದ ಕೊಟ್ಟಿಗೆಹಾರದಲ್ಲಿ ಫುಲ್ ಟ್ರಾಫಿಕ್ ಜಾಮ್  ಉಂಟಾಗಿತ್ತು.ಹೊಸ ವರ್ಷಾಚರಣೆ ಹಿನ್ನಲೆ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಆಗಮಿಸಿದರು. ಹೊಂ ಸ್ಟೇ, ರೆಸಾರ್ಟ್ ಚೆಕೌಟ್ ಮಾಡಿ ಪ್ರವಾಸಿಗರು  ಹೊರಟ ಹಿನ್ನೆಲೆಯಲ್ಲಿ ರಸ್ತೆಯಲ್ಲಿ  ಸಾಲು ವಾಹನಗಳು ನಿಂತ ಪರಿಣಾಮ ಟ್ರಾಫಿಕ್ ಜಾಮ್ ಉಂಟಾಗಿತ್ತು.ರಸ್ತೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ವಾಹನ ಸಂಚಾರದಿಂದ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರ ಪರದಾಟ ನಡೆಸಿದರು.

 

ನ್ಯೂ ಇಯರ್ ಸೆಲೆಬ್ರೇಷನ್‌ ಗೆ ಚಿತ್ರದುರ್ಗದಲ್ಲಿ ಲಕ್ಷಾಂತರ ಮಂದಿ ಭಾಗಿ

ಮುಳ್ಳಯ್ಯನಗಿರಿಗೆ ಎರಡೇ ದಿನದಲ್ಲಿ 4220 ವಾಹನಗಳಲ್ಲಿ ಪ್ರವಾಸಿಗರು ಭೇಟಿ: 
ಕಳೆದ ಎರಡ್ಮೂರು ದಿನಗಳಿಂದ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಜಮಾಯಿಸಿದ್ದ ರಾಜ್ಯ-ಹೊರರಾಜ್ಯದ ನಾನಾ ಭಾಗದ ಪ್ರವಾಸಿಗರು ಇಂದು ಜಿಲ್ಲೆಯ ಸುಪ್ರಸಿದ್ಧ ಪ್ರವಾಸಿ ತಾಣಗಳಾದ  ಮುಳ್ಳಯ್ಯನಗಿರಿ, ಸೀತಾಳಯ್ಯನ ಗಿರಿ, ದತ್ತಪೀಠ, ಮಾಣಿಕ್ಯಾಧಾರ, ಕೆಮ್ಮಣ್ಣುಗುಂಡಿ, ಕಲ್ಲತ್ತಿಗರಿಯಲ್ಲಿ, ದೇವರಮನೆಗುಡ್ಡ ಸೇರಿದಂತೆ ವಿವಿಧ ಪ್ರವಾಸಿ ತಾಣಗಳಲ್ಲಿ ಜಮಾಯಿಸಿ ಹೊಸ ವರ್ಷದ ಸಂಭ್ರಮಾಚಾರಣೆ ನಡೆಸಿದ್ದಾರೆ.

ಚಿಕ್ಕಮಗಳೂರು ಪ್ರವಾಸಿ ತಾಣಗಳಲ್ಲಿ ಹೊಸ ವರ್ಷ ಆಚರಣೆಗೆ ಪ್ರವಾಸಿಗರು ಲಗ್ಗೆ, ಕೇಕ್‌ಗೆ ಇನ್ನಿಲ್ಲದ ಬೇಡಿಕೆ

ಕರ್ನಾಟಕದ ಅತ್ಯಂತ ಎತ್ತರದ ಪ್ರದೇಶ ಎಂದೇ ಕರೆಸಿಕೊಳ್ಳೋ ಮುಳ್ಳಯ್ಯನಗಿರಿಗೆ ಎರಡೇ ದಿನದಲ್ಲಿ ಕಾರು-ಬೈಕ್-ಟಿಟಿ ಸೇರಿ ಸುಮಾರು 4220ರಷ್ಟು ಗಾಡಿಗಳು ಭೇಟಿ ನೀಡಿವೆ. 115 ಬೈಕ್, 2889 ಕಾರು ಹಾಗೂ 245 ಟಿಟಿ ಹಾಗೂ ಮಿನಿ ಬಸ್ನಲ್ಲಿ ಪ್ರವಾಸಿಗರು ಭೇಟಿ ನೀಡಿದ್ದಾರೆ. ಇಂದು ಕೂಡು ಮುಳ್ಳಯ್ಯನಗಿರಿಯಲ್ಲಿ ಜನಜಾತ್ರೆ ಏರ್ಪಟ್ಟಿತ್ತು. ಶುಕ್ರವಾರ ಸಂಜೆಯೇ ಕಾಫಿನಾಡಿಗೆ ಭೇಟಿ ನೀಡಿದ್ದ ಪ್ರವಾಸಿಗರು ಶನಿವಾರ ಗಿರಿಪ್ರದೇಶದ ಸುತ್ತಮುತ್ತಲಿನ ಪ್ರವಾಸಿ ತಾಣ ನೋಡಿಕೊಂಡು ಹೋಂಸ್ಟೇ, ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿ ಹೊಸ ವರ್ಷದ ಆಚರಣೆಯನ್ನ ಮಾಡಿದ್ದರು. ಇಂದು ಕೂಡ ಮುಳ್ಳಯ್ಯನಗಿರಿಗೆ ಭೇಟಿ ನೀಡಿ ಪ್ರಕೃತಿ ಸೌಂದರ್ಯವನ್ನ ಸವಿದು ತಮ್ಮ-ತಮ್ಮ ಊರುಗಳಿಗೆ ಹಿಂದುರಿಗಿದ್ದಾರೆ. ಕಳೆದ ಎರಡ್ಮೂರು ದಿನಗಳಿಂದ ಪ್ರವಾಸಿಗರಿಂದ ಜಗಮಗಿಸುತ್ತಿದ್ದ ಕಾಫಿನಾಡು ನಾಳೆಯಿಂದ ಮತ್ತೆ ಸಹಜ ಸ್ಥಿತಿ ಮರಳಲಿದೆ.

Follow Us:
Download App:
  • android
  • ios