ಬಿಸಿಯೂಟ ಕಾರ್ಯಕರ್ತೆಯರು ಇನ್ಮುಂದೆ ಬಳೆ ತೊಡುವಂತಿಲ್ಲ; ಹೊಸ ಮಾರ್ಗಸೂಚಿಗೆ ವಿರೋಧ!
ರಾಜ್ಯದ ಸರ್ಕಾರಿ ಶಾಲೆಗಳಲ್ಲಿನ ಬಿಸಿಯೂಟ ತಯಾರಿಕೆ ಸಿಬ್ಬಂದಿ ಕೈಗೆ ಬಳೆತೊಡದಂತೆ ಹೊಸ ಮಾರ್ಗಸೂಚಿ ಪ್ರಕಟಿಸಿರುವುದು ಕಾರ್ಯಕರ್ತೆಯರ ಕೆಂಗಣ್ಣಿಗೆ ಗುರಿಯಾಗಿದೆ ಮಧ್ಯಾಹ್ನದ ಬಿಸಿಯೂಟ ತಯಾರಿಕೆಯಲ್ಲಿನ ಗುಣಮಟ್ಟ ಸುರಕ್ಷತೆ, ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಸಿಬ್ಬಂದಿ ಪಾಲಿಸಬೇಕಾದ ನಿಯಮಗಳು ಕುರಿತಂತೆ ನೂತನ ಮಾರ್ಗಸೂಚಿಯಲ್ಲಿದೆ.
ಬೆಂಗಳೂರು (ಜು.15) : ರಾಜ್ಯದ ಸರ್ಕಾರಿ ಶಾಲೆಗಳಲ್ಲಿನ ಬಿಸಿಯೂಟ ತಯಾರಿಕೆ ಸಿಬ್ಬಂದಿ ಕೈಗೆ ಬಳೆತೊಡದಂತೆ ಹೊಸ ಮಾರ್ಗಸೂಚಿ ಪ್ರಕಟಿಸಿರುವುದು ಕಾರ್ಯಕರ್ತೆಯರು, ಹಿಂದು ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ. ಮಧ್ಯಾಹ್ನದ ಬಿಸಿಯೂಟ ತಯಾರಿಕೆಯಲ್ಲಿನ ಗುಣಮಟ್ಟ ಸುರಕ್ಷತೆ, ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಸಿಬ್ಬಂದಿ ಪಾಲಿಸಬೇಕಾದ ನಿಯಮಗಳು ಕುರಿತಂತೆ ನೂತನ ಮಾರ್ಗಸೂಚಿಯಲ್ಲಿ ಆದೇಶಿಸಲಾಗಿದೆ.
ಬಿಸಿಯೂಟ ತಯಾರಿಸುವ ಅಡುಗೆ ಸಿಬ್ಬಂದಿ ಬಹುತೇಕ ಮಹಿಳೆಯರು ಬಳೆ, ಬಿಂದಿಗೆ ಧರಿಸುತ್ತಾರೆ. ಆದರೆ ಇದೀಗ ಈ ಹೊಸ ಆದೇಶದಿಂದ ತೀವ್ರ ಸಿಡಿಮಿಡಿಗೊಂಡಿದ್ದಾರೆ.
ಪಬ್ಲಿಕ್ ಟಾಯ್ಲೆಟ್ಟಾದ ಸರ್ಕಾರಿ ಶಾಲೆ; ತರಗತಿಯೊಳಗೆ ಮಕ್ಕಳಿದ್ದಾಗಲೂ ಬಂದು ಮೂತ್ರ ಮಾಡ್ತಾರೆ!
ಇಂಥ ಆದೇಶಗಳು ಹಿಂದುಗಳ ಮೇಲೆ ಒಂದಿಲ್ಲೊಂದು ರೀತಿಯಲ್ಲಿ ತೊಂದರೆ ಕೊಡುತ್ತಿದೆ. ರಾಜ್ಯದ್ಯಂತ 55 ಸಾವಿರ ಅಡುಗೆ ಸಿಬ್ಬಂದಿ ಇದ್ದು ಅವರಲ್ಲಿ ಬಹುತೇಕ ಮಂದಿ ಕುಂಕುಮ ಬಳೆ ಹಾಕುವವರೇ ಇದ್ದಾರೆ ಇಲಾಖೆಯ ಈ ಆದೇಶ ಈಗ ವೈಯಕ್ತಿಕ ಧಾರ್ಮಿಕ ಸ್ವಾತಂತ್ರ್ಯ ಕಿತ್ತು ಕೊಳ್ಳುವಂತಿದೆ ಎಂದು ಹಿಂದೂಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಮಕ್ಕಳ ಮೇಲೆ ಕಾಳಜಿ ಇದ್ದಿದ್ರೆ ಈ ನಿಯಮ ಹಿಂದೇ ಮಾಡಬೇಕಿತ್ತು. ಅಷ್ಟಕ್ಕೂ ಕೋಟ್ಯಂತರ ತಾಯಂದಿರು ಮನೆಯಲ್ಲಿ ಕೈಗೆ ಬಳೆ ತೊಡದೇ ಅಡುಗೆ ಮಾಡ್ತಾರಾ? ಬಳೆ ತೊಟ್ಟು ಅವರು ಮಾಡುವ ಅಡುಗೆ ಸುರಕ್ಷತೆ, ಗುಣಮ್ಟಟದಲ್ಲಿಲ್ಲವಾ? ಶಿಕ್ಷಣ ಇಲಾಖೆ ಮೂಲಕ ಮೂಲಕ ಹಿಂದು ಧಾರ್ಮಿಕ ಸ್ವಾತಂತ್ರ್ಯ ಹತ್ತಿಕ್ಕುವ ನಿಯಮ ರೂಪಿಸಿರುವುದು ಉದ್ದೇಶ ಪೂರ್ವಕವಾಗಿದೆ. ಇದು ಸರ್ಕಾರದಿಂದ ನಡೆಯುತ್ತಿರುವ ದ್ವೇಷ ರಾಜಕಾರಣ ಅಂತ ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತರಕಾರಿಗಳ ಬೆಲೆ ಏರಿಕೆಯಿಂದಾಗಿ ಅಂಗನವಾಡಿ ಕೇಂದ್ರಗಳಿಗೆ ಎಫೆಕ್ಟ್: ಬಿಸಿಯೂಟದಲ್ಲಿ ಪೌಷ್ಠಿಕಾಂಶದ ಕೊರತೆ
ಮಹಿಳೆಯರು ತೊಡುವ ಬಳೆಯಿಂದ ಇಲ್ಲಿಯವರೆಗೆ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಆದರೂ ಆದ್ರು ಸರ್ಕಾರ ಈ ರೀತಿ ಆದೇಶ ಹೊರಡಿಸಿದೆ. ಈ ಕೂಡಲೇ ಆದೇಶ ವಾಪಸ್ಸು ಪಡೆಯಬೇಕು.. ಇಲ್ಲವೆಂದರೆ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಹಿಂದು ಜನಜಾಗೃತಿ ಸಮಿತಿ ಎಚ್ಚರಿಸಿದೆ. ಇದೇ ಬೆನ್ನಲ್ಲೇ ಸಿಎಂ ಕರ್ನಾಟಕ ಟ್ವೀಟ್ ಮಾಡಿದ್ದು, ಅಂಗನವಾಡಿ ಕಾರ್ಯಕರ್ತರೆಯರು ಬಳೆ ಧರಿಸದಂತೆ ಆದೇಶ ನೀಡಿದ್ದು ಶಿಕ್ಷಣ ಇಲಾಖೆಯಲ್ಲ. ಬದಲಾಗಿ ಕೇಂದ್ರ ಸರಕಾರದ ಪೋಷಣ್ ಯೋಜನೆಯ ಹೊಸ ಮಾರ್ಗಸೂಚಿ ಎಂದು ಸ್ಪಷ್ಟಪಡಿಸಿದೆ.
ಒಟ್ಟಿನಲ್ಲಿ ಇಂಥ ಆದೇಶದಿಂದ ಹಿಂದೂಗಳ ಆಕ್ರೋಶಕ್ಕೆ ಕಾರಣವಾಗಿದೆ.