Asianet Suvarna News Asianet Suvarna News

ತರಕಾರಿಗಳ ಬೆಲೆ ಏರಿಕೆಯಿಂದಾಗಿ ಅಂಗನವಾಡಿ ಕೇಂದ್ರಗಳಿಗೆ ಎಫೆಕ್ಟ್: ಬಿಸಿಯೂಟದಲ್ಲಿ ಪೌಷ್ಠಿಕಾಂಶದ ಕೊರತೆ

ತರಕಾರಿಗಳ ಬೆಲೆ ಏರಿಕೆಯಿಂದಾಗಿ ಅಂಗನವಾಡಿ ಕೇಂದ್ರಗಳಿಗೂ ಶಾಕ್ ಎದುರಾಗಿದೆ. ತರಕಾರಿ ಹಾಗು ದಿನನಿತ್ಯ ಬಳಸುವ ವಸ್ತುಗಳು ಗಗನಕುಸುಮವಾದ ಹಿನ್ನೆಲೆ ತರಕಾರಿ ಖರೀದಿಗೂ ಹಿಂದೆ ಮುಂದೆ ಯೋಚಿಸುವ ಪರಿಸ್ಥಿತಿ ಎದುರಾಗಿದೆ. 

Anganwadi centers also get a shock due to the increase in price of vegetables gvd
Author
First Published Jul 12, 2023, 10:39 AM IST

ಬೆಂಗಳೂರು (ಜು.12): ತರಕಾರಿಗಳ ಬೆಲೆ ಏರಿಕೆಯಿಂದಾಗಿ ಅಂಗನವಾಡಿ ಕೇಂದ್ರಗಳಿಗೂ ಶಾಕ್ ಎದುರಾಗಿದೆ. ತರಕಾರಿ ಹಾಗು ದಿನನಿತ್ಯ ಬಳಸುವ ವಸ್ತುಗಳು ಗಗನಕುಸುಮವಾದ ಹಿನ್ನೆಲೆ ತರಕಾರಿ ಖರೀದಿಗೂ ಹಿಂದೆ ಮುಂದೆ ಯೋಚಿಸುವ ಪರಿಸ್ಥಿತಿ ಎದುರಾಗಿದೆ. ದುಬಾರಿ ಬೆಲೆ ಕಾರಣ ಶಾಲಾ ಬಿಸಿಯೂಟದಲ್ಲಿ ಪೌಷ್ಠಿಕಾಂಶದ ಕೊರತೆ ಎದುರಾಗಿದೆ. ಅಂಗನವಾಡಿ ಕೇಂದ್ರಗಳು‌ ನೀಡುತ್ತಿರೋ ಊಟದಲ್ಲಿ ತರಕಾರಿ ತುಂಡುಗಳೆ ನಾಪತ್ತೆ ಆಗಿದೆ. ಅಂಗನವಾಡಿ ಕೇಂದ್ರಗಳು ಬರಿ ಅನ್ನ ಮತ್ತು ತಿಳಿಸಾರು  ಮೊರೆ ಹೋಗಿದ್ದಾರೆ.

ಮಕ್ಕಳು ಮತ್ತು ಬಾಣಂತಿಯಾರಿಗೆ ಪೌಷ್ಠಿಕ ಆಹಾರ ನೀಡಲಾಗುತ್ತಿತ್ತು. ಬೆಲೆ ಏರಿಕೆ ಬೆನ್ನಲೆ ಅಂಗನವಾಡಿಗಳಲ್ಲಿ  ಒದಗಿಸುತ್ತಿರುವ ಆಹಾರದಲ್ಲಿ ಪೌಷ್ಠಿಕತೆ ಕಡಿಮೆ ಇದೆ. ಸೊಪ್ಪು, ತರಕಾರಿ ಊಟ ನೀಡುತ್ತಿದ್ದ ಕೇಂದ್ರಗಳು, ಇದೀಗ ಸೊಪ್ಪು, ತರಕಾರಿ ಗಗನಕೆ ಏರಿದ ಪರಿಣಾಮ ಬೇಳೆಸಾರು ಮತ್ತು ತಿಳಿಸಾರಿಗೆ ಫಿಕ್ಸ್ ಆಗಿದ್ದಾರೆ. ಬೆಲೆ ಏರಿಕೆಯಿಂದಾಗಿ ಎಲ್ಲಾ ವಲಯಗಳಲ್ಲೂ ಕಳವಳ ವ್ಯಕ್ತವಾಗಿದ್ದು, ಈ ಬಗ್ಗೆ ಸುವರ್ಣ ನ್ಯೂಸ್‌ಗೆ ಅಂಗನವಾಡಿ ಶಿಕ್ಷಕರ ಸಂಘಟನೆ ಅಧ್ಯಕ್ಷೆ ಜಯಮ್ಮ ಮಾಹಿತಿ ನೀಡಿದ್ದಾರೆ.

ಬೆಂಗಳೂರಲ್ಲಿ ತಪ್ಪಿದ ಭಾರೀ ದುರಂತ: ಟೆಕ್ನಿಕಲ್ ಸಮಸ್ಯೆಯಿಂದ ಸೇನಾ ವಿಮಾನ ತುರ್ತು ಭೂಸ್ಪರ್ಶ

ಗೌರವಧನ ಹೆಚ್ಚಿಸಲು ಅಂಗನವಾಡಿ ನೌಕರರ ಪಟ್ಟು: ಗೌರವಧನ ಹೆಚ್ಚಳ, ಹೊಸ ಮೊಬೈಲ್‌ಗಳ ವಿತರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಂಗನವಾಡಿ ನೌಕರರು ಸೋಮವಾರ ನಗರದ ಸಿಡಿಪಿಒ ಕಚೇರಿ ಮುಂದೆ ಸಿಐಟಿಯು ನೇತೃತ್ವದಲ್ಲಿ ಕಪ್ಪುಪಟ್ಟಿಧರಿಸಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಎಲ್‌.ಆರ್‌.ನಳಿನಾಕ್ಷಿ, ಅಂಗನವಾಡಿ ಕಾರ್ಯಕರ್ತೆಯರಿಗೆ ಸಾಮಾಜಿಕ ಭದ್ರತೆಗಳಾದ ಇಎಸ್‌ಐ, ಪಿಎಫ್‌, ಪಿಂಚಣಿ, ಎಕ್ಸ್‌ಗ್ರೇಷಿಯಾ ಇತರೆ ಸೌಲಭ್ಯ ಕೊಡಬೇಕು. 

45 ಮತ್ತು 46 ನೇ ಇಂಡಿಯನ್‌ ಲೇಬರ್‌ ಕಾನ್ಸರೆನ್ಸ್‌ ಶಿಫಾರಸ್ಸು ಜಾರಿ ಮಾಡಬೇಕು. ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಗ್ರಾಚ್ಯುಟಿ ಕೊಡುವ ಕುರಿತಂತೆ ಸುಪ್ರೀಂಕೋರ್ಟ್‌ ನೀಡಿರುವ ತೀರ್ಪನ್ನು ಕೂಡಲೇ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು. ಸರ್ಕಾರ ನೀಡಿರುವ ಸ್ಮಾರ್ಟ್‌ ಫೋನ್‌ ಹಳೆಯ ಮಾದರಿಯಾಗಿದ್ದು, ವೇಗವಾಗಿ ಕೆಲಸ ಮಾಡುತ್ತಿಲ್ಲ. ಇಂದ್ರಧನುಷ್‌, ಗುರುಡಾ ಆ?ಯಪ್‌ ಮೂಲಕ ಸಮೀಕ್ಷೆಗಳನ್ನು ನಡೆಸಬೇಕಾಗಿದೆ. ಆದರೆ, ಸ್ಮಾರ್ಟ್‌ ಪೋನ್‌ಗಳು ನಿಧಾನಗತಿಯಲ್ಲಿ ಕೆಲಸ ಮಾಡುತ್ತಿದ್ದು, ಸಮಸ್ಯೆಯಾಗಿದೆ. 

ನಮ್ಗೆ ಪೋಲಿಸ್‌ ಮೇಲೆ ನಂಬಿಕೆಯಿದೆ, ಸಿದ್ದು ಸರ್ಕಾರದ ಮೇಲಿಲ್ಲ: ನಳಿನ್‌ ಕುಮಾರ್ ಕಟೀಲ್‌

ಕೂಡಲೇ ಹಳೆಯ ಫೋನ್‌ ವಾಪಸ್‌ ಪಡೆದು, ಹೊಸ ಫೋನ್‌ ಕೊಡಬೇಕು. ಗೌರವಧನ ವಿತರಣೆ ವಿಳಂಬ ತಪ್ಪಿಸಬೇಕು. ಕೆಲವೆಡೆ ಅಂಗನವಾಡಿ ಕಾರ್ಯಕರ್ತೆಯರು ಮಾತ್ರ ಇದ್ದು, ಸಹಾಯಕಿಯರಿಲ್ಲ. ಮೊಟ್ಟೆ, ತರಕಾರಿ ನೀಡುತ್ತಿರುವ ಹಣ ಸಾಕಾಗುತ್ತಿಲ್ಲ. ನೌಕರರ ಈ ಎಲ್ಲಾ ಸಮಸೆಗಳನ್ನು ಸರ್ಕಾರ ಬಗೆಹರಿಸಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ತಾಲೂಕು ಘಟಕದ ಅಧ್ಯಕ್ಷೆ ಟಿ.ಡಿ.ಮಂಜುಳಾ, ಕಾರ್ಯದರ್ಶಿ ಸುಮಾ ಇದ್ದರು.

Follow Us:
Download App:
  • android
  • ios