BLR-MYR Road Toll: ಹೆದ್ದಾರಿ ಪ್ರಾಧಿಕಾರದ ನಿರ್ಧಾರಕ್ಕೆ ನೆಟ್ಟಿಗರ ತರಾಟೆ: ಅಪೂರ್ಣ ರಸ್ತೆಗೆ ಟೋಲ್‌ ಸಂಗ್ರಹಕ್ಕೆ ವಿರೋಧ

ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ ವೇ ಟೋಲ್‌ ಶುಲ್ಕ ನಾಳೆಯಿಂದ ಜಾರಿ ಆಗಲಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ದುಬಾರಿ ಶುಲ್ಕದ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರಿಂದ ಭಾರಿ ವಿರೋಧ ವ್ಯಕ್ತವಾಗುತ್ತಿದೆ. 

Netizens oppose NH decision for Bengaluru Mysuru Toll collection even though road is incomplete sat

ಬೆಂಗಳೂರು (ಫೆ.27): ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ ವೇ (ರಾಷ್ಟ್ರೀಯ ಹೆದ್ದಾರಿ- 275) ಟೋಲ್‌ ಶುಲ್ಕ ನಾಳೆಯಿಂದ ಜಾರಿ ಆಗಲಿದೆ. ಬೆಂಗಳೂರಿನ ಕಣಿಮಿಣಿಕೆಯಿಂದ- ಮಂಡ್ಯದ ನಿಡಘಟ್ಟದವರೆಗೆ ಮಾತ್ರ 135 ರೂ. ಟೋಲ್‌ ಶುಲ್ಕ ವಿಧಿಸಲಾಗುತ್ತಿದೆ. ಬಹುತೇಕ ಸರ್ವೀಸ್‌ ರಸ್ತೆ ಸೇರಿ ಮೈಸೂರುವರೆಗೆ ಕಾಮಗಾರಿ ಪೂರ್ಣಗೊಳ್ಳದಿದ್ದರೂ ದುಬಾರಿ ಟೋಲ್‌ ವಿಧಿಸುತ್ತಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿರುದ್ಧ ನೆಟ್ಟಿಗರು ಭಾರಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಬೆಂಗಳೂರು ಮೈಸೂರು ದಶಕಥ ಹೆದ್ದಾರಿಯ ಮೊದಲ ಹಂತದ 55.63 ಕಿಲೋಮೀಟರ್ ರಸ್ತೆಗೆ ಟೋಲ್ ವಸೂಲಾತಿಯನ್ನು ಫೆಬ್ರವರಿ 28 ರ ಬೆಳಗ್ಗೆ 8 ಗಂಟೆಯಿಂದ ಆರಂಭಿಸಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಿಳಿಸಿದೆ. ವಿವಿಧ ಮಾದರಿಯ ವಾಹನಗಳಿಗೆ ಪ್ರಾಧಿಕಾರ ಪ್ರತ್ಯೇಕ ದರ ನಿಗದಿಪಡಿಸಿದೆ. ಸರ್ವಿಸ್ ರಸ್ತೆ ಹೊರತುಪಡಿಸಿ ಉಳಿದ ಆರು ಪಥದ ರಸ್ತೆಗಳಿಗೆ ಈ ದರ ಅನ್ವಯವಾಗಲಿದೆ ಎಂದು ತಿಳಿಸಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಸಾಆಜಿಕ ಜಾಲತಾಣಗಳಲ್ಲಿ ಭಾರಿ ವಿರೋಧ ವ್ಯಕ್ತವಾಗುತ್ತಿದೆ.

ನಾಳೆಯಿಂದಲೇ ಬೆಂಗಳೂರು - ಮೈಸೂರು ಎಕ್ಸ್‌ಪ್ರೆಸ್‌ ವೇ ಟೋಲ್‌ ಶುಲ್ಕ ಜಾರಿ: ವಾಹನಗಳ ಶುಲ್ಕ ವಿವರ ನೋಡಿ

ಟೋಲ್‌ ಸಂಗ್ರಹಕ್ಕೆ ಪರ-ವಿರೋಧ: ಬೆಂಗಳೂರು ಮೈಸೂರು ದಶಪಥ ರಸ್ತೆಗೆ ಟೋಲ್‌ ಆರಂಭವಾಗಲಿದೆ ಎಂಬ 'ಏಷ್ಯಾನೆಟ್‌ ಡಿಜಿಟಲ್‌ ನ್ಯೂಸ್‌' ಹಂಚಿಕೊಂಡ ಸುದ್ದಿಗೆ ಸಾಮಾಜಿಕ ಜಾಲತಾಣದಲ್ಲಿ ಪರ - ವಿರೋಧ ವ್ಯಕ್ತವಾಗಿದೆ. ಕೆಲವರು ಸರ್ಕಾರ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ತರಾಟೆ ತೆಗೆದುಕೊಂಡಿದ್ದಾರೆ. ಇನ್ನು ಕೆಲವರು ಜಾಗತಿಕವಾಗಿ ನಮ್ಮ ದೇಶದಲ್ಲಿ ಮಾತ್ರವಲ್ಲ, ಅಭಿವೃದ್ಧಿ ಹೊಂದಿದ ದೇಶಗಳು ಒಳಗೊಂಡಂತೆ ಬಹುತೇಕ ದೇಶಗಳಲ್ಲಿ ರಸ್ತೆಯ ಟೋಲ್‌ ವಸೂಲಿ ಮಾಡಲಾಗುತ್ತಿದೆ. ನಮ್ಮ ದೇಶದಲ್ಲಿ ಟೋಲ್‌ ವಸೂಲಿ ಮಾಡುವುದರಲ್ಲಿ ಯಾವುದೇ ಉತ್ಪ್ರೇಕ್ಷೆಯಲ್ಲ. ಇನ್ನು ಯಾರು ಟೋಲ್‌ ಕಟ್ಟಲು ಸಾಧ್ಯವಿಲ್ಲವೋ ಅವರು ಸರ್ವಿಸ್‌ ರಸ್ತೆಯಲ್ಲಿ ಹೋಗಬಹುದು ಎಂದು ನೆಟಿಜೆನ್‌ಗಳು ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧ ವ್ಯಕ್ತಪಡಿಸಿದ್ದಾರೆ. 

Netizens oppose NH decision for Bengaluru Mysuru Toll collection even though road is incomplete sat

ರಸ್ತೆಯ ಟೋಲ್‌ ಶುಲ್ಕ ಪರವಾಗಿ ಪ್ರತಿಕ್ರಿಯೆ:
Ajay Sharma: ಫ್ರೀ ಇದಿದ್ರೆ ರೋಡ್ ಚೆನ್ನಾಗಿರುತ್ತೆ ಕ್ವಾಲಿಟಿ ಇರುತ್ತೆ ರುಲಿಂಗ್ ಪಾರ್ಟಿ ಕೂಡ ಚೆನ್ನಾಗಿರುತ್ತೆ. ಟೋಲ್ ಬಂದ್ರೆ ಯಾವ್ದು ಚೆನ್ನಾಗಿಲ್ಲ ನಮ್ಮ ಜನರಿಗೆ ಎಂತ 
Prashanth Rb: ಯಾರು ಟೋಲ್ ಪಾವತಿಸಲು ಇಷ್ಟವಿಲ್ಲ. ಸರಳ ವಿಧಾನವನ್ನು ಬಳಸಿ. ಸೇವಾ ಮಾರ್ಗವನ್ನು ಬಳಸಿ ಮತ್ತು ಪ್ರಯಾಣವನ್ನು ಆನಂದಿಸಿ
Jayavarma Hegde: ಸರಿಯಾದ ಮಾತು....ಯಾವ ದೇಶದಲ್ಲಿ ಟೋಲ್ ಇಲ್ಲ
ರಮೇಶ್ ವಿ ಚಿಕ್ಕಮಗಳೂರು: ಪ್ರಪಂಚದಲ್ಲಿ ಒಳ್ಳೆ ರಸ್ತೆ ಎಲ್ಲಿದೆ ಅಲ್ಲೆಲ್ಲ ಟೋಲ್ ಇದೆ. ನಮ್ಮ ಜನರಿಗೆ free ಸಿಕ್ಕಿದ್ರೆ ಮಾತ್ರ ಒಳ್ಳೆ ರಸ್ತೆ, ಇಲ್ಲ ಆ ರೋಡ್ ಸರಿ ಇಲ್ಲ ಅಂತಾರೆ. ಅಂತ ಜನ ನಮ್ಮವರು.

ಮೈಸೂರು - ಬೆಂಗಳೂರು ಹೈವೇ ಟೋಲ್ ನಿಗದಿ ವಿಚಾರ, 250 ರೂ. ಟೋಲ್ ನಿಗದಿ: ಸಂಸದ ಪ್ರತಾಪ್ ಸಿಂಹ ಹೇಳಿಕೆ

ಟೋಲ್‌ ದರ ವಿರೋಧಿಸಿ ಪ್ರತಿಕ್ರಿಯೆ:
Naveen Vivan Gowda: ವಸೂಲಿ ಕಟ್ಟೆಗಳು ತಮ್ಮ ಆಟ ಪ್ರಾರಂಭಿಸುತ್ತಿವೆ ಅಂದ ಹಾಗೆ ಆಯಿತು
MD Parveez: ಇನ್ನೂ ಪೂರ್ತಿ ಕೆಲಸ ಮುಗಿದಿಲ್ಲ ಕೆಲಸ ನಡೀತಾ ಇದೆ ಜನರಿಗೆ ತೊಂದರೆ ಆಗುತಯಿದೆ, ಆಗಲೇ ದುಡ್ಡು ಕಿತ್ತು ಕೊಳ್ಳೋ ಹುನ್ನಾರ
David Anthony: ಮೊನ್ನೆ ಮೊನ್ನೆ ತಾನೆ ಸರ್ವಿಸ್ ರಸ್ತೆ ಪೂರ್ತಿ ಮುಗಿಯುವ ತನಕ ಟೋಲ್ ಕಲೆಕ್ಟ್ ಮಾಡಲ್ಲ ಅಂತಿದ್ರು, ಇದು ಬಾರಿ ದುರಾಸೆ ಸರ್ಕಾರ. ಜನರ ರಕ್ತ ಹೀರುವ ಸರ್ಕಾರ
Pradeep Gowda: ಫೇಸ್ಬುಕ್ ಸಂಸದರು ಹಾಗು ಅಧ್ಯಕ್ಷರು ಅದ ಪೇಪರ್ ತಿಮ್ಮಣ್ಣ ಅವರು ಲೈವ್ ಬಂದು ಘನ ಕಾರ್ಯವನ್ನು ತಿಳಿಸಿ ಕೊಡುತಾರೆ ಅಲ್ಲಿಯ ತನಕ ಶಾಂತಿ ಕಾಪಾಡಿಕೊಳ್ಳಿ 😄
Jayavarma Hegde: ಜಗತ್ತಿನ ಅತಿ ಹಣವಂತ ಮುಂದುವರಿದ ದೇಶ ಗಳಲ್ಲೆ.ಮಾತ್ರ ವಲ್ಲ ಶ್ರೀ ಮಂತ ರಾಷ್ಟ್ರ ಗಳಾದ ಕೊಲ್ಲಿ ರಾಷ್ಟ್ರ ಗಳಲ್ಲೂ ಟೋಲ್ ಇದೆ.
Srinivasprasad Kaggalipura: ನಾನು ಜರ್ಮನಿ, ಬೆಲ್ಜಿಯಂ, ಸ್ವಿಟ್ಜರ್ಲ್ಯಾಂಡ್, ಆಸ್ಟ್ರಿಯಾ, ಜೆಕ್ ರಿಪಬ್ಲಿಕ್,ಇಟಲಿ ದೇಶಗಳಲ್ಲಿ ರಸ್ತೆ ಮೂಲಕ ಪ್ರಯಾಣ ಮಾಡಿದ್ದೇನೆ. ಎಲ್ಲಿಯೂ ಟೋಲ್ ಇರಲಿಲ್ಲ.
Joseph Udoji: ಜನಸಾಮಾನ್ಯರ ಹಗಲು ಲೂಟಿಗೆ ಸಿದ್ದವಾದ ಟೋಲ್ 🤔ನಮ್ಮ ತೆರಿಗೆ,ನಮ್ಮ ರಸ್ತೆ, ನಮ್ಮ ಸರ್ಕಾರ.

 

Latest Videos
Follow Us:
Download App:
  • android
  • ios