ಮೈಸೂರು - ಬೆಂಗಳೂರು ಹೈವೇ ಟೋಲ್ ನಿಗದಿ ವಿಚಾರ, 250 ರೂ. ಟೋಲ್ ನಿಗದಿ: ಸಂಸದ ಪ್ರತಾಪ್ ಸಿಂಹ ಹೇಳಿಕೆ

ಬೆಂಗಳೂರು - ಮೈಸೂರು ರಾಷ್ಟ್ರೀಯ ಹೆದ್ದಾರಿ ಬಹುತೇಕ ಪೂರ್ಣವಾಗುವ ಸ್ಥಿತಿಯಲ್ಲಿದೆ. ಮಾರ್ಚ್ ಎರಡು ಅಥವಾ ಮೂರನೇ ವಾರದಲ್ಲಿ ರಸ್ತೆ ಲೋಕಾರ್ಪಣೆ ಆಗಲಿದೆ ಎಂದು ಮೈಸೂರು - ಕೊಡಗು ಸಂಸದ ಪ್ರತಾಪ್ ಸಿಂಹ ಹೇಳಿಕೆ ನೀಡಿದ್ದಾರೆ.

MP Pratap Simha statement about Bengaluru-Mysuru expressway highway gow

ಮೈಸೂರು (ಫೆ.13): ಬೆಂಗಳೂರು - ಮೈಸೂರು ರಾಷ್ಟ್ರೀಯ ಹೆದ್ದಾರಿ ಬಹುತೇಕ ಪೂರ್ಣವಾಗುವ ಸ್ಥಿತಿಯಲ್ಲಿದೆ. ಮಾರ್ಚ್ ಎರಡು ಅಥವಾ ಮೂರನೇ ವಾರದಲ್ಲಿ ರಸ್ತೆ ಲೋಕಾರ್ಪಣೆ ಆಗಲಿದೆ. ಬೆಂಗಳೂರು - ಮೈಸೂರು ಹೈವೆ ಲೋಕಾರ್ಪಣೆ ವೇಳೆಯೆ ಪ್ರಧಾನಿಗಳು ಕುಶಾಲನಗರ - ಮೈಸೂರು ನಡುವಿನ ಹೆದ್ದಾರಿಗೆ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ. 3,500 ಕೋಟಿ ವೆಚ್ಚದಲ್ಲಿ 115 ಕಿ.ಮೀ. ಹೈವೆ ನಿರ್ಮಾಣ ಮಾಡಲಿದ್ದು, ಶಂಕು ಸ್ಥಾಪನೆಯಾದ 24 ತಿಂಗಳಲ್ಲಿ ರಸ್ತೆ ಕಾಮಗಾರಿ ಪೂರ್ಣವಾಗಲಿದೆ ಎಂದು ಮೈಸೂರು - ಕೊಡಗು ಸಂಸದ ಪ್ರತಾಪ್ ಸಿಂಹ ಹೇಳಿಕೆ ನೀಡಿದ್ದಾರೆ.

ಮೈಸೂರು - ಬೆಂಗಳೂರು ಹೈವೇ ಟೋಲ್ ನಿಗದಿ ವಿಚಾರ: ಮೈಸೂರು - ಬೆಂಗಳೂರು ಹೈವೇ ಟೋಲ್ ನಿಗದಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಿಂಹ,  ಈಗ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿರುವುದು. ಅಂದಾಜಿನ ಟೋಲ್ ಫ್ಹೀಜ್ ಪಟ್ಟಿ. ನನ್ನ ಪ್ರಕಾರ ಎರಡು ಕಡೆ ಸೇರಿ ಬೆಂಗಳೂರಿನಿಂದ ಮೈಸೂರಿಗೆ 250 ರೂ. ಟೋಲ್ ನಿಗದಿ ಆಗಬಹುದು. ಫ್ಲೈ ಓವರ್ ಗಳು ಬಂದಾಗ ಸಾಮಾನ್ಯವಾಗಿ ಟೋಲ್ ದರ ಕೊಂಚ ಹೆಚ್ಷಾಗುತ್ತದೆ. ಈ ರಸ್ತೆಯಲ್ಲೂ ಫ್ಲೈ ಓವರ್ ಗಳು ಇರುವ ಕಾರಣ 250 ಟೋಲ್ ನಿಗದಿ ಆಗಬಹುದು.

ಬೆಂಗ​ಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಬೈಕ್ ಆಟೋಗೆ ಪ್ರವೇಶವಿಲ್ಲ!

ಬೆಂಗಳೂರು - ಮೈಸೂರು ಹೈ ವೆ ಗೆ ಹೆಸರು ಇಡುವ ವಿಚಾರ: ಈ ವಿಚಾರಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಹೆದ್ದಾರಿಗೆ ವ್ಯಕ್ತಿಗಳ ಹೆಸರಿಡುವ ಪದ್ಧತಿ ಇಲ್ಲ. ಕರ್ನಾಟಕದಲ್ಲಿ ಜಿಲ್ಲೆಗಳಿಗೂ ಹೆಸರು ಇಡುವ ಪದ್ಧತಿ ಇಲ್ಲ. ವ್ಯಕ್ತಿಗಳ‌ ಹೆಸರು ಇಡಿ ಎಂದು ಸಲಹೆ ಕೊಡುವವರು ಇದನ್ನು ತಿಳಿದು ಮಾತಾಡಲಿ. ಎಲ್ಲಾ ಜಿಲ್ಲೆಗಳ ಜನರು ಭಕ್ತಿಯಿಂದ ನೋಡುವುದು ಕಾವೇರಿ ತಾಯಿಯನ್ನು. ಕಾವೇರಿ ನದಿಯ ಈ ಭಾಗದ ಜನರಲ್ಲಿ ಪೂಜ್ಯ ಭಾವನೆ ಇದೆ. ಮಗ ದೊಡ್ಡನಾ ತಾಯಿ ದೊಡ್ಡೋರಾ ಅನ್ನೋ ರೀತಿ ಚರ್ಚೆ ಬೇಡ‌‌. ತಾಯಿಯೆ ದೊಡ್ಡವಳು. ಮೈಸೂರು ವಿಮಾನ ನಿಲ್ದಾಣಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರಿಟ್ಟಿದ್ದೇವೆ. ರೈಲು ಗಳಿಗೆ ಒಡೆಯರ್ ಹೆಸರು ಇಟ್ಟಿದ್ದೇವೆ. ರಾಜ ಕುಟುಂಬಕ್ಕೆ ಏನೂ ಗೌರವ ಕೊಡಬೇಕೋ ಎಲ್ಲವನ್ನೂ ನಾವು ನೀಡಿದ್ದೇವೆ. ಈಗ ರಸ್ತೆಯ ನಾಮಕರಣ ವಿಚಾರದಲ್ಲಿ ಅನಗತ್ಯ ವಿವಾದ ಬೇಡ.

ಪ್ರಧಾನಿ ಮೋದಿ ಎಕ್ಸ್‌ಪ್ರೆಸ್‌ವೇ ಉದ್ಘಾಟನೆ ದಿನಕ್ಕೂ ಮುನ್ನ 1,000 ಕೆಜಿ ಸ್ಫೋಟಕ ಪತ್ತೆ, ಹೆಚ್ಚಿದ ಆತಂಕ!

ಕಾವೇರಿ ಈ ನಾಡಿನ ಜೀವ ನದಿ. ಈ ಹೆಸರಿನ ವಿಚಾರದಲ್ಲಿ ವಿವಾದ ಮಾಡಬೇಡಿ. ಬೆಂಗಳೂರು - ಮೈಸೂರು ನಡುವಿನ ಹೈವೆಯಲ್ಲಿ
ಚನ್ನಪಟ್ಟಣದ ಬಳಿ 30 ಏಕರೆಯಲ್ಲಿ ಐ ಲ್ಯಾಂಡ್ ರೂಪದಲ್ಲಿ ರೆಸ್ಟ್ ಏರಿಯಾ ನಿರ್ಮಾಣ ಮಾಡುತ್ತೇವೆ. ಎಲ್ಲಾ ಬಗೆಯ ಹೋಟೆಲ್ ಅಲ್ಲಿ ಇರುತ್ತದೆ. ನಾಡಿನ ಬ್ಯಾಂಡ ಪದಾರ್ಥಗಳ ಮಾರಾಟವು ಇರುತ್ತದೆ. 6 ತಿಂಗಳಲ್ಲಿ ಈ ರೆಸ್ಟ್ ಏರಿಯಾ ನಿರ್ಮಾಣವಾಗುತ್ತದೆ ಎಂದಿದ್ದಾರೆ.

Latest Videos
Follow Us:
Download App:
  • android
  • ios