Asianet Suvarna News Asianet Suvarna News

ಮುಸ್ಲಿಂ ದರ್ಗಾದಲ್ಲಿ ಕೇಸರಿ ವಸ್ತ್ರವೇ ಗೆಲ್ಲುವುದಾಗಿ ಭವಿಷ್ಯ ನುಡಿದ ಲಾಲಸಾಬ್‌ ಅಜ್ಜ

ಹೆಬ್ಬಳ್ಳಿ ದರ್ಗಾದಲ್ಲಿ ಪ್ರತಿ ವರ್ಷದಲ್ಲಿ ಭವಿಷ್ಯ ನುಡಿದ ಲಾಲಾಸಬವಲಿ ಅಜ್ಜ 'ಕೇಸರಿ ವಸ್ತ್ರವನ್ನು ಹಿಡಿದು, ಇದರ ಸಲುವಾಗಿ ಹೆಣಗಳು ಬೀಳುತ್ತವೆ, ಆದರೆ ಖುರ್ಚಿ ಮಾತ್ರ ಗಟ್ಟಿ ಪಾ' ಎಂದು ಹೇಳಿದ್ದಾರೆ. 

Narendra Modi will win lok sabha election 2024 Lalasab predicted in Bagalkot Muslim dargah sat
Author
First Published Jul 30, 2023, 8:27 PM IST

ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷ್ಯಾನೆಟ್‌ ಸುವರ್ಣನ್ಯೂಸ್

ಬಾಗಲಕೋಟೆ (ಜು.30):  ಬಾಗಲಕೋಟೆ ಜಿಲ್ಲೆಯ ಹೆಬ್ಬಳ್ಳಿ ದರ್ಗಾದಲ್ಲಿ ಪ್ರತಿ ವರ್ಷದಲ್ಲಿ ಭವಿಷ್ಯ ನುಡಿದ ಲಾಲಾಸಬವಲಿ ಮುತ್ಯಾ 'ಕೇಸರಿ ವಸ್ತ್ರವನ್ನು ಹಿಡಿದು ಇದರ ಸಲುವಾಗಿ ಹೆಣಗಳು ಬೀಳುತ್ತವೆ, ಆದರೆ ಖುರ್ಚಿ ಮಾತ್ರ ಗಟ್ಟಿ ಪಾ' ಎಂದು ಹೇಳಿದ್ದಾರೆ. 

ಮೊದಲೇ ಮುಸ್ಲಿಂ ದರ್ಗಾ, ಅಲ್ಲಾನ ಪ್ರಾರ್ಥನೆ ಬಿಟ್ಟು ಬೇರೇನೂ ಇರುವುದಿಲ್ಲ. ಮೈಮೇಲೆ ಹಚ್ಚಹಸಿರು ಜುಬ್ಬಾ ಪೈಜಾಮ್‌, ಮುಖ ಮೇಲೊಂದಿಷ್ಟು ಗಡ್ಡ. ನೋಡಿದಾಕ್ಷಣ ಮುಸಲ್ಮಾನ ಮುಖಂಡ ಎನ್ನುವುದು ಎಲ್ಲರಿಗೂ ಖಚಿತವಾಗುತ್ತದೆ. ಇವರೇ ಲಾಲಸಾಬವಲಿ. ಪ್ರತಿವರ್ಷ ಮೊಹರಂ ಹಬ್ಬದ ಅವಧಿಯಲ್ಲಿ ಭವಿಷ್ಯವನ್ನು ನುಡಿಯುತ್ತಾರೆ. ಅದೇ ರೀತಿ ಈ ವರ್ಷದ ಮೊಹರಂ ಹಬ್ಬದ ವೇಳೆ ನುಡಿದ ಭವಿಷ್ಯದ ವೀಡಿಯೋ ಭರ್ಜರಿ ವೈರಲ್‌ ಆಗುತ್ತಿದೆ. ಇನ್ನು ಅವರ ಭವಿಷ್ಯವನ್ನು ರಾಜಕೀಯವಾಗಿ ವಿಶ್ಲೇಷಣೆ ಮಾಡಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.

ಬಾಗಲಕೋಟೆ: ಮುಸ್ಲಿಮರೇ ಇಲ್ಲದ ಊರಲ್ಲಿ ಹಿಂದುಗಳಿಂದ ಮೊಹರಂ ಆಚರಣೆ..!

ದರ್ಗಾದಲ್ಲಿ ನಡೆದದ್ದೇನು? : 
ಬಾಗಲಕೋಟೆ ಜಿಲ್ಲೆಯ  ಬಾದಾಮಿ ತಾಲೂಕಿನ ಹೆಬ್ಬಳ್ಳಿ ಗ್ರಾಮದ ಲಾಲಸಾಬವಲಿ ದರ್ಗಾದಲ್ಲಿ ಪ್ರತಿವರ್ಷ ನಡೆಯುವ ಹೇಳಿಕೆ ಭವಿಷ್ಯದಂತೆ ಈ ಬಾರಿಯೂ ಭವಿಷ್ಯವನ್ನು ನುಡಿಯಲಾಯಿತು. ಕೇಸರಿ ವಸ್ತ್ರ ಹಿಡಿದು ಹೇಳಿಕೆ ನೀಡಿರೋ ಅಜ್ಜ ಲಾಲಸಾಬ್ ಅವರು, 'ಇದರ ಸಲುವಾಗಿ ಜನ ಬಹಳ ಬಡಿದಾಡುತ್ತಿದ್ದಾರೆ. ಇದರ ಸಲುವಾಗಿನೇ ಹೆಣಗಳು ಬೀಳುತ್ತಿವೆ. ಆದರೆ, ಬರೆದಿಟ್ಟುಕೊಳ್ಳಿ ಇವರಿಗೆ ಖುರ್ಚಿ ಮಾತ್ರ ಗಟ್ಟಿ ಪಾ', ಮಕ್ಕಳ ಆರೋಗ್ಯಕ್ಕೆ ಗಂಡಾಂತರ ಇದೆ. ಗಂಡಾಂತರವು ಗಾಳಿ ಅಥವಾ ನೀರಿನ ಮೂಲಕ ಎದುರಾಗಿ ಬರಲಿದೆ. ಮುಂಗಾರ ಅರ್ಧಂಬರ್ಧ ಬೆಳೆ ಬಂದಿದೆ. ಮುಂದೆ ಹಿಂಗಾರು ಸಹ ಹೀಗೆಯೇ ಆದ್ರೂ ಬೆಳೆ ಕೊಡುತ್ತೇನೆ' ಎಂದು ಲಾಲಸಾಬ ಅಜ್ಜ ಹೇಳಿಕೆ ನೀಡಿದ್ದಾರೆ.

ಭವಿಷ್ಯದ ರಾಜಕೀಯ ವಿಶ್ಲೇಷಣೆ  ಮಾಡಿದ ಸ್ಥಳೀಯರು: ಲಾಲಸಾಬ್‌ ಅವರ ಹೇಳಿಕೆಯನ್ನು ರಾಜಕೀಯವಾಗಿ ವಿಶ್ಲೇಷಣೆ ಮಾಡಿದ ಸ್ಥಳೀಯ ಮುಖಂಡರು ಕೇಂದ್ರದಲ್ಲಿ ಮತ್ತೊಮ್ಮೆ ಬಿಜೆಪಿಗೆ ಅಧಿಕಾರ ಫಿಕ್ಸ್ ಎಂದು ಹೇಳುತ್ತಿದ್ದಾರೆ. ಜೊತೆಗೆ ದೇಶದಲ್ಲಿ ಮಕ್ಕಳ ಆರೋಗ್ಯಕ್ಕೆ ಗಂಡಾಂತರ ಇದೆ ಎಂದು ಹೇಳಿರುವುದು ಸಾರ್ವಜನಿಕರಿಗೆ ಆತಂಕ ಎದುರಾಗಿದೆ. ಇನ್ನು ಮಕ್ಕಳಿಗೆ ಬರುವ ಗಂಡಾಂತರವು ಗಾಳಿ ಅಥವಾ ನೀರಿನ ಮೂಲಕ ಎದುರಾಗಿ ಬರಲಿದೆ ಎಂದು ತಿಳಿಸಿದ್ದಾರೆ. ಇನ್ನು ಕೃಷಿಗೆ ಸಂಬಂಧಿಸಿದಂತೆ ಮುಂಗಾರು ಮಳೆ ತಡಾಗಿದ್ದರಿಂದ ಅರ್ಧಂಬರ್ಧ ಬೆಳೆ ಬಂದಿದೆ. ಒಂದು ವೇಳೆ ಮುಂದಿನ ದಿನಗಲಲ್ಲಿ ಹಿಂಗಾರು ಸಹ ಹೀಗೆಯೇ ಆದ್ರೂ ಬೆಳೆ ಉತ್ತಮವಾಗಿ ಬಂದು ರೈತರ ಕೈ ಸೇರಲಿದೆ ಎಂದು ಭವಿಷ್ಯವನ್ನು ಹೇಳಿದ್ದಾರೆ. ಈಗ ಹೆಬ್ಬಳ್ಳಿ ಗ್ರಾಮದ ಲಾಲಸಾಬವಲಿ ದರ್ಗಾದ ಅಜ್ಜನ ಭವಿಷ್ಯ ವಾಣಿ ವೀಡಿಯೋ ಈಗ ವೈರಲ್‌ ಆಗುತ್ತಿದೆ. 

ಈಗ ಲೋಕಸಭೆ ಚುನಾವಣೆ ನಡೆದಲ್ಲಿ ಗೆಲ್ಲೋರು ಯಾರು? ಇಂಡಿಯಾ ಟಿವಿ-ಸಿಎನ್‌ಎಕ್ಸ್‌ ಸಮೀಕ್ಷೆಯ ಫಲಿತಾಂಶ!

ಮುಸ್ಲಿಮರಿಲ್ಲದ ಗ್ರಾಮದಲ್ಲಿ ಹಿಂದೂಗಳಿಂದ ಮೊಹರಂ ಆಚರಣೆ:  ಬಾಗಲಕೋಟೆ (ಜು.29): ಮೊಹರಂ ಹಬ್ಬ ಮುಸ್ಲಿಮರ ಹಬ್ಬವಾದರೂ ಈ ಹಬ್ಬವನ್ನು ಹಿಂದುಗಳು ಮತ್ತು ಮುಸ್ಲಿಮರು ಒಂದುಗೂಡಿ ಶ್ರದ್ಧಾ, ಭಕ್ತಿಯಿಂದ ಆಚರಣೆ ಮಾಡುವುದನ್ನು ಉತ್ತರ ಕರ್ನಾಟಕದ ಬಹು ಭಾಗದಲ್ಲಿ ಕಾಣುತ್ತೇವೆ. ಆದರೆ, ಮುಸ್ಲಿಮರೇ ಇಲ್ಲದ, ಒಂದೆರಡು ಮುಸ್ಲಿಂ ಕುಟುಂಬ ಇರುವ ಗ್ರಾಮಗಳಲ್ಲಿಯೂ ಈ ಹಬ್ಬವನ್ನು ಅತ್ಯಂತ ಭಕ್ತಿಯಿಂದ ಆಚರಣೆ ಮಾಡುತ್ತಾ ಬರಲಾಗಿದೆ. ಇಂತಹ ಗ್ರಾಮಗಳಲ್ಲಿ ಹಿಂದುಗಳೇ ಮುಂದೆ ನಿಂತು ಮೊಹರಂ ಹಬ್ಬ ಆಚರಣೆ ಮಾಡುತ್ತಿದ್ದಾರೆ. ಗೋವಿಂದಕೊಪ್ಪ, ಚಿಕ್ಕಸೌಂಶಿ, ಜುನ್ನೂರು ಗ್ರಾಮಗಳಲ್ಲಿ ಮೊಹರಂ ಹಬ್ಬವನ್ನು ಭಾವೈಕ್ಯತೆಯಿಂದ ಆಚರಿಸಲಾಗುತ್ತಿದೆ. ಕಳೆದ ಅನೇಕ ದಶಕಗಳಿಂದಲೂ ಇಲ್ಲಿ ಭಾವೈಕ್ಯತೆಯ ಮೊಹರಂ ಆಚರಣೆ ಮಾಡಲಾಗುತ್ತಿದೆ. ಜು.24ರಂದು ಕುಳಿತ ಅಲಾಯಿ ದೇವರುಗಳು ಜು.29 ರಂದು ಹೊಳೆಗೆ (ನದಿ) ಕಳುಹಿಸುವ ಭಕ್ತಿ ಭಾವ ಪೂಜಾ ಕಾರ್ಯಕ್ರಮ ಶ್ರದ್ಧಾ ಭಕ್ತಿಯಿಂದ ನಡೆಯಿತು.

Follow Us:
Download App:
  • android
  • ios