ಬಾಗಲಕೋಟೆ: ಮುಸ್ಲಿಮರೇ ಇಲ್ಲದ ಊರಲ್ಲಿ ಹಿಂದುಗಳಿಂದ ಮೊಹರಂ ಆಚರಣೆ..!

ಗೋವಿಂದಕೊಪ್ಪ, ಚಿಕ್ಕಸೌಂಶಿ, ಜುನ್ನೂರು ಗ್ರಾಮಗಳಲ್ಲಿ ಮೊಹರಂ ಹಬ್ಬವನ್ನು ಭಾವೈಕ್ಯತೆಯಿಂದ ಆಚರಿಸಲಾಗುತ್ತಿದೆ. ಕಳೆದ ಅನೇಕ ದಶಕಗಳಿಂದಲೂ ಇಲ್ಲಿ ಭಾವೈಕ್ಯತೆಯ ಮೊಹರಂ ಆಚರಣೆ ಮಾಡಲಾಗುತ್ತಿದೆ. ಜು.24ರಂದು ಕುಳಿತ ಅಲಾಯಿ ದೇವರುಗಳು ಜು.29 ರಂದು ಹೊಳೆಗೆ (ನದಿ) ಕಳುಹಿಸುವ ಭಕ್ತಿ ಭಾವ ಪೂಜಾ ಕಾರ್ಯಕ್ರಮ ಶ್ರದ್ಧಾ ಭಕ್ತಿಯಿಂದ ನಡೆಯಲಿದೆ.

Muharram Celebration by Hindus at Kaladagi in Bagalkot grg

ಚಂದ್ರಶೇಖರ ಶಾರದಾಳ

ಕಲಾದಗಿ(ಜು.28): ಮೊಹರಂ ಹಬ್ಬ ಮುಸ್ಲಿಮರ ಹಬ್ಬವಾದರೂ ಈ ಹಬ್ಬವನ್ನು ಹಿಂದುಗಳು ಮತ್ತು ಮುಸ್ಲಿಮರು ಒಂದುಗೂಡಿ ಶ್ರದ್ಧಾ, ಭಕ್ತಿಯಿಂದ ಆಚರಣೆ ಮಾಡುವುದನ್ನು ಉತ್ತರ ಕರ್ನಾಟಕದ ಬಹು ಭಾಗದಲ್ಲಿ ಕಾಣುತ್ತೇವೆ. ಆದರೆ, ಮುಸ್ಲಿಮರೇ ಇಲ್ಲದ, ಒಂದೆರಡು ಮುಸ್ಲಿಂ ಕುಟುಂಬ ಇರುವ ಗ್ರಾಮಗಳಲ್ಲಿಯೂ ಈ ಹಬ್ಬವನ್ನು ಅತ್ಯಂತ ಭಕ್ತಿಯಿಂದ ಆಚರಣೆ ಮಾಡುತ್ತಾ ಬರಲಾಗಿದೆ.

ಇಂತಹ ಗ್ರಾಮಗಳಲ್ಲಿ ಹಿಂದುಗಳೇ ಮುಂದೆ ನಿಂತು ಮೊಹರಂ ಹಬ್ಬ ಆಚರಣೆ ಮಾಡುತ್ತಿದ್ದಾರೆ. ಗೋವಿಂದಕೊಪ್ಪ, ಚಿಕ್ಕಸೌಂಶಿ, ಜುನ್ನೂರು ಗ್ರಾಮಗಳಲ್ಲಿ ಮೊಹರಂ ಹಬ್ಬವನ್ನು ಭಾವೈಕ್ಯತೆಯಿಂದ ಆಚರಿಸಲಾಗುತ್ತಿದೆ. ಕಳೆದ ಅನೇಕ ದಶಕಗಳಿಂದಲೂ ಇಲ್ಲಿ ಭಾವೈಕ್ಯತೆಯ ಮೊಹರಂ ಆಚರಣೆ ಮಾಡಲಾಗುತ್ತಿದೆ. ಜು.24ರಂದು ಕುಳಿತ ಅಲಾಯಿ ದೇವರುಗಳು ಜು.29 ರಂದು ಹೊಳೆಗೆ (ನದಿ) ಕಳುಹಿಸುವ ಭಕ್ತಿ ಭಾವ ಪೂಜಾ ಕಾರ್ಯಕ್ರಮ ಶ್ರದ್ಧಾ ಭಕ್ತಿಯಿಂದ ನಡೆಯಲಿದೆ.

ಗೃಹಲಕ್ಷ್ಮಿ ನೋಂದಣಿಗೆ ಮಹಿಳೆಯರ ದಂಡು: ನೋಂದಣಿ ಕೇಂದ್ರಗಳಲ್ಲಿ ನೂಕುನುಗ್ಗಲು..!

ಒಂದೇ ಮುಸ್ಲಿಂ ಕುಟುಂಬ:

ಚಿಕ್ಕಸೌಂಶಿ ಗ್ರಾಮದಲ್ಲಿ ಮುಸ್ಲಿಂ ಕುಟುಂಬಗಳಿಲ್ಲ. ಗೋವಿಂದಕೊಪ್ಪ ಗ್ರಾಮದಲ್ಲಿ ಇರುವುದು ಒಂದೇ ಮುಸ್ಲಿಂ ಕುಟುಂಬ ಮಾತ್ರ. ಆದರೂ ಇಲ್ಲಿನ ಮೊಹರಂ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ. ಉದಗಟ್ಟಿಗ್ರಾಮದಲ್ಲೂ ಮುಸ್ಲಿಂ ಕುಟುಂಬ ಇರುವುದು ಎರಡು ಮಾತ್ರ. ಹಬ್ಬದಲ್ಲಿ ದೇವರುಗಳನ್ನು ಕೂಡಿಸುವುದರಿಂದ ಹಿಡಿದು ಹೊಳೆಗೆ ಕಳುಹಿಸುವವರೆಗೆ ವಿಧಿ ವಿಧಾನ ಪದ್ಧತಿಗಳನ್ನು ಅನೇಕ ದಶಗಳಿಂದ ಹಿಂದುಗಳೇ ಮಾಡಿಕೊಂಡು ಬರುತ್ತಿದ್ದಾರೆ.

ಗ್ರಾಮದ ಸಿದ್ದಪ್ಪ ನಂದ್ಯಾಳ, ನೀಲಪ್ಪ ಶಿವನಿಚ್ಚಿ, ಸುರೇಶ ಹಳಮನಿ, ಹನಮಂತ ಹಳಮನಿ ಅವರು ದೇವರುಗಳಿಗೆ ಪೂಜೆ ಸಲ್ಲಿಸುವುದು, ಹಸೇನ್‌ ಮತ್ತು ಹುಸೇನ್‌ ಸಹೋದರ ದೇವರುಗಳನ್ನು, ಅಲಾಯಿ ದೇವರುಗಳನ್ನು ಕೂಡಿಸಿ ದಿನ ನಿತ್ಯ ಪೂಜೆ ಸಲ್ಲಿಸಿ ದೇವರಿಗೆ ನೈವೇದ್ಯ ಹಿಡಿದು ಭಕ್ತಿ ಭಾವ ಮೆರೆಯುತ್ತಾರೆ. ದೇವರ ಗುಂಡಿಯ ಮುಂದೆ ಹಾಕಿದ ಕಿಚ್ಚನ್ನು ಸಹಿತ ಹೆಚ್ಚಾಗಿ ಹಾಯಿಸುವುದು ಸಹ ಹಿಂದುಗಳು. ಮುಸ್ಲಿಂ ಕೆಲವು ಯುವಕರು ಕೂಡ ಕಿಚ್ಚು ಹಾದು ಹರಕೆ ಸಲ್ಲಿಸುತ್ತಾರೆ.

ಬಿಜೆಪಿಗರಿಗೆ ಅಧಿಕಾರದ ಹಪಾಹಪಿ ಜಾಸ್ತಿ; ಅಡ್ಡದಾರಿ ಹಿಡಿದಾದ್ರೂ ಬರ್ತಾರೆ: ಸಚಿವ ತಿಮ್ಮಾಪುರ ಕಿಡಿ

ದೇವರ ಹೊರುವುದು, ಗುದ್ದಲಿ ಹಾಕುವುದು, ಹೆಜ್ಜೆ ಕುಣಿತ, ಸಕ್ಕರೆ ಹಂಚುವುದು, ದೂಪ ಹಾಕಿ ದೀನ್‌ ಕೂಗುವುದು, ಬೆಲ್ಲ ನೈವೇದ್ಯ ಸಮರ್ಪಿಸುವುದು ಎಲ್ಲವನ್ನೂ ಹಿಂದುಗಳೇ ನೆರವೇರಿಸುತ್ತಾರೆ. ಕೊನೆಯ ಮೂರು ದಿನ ಹಿಂದು ಕುಟುಂಬಗಳ ಚಿಕ್ಕ ಮಕ್ಕಳು ಫಕೀರ ಆಗುವುದು, ಮನೆ ಮನೆ ತೆರಳಿ ದೀನ ಹಾಕಿ ಫಕೀರ ಜೋಳಗಿ ತುಂಬಿಸಿಕೊಂಡು ಬರುತ್ತಿರುವವರು ಸಹಿತ ಹಿಂದು ಮಕ್ಕಳೇ. ಈ ರೀತಿಯಾಗಿ ಹಿಂದು-ಮುಸ್ಲಿಮರು ಸೇರಿ ಹಬ್ಬಗಳನ್ನು ಆಚರಣೆ ಮಾಡುತ್ತಿರುವುದು ಇಡೀ ನಾಡಿಗೆ ಮಾದರಿಯಾಗಿದೆ. ಇದು ಎಲ್ಲರಿಗೂ ಪ್ರೇರಣೆ ಕೂಡಾ ಆಗಿದೆ.

ಮುಸ್ಲಿಂ ಧರ್ಮದರವರು ಇಲ್ಲದಿದ್ದರೂ ಬಹಳ ತಲೆಮಾರುಗಳಿಂದಲೂ ನಮ್ಮೂರಿನಲ್ಲಿ ಮೊಹರಂ ಹಬ್ಬವನ್ನು ನಮ್ಮದೇ ಹಬ್ಬವನ್ನಾಗಿ ಆಚರಿಸಿಕೊಂಡು ಬರುತ್ತಿದ್ದೇವೆ. ಈ ಗ್ರಾಮದಲ್ಲಿ ಹಬ್ಬಗಳಲ್ಲಿ ಧರ್ಮ ಭೇದ ಭಾವ ಇಲ್ಲ ಎಂದು ಗೊವಿಂದಕೊಪ್ಪ ಗ್ರಾಮಸ್ಥ ನಿಂಗಪ್ಪ ಬೂದಿಹಾಳ ತಿಳಿಸಿದ್ದಾರೆ. 

Latest Videos
Follow Us:
Download App:
  • android
  • ios