ಈಗ ಲೋಕಸಭೆ ಚುನಾವಣೆ ನಡೆದಲ್ಲಿ ಗೆಲ್ಲೋರು ಯಾರು? ಇಂಡಿಯಾ ಟಿವಿ-ಸಿಎನ್‌ಎಕ್ಸ್ ಸಮೀಕ್ಷೆಯ ಫಲಿತಾಂಶ!
ಹಾಗೇನಾದರೂ ಈಗಲೇ ಲೋಕಸಭೆ ಚುನಾವಣೆ ನಡೆದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸಿಗೋ ಸ್ಥಾನವೆಷ್ಟು ಹಾಗೂ ಐಎನ್‌ಡಿಐಎ ಪಡೆಯುವ ಸ್ಥಾನವೆಷ್ಟಯ ಅನ್ನೋದನ್ನು ಇಂಡಿಯಾ ಟಿವಿ-ಸಿಎನ್‌ಎಕ್ಸ್ ಸಮೀಕ್ಷೆಯ ಫಲಿತಾಂಶ ತಿಳಿಸಿದೆ.
ನವದೆಹಲಿ (ಜು.29): ಇಂದೇ ಲೋಕಸಭೆ ಚುನಾವಣೆ ನಡೆದರೆ ಫಲಿತಾಂಶ ಏನಾಗಿರಲಿದೆ? ಪ್ರಧಾನಮಂತ್ರಿ ನರೇಂದ್ರ ಮೋದಿ ಮೂರನೇ ಅವಧಿಗೆ ದೇಶದ ಪ್ರಧಾನಿಯಾಗಿ ಮುಂದುವರಿಯಲಿದ್ದಾರಾ? ವಿಪಕ್ಷಗಳ ಒಕ್ಕೂಟವಾದ ಐಎನ್‌ಡಿಐಎ, ಬಿಜೆಪಿಯ ನಾಗಾಲೋಟಕ್ಕೆ ಅಂತ್ಯ ಹಾಡಲಿದೆಯೇ? ಎನ್ನುವ ಪ್ರಶ್ನೆಗಳಿವೆ. ಈ ಪ್ರಶ್ನೆಗಳಿಗೆ ಇಂಡಿಯಾ ಟಿವಿ-ಸಿಎನ್‌ಎಕ್ಸ್ ಸಮೀಕ್ಷೆ ಉತ್ತರ ನೀಡಿದೆ. ಇಂಡಿಯಾ ಟಿವಿ ಮತ್ತು ಸಿಎನ್‌ಎಕ್ಸ್ ಒಪಿನಿಯನ್ ಸಮೀಕ್ಷೆಯು ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ದೊಡ್ಡ ಅಂತರದಿಂದ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿದೆ. ಹೌದು, ನರೇಂದ್ರ ಮೋದಿ ಅವರು ತಮ್ಮ ಮೂರನೇ ಅವಧಿಯನ್ನು ಪಡೆಯುತ್ತಾರೆ ಎಂದು ಸಮೀಕ್ಷೆ ತಿಳಿಸಿದ್ದರೂ, ಪಕ್ಷ ಕೆಲವು ಸ್ಥಾನಗಳನ್ನು ಕಳೆದುಕೊಳ್ಳುವುದು ನಿಶ್ಚಿತ ಎಂದು ಹೇಳಿದೆ. ಇನ್ನು ಕರ್ನಾಟಕದ ಬಗ್ಗೆಯೂ ಸಮೀಕ್ಷೆಯಲ್ಲಿ ತಿಳಿಸಲಾಗಿದೆ. ಕಳೆದ ಬಾರಿಯಷ್ಟು ಸ್ಥಾನಗಳನ್ನು ಈ ಬಾರಿ ಬಿಜೆಪಿ ಗೆಲ್ಲೋದಿಲ್ಲ ಎಂದೂ ಸಮೀಕ್ಷೆ ನುಡಿದಿದೆ.
ಸಮೀಕ್ಷೆಯ ಪ್ರಕಾರ, 543 ಸದಸ್ಯ ಬಲದ ಲೋಕಸಭೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ 318 ಸ್ಥಾನಗಳನ್ನು ಪಡೆಯಬಹುದು. ಇದರಲ್ಲಿ ಬಿಜೆಪಿಯೇ ಸ್ವಂತ ಬಲದಿಂದ 290 ಸ್ಥಾನಗಳನ್ನು ಗಳಿಸಲಿದೆ. ಹಾಗೇನಾದರೂ ಆದಲ್ಲಿ 2019ರ ಚುನಾವಣೆಯಲ್ಲಿ ಗಳಿಸಿದ್ದಕ್ಕಿಂತ 13 ಸ್ಥಾನಗಳನ್ನು ಬಿಜೆಪಿ ಕಡಿಮೆ ಗೆಲ್ಲಲಿದೆ. ವಾಹಿನಿಯು ತನ್ನ ವಿಶೇಷ ಶೋ 'ದೇಶ್ ಕಿ ಆವಾಜ್' ನಲ್ಲಿ ಫಲಿತಾಂಶಗಳನ್ನು ಪ್ರಕಟಿಸಿದೆ.
ಪ್ರಧಾನಿ ನರೇಂದ್ರ ಮೋದಿ ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸ ವ್ಯಕ್ತಪಡಿಸಿದ ಕೆಲವೇ ದಿನಗಳಲ್ಲಿ ಈ ಫಲಿತಾಂಶ ಪ್ರಕಟವಾಗಿದೆ. ನನ್ನ ಮೂರನೇ ಅವಧಿಯಲ್ಲಿ ಭಾರತವು ವಿಶ್ವದ ಅಗ್ರ ಮೂರು ಆರ್ಥಿಕತೆಗಳಲ್ಲಿ ಸ್ಥಾನ ಪಡೆಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಹೇಳಿದ್ದರು.
"ನಮ್ಮ ಮೊದಲ ಅವಧಿಯಲ್ಲಿ, ಭಾರತವು ಆರ್ಥಿಕತೆಯ ವಿಷಯದಲ್ಲಿ 10 ನೇ ಸ್ಥಾನದಲ್ಲಿತ್ತು. ನನ್ನ ಎರಡನೇ ಅವಧಿಯಲ್ಲಿ, ಇದು ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಇದೇ ಟ್ರ್ಯಾಕ್ ರೆಕಾರ್ಡ್ ಮುಂದುವರಿದಲ್ಲಿ, ನಾನು ಮೂರನೇ ಅವಧಿಯಲ್ಲಿ ದೇಶವನ್ನು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯನ್ನಾಗಿ ಮಾಡುತ್ತೇನೆ”ಎಂದು ಅವರು ಹೇಳಿದರು. "ನನ್ನ ಮೂರನೇ ಅವಧಿಯಲ್ಲಿ, ಭಾರತವು ಅಗ್ರ ಮೂರು ಆರ್ಥಿಕತೆಗಳಲ್ಲಿ ನಿಲ್ಲಲಿದೆ. ಮತ್ತು ಇದು ಮೋದಿಯವರ ಗ್ಯಾರಂಟಿ" ಎಂದು ಅವರು ಕಾರ್ಯಕ್ರಮವೊಂದರಲ್ಲಿ ಹೇಳಿದರು.
ತಮಿಳುನಾಡಿನಲ್ಲಿ 6 ತಿಂಗಳ ಕಾಲ ಅಣ್ಣಾಮಲೈ ಪಾದಯಾತ್ರೆ; ರಾಮೇಶ್ವರಂನಲ್ಲಿ ಅಮಿತ್ ಶಾ ಚಾಲನೆ
ಕರ್ನಾಟಕದಲ್ಲಿ ಬಿಜೆಪಿಗೆ 20 ಸ್ಥಾನ: ಕಳೆದ ಬಾರಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಕರ್ನಾಟಕದಲ್ಲಿ ದಾಖಲೆಯ 25 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಆದರೆ, 2024ರ ಚುನಾವಣೆಯಲ್ಲಿ ಬಿಜೆಪಿ ಐದು ಸ್ಥಾನ ಕಳೆದುಕೊಳ್ಳಲಿದ್ದು, 20 ಸ್ಥಾನ ಗೆಲ್ಲಲಿದೆ ಎಂದು ಸಮೀಕ್ಷೆಯಲ್ಲಿ ತಿಳಿಸಲಾಗಿದೆ. ಕನಿಷ್ಠ 15 ಕ್ಷೇತ್ರ ಗೆಲ್ಲುವ ಗುರಿ ಹೊಂದಿರುವ ಕಾಂಗ್ರೆಸ್ ಪಕ್ಷ 7 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದು, ಜೆಡಿಎಸ್ 1 ಸ್ಥಾನ ಗೆಲ್ಲಲಿದೆ. ಕಳೆದ ಬಾರಿ ಕಾಂಗ್ರೆಸ್ 1 ಹಾಗೂ ಜೆಡಿಎಸ್ 1 ಕ್ಷೇತ್ರದಲ್ಲಿ ಗೆಲುವು ಕಂಡಿತ್ತು. ಇನ್ನು ವೋಟ್‌ಶೇರ್‌ನ ಲೆಕ್ಕಾಚಾರದಲ್ಲಿ ಹೇಳುವುದಾದರೆ, ಬಿಜೆಪಿ ಶೇ. 47ರಷ್ಟು, ಕಾಂಗ್ರೆಸ್ ಶೇ. 40ರಷ್ಟು ಹಾಗೂ ಜೆಡಿಎಸ್ ಶೇ.9ರಷ್ಟು ವೋಟ್ ಶೇರ್ ಪಡೆಯಲಿದೆ.
ಇಸ್ಲಾಂಗೆ ಮತಾಂತರವಾದ ಅಂಜುಗೆ ಜಾಗ, ಹಣ ಹಾಗೂ ಉಡುಗೊರೆ ನೀಡಿದ ಪಾಕ್ ಉದ್ಯಮಿ!