Asianet Suvarna News Asianet Suvarna News

ಕರ್ನಾಟಕದ ಜನತೆಗೆ ಮತ್ತೊಂದು ಶಾಕ್‌: ವಿದ್ಯುತ್‌ ದರ ಏರಿಕೆ ಬೆನ್ನಲ್ಲೇ ನಂದಿನಿ ಹಾಲಿನ ಬೆಲೆ ಹೆಚ್ಚಳ?

14 ಹಾಲು ಒಕ್ಕೂಟಗಳಿಂದ ಪ್ರತಿ ಲೀ.ಗೆ 5 ರೂ. ಏರಿಕೆಗೆ ಮನವಿ ಮಾಡಲಾಗಿದೆ. ಆದ್ರೆ KMF ಸರ್ಕಾರದ ಮುಂದೆ ಇಟ್ಟಿರೊ ಪ್ರಸ್ತಾವನೆ 2 ರಿಂದ 3 ರೂ. ಮಾತ್ರ. ಇದಕ್ಕೆ ಸಿಎಂ ಗ್ರೀನ್ ಸಿಗ್ನಲ್ ನೀಡಿದ್ರೆ ಹಾಲಿನ ದರ ಏರಿಕೆ ಆಗಲಿದೆ. 

Nandini Milk Price Likely Increase in Karnataka grg
Author
First Published Jun 16, 2023, 10:13 AM IST

ಬೆಂಗಳೂರು(ಜೂ.16): ರಾಜ್ಯದಲ್ಲಿ ಹಾಲಿನ ದರ ಏರಿಕೆ ಮಾಡಲು ಹಾಲು ಒಕ್ಕೂಟಗಳು ನಿರಂತರ ಸರ್ಕಸ್ ಮಾಡುತ್ತಿವೆ. ಹೌದು, KERC ಎಲ್ಲಾ ಎಸ್ಕಾಂಗಳ ವಿದ್ಯುತ್ ದರ ಏರಿಕೆಗೆ ಅಸ್ತು ಬೆನ್ನಲ್ಲೇ ಇದೀಗ ಹಾಲು ಒಕ್ಕೂಟಗಳಿಂದ ದರ ಏರಿಕೆಗೆ ಬಿಗಿಪಟ್ಟು ಹಿಡಿದಿವೆ ಅಂತ ತಿಳಿದು ಬಂದಿದೆ. 

ವಿದ್ಯುತ್ ದರದಂತೆ ಹಾಲಿನ ದರವನ್ನೂ ಏರಿಸಲು ರಾಜ್ಯದ ಹಾಲು ಒಕ್ಕೂಟಗಳು ಸರ್ಕಾರಕ್ಕೆ ಒತ್ತಾಯಿಸಿವೆ. ರಾಜ್ಯದಲ್ಲಿ ಒಟ್ಟು 14 ಹಾಲು ಒಕ್ಕೂಟಗಳು ನಡೆಯುತ್ತಿದವೆ. ಹಾಲಿನ ದರ ಏರಿಸಲು ಸರ್ಕಾರದ ಮೇಲಿನ ಒತ್ತಡ ಹೇರಲು ಮಾಸ್ಟರ್ ಫ್ಲ್ಯಾನ್‌ವೊಂದನ್ನ ಸಿದ್ಧಪಡಿಸಿವೆ ಅಂತ ಎನ್ನಲಾಗಿದೆ. 

ವಿದ್ಯುತ್‌ ದರ ಹೆಚ್ಚಳಕ್ಕೆ ಕಾಂಗ್ರೆಸ್‌ ಸರ್ಕಾರ ಕಾರಣ: ಸಂಸದ ಮುನಿಸ್ವಾಮಿ

ಸಿಎಂ ಸಿದ್ದರಾಮಯ್ಯ ಭೇಟಿಗೆ ಹಾಲು ಒಕ್ಕೂಟಗಳು ಪ್ಲ್ಯಾನ್ ಮಾಡಿವೆ. ಈ ವಾರದೊಳಗೆ ಸಿಎಂ ಸಿದ್ದರಾಮಯ್ಯ ಅವರ  ಭೇಟಿ ಮಾಡಲು ನಿರ್ಧರಿಸಿವೆ.  ಈ ಬಗ್ಗೆ KMF ವ್ಯವಸ್ಥಾಪಕ ನಿರ್ದೇಶಕ ಸತೀಶ್ ಜತೆ ಒಕ್ಕೂಟಗಳ ಅಧ್ಯಕ್ಷರು ಚರ್ಚೆ ನಡೆಸಿದ್ದಾರೆ. ಇನ್ನೆರಡು ದಿನಗಳಲ್ಲಿ ಸಿಎಂ ಜೊತೆಗೆ ಚರ್ಚೆ ಮಾಡುವ ಭರವಸೆ ಸಿಕ್ಕಿದೆ. 

14 ಹಾಲು ಒಕ್ಕೂಟಗಳಿಂದ ಪ್ರತಿ ಲೀ.ಗೆ 5 ರೂ. ಏರಿಕೆಗೆ ಮನವಿ ಮಾಡಲಾಗಿದೆ. ಆದ್ರೆ KMF ಸರ್ಕಾರದ ಮುಂದೆ ಇಟ್ಟಿರೊ ಪ್ರಸ್ತಾವನೆ 2 ರಿಂದ 3 ರೂ. ಮಾತ್ರ. ಇದಕ್ಕೆ ಸಿಎಂ ಗ್ರೀನ್ ಸಿಗ್ನಲ್ ನೀಡಿದ್ರೆ ಹಾಲಿನ ದರ ಏರಿಕೆ ಆಗಲಿದೆ. 
ಪೆಟ್ರೋಲ್, ಡೀಸೆಲ್, ಅಡುಗೆ ಎಣ್ಣೆ, ಸಿಲಿಂಡರ್, ವಿದ್ಯುತ್ ಬಿಲ್ ದರವೂ ದುಬಾರಿಯಾಗಿದೆ. ನಷ್ಟ ಹಾಗೂ ನಿರ್ವಹಣೆ ವೆಚ್ಚ ದುಬಾರಿ ಕಾರಣ ನೀಡಿ ಹಾಲಿನ ದರ ಏರಿಕೆಗೆ ಪ್ಲಾನ್ ಮಾಡಿವೆ. ಶೀಘ್ರದಲ್ಲೇ ಕೆಎಂಎಫ್ ಅಧಿಕಾರಿಗಳ ಜೊತೆ ಸಿಎಂ ಸಿದ್ದರಾಮಯ್ಯ ಅವರು ಸಭೆ ನಡೆಸಲಿದ್ದಾರೆ. ಹಾಲಿನ ದರ  ಪರಿಷ್ಕರಣೆ ಸಂಬಂಧ ಸಿಎಂ ಸಿದ್ದರಾಮಯ್ಯ ಸಭೆ ನಡೆಸಲಿದ್ದಾರೆ. ಹಾಲಿನ ದರ ಏರಿಕೆ ಸಂಬಂಧ ಸಾಧಕ-ಬಾಧಕಗಳನ್ನು ಚರ್ಚಿಸಲು ಸಿಎಂ ಸಮ್ಮುಖದಲ್ಲಿ ಸಭೆ ನಡೆಯಲಿದೆ. 

Follow Us:
Download App:
  • android
  • ios