ನಮ್ಮ ಮೆಟ್ರೋ ಪದೇ ಪದೆ ಕೈಕೊಡುತ್ತಿದೆ. ದೇಶದಲ್ಲಿ 2ನೇ ಅತೀ ದೊಡ್ಡ ಮೆಟ್ರೋ ಜಾಲ ಹೊಂದಿರು ಹೆಗ್ಗಳಿಕೆಗೆ ಪಾತ್ರವಾಗಿರುವ ಬೆಂಗಳೂರಿನಲ್ಲಿ ಯಾವಾಗ ಮೆಟ್ರೋ ಓಡುತ್ತೆ, ಯಾವಾಗ ನಿಲ್ಲುತ್ತೆ ಅನ್ನೋದೆ ಗೊತ್ತಾಗದಂತಾಗಿದೆ.

ಬೆಂಗಳೂರು (ಜೂ.26) ನಮ್ಮ ಮೆಟ್ರೋ ಬೆಂಗಳೂರಿನ ಟ್ರಾಫಿಕ್ ನಡುವೆ ತಕ್ಕ ಸಮಯಕ್ಕೆ ಉದ್ದೇಶಿತ ಸ್ಥಳ ತಲುಪಲು ಸಾಧ್ಯವಾಗುವ ಸಾರಿಗೆ ವ್ಯವಸ್ಥೆ. ಹೀಗಾಗಿ ಬಹುತೇಕ ಜನರು ನಮ್ಮ ಮೆಟ್ರೋ ಅವಲಂಬಿಸಿದ್ದಾರೆ. ಆದರೆ ನಮ್ಮ ಮೆಟ್ರೋದಲ್ಲಿ ಸಮಸ್ಯೆಗಳು ಮುಗಿಯುತ್ತಿಲ್ಲ. ದಿನಕ್ಕೊಂದು ತಾಂತ್ರಿಕ ಸಮಸ್ಯೆಗಳು ಕಾಣಿಸಿಕೊಂಡು ಪ್ರಯಾಣಿಕರು ಹೈರಾಣಾಗುತ್ತಿದ್ದಾರೆ. ಕಳೆದೆರಡು ದಿನ ಸತತವಾಗಿ ನಮ್ಮ ಮೆಟ್ರೋದಲ್ಲಿ ಸಮಸ್ಯೆ ಕಾಣಿಸಿಕೊಂಡು ಕೆಟ್ಟು ನಿಂತ ಘಟನೆ ನಡೆದಿದೆ. ಪ್ರಮುಖ ಸಮಯದಲ್ಲೇ ಮೆಟ್ರೋ ಕೈಕೊಟ್ಟು ಪ್ರಯಾಣಿಕರು ಪರದಾಡುವ ಸ್ಥಿತಿ ಎದುರಾಗಿದೆ.

ಮೂರು ವರ್ಷದಲ್ಲಿ 21 ಬಾರಿ ಎಡವಟ್ಟು

ರೈಲ್ವೇ ಹಳಿ, ಮೆಟ್ರೋ ರೈಲು, ಸಿಗ್ನಲಿಂಗ್ ವೈಫಲ್ಯತೆ ಸೇರಿದಂತೆ ನೂರೆಂಟು ಸಮಸ್ಯೆಗಳು ಮೆಟ್ರೋ ಪ್ರಯಾಣಿಕರನ್ನು ಹೈರಾಣಾಗುವಂತೆ ಮಾಡಿದೆ. 2024 ರಿಂದ 2026ರ ಈ ವರೆಗೆ ನಮ್ಮ ಮೆಟ್ರೋದಲ್ಲಿ 21 ಬಾರಿ ಸಮಸ್ಯೆ ಕಾಣಿಸಿಕೊಂಡು ಕೆಟ್ಟು ನಿಂತಿದೆ. ಪ್ರಯಾಣ ನಡುವೆ ಮೆಟ್ರೋ ಸಮಸ್ಯೆ ಕಾಣಿಸಿಕೊಂಡು ಪ್ರಯಾಣಿಕರು ಅರ್ಧ ದಾರಿಯಲ್ಲೇ ಇಳಿಯಬೇಕಾದ ಅನಿವಾರ್ಯತೆ ಎದುರಾಗಿದೆ. ಪದೇ ಪದೇ ತಾಂತ್ರಿಕ ದೋಷ ಕಾಣಿಸಿಕೊಳ್ತಿರುವ ಹಿನ್ನೆಲೆ ಪ್ರಯಾಣಿಕರಲ್ಲಿ ಆತಂಕ ಹೆಚ್ಚಾಗಿದೆ. ಪ್ರಮುಖವಾಗಿ ಹಳಿ ಮೆಟ್ರೋ ನಮ್ಮ ಮೆಟ್ರೋ ಪ್ರಯಾಣಿಕರ ನಿದ್ದೆ ಗೆಡಿಸುತ್ತಿದೆ. ಕಳೆದ 3 ವರ್ಷಗಳಲ್ಲಿ 11 ಬಾರಿ ಹಳದಿ ಮಾರ್ಗದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ.

ಮ್ಮ ಮೆಟ್ರೋದಲ್ಲಿ ಸಮಸ್ಯೆಗಳ ಸರಣಿ

  • ಜನವರಿ 27 - 2024
  • ನೇರಳೆ ಮಾರ್ಗ: ಎಂಜಿ ರೋಡ್ ನಿಲ್ದಾಣದಲ್ಲಿ ತಂತ್ರೀಕ ದೋಷ
  • ಫೆಬ್ರವರಿ 20-2024
  • ನೇರಳೆ ಮಾರ್ಗದ ಮೆಜೆಸ್ಟಿಕ್ ನಿಂದ ಬೈಯಪ್ಪನಹಳ್ಳಿವರೆಗೆ ತಾಂತ್ರಿಕ ದೋಷ
  • ಮಾರ್ಚ್ 27-2024
  • ಸಂಪೂರ್ಣ ನೇರಳೆ ಮಾರ್ಗದಲ್ಲಿ ಸಿಗ್ನಲ್ ಸಮಸ್ಯೆ
  • ಜುಲೈ 30-2024
  • ಹಸಿರು ಮಾರ್ಗದಲ್ಲಿ ಮೇಟ್ರೋ ರೈಲ್ವೆಗೆ ವಿದ್ಯುತ್ ವ್ಯತ್ಯಯ
  • ಮಾರ್ಚ್ 3-2025
  • ನೇರಳೆ ಮಾರ್ಗದಲ್ಲಿ ಅತ್ತಿಗುಪ್ಪೆ ನಿಲ್ದಾಣದಲ್ಲಿ ತಾಂತ್ರಿಕ ದೋಷ
  • ಏಪ್ರಿಲ್ 8-2025
  • ಎಲ್ಲಾ ಮಾರ್ಗದಲ್ಲಿ ಮೇಟ್ರೋ ಕಾರ್ಡ್ ಸಮಸ್ಯೆ
  • ಮೇ 23-2025
  • ನೇರಳೆ ಮಾರ್ಗದಲ್ಲಿ ತಾಂತ್ರಿಕ ದೋಷದಿಂದ ಮೇಟ್ರೋ ಬಂದ್
  • ಜೂನ್ 16-2025
  • ನೇರಳೆ ಮಾರ್ಗದಲ್ಲಿ ತಾಂತ್ರಿಕ ದೋಷದಿಂದ ಇಡೀ ದಿನ ರೈಲು ವೇಳಪಟ್ಟಿಯಲ್ಲಿ ವ್ಯತ್ಯಯ
  • ಸೆಪ್ಟೆಂಬರ್ 22-2025
  • ಹಳದಿ ಮಾರ್ಗದಲ್ಲಿ ಮೇಟ್ರೋ ರೈಲುನಲ್ಲಿ ತಾಂತ್ರಿಕ ದೋಷ ಸಂಜೆ 7 ರಿಂದ ಮೇಟ್ರೋ ಬಂದ್
  • ಅಕ್ಟೋಬರ್ 13-2025
  • ಹಳದಿ ಮಾರ್ಗದಲ್ಲಿ ಮೇಟ್ರೋ ರೈಲುನಲ್ಲಿ ತಾಂತ್ರಿಕ ದೋಷ
  • ಅಕ್ಟೋಬರ್ 16-2025
  • ಹಳದಿ ಮಾರ್ಗದಲ್ಲಿ ಮೇಟ್ರೋ ರೈಲುನಲ್ಲಿ ತಾಂತ್ರಿಕ ದೋಷ
  • ಅಕ್ಟೋಬರ್ 30-2025
  • ನೇರಳೆ, ಹಸಿರು ಮಾರ್ಗದಲ್ಲಿ ಸಿಗ್ನಲ್ ಹಾಗೂ ವಿದ್ಯುತ್ ಸಮಸ್ಯೆ
  • ನವೆಂಬರ್ 5-2025
  • ನಾಲ್ಕು ಮಾರ್ಗದಲ್ಲಿ ಟಿಕೆಟ್ ನೀಡವಲ್ಲಿ ತಾಂತ್ರಿಕ ಸಮಸ್ಯೆ
  • ನವೆಂಬರ್ 12-2025
  • ಹಳದಿ ಮಾರ್ಗದಲ್ಲಿ ಸಿಗ್ನಲ್ ವೈಫಲ್ಯ ಹಿನ್ನೆಲೆ ಮೆಟ್ರೋ ವ್ಯತ್ಯಯ
  • ಜನವರಿ 15-2026
  • ಹಳದಿ ಮಾರ್ಗದಲ್ಲಿ ಡಿ-ರೈಲ್ ಆಗಿದ್ದ ಡ್ರೈವರ್ ಲೆಸ್ ಮೇಟ್ರೋ
  • ಮೇ 4-2026
  • ನೇರಳೆ ಮಾರ್ಗ ಕಬ್ಬನ್ ಪಾರ್ಕ್ ನಿಲ್ದಾಣ ಮೇಟ್ರೋ ರೈಲಿಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ
  • ಫೆಬ್ರವರಿ 10-2026
  • ಹಸಿರು ಮಾರ್ಗದ RV ರಸ್ತೆ ನಿಲ್ದಾಣದಲ್ಲಿ ರೈಲ್ವೆಯಲ್ಲಿ ಕಾಣಿಸಿಕೊಂಡಿದ್ದ ಸಮಸ್ಯೆ
  • ಜೂನ್ 12-2026
  • ಎಲ್ಲಾ ಮಾರ್ಗದಲ್ಲಿ ಸ್ಮಾರ್ಟ್ ಕಾರ್ಡ್ ರೀಚಾರ್ಜ್ ಆಗದೆ ಪ್ರಯಾಣಿಕರಿಗೆ ಸಮಸ್ಯೆ
  • ಜೂನ್ 21-2026
  • ಹಸಿರು ಮಾರ್ಗ ನಾಗಾಸಂದ್ರ ಮೇಟ್ರೋ ನಿಲ್ದಾಣದ ನಾಮ ಪಾಲಕದಲ್ಲಿ ಬೆಂಕಿ ಅವಘಡ
  • ಜೂನ್ 23- 2026
  • ನೇರಳೆ ಮಾರ್ಗ ಕಬ್ಬನ್ ಪಾರ್ಕ್ ನಿಲ್ದಾಣದಲ್ಲಿ ತಾಂತ್ರಿಕ ದೋಷ
  • ಜೂನ್ ‌26-2026
  • ನೇರಳೆ ಮಾರ್ಗ ಕಬ್ಬನ್ ಪಾರ್ಕ್ ನಿಲ್ದಾಣದಲ್ಲಿ ರೈಲು ಡೋರ್ ಸಮಸ್ಯೆ
  • ನಿನ್ನೆ ನೇರಳೆ ಮಾರ್ಗದಲ್ಲಿ ಸಮಸ್ಯೆ

ನಿನ್ನೆ (ಜೂ.25) ಸಂಜೆ ನೇರಳೆ ಮಾರ್ಗದಲ್ಲಿ ಮೆಟ್ರೋ ಸಮಸ್ಯೆಯಾಗಿದೆ. ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದಲ್ಲಿ ಮೆಟ್ರೋ ಬಾಗಿಲುಗಳು ಕ್ಲೂಸ್ ಆಗದೆ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿತ್ತು. ಪರಿಣಾಮ ಮೆಟ್ರೋ ಸಂಚಾರ ವ್ಯತ್ಯಯವಾಗಿತ್ತು. 10 ನಿಮಿಷಗಳ‌ ಕಾಲ‌ ಮೆಟ್ರೋ ಸಮಸ್ಯೆ ಎದುರಿಸಿತ್ತು. ವೈಟ್ ಫೀಲ್ಡ್ ನಿಂದ ಚಲ್ಲಘಟ್ಟ ಕಡೆ ಹೋಗುತಿದ್ದ ಮೆಟ್ರೋ, ಸುಮಾರು 7.50 ಕ್ಕೆ ಕಬ್ಬನ್ ಪಾರ್ಕ್ ಬಳಿ ಬಂದಾಗ ಸಮಸ್ಯೆ ಕಾಣಿಸಿಕೊಂಡಿದೆ. ಪರಿಣಾಮ ಈ ಹಿನ್ನೆಲೆ ವೈಟ್ ಫೀಲ್ಡ್ ಕಡೆಯಿಂದ ಬರುತಿದ್ದ ಎಲ್ಲಾ ಮೆಟ್ರೋ ವ್ಯತ್ಯಯವಾಗಿದೆ. 10 ನಿಮಿಷಗಳ ಬಳಿಕ ಮೆಟ್ರೋ ತಾಂತ್ರಿಕ ಸಮಸ್ಯೆ ಬಗೆ ಹರಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.