Asianet Suvarna News Asianet Suvarna News

ಪೊಲೀಸರು ಸಂವಿಧಾನ ಪ್ರಕಾರ ಕೆಲಸ ಮಾಡುತ್ತಿಲ್ಲ: ಶಾಸಕ ಭರತ್ ಶೆಟ್ಟಿ ಆಕ್ರೋಶ

ರಸ್ತೆ ನಡುವೆ ನಮಾಜ್ ಮಾಡಿದವರನ್ನ ಬಿಡ್ತೀರಿ, ನಾಳೆ ರಸ್ತೆ ಮಧ್ಯೆ ಹನುಮಾನ್ ಚಾಲೀಸಾ ಪಠಣ ಮಾಡಿದ್ರೆ ಬಿಡ್ತೀರಾ? ಟ್ರಾಫಿಕ್ ಇರುವ ರಸ್ತೆಗಳಲ್ಲಿ ನಮಾಜ್ ಮಾಡಬಹುದಾ? ರಾಜ್ಯ ಸರ್ಕಾರದ ವಿರುದ್ಧ ಮಂಗಳೂರು ಶಾಸಕ ಭರತ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದರು.

Namaz on road in Mangaluru case MLA Bharat shetty outraged againt karnataka government rav
Author
First Published May 31, 2024, 1:23 PM IST

ಮಂಗಳೂರು (ಮೇ.31): ರಸ್ತೆ ನಡುವೆ ನಮಾಜ್ ಮಾಡಿದವರನ್ನ ಬಿಡ್ತೀರಿ, ನಾಳೆ ರಸ್ತೆ ಮಧ್ಯೆ ಹನುಮಾನ್ ಚಾಲೀಸಾ ಪಠಣ ಮಾಡಿದ್ರೆ ಬಿಡ್ತೀರಾ? ಟ್ರಾಫಿಕ್ ಇರುವ ರಸ್ತೆಗಳಲ್ಲಿ ನಮಾಜ್ ಮಾಡಬಹುದಾ? ರಾಜ್ಯ ಸರ್ಕಾರದ ವಿರುದ್ಧ ಮಂಗಳೂರು ಶಾಸಕ ಭರತ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದರು.

ಮಂಗಳೂರು ನಡುರಸ್ತೆಯಲ್ಲಿ ನಮಾಜ್ ಮಾಡಿದ ಪ್ರಕರಣ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕರು, ಯಕ್ಷಗಾನ ಅಥವಾ ಭೇರೆ ಕಾರ್ಯಕ್ರಮವನ್ನ ನಾವು ಅನುಮತಿ ಪಡೆದು ಮಾಡುತ್ತೇವೆ. ಯಾವತ್ತೂ ರೂಲ್ಸ್ ಬ್ರೇಕ್ ಮಾಡೋದಿಲ್ಲ. ವರ್ಷಕ್ಕೊಮ್ಮೆ ದೊಡ್ಡ ಹಬ್ಬ ಆದಾಗ ಅವರು ಅನುಮತಿ ಪಡೆದು ಮಾಡಲಿ ಬೇಡ ಅಂದವರಾರು? ಆದರೆ ಏಕಾಏಕಿ ರಸ್ತೆಗೆ ಬಂದು ನಮಾಜ್ ಮಾಡೋದು ಸರಿ ಅನಿಸುತ್ತಾ? ಎಂದು ಪ್ರಶ್ನಿಸಿದರು.

ರಸ್ತೆ ಮೇಲೆ ನಮಾಜ್ ಮಾಡಿದ ಪ್ರಕರಣ; ಇಂತಹ ಸಣ್ಣ ಸಮಸ್ಯೆಗೆ ರಂಪಾಟ ಮಾಡುವುದು ಸರಿಯಲ್ಲ: ರಮನಾಥ್ ರೈ

ಒತ್ತಡಕ್ಕೆ ಮಣಿದು ಸುಮೋಟೊ ಕೇಸ್ ವಾಪಾಸು ಪಡೆಯಲಾಗಿದೆ, ಅಲ್ಲದೇ ಪೊಲೀಸ್ ಅಧಿಕಾರಿಯನ್ನ 15 ದಿನಗಳ ಕಡ್ಡಾಯ ರಜೆಯ ಮೇಲೆ ಕಳಿಸಲಾಗಿದೆ. ಬಿ ರಿಪೋರ್ಟ್ ಹಾಕುವ ಮೊದಲು ತನಿಖೆ ಆಗಬೇಕು. ತನಿಖೆ ಆಗದೇ ಬಿ ರಿಪೋರ್ಟ್ ನ್ಯಾಯಾಲಕ್ಕೆ ಸಲ್ಲಿಸಿದ್ದು ಸರೀನಾ? ಇದೆಲ್ಲ ರಾಜಕೀಯ ಒತ್ತಡದಿಂದ ಆಗಿದೆ. ಪೊಲೀಸ್ ಇಲಾಖೆ ಸಂಪೂರ್ಣವಾಗಿ ಕಂಟ್ರೋಲ್‌ನಲ್ಲಿದೆ. ರಾಜ್ಯ ಸರ್ಕಾರ, ಪೊಲೀಸ್ ಇಲಾಖೆ ಮುಸ್ಲಿಂ ತುಷ್ಟೀಕರಣ ನೀತಿಯ ಪರಮಾವಧಿಯನ್ನು ತಲುಪಿದ್ದಾರೆ. ರಸ್ತೆಯಲ್ಲಿ ನಮಾಜ್ ಮಾಡಿದವರ ಮೇಲೆ ಕ್ರಮ ಜರುಗಿಸುವ ಬದಲು ಪ್ರಶ್ನಿಸಿದವರ ಮೇಲೆ ಎಫ್‌ಐಆರ್ ದಾಖಲಿಸುತ್ತಾರೆಂದರೆ ಯೋಚಿಸಿ ಪೊಲೀಸ್ ಇಲಾಖೆಯನ್ನ ರಾಜ್ಯ ಸರ್ಕಾರ ಯಾವ ರೀತಿ ದುರುಪಯೋಗಪಡಿಸಿಕೊಂಡಿದೆ ಎಂಬುದು ಗೊತ್ತಾಗುತ್ತೆ. ನಮಾಜ್ ಮಾಡುವವರ ವೋಟ್ ಎಲ್ಲ ನಮಗೆ ಬೀಳುತ್ತೆ ಎಂಬ ಮನಸ್ಥಿತಿಯಲ್ಲಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಮಂಗಳೂರು: ನಡುರಸ್ತೆಯಲ್ಲೇ ನಮಾಜ್‌ಗೆ ಕುಳಿತ ಯುವಕರು; ವಾಹನ ಮುಂದೆ ಸಾಗದೇ ಯೂಟರ್ನ್!

ಈ ರೀತಿ ತುಷ್ಟೀಕರಣ ಮಾಡ್ತಾ ಹೋದ್ರೆ ನಾಳೆ ಇನ್ನೊಬ್ಬರು ಬಂದು ರಸ್ತೆಗೆ ಕುಳಿತುಕೊಳ್ತಾರೆ, ಪ್ರಾರ್ಥನೆ ಮಾಡ್ತಾರೆ. ಯಾಕೆ ಅನುಮತಿ ಪಡೆಯಬೇಕು ಎಂಬ ಮನಸ್ಥಿತಿ ಬರುತ್ತೆ ಹೀಗಿರುವಾಗ ಯಾಕೆ ಇದಕ್ಕೆಲ್ಲ ಅವಕಾಶ ಕೊಡಬೇಕು? ಬನಾನ ರಿಪಬ್ಲಿಕ್ ಗಿಂತ ಕೆಟ್ಟದಾಗಿ ಆಗ್ತಿದೆ. ಆಡಳಿತ ಸಂಪೂರ್ಣ ವಿಫಲವಾಗಿದೆ. ಶರಣ್ ಪಂಪುವೆಲ್ ಹಾಕಿರುವ ಪೋಸ್ಟ್ ಗೆ ನನ್ನ ಬೆಂಬಲವಿದೆ. ಅವರು ಹಾಕಿದ್ದು ಸರಿಯಾಗಿದೆ. ಪೊಲೀಸ್ ಅಧಿಕಾರಿಗಳು ಒತ್ತಡದಿಂದ ಕೆಲಸ ಮಾಡ್ತಿದ್ದಾರೆ. ಸಂವಿಧಾನದ ಪ್ರಕಾರ ಯಾರೂ ಕೆಲಸ ಮಾಡುತ್ತಿಲ್ಲ. ಎಲ್ಲ ಕಡೆಯೂ ಫಿಕ್ಸಿಂಗ್ ಆಗ್ತಿದೆ. ಇದಕ್ಕೆಲ್ಲ ನಾವು ಹೆದರೊಲ್ಲ, ಬಗ್ಗೊಲ್ಲ. ಸಂಘರ್ಷದ ಮೂಲಕವೇ ನಾವು ಪಕ್ಷ ಕಟ್ಟಿದವರು ಮುಂದೆಯೂ ಅದೇ ರೀತಿಯ ಹೋರಾಟ ನಡೆಸುತ್ತೇವೆ. ಈ ವಿಚಾರದ ಬಗ್ಗೆ ಸದನದಲ್ಲಿಯೂ ಪ್ರಶ್ನೆ ಮಾಡುತ್ತೇವೆ ಎಂದು ಎಚ್ಚರಿಸಿದರು.

Latest Videos
Follow Us:
Download App:
  • android
  • ios