'ಮಸೀದಿಯಲ್ಲಿ ಜಾಗ ಇಲ್ಲದಾಗ ಹೊರಗೆ ಬಂದು ನಮಾಜ್ ಮಾಡುವುದು ಸಹಜ' - ರಮನಾಥ ರೈ
ಮಸೀದಿಯಲ್ಲಿ ಸ್ಥಳಾವಕಾಶದ ಕೊರತೆಯಿತ್ತು. ರಸ್ತೆಯಲ್ಲಿ ನಮಾಜ್ ಮಾಡಿದ್ರು. ಇದೊಂದು ಅನಗತ್ಯ ವಿಚಾರ. ನಮಗೆ ದೇವರು ಒಬ್ಬನೇ ನಮ್ಮ ದೇವರು ಬೇರೆ ಅಲ್ಲ, ನಿಮ್ಮ ದೇವರು ಬೇರೆಯಲ್ಲ ಎಂದು ಮಾಜಿ ಸಚಿವ ರಾಮನಾಥ್ ರೈ ತಿಳಿಸಿದರು.
ಮಂಗಳೂರು (ಮೇ.21): ಮಸೀದಿಯಲ್ಲಿ ಸ್ಥಳಾವಕಾಶದ ಕೊರತೆಯಿತ್ತು. ರಸ್ತೆಯಲ್ಲಿ ನಮಾಜ್ ಮಾಡಿದ್ರು. ಇದೊಂದು ಅನಗತ್ಯ ವಿಚಾರ. ನಮಗೆ ದೇವರು ಒಬ್ಬನೇ ನಮ್ಮ ದೇವರು ಬೇರೆ ಅಲ್ಲ, ನಿಮ್ಮ ದೇವರು ಬೇರೆಯಲ್ಲ ಎಂದು ಮಾಜಿ ಸಚಿವ ರಾಮನಾಥ್ ರೈ ತಿಳಿಸಿದರು.
ಮಂಗಳೂರು ರಸ್ತೆಯಲ್ಲೇ ನಮಾಜ್ ಮಾಡಿದ ಪ್ರಕರಣ ಸಂಬಂಧ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಕಾರ್ಯಕ್ರಮಗಳು ನಡೆಯುತ್ತವೆ. ಸಣ್ಣ ಸಮಸ್ಯೆಯನ್ನು ಇಷ್ಟೊಂದು ರಂಪಾಟ ಮಾಡಿದ್ದು ಸರಿಯಲ್ಲ. ಅಲ್ಪಸಂಖ್ಯಾತ ಮತೀಯವಾದ ಬಹುಸಂಖ್ಯಾತ ಮತೀಯವಾದವನ್ನು ಕಾಂಗ್ರೆಸ್ ಒಪ್ಪಲ್ಲ. ಏನೋ ಒಂದು ಗಳಿಗೆಯಲ್ಲಿ ಈ ಘಟನೆ ನಡೆದುಹೋಗಿದೆ. ಅದನ್ನ ಸರಿ ಮಾಡಿಕೊಂಡು ಪ್ರಕರಣ ರದ್ದುಗೊಳಿಸುವುದನ್ನ ಮಾಡಲಾಗಿದೆ. ಈ ಹಿಂದೆಯೂ ಈ ರೀತಿ ಸುಮೊಟೊ ಪ್ರಕರಣ ಆಗಿಲ್ಲ. ಇದಕ್ಕಿಂತ ದೊಡ್ಡ ಪ್ರಚೋದನಕಾರಿ ಮಾತುಗಳನ್ನು ಈ ಜಿಲ್ಲೆಯಲ್ಲಿ ಮಾತನಾಡಿದ್ದಾರೆ. ಮಸೀದಿಯಲ್ಲಿ ಜಾಗ ಇಲ್ಲದಾಗ ಹೊರಗೆ ಬರುವುದು ಸಹಜ ಇದನ್ನ ದೊಡ್ಡದು ಮಾಡಬಾರದು. ಆದರೆ ಮತೀಯ ಸಾಮರಸ್ಯಕ್ಕೆ ತೊಂದರೆಯಾಗಿ ಘರ್ಷಣೆ ಆಗಬೇಕೆಂದು ಈ ರೀತಿ ಮಾಡಲಾಗಿದೆ ಎಂದರು.
ಮಂಗಳೂರು: ನಡುರಸ್ತೆಯಲ್ಲೇ ನಮಾಜ್‌ಗೆ ಕುಳಿತ ಯುವಕರು; ವಾಹನ ಮುಂದೆ ಸಾಗದೇ ಯೂಟರ್ನ್!