Karnataka BJP: ಮೈಸೂರು ಸಂಸದ, ಶಾಸಕರಿಗೆ ನಳಿನ್‌ ಕಟೀಲು ಖಡಕ್‌ ಎಚ್ಚರಿಕೆ

ಮೈಸೂರಿನ ಗ್ಯಾಸ್‌ಲೈನ್‌ ಪೈಪ್‌ ಯೋಜನೆಗೆ ಸಂಬಂಧಿಸಿದಂತೆ ಬಹಿರಂಗವಾಗಿ ಪರಸ್ಪರ ಬೈದಾಡಿಕೊಳ್ಳುತ್ತಿರುವ ಆಡಳಿತಾರೂಢ ಬಿಜೆಪಿಯ ಸಂಸದ ಹಾಗೂ ಶಾಸಕರಿಬ್ಬರಿಗೆ ಪಕ್ಷದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಅವರು ಖಡಕ್‌ ಎಚ್ಚರಿಕೆ ನೀಡಿದ್ದಾರೆ.

Nalin Kumar Kateel Warns Mysore MP and MLAs gvd

ಬೆಂಗಳೂರು (ಜ.31): ಮೈಸೂರಿನ ಗ್ಯಾಸ್‌ಲೈನ್‌ ಪೈಪ್‌ ಯೋಜನೆಗೆ ಸಂಬಂಧಿಸಿದಂತೆ ಬಹಿರಂಗವಾಗಿ ಪರಸ್ಪರ ಬೈದಾಡಿಕೊಳ್ಳುತ್ತಿರುವ ಆಡಳಿತಾರೂಢ ಬಿಜೆಪಿಯ ಸಂಸದ (BJP MP) ಹಾಗೂ ಶಾಸಕರಿಬ್ಬರಿಗೆ (MLAs) ಪಕ್ಷದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ (Nalin Kumar Kateel) ಅವರು ಖಡಕ್‌ ಎಚ್ಚರಿಕೆ (Warning) ನೀಡಿದ್ದಾರೆ. ಈ ರೀತಿ ಮಾಧ್ಯಮಗಳ ಮೂಲಕ ಆರೋಪ-ಪ್ರತ್ಯಾರೋಪ ಮಾಡುವುದನ್ನು ತಕ್ಷಣ ನಿಲ್ಲಿಸದಿದ್ದರೆ ಶಿಸ್ತು ಕ್ರಮ ಕೈಗೊಳ್ಳುವಂತೆ ಪಕ್ಷದ ವರಿಷ್ಠರಿಗೆ ಶಿಫಾರಸು ಮಾಡಬೇಕಾಗುತ್ತದೆ ಎಂದು ನೇರವಾಗಿ ತಿಳಿಸಿದ್ದಾರೆ. 

ಭಾನುವಾರ ಮೈಸೂರಿನ ಸಂಸದ ಪ್ರತಾಪ್‌ ಸಿಂಹ (Pratap Simha), ಶಾಸಕರಾದ ಎಸ್‌.ಎ.ರಾಮದಾಸ್‌ (SA Ramadas) ಹಾಗೂ ಎಲ್‌.ನಾಗೇಂದ್ರ (L Nagendra) ಅವರಿಗೆ ದೂರವಾಣಿ ಮೂಲಕ ಪ್ರತ್ಯೇಕವಾಗಿ ಮಾತನಾಡಿದ ಕಟೀಲ್‌ ಅವರು, ಮುಂದಿನ ಚುನಾವಣೆಯಲ್ಲಿ ನಿಮಗೆ ಟಿಕೆಟ್‌ ಬೇಕಾಗಿದ್ದಲ್ಲಿ, ಚುನಾವಣೆ ಗೆಲ್ಲಬೇಕಿದ್ದಲ್ಲಿ ಈ ರೀತಿ ಮಾಧ್ಯಮಗಳ ಮೂಲಕ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು. ಪಕ್ಷದ ಕಾರ್ಯಕರ್ತರಿಗೆ ಮಾದರಿಯಾಗಬೇಕಾದ ನೀವೇ ಈ ರೀತಿ ಮಾಧ್ಯಮಗಳ ಮೂಲಕ ವಾಗ್ವಾದ ನಡೆಸಿದರೆ ಹೇಗೆ? ಇಂಥ ನಡವಳಿಕೆಯನ್ನು ಯಾವುದೇ ಕಾರಣಕ್ಕೂ ಸಹಿಸಿಕೊಳ್ಳುವುದಿಲ್ಲ ಎಂದು ಏರಿದ ಧ್ವನಿಯಲ್ಲಿ ಹೇಳಿದರು ಎಂದು ತಿಳಿದು ಬಂದಿದೆ.

ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣ, ನಳೀನ್‌ ಕಟೀಲ್‌ ವಿರುದ್ಧದ FIR ರದ್ದು!

ನೀವು ಹಿರಿಯರಿದ್ದೀರಿ. ರಾಜಕೀಯದಲ್ಲಿ ಅನುಭವ ಹೊಂದಿದ್ದೀರಿ. ನಿಮ್ಮ ಏನೇ ಸಮಸ್ಯೆ ಇದ್ದರೂ ನಾಲ್ಕು ಗೋಡೆಗಳ ಮಧ್ಯೆ ಚರ್ಚಿಸಬೇಕು. ಪಕ್ಷದ ಸಂಘಟನೆಯಿದೆ. ಪಕ್ಷದ ನಾಯಕತ್ವದ ಗಮನಕ್ಕೆ ತನ್ನಿ. ಅಲ್ಲಿ ಸಮಾಲೋಚನೆ ನಡೆಸಿ ಬಗೆಹರಿಸಬಹುದು. ಪಕ್ಷದ ಶಿಸ್ತಿನ ಸಿಪಾಯಿಗಳಾಗಿ ಇರಬೇಕಾದವರು ಬೀದಿಯಲ್ಲಿ ನಿಂತು ಪರಸ್ಪರ ಆರೋಪ ಮಾಡುವುದನ್ನು ನೋಡಿಕೊಂಡು ಸುಮ್ಮನೆ ಕುಳಿತುಕೊಳ್ಳಲು ಆಗುವುದಿಲ್ಲ. ಇದುವರೆಗೆ ನಡೆದಿರುವ ಬೆಳವಣಿಗೆಗಳನ್ನು ನಾನು ಪಕ್ಷದ ಕೇಂದ್ರ ಸಮಿತಿಗೆ ವರದಿ ರೂಪದಲ್ಲಿ ಕಳಿಸುತ್ತೇನೆ. ಮತ್ತೆ ಮುಂದುವರೆಸಿದಲ್ಲಿ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು ಎನ್ನಲಾಗಿದೆ.

ಬಿಜೆಪಿಯಲ್ಲಿ ಮಹತ್ವದ ಬೆಳವಣಿಗೆ: ಸಂಪುಟ ವಿಸ್ತರಣೆಯೋ ಅಥವಾ ಪುನಾರಚನೆ ಮಾಡುಬೇಕೆನ್ನುವ ಕೂಗು ಕರ್ನಾಟಕ ಬಿಜೆಪಿಯಲ್ಲಿ ಜೋರಾಗಿದೆ. ಅಲ್ಲದೇ ಬಿಜೆಪಿ ಶಾಸಕರುಗಳು ಸಚಿವ ಸ್ಥಾನಕ್ಕೆ ಪೈಪೋಟಿಗೆ ಇಳಿದಿದ್ದು, ಹಲವೆಡೆ ಗೌಪ್ಯ ಸಭೆಗಳನ್ನ ಮಾಡುತ್ತಿದ್ದಾರೆ. ಇದರಿಂದ ಬಿಜೆಪಿಯಲ್ಲಿ ರಾಜಕೀಯ ಸಂಚಲನ ಮೂಡಿಸಿದ್ದು,  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಇದರಿಂದ ಎಚ್ಚೆತ್ತ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಖಡಕ್ ಎಚ್ಚರಿಕೆ ಸಂದೇಶವನ್ನ ರವಾನಿಸಿದ್ದಾರೆ.

ಸಂಪುಟ ವಿಸ್ತರಣೆ ಒಳಗೊಂಡು ಇತರ ವಿಚಾರವಾಗಿ ಗೊಂದಲದ ಹೇಳಿಕೆಗಳನ್ನು ಕೊಟ್ಟ ಕೆಲವರಿಗೆ ನೋಟಿಸ್ ಕೊಡಲು ಚಿಂತನೆ ನಡೆಸಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ. ಈ ಮೂಲಕ ಶಾಸಕರಿಗೆ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ. ಪಕ್ಷದಲ್ಲಿ ಶಿಸ್ತು ಕಾಯ್ದುಕೊಳ್ಳುವುದು ಅಗತ್ಯ. ಯಾರೇ ಆಗಲಿ ಬಹಿರಂಗವಾಗಿ ಪಕ್ಷದ ವಿಚಾರಗಳನ್ನು ಚರ್ಚೆ ಮಾಡುವಂತಿಲ್ಲ. ಯಾರು ಮಾಧ್ಯಮದಲ್ಲಿ ಮಾತಾಡುತ್ತಿದ್ದಾರೋ ಅವರನ್ನು ಕರೆದು ಮಾತಾಡುತ್ತೇನೆ. ಈಗಾಗಲೇ ಪದೇ ಪದೇ ಶಿಸ್ತು ಉಲ್ಲಂಘಿಸಿದ್ದಕ್ಕಾಗಿ ರಾಜ್ಯದ ಶಿಸ್ತು ಸಮಿತಿ ಮೂಲಕ‌ ಸ್ಪಷ್ಟೀಕರಣ ಪಡೆದು ಕೇಂದ್ರಕ್ಕೆ ವರದಿ ನೀಡಲಾಗಿದೆ, ಅಲ್ಲಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

Karnataka BJP ದಿಢೀರ್ ರಾಜ್ಯಪಾರನ್ನ ಭೇಟಿಯಾದ ಕಟೀಲ್ ನೇತೃತ್ವದ ಬಿಜೆಪಿ ನಿಯೋಗ

ಯಾವುದೇ ಶಾಸಕರು ಸಂಪುಟ ವಿಸ್ತರಣೆ ಬಗ್ಗೆ ಮಾತನಾಡುವ ಅವಶ್ಯಕತೆ ಇಲ್ಲ. ರಾಷ್ಟ್ರೀಯ ನಾಯಕರು ಯೋಚನೆ ಮಾಡ್ತಾರೆ. ಈಗಾಗಲೇ ಸಿಎಂ ಕೂಡ ಅದನ್ನ ಸ್ಪಷ್ಟಪಡಿಸಿದ್ದಾರೆ. ಸಿಎಂ ಹಾಗೂ ಹೈಕಮಾಂಡ್ ನಾಯಕರು ತೀರ್ಮಾನ ಮಾಡ್ತಾರೆ. ಯಾವುದೇ ನಾಯಕತ್ವ ಬದಲಾವಣೆ ಇಲ್ಲ, ಸಿಎಂ ಮುಂದಿನ ವರ್ಷವೂ ಪೂರ್ಣ ಮಾಡ್ತಾರೆ. ನಮ್ಮ ಟಾರ್ಗೆಟ್ ಇರೋದು ಬಿಬಿಎಂಪಿ ಎಲೆಕ್ಷನ್ . ಪಾರ್ಟಿ ಹಾಗೂ ನಾಯಕತ್ವದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಕಟೀಲ್ ಸ್ಪಷ್ಟಪಡಿಸಿದರು.

Latest Videos
Follow Us:
Download App:
  • android
  • ios